Monday, May 20, 2013
Last Updated: 7:50:37 AM IST
  • ನಾನೆಲ್ಲಿರುವೆ:
  • ಮುಖಪುಟ Cinema ಸ್ಯಾಂಡಲ್‌ವುಡ್‌ ವಾರ್ತೆಗಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಕಿ ನಿಕ್ಕಿ: ಸಿಸ್ಟರ್‌ ಸಂಜನಾ ಕಮಿಂಗು!
    • ಅಕ್ಕ ಬಂದ ಮೇಲೆ ತಂಗಿ ಬರದೇ ಇರ್ತಾಳಾ? ಬಂದೇ ಬರ್ತಾಳೆ. ಅಕ್ಕನ ರೀತೀನೇ ಮಿಂಚಬೇಕೆಂದು ಆಸೆ ಇರಲ್ವಾ? ಕೆಲವು ನಟಿಯರು ಅಕ್

      • Udayavani | Jan 25, 2013

        ಅಕ್ಕ ಬಂದ ಮೇಲೆ ತಂಗಿ ಬರದೇ ಇರ್ತಾಳಾ? ಬಂದೇ ಬರ್ತಾಳೆ. ಅಕ್ಕನ ರೀತೀನೇ ಮಿಂಚಬೇಕೆಂದು ಆಸೆ ಇರಲ್ವಾ? ಕೆಲವು ನಟಿಯರು ಅಕ್ಕಂದಿರ ಬೆಂಬಲದೊಂದಿಗೆ ಬಂದರೆ, ಇನ್ನು ಕೆಲವರು ತಮ್ಮ ಸ್ವಂತ ಪರಿಶ್ರಮದಿಂದ ಬರುತ್ತಾರೆ. ಪೂಜಾ ಗಾಂಧಿ ತಮ್ಮ ತಂಗಿ ರಾಧಿಕಾರನ್ನು ನಾಯಕಿಯಾಗಿ ಕರೆತಂದರು. ಆದರೆ ಆಕೆಯ ಅದೃಷ್ಟ ಸರಿ ಇರಲಿಲ್ಲ. ಆಕೆ ಕ್ಲಿಕ್‌ ಆಗಲಿಲ್ಲ. ಪ್ರತಿಭೆ ಇದ್ದವರು ಇಲ್ಲಿ ನಿಲ್ಲುತ್ತಾರೆ, ಬರೀ ಅಂಕು-ಡೊಂಕು, ವೈಯ್ನಾರ ಇದ್ದವರು ಬಂದ ದಾರಿಗೆ ಸುಂಕವಿಲ್ಲವೆಂದು ಹೋಗುತ್ತಾರೆ. ಈಗ ವಿಷ್ಯ ಏನಂದ್ರೆ, ನಟಿ ಸಂಜನಾ ತಂಗಿ ನಿಕಿ ನಾಯಕಿಯಾಗಿ ಎಂಟ್ರಿಕೊಡುತ್ತಿದ್ದಾರೆ. ಅದು 'ಅಜಿತ್‌' ಸಿನಿಮಾ ಮೂಲಕ. ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಮಹೇಶ್‌ ಬಾಬು ನಿರ್ದೇಶಿಸುತ್ತಿದ್ದಾರೆ.
        ಅಂದಹಾಗೆ, ಮಹೇಶ್‌ ಬಾಬು ಕನ್ನಡಕ್ಕೆ ಒಂದಷ್ಟು ಹೊಸ ನಾಯಕಿಯರನ್ನು ಪರಿಚಯಿಸುತ್ತಲೇ ಇದ್ದಾರೆ. ನಾಯಕಿಯರ ವಿಷಯದಲ್ಲಿ ಮಹೇಶ್‌ ಬಾಬು ಲಕ್ಕಿ ಹ್ಯಾಂಡ್‌. ಈ ಹಿಂದೆ ಮಹೇಶ್‌ ಬಾಬು ತಮ್ಮ 'ಮೆರವಣಿಗೆ' ಚಿತ್ರದ ಐಂದ್ರಿತಾ ರೇಯನ್ನು ಕರೆತಂದರು. ಈಗ ಐಂದ್ರಿತಾ ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ಹಾಗೂ ಬೇಡಿಕೆಯ ನಟಿ. ಇನ್ನು 'ಚಿರು' ಚಿತ್ರದ ಮೂಲಕ ಮಹೇಶ್‌ ಬಾಬು ಕೃತಿ ಕರಬಂದಗೆ ಎಂಟ್ರಿ ಕೊಡಿಸಿದರು. ಈಗ ಕೃತಿ ಕೂಡಾ ನಾಯಕಿಯಾಗಿ ಬೇಡಿಕೆಯಲ್ಲಿದ್ದಾರೆ. ಅದು ಕೇವಲ ಕನ್ನಡವಷ್ಟೇ ಅಲ್ಲದೇ, ತಮಿಳು, ತೆಲುಗಿನಲ್ಲೂ ಕೃತಿಗೆ ಒಳ್ಳೆಯ ಆಫ‌ರ್‌ ಇದೆ. ಈಗ ನಿಕಿ ಸರದಿ. ಈ ನಿಕಿಗೆ ಸಿನಿಮಾ ಲೋಕ ಹೊಸದು. ಆದರೆ ಗ್ಲಾಮರ್‌, ಫ್ಯಾಶನ್‌ ಲೋಕ ಹೊಸದಲ್ಲ. ಏಕೆಂದರೆ ಈಕೆ ಮಾಡೆಲಿಂಗ್‌ ಮಾಡುತ್ತಿದ್ದವಳು. ಅದೆಷ್ಟೋ ಬ್ರಾಂಡ್‌ಗಳಲ್ಲಿ ನಿಕಿ ಕಾಣಿಸಿಕೊಂಡಿದ್ದಾಳೆ. ಈಗ ಸಿನಿಮಾ ಎಂಟ್ರಿ. ತಮ್ಮ ಸಿನಿಮಾಕ್ಕೆ ಹೊಸ ಮುಖ ಬೇಕಾದ ಕಾರಣ ನಿಕಿಗೆ ಮಣೆ ಹಾಕಿದ್ದಾಗಿ ಹೇಳುತ್ತಾರೆ ಮಹೇಶ್‌ ಬಾಬು. ಸಂಜನಾ ಕೂಡಾ ತುಂಬಾ ಆಸೆಯಿಂದ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಆದರೆ ಅದ್ಯಾಕೋ ಸಂಜನಾಗೆ ಹೇಳಿಕೊಳ್ಳುವಂಥ ಅವಕಾಶಗಳು ಸಿಗಲಿಲ್ಲ. ಸಿಕ್ಕರೂ ಸೋಲೋ ಹೀರೋಯಿನ್‌ ಪಾತ್ರಗಳು ಅಷ್ಟಾಗಿ ಬರಲಿಲ್ಲ. ಈಗ ಅವರ ತಂಗಿ ನಿಕಿಯ ಅದೃಷ್ಟ ಹೇಗಿದೆಯೋ ಕಾದು ನೋಡಬೇಕು.
        ಅಂದಹಾಗೆ, 'ಅಜಿತ್‌'ಗೆ ಜ.24ಕ್ಕೆ ಮುಹೂರ್ತ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      ಭಾನುವಾರ ನಡೆದ ''ರೋಜ್‌' ಚಿತ್ರದ ಮುಹೂರ್ತ ಒಂದಷ್ಟು ವಿಶೇಷಗಳಿಗೆ ಸಾಕ್ಷಿಯಾಯಿತು. ಮುಹೂರ್ತಕ್ಕೆ ಅತಿಥಿಗಳಾಗಿ ಆಗಮಿಸಿದ ಶಿವರಾಜ್‌ ಕುಮಾರ್‌ ದಂಪತಿಗೆ ಅಲ್ಲಿ ಅಚ್ಚರಿಯೊಂದು ಕಾದಿತ್ತು.
      • ಈ ವಿಭಾಗದಲ್ಲಿಯೂ ಇದೆ
      • picಟೀವಿಕ್ಲಬ್‌ ಗೃಹಪ್ರವೇಶ
        ಅಂತೂ ಟೆಲಿವಿಷನ್‌ ಕಲ್ಚರಲ್‌ ಮತ್ತು ನ್ಪೋರ್ಟ್ಸ್ ಕ್ಲಬ್‌ ಸದ್ದಿಲ್ಲದೆ ಸಾಧನೆ ಮಾಡಿದೆ. ಸ್ವಂತದ್ದೊಂದು ಕಟ್ಟಡ ನಿರ್ಮಾಣಕ್ಕೆ ಸಂಘ ಕೈ ಹಾಕಿ ಎರಡು ವರುಷ ಕಳೆದಿದೆ. ಅಷ್ಟರಲ್ಲೇ ಅದ್ಭುತವಾದ ಕ್ಲಬ್‌ ಕಟ್ಟಡ ನಿರ್ಮಾಣವಾಗಿದೆ.
      image
      • Copyright @ 2009 Udayavani.All rights reserved.
      • Designed & Hosted By 4cplus