ಖಾರ್ಗೊನೆ: ಪ್ರಸಿದ್ಧ ಹಿಂದಿ ನಟ ಧರ್ಮೇಂದ್ರ ಅವರು ಶೂಟಿಂಗ್ ವೇಳೆ ಹಗ್ಗಕ್ಕೆ ಕಾಲು ಸಿಲುಕಿಸಿಕೊಂಡು ಕೆಳಕ್ಕೆ ಬಿದ್ದ ಅಸಹಜ ಘಟನೆ ಶುಕ್ರವಾರ ನಡೆದಿದ್ದು, ಘಟನೆಯಲ್ಲಿ ಧರ್ಮೇಂದ್ರ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಇಲ್ಲಿನ ಮಹೇಶ್ವರ ನಗರದ ಅಹಿಲ್ಯಾಘಾಟ್ ಬಳಿ ಧರ್ಮೇಂದ್ರ ಅವರು ತಮ್ಮ ಸ್ವಂತ ನಿರ್ಮಾಣದ ಚಿತ್ರ 'ಯಮ್ಲಾ ಪಗ್ಲಾ ದೀವಾನಾ-2' ಚಿತ್ರದ ಶೂಟಿಂಗ್ ಮುಗಿಸಿ ಕಾರಿನತ್ತ ಮರುಳುವ ವೇಳೆ ಜನರನ್ನು ನಿಯಂತ್ರಿಸಲು ಹಾಕಿದ್ದ ಹಗ್ಗಕ್ಕೆ ಸಲುಕಿ ಕೆಳಕ್ಕೆ ಬಿದ್ದಿದ್ದಾರೆ.