ಡಯಾನಾ ಕ್ರಾಸ್ತ ಪ್ರಯೋಗ ಶಾಲಾ ತಂತ್ರಜ್ಞರು | Jan 27, 2013
ಒಬ್ಬ ವ್ಯಕ್ತಿಗೆ HIVಸೋಂಕು ಬಾಧಿಸಿದೆಯೇ ಎಂದು ಆವರನ್ನು ನೋಡಿದಾಕ್ಷಣ ಹೇಳಲಾಗುವುದಿಲ್ಲ. HIVಸೋಂಕು ಇರುವುದನ್ನು ಪತ್ತೆಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪ್ರಾರಂಭಿಸಲು ಇರುವ ಒಂದೇ ಒಂದು ಅತಿ ಸಾಮಾನ್ಯ ಮತ್ತು ಸರಳ ಮಾರ್ಗವೆಂದರೆ ರಕ್ತ ಪರೀಕ್ಷೆ .
HIV ರಕ್ತ ಪರೀಕ್ಷೆಯು ಒಬ್ಬ ವ್ಯಕ್ತಿ HIVಬಾಧಿತರೇ ಎಂದು ತಿಳಿದುಕೊಳ್ಳಲು ಇರುವ ಪರೀಕ್ಷೆ . ಹಲವು ಜನರು ಅಪಾಯಕಾರಿ ನಡವಳಿಕೆಗಳಿಗೆ ಒಳಗಾಗಿರುತ್ತಾರೆ. ಆದರೆ, HIV ಪರೀಕ್ಷೆಗೆ ಒಳಪಟ್ಟಿರುವುದಿಲ್ಲ. ಕಾರಣವೇನೆಂದರೆ , ಅವರಿಗೆ ತಾವು ಅಪಾಯಕಾರಿ ನಡುವಳಿಕೆಗಳಿಗೆ ಒಳಪಟ್ಟಿದ್ದೇವೆಂದು ಆಂದಾಜಾಗಿರುವುದಿಲ್ಲ. ಇನ್ನೂ ಕೆಲವರು, ತಾವು ಪಾಸಿಟಿವ್ ಫಲಿತಾಂಶದ ಭಯದಿಂದ ಈ ಪರೀಕ್ಷೆ ಮಾಡಿಸಿರುವುದಿಲ್ಲ . HIVಸೋಂಕನ್ನು ತಡೆಗಟ್ಟುವಲ್ಲಿ ಹಾಗೂ HIVಸೋಂಕಿಗೆ ಗುರಿಯಾದವರಿಗೆ ಚಿಕಿತ್ಸೆ ಹಾಗೂ ರಕ್ಷಣೆ ನೀಡುವಲ್ಲಿ ಏಐVಸಮಾಲೋಚನೆ ಹಾಗೂ ಪರೀಕ್ಷಾ ಸೇವೆಗಳ ಪಾತ್ರ ಅತ್ಯಂತ ಪ್ರಮುಖವಾದುದು.

HIVಪರೀಕ್ಷೆ ಮಾಡಿಸಿಕೊಳ್ಳವುದರಿಂದ ಸಾಧ್ಯವಾದಷ್ಟು ಬೇಗ ಚಿಕಿತ್ಸೆಯನ್ನು ಪ್ರಾರಂಭಿಸಲು ಅನುಕೂಲವಾಗುತ್ತದೆ. ಅದಲ್ಲದೆ, HIVಸೋಂಕಿತರಿಗೆ ಸಮಾಲೋಚನೆ ಮೂಲಕ, ಅವರ ನಡವಳಿಕೆಯನ್ನು ಬದಲಾಯಿಸಿ, ಜೀವನ ಶೈಲಿಯನ್ನು ಉತ್ತಮಗೊಳಿಸಿ, ಬೇರೆಯವರಿಗೆ ರೋಗ ಹರಡುವುದನ್ನು ತಪ್ಪಿಸಬಹುದು.
ಯಾರು HIVಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು?
ಸ್ವ-ಇಚ್ಛೆಯಿಂದ ಯಾರೂ ಕೂಡ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು.
HIVಸೋಂಕಿನಿಂದ ಉಂಟಾಗಬಹುದಾದಂತಹ ರೋಗಲಕ್ಷಣಗಳನ್ನು ಹೊಂದಿರುವ, ಆರೋಗ್ಯ ಸೇವಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು.
ಗರ್ಭಿಣಿ ಸ್ತ್ರೀಯರು (HIVಸೋಂಕು ತಗುಲಿದ ಗರ್ಭಿಣಿಯರಿಂದ ಅವರ ಮಕ್ಕಳಿಗೆ ಏಐVಹರಡುವುದನ್ನು ತಡೆಗಟ್ಟಲು.)
ಕ್ಷಯ ರೋಗ ಬಾಧಿಸ್ಪಲ್ಟವರು (ಏಐVಸೋಂಕು ಇರಲು, ಜನರಲ್ಲಿ ಕ್ಷಯದ ಸೋಂಕು ಇರುವುದು ಅತ್ಯಂತ ಸಾಮಾನ್ಯವಾಗಿರುವುದರಿಂದ).
HIV ಪರೀಕ್ಷೆ

HIVಯನ್ನು ಪತ್ತೆಹಚ್ಚಲು ಇರುವ ಬಹಳಷ್ಟು ಪರೀಕ್ಷೆಗಳು ಆ್ಯಂಟಿಬಾಡಿಗಳ ಉಪಸ್ಥಿತಿಯನ್ನು ಅವಲಂಬಿಸಿರುತ್ತವೆ. ಆದ್ದರಿಂದ ಆ್ಯಂಟಿಬಾಡಿಗಳು ಇನ್ನೂ ಅಭಿವೃದ್ಧಿಯಾಗಿರದ ವಿಂಡೋ ಅವಧಿಯಲ್ಲಿ ಸೋಂಕಿತರನ್ನು ಪರೀಕ್ಷೆ ಮೂಲಕ ಪತ್ತೆಹಚ್ಚುವುದು ಕಷ್ಟ ಸಾಧ್ಯ. ಈ ಅವಧಿಯಲ್ಲಿ ವ್ಯಕ್ತಿ ಸೋಂಕಿತನಾಗಿದ್ದರೂ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಬಹುದು. HIVಸೋಂಕು ತಗುಲಿದಾಗಿನಿಂದ HIV ಪ್ರತಿಕಾರ್ಯಗಳನ್ನು ರಕ್ತದಲ್ಲಿ ಪತ್ತೆ ಹಚ್ಚುವ ವರೆಗಿನ (6-12 ವಾರ) ನಡುವಿನ ಅವಧಿಯನ್ನು ವಿಂಡೋ ಅವಧಿ ಎನ್ನುತ್ತಾರೆ . ಅಂತಹ ಸಂದರ್ಭದಲ್ಲಿ 12 ವಾರಗಳ ನಂತರ ಮರು ಪರೀಕ್ಷೆ ಮಾಡಿಸಬೇಕು.
ಸಾಮಾನ್ಯವಾಗಿ ಬಳಸುವ ಏಐV
ಪರೀಕ್ಷೆಗಳು
ಶೀಘ್ರ ಪರೀಕ್ಷೆಗಳು
ಎಲಿಸಾ
ವೆಸ್ಟರ್ನ್ ಬ್ಲಾಟ್
ಶೀಘ್ರ ಪರೀಕ್ಷೆಗಳು :- ಪ್ರಸ್ತುತ ಸಮಯದಲ್ಲಿHIVಆ್ಯಂಟಿಬಾಡಿಗಳನ್ನು ಗುರುತಿಸಲು ಶೀಘ್ರ ಪರೀಕ್ಷೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಪರೀಕ್ಷೆಗೆ ವಿಶೇಷವಾದ ಪರಿಕರಗಳ ಅಗತ್ಯವಿರುವುದಿಲ್ಲ . ಇವು ತುಂಬಾ ಸರಳವಾಗಿರುತ್ತವೆೆ ಹಾಗೂ ರೋಗಿಗಳಿಗೆ ತ್ವರಿತ ಫಲಿತಾಂಶ ನೀಡುತ್ತವೆೆ. ಮಾದರಿಗಳು ಬೆರೆತು ಹೋಗುವುದನ್ನು , ಕಳೆದು ಹೋಗುವುದನ್ನು ತಪ್ಪಿಸಿ, ಸಮಯ ವ್ಯರ್ಥವನ್ನು ಕಡಿಮೆ ಮಾಡುತ್ತವೆೆ. ಶೀಘ್ರ ಪರೀಕ್ಷೆಗಳಲ್ಲಿ ಹಲವು ವಿಧಾನಗಳಿದ್ದು , ಅವು ಅನುಸರಿಸುವ ತತ್ವಗಳು ವಿಭಿನ್ನವಾಗಿವೆ.
ಎಲಿಸಾ (ಎಂಜೈಮ್ -ಲಿಂಕ್ಡ್ ಇಮ್ಯುನೋಸೋರ್ಬೆಂಟ್ ಆಸೇÕ) ಆ್ಯಂಟಿ ಬಾಡಿಗಳನ್ನು ಗುರುತಿಸುವ ಬಹಳ ಆರಂಭಿಕ ಪರೀಕ್ಷೆ ಇದಾಗಿದ್ದು, ರಕ್ತನಿಧಿ ಮತ್ತು ಸಂಶೋಧನಾ ಅಧ್ಯಯನಗಳಂತಹ ಕ್ಷೇತ್ರಗಳಲ್ಲಿ ಒಂದೇ ದಿನದಲ್ಲಿ ಹೆಚ್ಚು ಸಂಖ್ಯೆಯ ಮಾದರಿಗಳನ್ನು ಪರೀಕ್ಷಿಸುವ ಸಂದರ್ಭದಲ್ಲಿ ಇದು ಪರಿಣಾಮಕಾರಿಯಾಗಿರುತ್ತದೆ. ಈ ಪರೀಕ್ಷೆಯನ್ನು ಅತಿ ಜಾಗರೂಕರಾಗಿ ನಿರ್ವಹಿಸಬೇಕಾಗುತ್ತದೆ. ಇದಕ್ಕೆ ಕೌಶಲಪೂರ್ಣ ಸಿಬಂದಿಗಳ ಆವಶ್ಯಕತೆ ಇರುತ್ತದೆ, ಇದಕ್ಕೆ ಹಲವು ಸಲಕರಣೆಗಳು ಹಾಗೂ ನಿರಂತರ ವಿದ್ಯುತ್‌ನ ಆವಶ್ಯಕತೆ ಬೇಕಾಗುತ್ತದೆ.
*ವೆಸ್ಟರ್ನ್ ಬ್ಲಾಟ್

ಇದು ಸಹ ಆ್ಯಂಟಿಬಾಡಿಗಳನ್ನು ಗುರುತಿಸುವ ಪರೀಕ್ಷೆ. ಆದರೆ ಇದು ತುಂಬಾ ದುಬಾರಿಯಾಗಿದ್ದು, ಇದನ್ನು ಹೆಚ್ಚಾಗಿ ದೃಢೀಕರಣ ಪರೀಕ್ಷೆಯಾಗಿ ಬಳಸಲಾಗುತ್ತದೆ.
HIV ಪರೀಕ್ಷಾ ಫಲಿತಾಂಶಗಳು
ನೆಗೆಟಿವ್ ಫಲಿತಾಂಶ
ಪಾಸಿಟಿವ್ ಫಲಿತಾಂಶ
ನಿರ್ಧರಿತವಾಗದ ಪರೀಕ್ಷೆ ಫಲಿತಾಂಶ
ನೆಗೆಟಿವ್ ಫಲಿತಾಂಶ
ಒಮ್ಮೆ ಪರೀಕ್ಷಿಸಿದಾಗ ವ್ಯಕ್ತಿಯು ನೆಗೆಟಿವ್ ಆಗಿದ್ದರೆ, ಆತನು HIV ಸೋಂಕಿಗೆ ತುತ್ತಾಗಿಲ್ಲವೆಂದು ಹೇಳಬಹುದು. ಆದರೆ, ಆ ವ್ಯಕ್ತಿಯು ಅಪಾಯಕಾರಿ ನಡವಳಿಕೆಗಳಿಗೆ ಒಳಗಾಗಿದ್ದರೆ, ಆತನನ್ನು ಮೂರು ತಿಂಗಳ ಅನಂತರ ಪರೀಕ್ಷೆಗೆ ಒಳಪಡಿಸುವುದು ಒಳಿತು.
ಪಾಸಿಟಿವ್ ಫಲಿತಾಂಶ
ಒಮ್ಮೆ ಪರೀಕ್ಷಿಸಿದಾಗ ವ್ಯಕ್ತಿಯು ಪಾಸಿಟಿವ್ ಎಂದರೆ, ಸೋಂಕಿತ ವ್ಯಕ್ತಿ ಪರೀಕ್ಷೆಗೆ ಒಳಪಟ್ಟಿದ್ದಾನೆ ಮತ್ತು ಪರೀಕ್ಷೆಯ ಫಲಿತಾಂಶವು ಸೋಂಕನ್ನು ದೃಢಪಡಿಸಿದೆ ಎಂದರ್ಥ. ನವಜಾತ ಶಿಶುಗಳಲ್ಲಿ HIVಸೋಂಕಿತ ತಾಯಿಗೆ ಹುಟ್ಟಿದ ಮಕ್ಕಳ ವಿಷಯಗಳಲ್ಲಿ ಏಐV ಆ್ಯಂಟಿಬಾಡಿ ಪರೀಕ್ಷೆ ಪಾಸಿಟಿವ್ ಎಂದರೆ, ಹದಿನೆಂಟು ತಿಂಗಳವರೆಗೆ ಆ್ಯಂಟಿಬಾಡಿಗಳು ತಾಯಿಯಿಂದ ಬಂದವಾಗಿರಬಹುದೆಂದು ಅರ್ಥೈಸಬಹುದು.
ಆದ್ದರಿಂದ, ಮಕ್ಕಳನ್ನು ಹದಿನೆಂಟು ತಿಂಗಳ ನಂತರ ರಕ್ತ ಪರೀಕ್ಷೆ ಮಾಡಿಸಿ, ಮಗುವು ಏಐVಸೋಂಕಿಗೆ ಒಳಪಟ್ಟಿದೆಯೆ/ಇಲ್ಲವೆ ಎಂದು ದೃಢ ಪಡಿಸಬೇಕು.
ಮೂರು ಪರೀಕ್ಷಾ ವಿಭಾಗ
ಪರೀಕ್ಷೆಗೆ ಉಲ್ಲೇಖೀಸಲ್ಪಟ್ಟ ವ್ಯಕ್ತಿ ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಬಂದರೆ, ಅದನ್ನು ಮೂರು ತತ್ವಗಳನ್ನು ಆಧರಿಸಿರುವ ಮೂರು ಪರೀಕ್ಷೆಗಳಲ್ಲಿ ದೃಢಪಡಿಸಬೇಕು. ಈ ಮೂರು ಪರೀಕ್ಷೆಗಳಲ್ಲಿ ಆ ವ್ಯಕ್ತಿಯ ಫಲಿತಾಂಶವು ಪಾಸಿಟಿವ್ ಎಂದಾದರೆ, ಅವರು HIVಸೋಂಕಿಗೆ ಒಳಪಟ್ಟಿದ್ದಾರೆಂದು ಘೋಷಿಸಬಹುದು.
ಒಂದು ವೇಳೆ ಎರಡು ಪರೀಕ್ಷೆ ಪಾಸಿಟಿವ್ ಫಲಿತಾಂಶ ನೀಡಿ, ಒಂದು ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದರೆ, ಅದನ್ನು ನಿರ್ಧರಿತವಾಗದ ಫಲಿತಾಂಶ ಎಂದು ಪರಿಗಣಿಸಬೇಕು.
ನಿರ್ಧರಿತವಾಗದ ಪರೀಕ್ಷಾ ಫಲಿತಾಂಶ ಬಂದಲ್ಲಿ , 14ರಿಂದ 28ದಿನಗಳ ಅನಂತರ ಮತ್ತೂಮ್ಮೆ ಪರೀಕ್ಷೆಗಳಿಗೆ ಒಳಪಡುವಂತೆ ತಿಳಿಸಬೇಕು.