Udayavani | Jan 27, 2013
ಭತ್ತಕ್ಕೂ ತರಕಾರಿಗೂ ಎತ್ತಣಿಂದೆತ್ತ ಸಂಬಂಧ. ನಿಜ ಹೇಳಬೇಕಾದರೆ ಗದ್ದೆಯಲ್ಲಿ ತರಕಾರಿ ಬೆಳೆಯುವ ಮನಸು ಮಾಡುವುದು ಕಡಿಮೆ. ಆದರೆ ಬಾವಿಕೈ ವೆಂಕಟಪ್ಪ ಬದನೆ ಬೆಳೆಯುತ್ತಲೇ ಕೈತುಂಬ ಹಣ ಗಳಿಸುತ್ತಿದ್ದಾರೆ. -ಎನ್.ಡಿ.ಹೆಗಡೆ ಆನಂದಪುರಂ
ನೀರಿಲ್ಲದ ಪ್ರದೇಶದಲ್ಲಿ ಕೃಷಿ ಮಾಡುವುದು ಕಷ್ಟವೇ. ಮಳೆಯಾಧಾರಿತವಾಗಿ ಭತ್ತವನ್ನು ಬೆಳೆಯುವ ಮಲೆನಾಡಿಗರು ಬೇಸಿಗೆಯಲ್ಲಿ ಹಾಯಾಗಿ ಇರುತ್ತಾರೆ. ಅಲ್ಪ ಸ್ವಲ್ಪ ನೀರಿನ ವ್ಯವಸ್ಥೆ ಹೊಂದಿದವರು ತರಕಾರಿ ಬೆಳೆಯುವ ಬಗ್ಗೆ ಶ್ರಮಿಸುತ್ತಿಲ್ಲ. ವಾರದ ಸಂತೆಗೆ ಹೋಗಿ ಅಗತ್ಯ ತರಕಾರಿ ಖರೀದಿಸಿ ಕಾಲಕಳೆಯುತ್ತಾರೆ. ಮನೆಯ ಹಿತ್ತಲಿನÇÉೋ, ಅಂಗಳದÇÉೋ ವಿವಿಧ ತರಕಾರಿ ಬೆಳೆಯಲು ಸಾಧ್ಯವಿದ್ದರೂ ಶ್ರಮದ ದುಡಿಮೆ ಕಡಿಮೆಯಾಗುತ್ತಿದೆ. ಇಂಥದ್ದೊಂದು ವಾಸ್ತವದ ಬೆನ್ನಲ್ಲೇ ಇದಕ್ಕೆ ಅಪವಾದ ಎನ್ನುವಂತೆ ಶಿವಮೊಗ್ಗ ಜಿÇÉೆ ಹೊಸನಗರ ತಾಲೂಕಿನ ಬಾವಿಕೈ ಗ್ರಾಮದ ರೈತ ಬಿ.ಎಂ.ವೆಂಕಟಪ್ಪ ಮಳೆಗಾಲದ ಭತ್ತದ ಫಸಲು ಕಟಾವಾಗುತ್ತಿದ್ದಂತೆ ಬದನೆ, ಮೆಣಸು, ಹರಿವೆ ಸೊಪ್ಪು, ಬಸಳೆ ಕೃಷಿ ಮಾಡುತ್ತಾರೆ. ಬೇಸಿಗೆ ಇವರಿಗೆ ಬೇಸಿಗೆ ರಜೆಯಾಗಿಲ್ಲ. ಕಳೆದ 8-10 ವರ್ಷಗಳಿಂದ ಶ್ರಮದ ದುಡಿಮೆ ಮುಂದವರಿಯುತ್ತಲೇ ಇದೆ.
ಗ್ರಾಮದಲ್ಲಿ ಸುಮಾರು 4 ಎಕರೆ ವಿಸ್ತೀರ್ಣದ ಜಮೀನು ಹೊಂದಿರುವ ಇವರು ಕೆಲ ಭಾಗವನ್ನು ಅಡಿಕೆ, ಸ್ವಲ್ಪ ಭಾಗ ಬಾಳೆ ತೋಟ ಹಾಗೂ ಇನ್ನು ಕೆಲವನ್ನು ಭತ್ತದ ಗ¨ªೆಗಳಾಗಿಸಿದ್ದಾರೆ. ಭತ್ತದ ಬೆಳೆ ಕಟಾವು ಆಗುತ್ತಿದ್ದಂತೆ ಇವರು ಬದನೆ ಗಿಡ ಬೆಳೆಸಿ ಬೇಸಿಗೆಯಿಡೀ ಫಸಲು ಕೊಯ್ಯುತ್ತಾರೆ.
ಕೃಷಿ ಹೇಗೆ ?
ಇವರು ಸಪ್ಟೆಂಬರ್ ಕೊನೆ ವಾರದಲ್ಲಿ ಮಡಿ ತಯಾರಿಸಿ ಬದನೆ ಬೀಜ ಬಿತ್ತಿ ಅಗೆ ಸಸಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಸಿಗಳು 20 ರಿಂದ 22 ದಿನ ಆಗುತ್ತಿದ್ದಂತೆ ಅಂದರೆ ಅಕ್ಟೋಬರ್ ಮೂರನೇ ವಾರದ ಸುಮಾರಿಗೆ ಭತ್ತ ಕಟಾವು ಮಾಡಿ ಬದನೆ ಸಸಿಗಳನ್ನು ನೆಡುತ್ತಾರೆ. ಸುಮಾರು ಆರು ಅಡಿ ಉದ್ದದ, ಒಂದುವರೆ ಅಡಿ ಎತ್ತರ ಹಾಗೂ ಸಾಲಿನಿಂದ ಸಾಲಿಗೆ 2 ಅಡಿ ಅಂತರ ಇರುವ ಪಟ್ಟೆ ನಿರ್ಮಿಸಿಕೊಳ್ಳುತ್ತಾರೆ. ಈ ಪಟ್ಟೆಗಳಲ್ಲಿ ಗಿಡದಿಂದ ಗಿಡಕ್ಕೆ ಎರಡುವರೆ ಅಡಿ ಅಂತರದಲ್ಲಿ ಬದನೆ ಸಸಿ ನೆಡುತ್ತಾರೆ. ಹೀಗೆ ನೆಡುವಾಗ ಪಟ್ಟೆಯಲ್ಲಿ ಮುಕ್ಕಾಲು ಅಡಿ ಆಳದ ಗುಂಡಿ ಮಾಡಿ, ಕೊಟ್ಟಿಗೆ ಗೊಬ್ಬರ ಹಾಕಿ ಗಿಡ ನೆಡುತ್ತಾರೆ. ಗಿಡಗಳಿಗೆ ಪ್ರತಿ ಮೂರು ದಿನಕ್ಕೆ ಒಮ್ಮೆಯಂತೆ ನೀರು ಹಾಯಿಸಿ ಪಟ್ಟೆಗಳಲ್ಲಿ ನೀರು ತುಂಬಿಸುತ್ತಾರೆ. ಪ್ರತಿ 2 ದಿನಕ್ಕೆ ಒಮ್ಮೆಯಂತೆ ಸಗಣಿಯ ದ್ರಾವಣ ಮಾಡಿ ಗಿಡಗಳಿಗೆ ಗೊಬ್ಬರವಾಗಿ ಕೊಡುತ್ತಾರೆ. ಗಿಡ ಬೆಳೆದು 45 ದಿನ ಆಗುತ್ತಿದ್ದಂತೆ ಹೂ ಬಿಡುತ್ತದೆ. ಸುಮಾರು 60 ದಿನಕ್ಕೆ ಕಾಯಿಗಳು ತೂಗಾಡಲು ಆರಂಭಿಸುತ್ತವೆ. ಪ್ರತಿ 15 ದಿನಕ್ಕೆ ಒಮ್ಮೆಯಂತೆ ಸುಫಲಾ ಮತ್ತು ಯೂರಿಯಾ ಗೊಬ್ಬರವನ್ನು ಗಿಡವೊಂದಕ್ಕೆ 20 ಗ್ರಾಂ.ನಷ್ಟು ನೀಡುತ್ತಾರೆ. ನವೆಂಬರ್ ಅಂತ್ಯದ ಸುಮಾರಿಗೆ ಫಸಲು ಆರಂಭವಾಗಿ ಮಾರ್ಚ್‌ವರೆಗೂ ನಿರಂತರವಾಗಿ ಬದನೆ ಕಾಯಿ ದೊರೆಯುತ್ತದೆ.
ಲಾಭ ಹೇಗೆ?
ಇವರು ಈ ವರ್ಷ ಸುಮಾರು 4 ಗುಂಟೆ ವಿಸ್ತೀರ್ಣದಲ್ಲಿ ಒಟ್ಟು 700 ಗಿಡ ನೆಟ್ಟಿ¨ªಾರೆ ವೆಂಕಟಪ್ಪ. ನವೆಂಬರ್‌ನಿಂದ ಮಾರ್ಚ್ ಅಂತ್ಯದವರಗೆ ಅಂದರೆ 4 ತಿಂಗಳಲ್ಲಿ ಪ್ರತಿ ಗಿಡದಿಂದ ಸರಾಸರಿ 6 ರಿಂದ 7 ಬದನೆ ಕಾಯಿ ದೊರೆಯುತ್ತದೆ. ಒಂದು ಬದನೆಕಾಯಿ ಸರಾಸರಿ 2 .5 ಕಿ.ಗ್ರಾಂ ತೂಕದ ಗಾತ್ರ¨ªಾಗಿದೆ. ಕಿ.ಗ್ರಾಂ. ಒಂದಕ್ಕೆ ಸರಾಸರಿ 15 ರೂ. ನಂತೆ ಮಾರಾಟವಾಗುತ್ತದೆ. ಹೊಸನಗರದಲ್ಲಿ ಪ್ರತಿ ಶನಿವಾರ ಸಂತೆ ಇರುವ ಕಾರಣ ಮುನ್ನಾ ದಿನ ಅಂದರೆ ಶುಕ್ರವಾರ ಬದನೆ ಕಾಯಿ ಕೊಯ್ದು ಬುಟ್ಟಿಯಲ್ಲಿ ತುಂಬುತ್ತಾರೆ. ಮಧ್ಯೆ ಮಧ್ಯೆ ಕೆಲ ಸ್ಥಳೀಯ ಅಂಗಡಿಗಳಿಗೂ ಮಾರುತ್ತಾರೆ. ಸಂತೆಗೆ 2.5 ಕ್ವಿಂಟಾಲ್ ಮತ್ತು ಅಂಗಡಿಗಳಿಗೆ 2.5 ಕ್ವಿಂಟಾಲ್ ಹೀಗೆ ವಾರಕ್ಕೆ 5 ಕ್ವಿಂಟಾಲ್ ಬದನೆ ಫಸಲು ದೊರೆಯುತ್ತದೆ. ಇದರಿಂದ ಅವರಿಗೆ 7 ರಿಂದ 8 ಸಾವಿರ ಆದಾಯ ಕೈ ತುಂಬುತ್ತಿದೆ. ಗೊಬ್ಬರ, ನೀರು ಹಾಯಿಸುವಿಕೆ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ವಾರಕ್ಕೆ 400 ರಿಂದ 500 ರೂ.ಖರ್ಚು ಅಷ್ಟೇ. ಒಟ್ಟಾರೆ 4 ಗಂಟೆ ವಿಸ್ತೀರ್ಣದಲ್ಲಿ ಬದನೆ ಬೆಳೆದು ತಿಂಗಳಿಗೆ ಸರಾಸರಿ 25 ಸಾವಿರ ರೂ ಲಾಭ ಗಳಿಸುತ್ತಿ¨ªಾರೆ. ಭತ್ತದ ಫಸಲಿನ ಕಟಾವಿನ ನಂತರ ಹೊಲವನ್ನು ಖಾಲಿ ಬಿಡುವ ಬದಲು ತರಕಾರಿ ಬೆಳೆದು ಬೇಸಿಗೆಯಲ್ಲಿ ಕೈ ತುಂಬಾ ಆದಾಯಗಳಿಸಬಹುದೆಂದು ಸುತ್ತಮುತ್ತಲ ರೈತರು ಹುಬ್ಬೇರಿಸುವಂತೆ ದುಡಿಮೆ ನಡೆಸುತ್ತಿ¨ªಾರೆ ಇವರು. ಇತ್ತೀಚೆಗೆ ಗ್ರಾಮದ ಕೆಲ ರೈತರು ಇವರನ್ನು ಅನುಸರಿಸಿ ಬೇಸಿಗೆ ಬೆಳೆಯಾಗಿ ಬೆಂಡೆ, ತೊಂಡೆ, ಬದನೆ ಇತ್ಯಾದಿ ಕೃಷಿ ಕೈಗೊಂಡು ಲಾಭದ ಹಾದಿಯಲ್ಲಿ ಸಾಗುತ್ತಿ¨ªಾರೆ.
ಬದನೆ ಬೆಳೆಯವವರಿಗೆ ವೇದನೆ ಇಲ್ಲ. ನೀವು ಬೆಳೆದು ನೋಡಿ.
ಮಾಹಿತಿಗೆ-9481192315