Saturday, May 25, 2013
Last Updated: 6:31:47 PM IST
  • ನಾನೆಲ್ಲಿರುವೆ:
  • ಮುಖಪುಟ Supplements ಐಸಿರಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಿಂಗಾರಾಧನೆ
    • ನಾಗಮಂಡಲದ ಭಕ್ತಿಪರ್ವದಲ್ಲಿ ಅಡಿಕೆ ಬೇಸಾಯಗಾರರಿಗೆ ಲಾಭವಿದೆಯೇ? ಗಮನಿಸಬೇಕು. ಅಡಿಕೆಯ ಕೊಳೆರೋಗ, ಕೊಯ್ಲು ಸಮಸ್ಯೆಯಿಂದ

      • Udayavani | Jan 27, 2013

        ನಾಗಮಂಡಲದ ಭಕ್ತಿಪರ್ವದಲ್ಲಿ ಅಡಿಕೆ ಬೇಸಾಯಗಾರರಿಗೆ ಲಾಭವಿದೆಯೇ? ಗಮನಿಸಬೇಕು. ಅಡಿಕೆಯ ಕೊಳೆರೋಗ, ಕೊಯ್ಲು ಸಮಸ್ಯೆಯಿಂದ ಬಳಲಿದ ಮಲೆನಾಡಿಗರು ಆಮೇಲೆ ನಾಗಮಂಡಲಕ್ಕೆ ಜೈ....ಸಿಂಗಾರ ಮಾರಾಟಕ್ಕೂ ಸೈ ಎಂದು ಘೋಷಿಸಬಹುದು ! ಶಿವಾನಂದ ಕಳವೆ

        ಅಡಿಕೆ ಕೊಯ್ಲಿನ ಹೊತ್ತಿನಲ್ಲಿ ಎಳೆ ಸಿಂಗಾರದ ಕಥೆ ಹೇಳುತ್ತಿದ್ದೇನೆಂದು ಸುಲಿತಕ್ಕೆ ಕುಳಿತವರಿಗೆ ನಗು ಬರಬಹುದು. ತಾಂಬೂಲವಾಗಿ ಬಾಯಿಗೆ ಬಿದ್ದು ತುಟಿ ರಂಗಾಗಿಸುವ ಅಡಿಕೆಯ ಬಗೆಗೆ ಎಲ್ಲರೂ ಯೋಚಿಸುತ್ತಾರೆ. ಅಡಿಕೆ ಕೊಯ್ದು ಮಾರುವ ಬದಲು ನಾಗಾರಾಧನೆಗೆ ಹೂ ಮೊಗ್ಗು ಕಳಿಸುವ ಹೊಸ ದಾರಿ ತೆರೆದಿದೆ. ಅಡಿಕೆಯ ಫ‌ಸಲು ಎಷ್ಟು ಕ್ವಿಂಟಾಲ್‌ ದೊರೆಯಿತೆಂದು ಲೆಕ್ಕ ಹಾಕುವವರ ಮಧ್ಯೆ ಸಿಂಗಾರ ನೋಟ ಶುರುವಾಗಿದೆ. ನಾಗಮಂಡಲದ ದರ್ಶನಸೇವೆಯಲ್ಲಿ ನಾಗಪಾತ್ರಿ ಕುಣಿಯುವಾಗ ಅವರ ಕೈಯಲ್ಲಿ ಅಡಿಕೆಯ ಸಿ(ಹಿ)ಂಗಾರ ಬೇಕು. ಒಂದಾದ ನಂತರ ಒಂದು ಸಿಂಗಾರ ಅರಳಿಸುತ್ತ, ಹರಿಯುತ್ತ, ಬೀಸಿ ಭಕ್ತರೆಡೆ ಪ್ರಸಾದ ಎಸೆಯುತ್ತಿದ್ದಂತೆ ಭಕ್ತಿಯ ಉನ್ಮಾದ ಮೇಳೈಸಿ ಉತ್ಸವ ಕಳೆಕಟ್ಟುತ್ತದೆ. ಮಂಡಲ ಸೇವೆಗೆ ಯಾವೆಲ್ಲ ವಸ್ತುಗಳು ಬೇಕು ಎಂಬುದಕ್ಕಿಂತ ಅಡಿಕೆಯ ಸಿಂಗಾರ ಎಷ್ಟು ಬೇಕು ಎಂಬುದು ಮುಖ್ಯ ವಿಷಯ. ಒಂದು ಪೂರ್ಣ ನಾಗಮಂಡಲ ಕಾರ್ಯಕ್ರಮಕ್ಕೆ ಕನಿಷ್ಟ 2500-3000 ಸಿಂಗಾರ ಬೇಕು! ನಾಗಮಂಡಲ ಮಾಡಿಸುವವರ ಶ್ರೀಮಂತಿಕೆ, ಅದ್ದೂರಿತನ ಹೆಚ್ಚಿದಂತೆ ಸಿಂಗಾರ ಪ್ರಮಾಣ ಇನ್ನೂ ಹೆಚ್ಚುತ್ತದೆ.

        ಒಂದು ಅಡಿಕೆ ಮರದಿಂದ ಒಂದು ಹೂಗೊನೆಯನ್ನು ಒಮ್ಮೆಗೆ ಪಡೆಯಬಹುದೆಂದು ಲೆಕ್ಕಹಾಕಿದರೂ 7-8 ಎಕರೆ ತೋಟದ ಸಿಂಗಾರ ಒಂದು ಉತ್ಸವಕ್ಕೆ ಬಳಕೆಯಾಗುತ್ತದೆ.
        ತುಳುನಾಡು ನಾಗಾರಾಧನೆ, ನಾಗಮಂಡಲ ದೈವಿಕ ಕಾರ್ಯಕ್ರಮಗಳಿಗೆ
        ಮಹತ್ವ ಪಡೆದಿದೆ. ಸಂತಾನ ಅಪೇಕ್ಷೆ, ಆರೋಗ್ಯ, ಮಾನಸಿಕ ನೆಮ್ಮದಿಗೆ ಹರಕೆ ಹೊತ್ತವರು ಭಕ್ತಿ ಶ್ರದ್ಧೆಯಿಂದ ನಾಗಮಂಡಲ ಮಾಡಿಸುತ್ತಾರೆ. ಕರಾವಳಿಯುದ್ದಕ್ಕೂ ಪ್ರತಿ ವರ್ಷ ಇಂಥ ನೂರಾರು ಕಾರ್ಯಕ್ರಮ ನಡೆಯುತ್ತಿರುತ್ತದೆ. ಪೂರ್ಣಮಂಡಲ, ಅರ್ಧಮಂಡಲ,ಕಾಲು ಮಂಡಲ ಹೀಗೆ ಆಚರಣೆಯ ಸ್ವರೂಪಗಳಿವೆ. ಅಡಿಕೆ ಗೊನೆ ಬೆಳೆಸುವುದು ಬಿಟ್ಟು ಹೂವನ್ನೆ ಕತ್ತರಿಸಿ ಉತ್ಸವಕ್ಕೆ ಇವರೆಲ್ಲ ಹಾಳುಮಾಡುತ್ತಾರಲ್ಲ? ಹಲವರಿಗೆ ಕಾಡಬಹುದು.

        ಇಲ್ಲಿರುವುದು ನಂಬಿಕೆಯ ಪ್ರಶ್ನೆ. ಆಚರಣೆಯ ಶ್ರದ್ಧೆ. ಪ್ರತಿ ಊರಿಗೆ ನಾಲ್ಕಾರು ನಾಗಬನಗಳಿವೆ, ಸಂಪ್ರದಾಯ ಎಷ್ಟು ವ್ಯಾಪಕವಾಗಿದೆಯೆಂಬುದಕ್ಕೆ ಇದು ಸಾಕ್ಷಿ. ಭಟ್ಕಳದಿಂದ ಮಂಗಳೂರುವರೆಗಿನ ಪ್ರಮುಖ ಉತ್ಸವಗಳಿಗೆ ಸಿಂಗಾರಬೇಕು. ಕೃಷಿಕರು, ಸಗಟು ಗುತ್ತಿಗೆಯವರು, ಹೂವಿನ ವ್ಯಾಪಾರಿಗಳು ಸಿಂಗಾರ ಪೂರೈಕೆಯ ಪಾತ್ರಧಾರಿಗಳಾಗಿ¨ªಾರೆ. ಉತ್ಸವದ ಈ ಒಳವಲಯದಲ್ಲಿ ನಾಗಾರಾಧನೆಯಲ್ಲಿ ಸಿಂಗಾರಾಧನೆಯ ಮೆರಗು ಕಾಣುತ್ತದೆ. ಕರಾವಳಿಯ ಪ್ರಮುಖ ದೇವಾಲಯ, ಧಾರ್ಮಿಕ ಆಚರಣೆಗಳು ಅಡಿಕೆ ಹೂವಿನ ಕಾಯಂ ಬಳಕೆಯ ಮೂಲಗಳಾಗಿವೆ.

        ದೀಪಾವಳಿಯಲ್ಲಿ ಒಂದೆರಡು ಮರದಿಂದ ಹಬ್ಬಕ್ಕೆ ಸಿಂಗಾರ ತೆಗೆಯುತ್ತೇವೆ. ಜಾತ್ರೆಯಲ್ಲಿ ಮಾರಮ್ಮನಿಗೆ ಹಣ್ಣುಕಾಯಿ ಅರ್ಪಿಸುವಾಗ ಸಿಂಗಾರ ಒಯ್ಯುತ್ತೇವೆ. ಅಡಿಕೆ ಮರ ಬಿರುಗಾಳಿಗೆ ಮುರಿದಾಗ, ಹಳೆಯ ಮರ ಕಟಾವು ಮಾಡಿದಾಗ ಸಿಂಗಾರ ಕುಂಟೆಯಿಂದ ಸಿಂಗಾರ ತೆಗೆಯುವದಕ್ಕಷ್ಟೇ ಅಡಿಕೆ ಬೆಳೆಯುವ ಮಲೆನಾಡಿಗರ ಅರಿವು ಸೀಮಿತವಾಗಿದೆ. ಆದರೆ ನಾಗಮಂಡಲಕ್ಕೆ ಅಗತ್ಯವಾದ ಸಾವಿರಾರು ಸಿಂಗಾರ ಹೇಗೆ ಸಂಗ್ರಹವಾಗುತ್ತದೆ? ವಿಷಯದ ಹಿಂದೆ ಹೊರಟರೆ ಸಿಂಗಾರ ಲೋಕ ತೆರೆದುಕೊಳ್ಳುತ್ತದೆ.

        ಅಡಿಕೆ ಫ‌ಸಲು ಗುತ್ತಿಗೆ ನೀಡುವಂತೆ ಉತ್ಸವಗಳ ಬಳಕೆಗೆ ಇಡೀ ತೋಟವನ್ನು ಹೂದೋಟದಂತೆ ಗುತ್ತಿಗೆ ನೀಡುವ ಪರಿಪಾಠ ನಡೆದಿದೆ. ಒಂದು ಲಭ್ಯ ಮಾಹಿತಿಯ ಪ್ರಕಾರ ರಾಜ್ಯದ ಕರಾವಳಿ, ಕಣಿವೆ ಪ್ರದೇಶದ ಸುಮಾರು 250-300ಎಕರೆ ಅಡಿಕೆ ತೋಟದಲ್ಲಿ ಸಿಂಗಾರ ಕೊಯ್ಲು ನಡೆಯುತ್ತಿದೆ. ಒಂದು ನಾಗಮಂಡಲ ಉತ್ಸವಕ್ಕೆ ಎರಡೂವರೆಯಿಂದ ಮೂರು ಲಕ್ಷ ರೂಪಾಯಿಯ ಸಿಂಗಾರ ಬಳಕೆಯಾಗುತ್ತದೆ ! ಇಂಥ ಕಾರ್ಯಕ್ರಮ ನಡೆಸುವವರು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿ¨ªಾರೆ. ಶ್ರೀಮಂತರು,ರಾಜಕಾರಣಿಗಳು ಇದಕ್ಕೆ ಮುಂದಾಗಿರುವದರಿಂದ ವೈಭವ ಹೊಸ ರೂಪ ಪಡೆಯುತ್ತಿದೆ, ಸಿಂಗಾರ ಮಾರುಕಟ್ಟೆ ವಿಸ್ತರಿಸುತ್ತಿದೆ.

        ಕುಂದಾಪುರದ ತಲ್ಲೂರು ಕ್ರಾಸಿನಲ್ಲಿ ನಾಗರಾಜರ ಹೂವಿನ ಪುಟ್ಟ ಅಂಗಡಿಯಿದೆ. 19 ವರ್ಷಗಳಿಂದ ಸೇವಂತಿಗೆ, ಮಲ್ಲಿಗೆ, ಗುಲಾಬಿ ಮಾರುತ್ತಾರೆ. ಇವರಲ್ಲಿ ನೂರಾರು ಸಿಂಗಾರ ಬುಟ್ಟಿಯಲ್ಲಿ ಯಾವತ್ತೂ ದಾಸ್ತಾನಿರುತ್ತದೆ. ನಾಗಪ್ರತಿಷ್ಠೆ, ನಾಗಾರಾಧನೆ, ನಾಗಮಂಡಲ ಕಾರ್ಯಕ್ರಮಕ್ಕೆ ಮಾರ್ಗದಲ್ಲಿ ಹೋಗುವವರೆಲ್ಲ ಹೂ ಖರೀದಿಸುತ್ತಾರೆ. ಒಂದು ಸಿಂಗಾರಕ್ಕೆ ಮಳೆಗಾಲದಲ್ಲಿ 60-70 ರೂಪಾಯಿಗೆ ದೊರೆಯುತ್ತದೆ. ಬೇಸಿಗೆಯ ಮಾರ್ಚ್‌-ಮೇ ಸಮಯದಲ್ಲಿ ಹಬ್ಬಗಳೂ ಜಾಸ್ತಿ, ಮಾರುಕಟ್ಟೆಯಲ್ಲಿ ಕೊರತೆ ಉದ್ಬವಿಸುತ್ತದೆ.ಆಗ ಬೆಲೆ 175-200ರೂಪಾಯಿಗೆ ನೆಗೆಯುತ್ತದೆಂದು ನಾಗರಾಜ ವಿವರಿಸುತ್ತಾರೆ. ಉಪ್ಪುಂದ ಕರಾವಳಿಯ ಹೆ¨ªಾರಿ ಪಕ್ಕದ ಹಳ್ಳಿ. ಇಲ್ಲಿ ನಾಗಮಂಡಲಕ್ಕೆ ಸಿಂಗಾರ ಪೂರೈಸುವವರ ಸಂಖ್ಯೆ ದೊಡ್ಡದಿದೆ.ಇವರೆಲ್ಲ ಅಡಿಕೆ ತೋಟಗಳಲ್ಲಿ ಸಿಂಗಾರ ಗುತ್ತಿಗೆ ಹಿಡಿಯುತ್ತಾರೆ. ಮರದಿಂದ ಅವನ್ನು ಜೋಪಾನವಾಗಿ ತೆಗೆದು ಕರಾವಳಿಯ ವಿವಿದೆಡೆ ಸಾಗಿಸುತ್ತಾರೆ. ಮರದಿಂದ ಕತ್ತರಿಸಿ ತೆಗೆದ ಸಿಂಗಾರ ಒಂದು ವಾರ ಹಾಳಾಗುವದಿಲ್ಲ. 12 ವರ್ಷಗಳಿಂದ ಮಾರಾಟ ಅನುಭವದಲ್ಲಿ ಬೆಳೆದವರು ಗೋವಿಂದ ಕೋಟೆಬೆಟ್ಟು. ಇವರ ಪ್ರಕಾರ ಸಿಂಗಾರದ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈಗಿರುವ ಒಬ್ಬೊಬ್ಬ ಗುತ್ತಿಗೆದಾರರೂ ನೂರಾರು ಎಕರೆಯಲ್ಲಿ ಕೊಯ್ಲು ನಡೆಸಿ¨ªಾರೆ. ಆದರೂ ಕೆಲವೊಮ್ಮೆ ಉತ್ಸವದ ಅಗತ್ಯ ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.

        ಉತ್ತರ ಕನ್ನಡದ ಕೋಗಾರು ಘಟ್ಟ ಪ್ರದೇಶದಲ್ಲಿರುವ ನಾಗೂರು, ಕುಂಟವಣಿ, ಮಾರುಕೇರಿ,ಮುಠuಳ್ಳಿ ಹಾಗೂ ಕರಾವಳಿಯ ಅಂಚಿನ ಹಲವು ಅಡಿಕೆ ತೋಟಿಗರಿಗೆ ಸಿಂಗಾರ ಮಾರಾಟ ಆದಾಯ ಮೂಲವಾಗಿದೆ. ನೀರಾವರಿ ತೋಟದಲ್ಲಿ ಒಂದು ಮರದಿಂದ ವರ್ಷಕ್ಕೆ 10 ಸಿಂಗಾರ ಪಡೆಯಬಹುದು. ವರ್ಷಕ್ಕೆ ಎರಡು ಮೂರು ಗೊನೆ ಮಾತ್ರ ಮರದಲ್ಲಿ ನೋಡುತ್ತೇವೆ. ಹತ್ತಾರು ಸಿಂಗಾರ ಹೇಗೆ ದೊರೆಯುತ್ತದೆಂದು ಅನುಮಾನ ಮೂಡಬಹುದು. ನಾವು ತೆಂಗಿನ ಮರದಲ್ಲಿ ಸೀಯಾಳ ಕೊಯ್ದಾಗ ಮರದಲ್ಲಿ ಹಿಡುಪು ಹೆಚ್ಚುವುದನ್ನು ನೋಡಬಹುದು. ಅಂತೆಯೇ ಅಡಿಕೆ ಗೊನೆ ಬೆಳೆಸಲು ವಿನಿಯೋಗವಾಗುವ ಮರದ ಸತ್ವ ಹೊಸ ಹೊಸ ಸಿಂಗಾರ ಉತ್ಪಾದನೆಗೆ ನೆರವಾಗುತ್ತದೆ. ಕೃಷಿಕರ ತೋಟಕ್ಕೆ ಬಂದು ಮರವೇರಿ ಸಿಂಗಾರ ಕೊಯ್ದು ಒಯ್ಯುವರು. ಬಾಳೆಗೊನೆ ಖರೀದಿಗೆ ಬರುವಂತೆ ಗುತ್ತಿಗೆದಾರರು ಹಳ್ಳಿಗೆ ಬರುತ್ತಾರೆ. ಒಂದು ಸಿಂಗಾರಕ್ಕೆ 30ರೂಪಾಯಿ ನೀಡಲಾಗುತ್ತದೆ. ಮರವೇರಿ ಸಿಂಗಾರ ತೆಗೆಯುವ ಕೂಲಿ ಖರ್ಚು,ಮುಂದಿನ ಮಾರಾಟ ವ್ಯವಸ್ಥೆಗಳು ಗುತ್ತಿಗೆದಾರರದು. ಅಧಿಕ ಮಳೆ, ಉಪ್ಪು ನೀರಿನ ಹವೆಯಿಂದಾಗಿ ಕಡಲಂಚಿನ ಅಡಿಕೆ ತೋಟದಲ್ಲಿ ಅರಳಿದ ಸಿಂಗಾರಗಳೆಲ್ಲ ಅಡಿಕೆಯಾಗುವದಿಲ್ಲ. ಒಂದು ಮರದಿಂದ 250ಗ್ರಾಮ್‌ ಒಣ ಅಡಿಕೆ ದೊರೆಯುವದಿಲ್ಲ. ಕಣಿವೆ ಪ್ರದೇಶದಲ್ಲಿ ಅತಿಯಾದ ಮಳೆಯಿಂದ ಕೊಳೆರೋಗದ ಸಮಸ್ಯೆ. ಔಷಧ ಸಿಂಪರಣೆಗೆ ಕೂಲಿಗಳ ಅಭಾವವಿದೆ. ಹೀಗಾಗಿ ಇವರು ಸಿಂಗಾರ ಮಾರಾಟದಲ್ಲಿ ನಿರತರಾಗಿ¨ªಾರೆ. ನಾಗಮಂಡಲದಿಂದ ಎಷ್ಟು ಜನರ ಸಮಸ್ಯೆ ಬಗೆಹರಿದಿದೆಯೋ ಗೊತ್ತಿಲ್ಲ, ಆದರೆ ಸಿಂಗಾರ ಮಾರಾಟದಲ್ಲಿ ಕೆಲವು ಕೃಷಿಕರ ಸಂಕಷ್ಟವಂತೂ ಪರಿಹಾರವಾಗಿದೆ. ಎಕರೆಗೆ ವಾರ್ಷಿಕ 75.000-1.00.000ಲಕ್ಷ ದೊರೆಯುತ್ತಿದೆ. ವಿಶೇಷವೆಂದರೆ ಅಡಿಕೆ ಬೆಳೆಯುವವರು ಒಮ್ಮೆಗೆ ಆದಾಯ ಪಡೆದರೆ ಸಿಂಗಾರ ಮಾರುವವರು ಮಾತ್ರ ವರ್ಷದ ಸುಮಾರು 10 ತಿಂಗಳು ನಿರಂತರ ಹಣ ಗಳಿಸುವರು. ಮರಗಳಿಗೆ ಗಾಯವಾದರೆ ನಂತರದಲ್ಲಿ ಕೊಳೆತು ಮರ ಸಾಯಬಹುದು. ಮರದ ಕಾಂಡಕ್ಕೆ ತೊಂದರೆಯಾಗದಂತೆ ಕೊಯ್ಲು ನಡೆಸುವ ಪರಿಣಿತಿ ಮುಖ್ಯವಿದೆ.

        ಅಡಿಕೆ ಬೇಸಾಯದಲ್ಲಿ ಬೋಡೋì ಸಿಂಪರಣೆ, ಕೊಯ್ಲಿಗೆ ದೊಡ್ಡ ಖರ್ಚು ತಗಲುತ್ತದೆ. ಕೋತಿಗಳ ಹಾವಳಿಯಲ್ಲಿ ಹೈರಾಣಾದವರ ಸಂಖ್ಯೆಯೂ ದೊಡ್ಡದಿದೆ. ಅಡಿಕೆ ಆದಾಯದ ಶೇ. 65ರಷ್ಟು ಹಣ ನಿರ್ವಹಣೆಗೆ ಖರ್ಚಾಗುವ ಪರಿಸ್ಥಿತಿಯಿದೆ. ಅಡಿಕೆ ಮಾರುಕಟ್ಟೆ ಗುಟ್ಕಾ ನಿಷೇಧದ ಗುಮ್ಮನ ಭಯದಲ್ಲಿ ತೇಲುತ್ತಿದೆ. ದೈವ ಭಯವನ್ನು ಬಂಡವಾಳವಾಗಸಿಕೊಂಡು ಟೆಲಿವಿಷನ್‌ ಚಾನೆಲ್‌ಗ‌ಳು,ಜ್ಯೋತಿಷಿಗಳು ರಾಜ್ಯದಲ್ಲಿ ಸಕತ್‌ ವ್ಯವಹಾರ ನಡೆಸಿ¨ªಾರೆ. ಇವರೆಲ್ಲ ಸಿಂಗಾರ ಬಳಕೆಯ ಬಗೆಗೆ ಇನ್ನಷ್ಟು ಚಾಲನೆ ನೀಡುವುದು ಕೃಷಿಕಪರ ಚಿಂತನೆಯಾಗುತ್ತದೆ. ಲೂಟಿಕೋರ ರಾಜಕಾರಣಿಗಳಲ್ಲಿ, ಗಣಿದಣಿಗಳಲ್ಲಿ ಹೆಚ್ಚು ಹೆಚ್ಚು ಭಯದ ಭಕ್ತಿ ಕಾಡಿದಂತೆಲ್ಲ ಅದರ ಒಂದಿಷ್ಟು ಲಾಭ ಕೃಷಿಯತ್ತ ಬರುತ್ತದೆ. ಸೋತ ಕೃಷಿಕರು ಸಿಂಗಾರದಲ್ಲಿ ಬಂಗಾರ ಕಾಣಲು ಎಲ್ಲಕ್ಕಿಂತ ಮುಖ್ಯ ಜ್ಯೋತಿಷಿಗಳು ಮನಸ್ಸುಮಾಡಬೇಕು. ಆಗ ಕೃಷಿಕರು ಸಿಂಗಾರ ಲೆಕ್ಕ ಶುರುಮಾಡಬಹುದು, ನಾಗಾರಾಧನೆಯ ಭಾಗ್ಯ ಹಲವರಿಗೆ ದೊರೆಯಬಹುದು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • ಹೊಸ ಮನೆ, ಹಳೆ ಮನೆಗಳ ಸಮಾಚಾರ
        ಹೊಸ ಮನೆಗಳನ್ನು ಉಪಯೋಗಕ್ಕಾಗಿ ಬಳಸುವ ಮುನ್ನ, ಹಳೆ ಮನೆಗಳಲ್ಲೂ ಧನಾತ್ಮಕ ಶಕ್ತಿಸ್ಪಂದನಗಳು ನಿರ್ದಿಷ್ಟ ಅವಧಿಗಳಲ್ಲಿ ತಿರುಗಿತಿರುಗಿ ಮನೆಯಲ್ಲಿ ತುಂಬಿಕೊಂಡು ಶಾಂತಿ ಸಮೃದ್ಧಿಯು ನೆಲೆಸೆಂದು ವಾಸ್ತು ಶ್ಲಾಘನಗಳನ್ನು ನೆರವೇರಿಸಬೇಕಾಗುತ್ತವೆ. ಗ್ರಹ ಶಾಂತಿ ನಡೆಸಿ ಕ್ರೂರ ಗ್ರಹಗಳನ್ನು ಸಮಾಧಾನಗೊಳಿಸುವುದೂ
      • Copyright @ 2009 Udayavani.All rights reserved.
      • Designed & Hosted By 4cplus