ಕೂತಿದ್ದು, ನಿಂತಿದ್ದು, ನಕ್ಕಿದ್ದು, ಆಕಳಿಸಿದ್ದು, ಬೇಜಾರಾಗಿದ್ದು, ಸಿಟ್ಟಾಗಿದ್ದೂ ಎಲ್ಲವೇ ಒಂದೇ ಕಾಲಕ್ಕೆ ನೋಡುವ ಅಪೂರ್ವ ಒದಗಿರುವ ಕಾಲದಲ್ಲಿ ನೀವಿದ್ದೀರಿ, ನಾವಿದ್ದೇವೆ ಮತ್ತು ಕ್ಯಾಮೆರಾ ಕಂಪನಿಗಳಿವೆ. ಇದೀಗ ವಿಷಯ ಏನಪ್ಪಾ ಅಂದರೆ ಒಲಿಂಪಸ್ ಅನ್ನೋ ಕ್ಯಾಮರಾ ತಯಾರಿಸುವ ಕಂಪನಿ ಇದೀಗ ಹೊಚ್ಚ ಹೊಸದಾದ ಲೆನ್ಸುಗಳೆರಡನ್ನು ರಿಲೀಸ್ ಮಾಡಿದ್ದಾರೆ. ಒಂದು ಇ-ಪಿಎಎಲ್ 5, ಇನ್ನೊಂದು ಎಂ ಜುಯಿಕೋ 17 ಎಂಎಂ. ವೃತ್ತಿಪರರಾಗಿದ್ದರೂ, ಪ್ರವೃತ್ತಿಯಾಗಿದ್ದರೂ ಎಲ್ಲರಿಗೂ ಏಕಕಾಲಕ್ಕೆ ಸಲ್ಲುವ ಲೆನ್ಸುಗಳಂತೆ ಇವು. ಬಳಸಿದವರಿಗೆ ಹೆಚ್ಚು ಹೇಳಬೇಕಿಲ್ಲ. ಬಳಸುವವರು ಬಳಸಿ ತಿಳಿದುಕೊಳ್ಳುವರಲ್ಲ.