Udayavani | Jan 27, 2013
ಸೊಂಟಕ್ಕೊಂದು ಬೆಲ್ಟಾ ಕಟ್ಟಿಕೊಂಡು, ತಲೆಗೆ ಟೊಪ್ಪಿ ಹಾಕಿಕೊಂಡು, ಸ್ಕಾಫìನ್ನು ಸುತ್ತಿಕೊಂಡು, ಬ್ಯಾಗನ್ನು ನೇತು ಹಾಕಿಕೊಂಡು ಹಾಗೇ ಸುಮ್ಮನೆ ರೌಂಡು ಹೋಗೋ ವಿಚಿತ್ರ ಕನಸು ಕಟ್ಟಿಕೊಂಡಿರುವ ಅಸಾಮಾನ್ಯರನ್ನು ಸೆಲಿಯೋ ಕಂಪನಿ ಕೈ ಬೀಸಿ ಕರೆಯುತ್ತಿದೆ. ಬೇಗ ಬನ್ನಿ ಎಂದು ಕೂಗುತ್ತಿದೆ. ಟ್ರೆಂಡಿ, ಫ್ಯಾಷನೇಬಲ್ ಹ್ಯಾಟನ್ನು, ಚೆಂದದೊಂದು ಬೆಲ್ಟನ್ನು, ಬಣ್ಣದ ಸ್ಕಾಫìನ್ನು, ಸೂಪರಾಗಿರೋ ಬ್ಯಾಗನ್ನು ತಯಾರು ಮಾಡಿದ್ದೇವೆ, ನೀವು ನೋಡಿ ಖುಷಿಪಡಿ ಅಂತ ಸಂತೋಷದಿಂದಲೇ ಹೇಳುತ್ತಿದ್ದಾರೆ. ಇಷ್ಟಪಟ್ಟರೆ ಖುಷಿ. ಖರೀದಿಸಿದರೆ ಇನ್ನೂ ಖುಷಿ. ಬೆಲ್ಟ್, ಹ್ಯಾಟ್‌ಮತ್ತು ಸ್ಕಾಫ್ì, ಬ್ಯಾಗ್ ಆರಂಭಿಕ ಬೆಲೆ ಕ್ರಮವಾಗಿ ರೂ. 699, 999, ರೂ.1499.