ಬೆಳಕು ಬಿದ್ದರೂ ಆತಂಕ. ಧೂಳಿದ್ದರೆ ಭಯ. ನೀರು ನೋಡಿ ಮೇಲೆ ಕೆಳಗೆ ನೋಡುವಂತೆ ಮಾಡುವ ವಸ್ತು ಯಾವುದು? ಕೂದಲಿರಬಹುದೇ? ಹೌದೆಂದಾದರೂ ಸರಿಯೇ. ಅಲ್ಲವೆಂದರೂ ಸರಿಯೇ. ಏನು ಮಾಡಿದರೂ ಈ ಶ್ಯಾಂಪೂ ಬಗ್ಗೆ ಮಾತಾಡ್ಲೆàಬೇಕು. ಎಷ್ಟು ಕೇರ್ ತಗೊಂಡರೂ ಸಾಲದು. ಸಾಲ ತಗೊಂಡಾದರೂ ಶ್ಯಾಂಪೂ ತಗೋ. ಲೋರಿಯಲ್ ಕಂಪನಿಯವರು ಇದೀಗ ಲೇಟಾಸ್ಟಾಗಿ ಇನೋವಾ ಕಲರ್‌ಕೇರ್ ಶ್ಯಾಂಪೂ ಬಿಡುಗಡೆ ಮಾಡಿದ್ದಾರೆ. ತುಂಬಾ ಆರೋಗ್ಯಯುತ ಶ್ಯಾಂಪೂ ಅನ್ನೋ ಭರವಸೆ. ಕೂದಲು ಹೊಳೆಯುವ ಆಕರ್ಷಣೆ. ಹಿಡಿದರೆ ಜಾರುವ ಎಳೆಗಳು. ಇನ್ನೂ ಏನೇನೋ. ಅವರವರ ಆಸೆಗೆ ಅವರವರೇ ಹೊಣೆ.