ನಡೆಯಲು ನೂರಾರು ದಾರಿ. ಕಾಣಲು ಸಾವಿರಾರು ಕಣ್ಣು. ಇರೋದು ಎರಡೇ ಕಾಲು. ಅವುಗಳಿಗೆ ಒಂದು ಜೋಡಿ ಬೂಟು. ಇದೀಗ ನಮ್ಮದೇ ತೆಗೆದುಕೊಳ್ಳಿ ಅಂತಿರೋದು ಫ್ಲೋರ್‌ಶಿàಮ್ ಕಂಪನಿ. ರೀಸೆಂಟಾಗಿ ಹೊಸ ಕಲೆಕ್ಷನ್ ರಿಲೀಸ್ ಮಾಡಿರೋ ಕಂಪನಿ ಅದಕ್ಕಿಟ್ಟಿರುವ ಹೆಸರು ಫ್ಲೋರ್‌ಶಿàಮ್ ಕಾರ್ಡೊವನ್ ಲೆದರ್ ಬ್ರೋಗ್ ಶೂ. ಇಷ್ಟ ಆದೋರು, ಇಷ್ಟ ಆಗದೇ ಇರೋರು ಎಲ್ಲರೂ ಒಂದೇ ಒಂದ್ಸಲ ಕಣ್ಣಾರೆ ನೋಡಿ, ಕಣ್ಣಲ್ಲೇ ಖುಷಿ ಪಡಿ. ಹೇಳ್ಳೋರು ಅವರು. ಕೇಳ್ಳೋರು ನೀವು. ಧರಿಸೋರು ಮತ್ತಿನ್ಯಾರು. ಕಾಸಿಧ್ದೋನೇ ಬಾಸು ಅನ್ನೋ ಮಾತನ್ನು ನಂಬಿಕೊಂಡು ತಯಾರಿಸಿರೋ ಶೂ ಇದು. ಕಾಸಿದ್ದರೆ ಹೋಗಿ. ಬೇಕಿದ್ದರೆ ಹಾಕಿ. ದಾರಿಯೂ ನಿಮ್ಮದೇ. ಕಾಲೂ ನಿಮ್ಮದೇ.