ಅನಂತ ಶಾಸ್ತ್ರಿ | Jan 27, 2013
ಲೌಕಿಕ ಜಗತ್ತಿನ ಒತ್ತಡದಿಂದಾಗಿ ಧಕ್ಕೆ ಬಂದಾಗ ಮನಸ್ಸು ಚಡಪಡಿಸುತ್ತದೆ. ಹೀಗಾಗಿ ಮನೆಯ ಜಗುಲಿ, ಅಡುಗೆಯ ಕೋಣೆ, ಮಲಗುವ ಕೋಣೆ, ಪೂಜಾ ಕೋಣೆಗಳಲ್ಲಿ ತುಸು ಗಾಳಿಗೆ ಅಲ್ಲಾಡಿದರೂ ಸೂಕ್ಷ್ಮವಾದ ನಾದಮಯ ತೆಳುವಾದ ಸ್ವರ ಚಿಮ್ಮುವ ಗಂಟೆಗಳನ್ನು (ನಾಲ್ಕೈದು ಕೂಡಿ ಕೊಂಡಿದ್ದರೆ ಸೂಕ್ತ) ತೂಗಿ ಬಿಡಿ. ಎಲ್ಲಾ ಕಡೆ ತೂಗಿಟ್ಟು ಅದೇ ದೊಡ್ಡ ಸದ್ದು ಎಬ್ಬಿಸುವಂತಿರಲಿ. ಒಟ್ಟಿನಲ್ಲಿ ಈ ಘಂಟೆಗಳ ಸದ್ದು ನಿಮ್ಮೊಳಗಿನ ಒತ್ತಡವನ್ನು, ಗೊಂದಲಗಳನ್ನು ನೀಗುವ ಶಕ್ತಿ ಹೊಂದಿದೆ. ಓಂಕಾರವನ್ನು ಜಾಗ್ರತವಾಗಿಸುವ ಸೂಕ್ಷ್ಮ ಒಂದನ್ನು ಈ ಸದ್ದು ನೇಯುತ್ತದೆ. ಗಂಟೆಗಳು ನೇಯುವ ಈ ಕ್ರಿಯೆ ಮನಸ್ಸಿಗೆ ಹಿತವೆನಿಸುತ್ತದೆ.
ಇಡೀ ಜಗತ್ತು ಓಂಕಾರದಿಂದ ತುಂಬಿದೆ ಎಂಬುದು ಒಂದು ಆಷೇìಯ ನಂಬಿಗೆ. ಯಾರೂ ಇಲ್ಲದ ಮನೆಯಲ್ಲಿ. ಯಾವ ಹೊರ ಜಗತ್ತಿನ ಶಬ್ದವೂ ಇರದಿರುವಾಗ, ಜಗತ್ತನ್ನು ಸೃಷ್ಟಿಸಿದ ಯಾವುದೋ ಒಂದು ಅಲೌಕಿಕ ಶಕ್ತಿಯೊಂದನ್ನು ನಂಬಿ, ಧ್ಯಾನವಸ್ಥ ಸ್ಥಿತಿಗೆ ತಲುಪಿದಾಗ ಓಂಕಾರನಾದ ನಮ್ಮ ಕಿವಿಯಲ್ಲಿ ಸುಳಿದಾಡುತ್ತದೆ. ಇದು ಸತ್ಯ. ಇದು ಪ್ರವಹಿಸುತ್ತಿರುವ ವಾಯುವಿನ ಓಡಾಟದಿಂದಾಗಿ ಉಂಟಾಗುವ ಪರಿಣಾಮ ಎಂದು ವೈಜ್ಞಾನಿಕರು ಓಂಕಾರಮಯವಾದ ನಿಮ್ಮ ಅನುಭವ ಜನ್ಯ ಅನುಭೂತಿಯನ್ನು ತೆಳ್ಳಗಿನ ತಮ್ಮ ಪರಿಹಾಸ್ಯದ ನಗುವೊಂದರಿಂದ ತೊರೆಯಲು ಪ್ರಯತ್ನಿಸಬಹುದು.
ಪ್ರತಿ ವಿಷಯಕ್ಕೂ ಎರಡು ಮಗ್ಗಲುಗಳಿವೆ. ನಂಬಿಕೆ, ವಿಜ್ಞಾನ ಜೊತೆ ಜೊತೆಗೇ ಸಾಗಬೇಕು. ನಂಬಿಗೆ ವಿಜ್ಞಾನವನ್ನೂ, ವಿಜ್ಞಾನ ನಂಬಿಗೆಯನ್ನೂ ಸೋಲಿಸುತ್ತಿರುತ್ತವೆ. ಅಖೈರಾದದ್ದು ಒಂದಿದೆ. ಅದು ನಂಬಿಗೆಯ ಮೇಲೆ ನಿಲ್ಲುವಂಥದು. ಅದು ಮಾಯೆ. ಪಂಚ ಭೂತಾತ್ಮಕವಾದದ್ದು. ಅದು ಎಲ್ಲಿಂದ, ಏಕೆ, ಹೇಗೆ, ಎಷ್ಟು, ಯಾವಾಗ ಅವತರಿಸಿತು ಎಂಬುದು ಅಳತೆಗೆ ಸಿಗದು.
ನೀವು ಶತ ಪ್ರಯತ್ನ ಪಟ್ಟರೂ ಮನೆಯೊಳಗಿನ ವಾಸ್ತು ವಿಚಾರವನ್ನು ನೂರಕ್ಕೆ ನೂರು ಸರಿಪಡಿಸಲಾಗದು. ಏನೋ ಒಂದು ಉಳಿಯುತ್ತದೆ. ಏನನ್ನೋ ಒಂದನ್ನು ಮತ್ತೂಬ್ಬ ಹೀಗಲ್ಲ ಹೀಗೆ ಎಂದು ನಿಮ್ಮನ್ನು ತೊಳಲಾಡಿಸುತ್ತಾನೆ. ಲೌಕಿಕವಾಗಿ ಇಲ್ಲೀಗ ನಮ್ಮ ಸಂದರ್ಭದ ಪ್ರಸಿದ್ಧ ಕವಿ ದಿವಂಗತ ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲೊಂದನ್ನು ನೆನಪಿಸಿಕೊಳ್ಳಬಹುದು. ಅವರ ಕವಿತೆಯ ಸಾಲು ಹೀಗಿದೆ- "ಮರದೊಳಗಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ, ಏನೋ ತಾಕಲು , ಏನೋ ಸೋಕಲು ಹೊತ್ತಿ ಉರಿಯುವುದು ಕಾತರ '- ಈ ಸಾಲು ಸರ್ವಕಾಲಿಕ ಸತ್ಯ ನಮ್ಮನ್ನು ಮೀರಿದ ಏನೋ ಒಂದು ಇದೆ. ಅದು ನಮ್ಮನ್ನು ನಿಯಂತ್ರಿಸುತ್ತಿದೆ. ಹೀಗಿದನ್ನು ನಂಬುವುದರಲ್ಲಿ ತೊಂದರೆ ಇಲ್ಲ. ಈ ಶಕ್ತಿಯೇ ಮನೆಯೊಳಗೆ ಇರಬಹುದಾದ ದೋಷವನ್ನು ಅದು ವಾಸ್ತುವಿನ ಸಂಬಂಧವಾಗಿರಲಿ, ಇತರೆ ಏನೇ ವಿಚಾರದಲ್ಲಾಗಲೀ ತೊಡೆದು ಹಾಕ ಬಲ್ಲ ಶಕ್ತಿ ಹೊಂದಿದೆ.
ಓಂಕಾರದಿಂದ ತುಂಬಿದ್ದು ನಮ್ಮ ಭೂಮಿ. ಈ ಓಂಕಾರವನ್ನು ವಿಜ್ಞಾನದ ಮೂಲಕ ಬಗೆಯಿರಿ, ವೇದವೋ, ತರ್ಕವೋ ಇನ್ನೇನೋ ಒಂದು ಮೂಲಕ ಬಗೆಯಲಿ ಕಟ್ಟ ಕಡೆಗೆ ಸಿಗುವುದು ವಿಸ್ತಾರ ಮತ್ತು ಸಂಕುಚನ. ಬ್ರಹ್ಮಾಂಡದ ವಿಸ್ತಾರ ಎಷ್ಟು? ನಮಗೆ ನಿಲುಕದ ಅಳತೆ ಅದು. ಹಾಗೆಯೇ ಸೂûಾ$¾ತಿ ಸೂಕ್ಷ್ಮ ಅಣುವಿನೊಳಗಿನ ಪ್ರಪಂಚದ ವಿಸ್ತಾರವೇನು? ಇದೂ ತಿಳಿಯದು. ಅದು ಹೊರಬಂದಾಗ ಹಿರೋಷಿಮಾ, ನಾಗಾಸಾಕಿಗಳನ್ನು ಸುಟ್ಟಿàತು.
ಈ ಓಂಕಾರಕ್ಕೆ ನಮ್ಮ ಲೌಕಿಕ ಜಗತ್ತಿನ ಒತ್ತಡದಿಂದಾಗಿ ಧಕ್ಕೆ ಬಂದಾಗ ಮನಸ್ಸು ಚಡಪಡಿಸುತ್ತದೆ. ಹೀಗಾಗಿ ಮನೆಯ ಜಗುಲಿ, ಅಡುಗೆಯ ಕೋಣೆ, ಮಲಗುವ ಕೋಣೆ, ಪೂಜಾ ಕೋಣೆಗಳಲ್ಲಿ ತುಸು ಗಾಳಿಗೆ ಅಲ್ಲಾಡಿದರೂ ಸೂಕ್ಷ್ಮವಾದ ನಾದಮಯ ತೆಳುವಾದ ಸ್ವರ ಚಿಮ್ಮುವ ಗಂಟೆಗಳನ್ನು (ನಾಲ್ಕೈದು ಕೂಡಿ ಕೊಂಡಿದ್ದರೆ ಸೂಕ್ತ) ತೂಗಿ ಬಿಡಿ. ಎಲ್ಲಾ ಕಡೆ ತೂಗಿಟ್ಟು ಅದೇ ದೊಡ್ಡ ಸದ್ದು ಎಬ್ಬಿಸುವಂತಿರಲಿ. ಒಟ್ಟಿನಲ್ಲಿ ಈ ಘಂಟೆಗಳ ಸದ್ದು ನಿಮ್ಮೊಳಗಿನ ಒತ್ತಡವನ್ನು, ಗೊಂದಲಗಳನ್ನು ನೀಗುವ ಶಕ್ತಿ ಹೊಂದಿದೆ. ಓಂಕಾರವನ್ನು ಜಾಗ್ರತವಾಗಿಸುವ ಸೂಕ್ಷ್ಮ ಒಂದನ್ನು ಈ ಸದ್ದು ನೇಯುತ್ತದೆ. ಗಂಟೆಗಳು ನೇಯುವ ಈ ಕ್ರಿಯೆ ಮನಸ್ಸಿಗೆ ಹಿತವೆನಿಸುತ್ತದೆ.