Monday, May 20, 2013
Last Updated: 12:51:50 AM IST
  • ನಾನೆಲ್ಲಿರುವೆ:
  • ಮುಖಪುಟ Cinema ಸ್ಯಾಂಡಲ್‌ವುಡ್‌ ವಾರ್ತೆಗಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಧರ್ಮಸ್ಥಳದಲ್ಲಿ ಸೌಹಾರ್ಧ ಕ್ರಿಕೆಟ್‌ ಪಂದ್ಯ
    • ಪ್ರಸ್‌ಕ್ಲಬ್‌ ತಂಡದ ವಿರುದ್ಧ ಕಿಚ್ಚ ತಂಡಕ್ಕೆ ಜಯ

      • Udayavani | Jan 27, 2013

        ಪ್ರಸ್‌ಕ್ಲಬ್‌ ತಂಡದ ವಿರುದ್ಧ ಕಿಚ್ಚ ತಂಡಕ್ಕೆ ಜಯ
        ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ರೀಡಾಂಗಣ ಭಾನುವಾರ ಎಂದಿನಂತಿರಲಿಲ್ಲ. ಮೈದಾನದ ಸುತ್ತಲೂ ಜನಜಾತ್ರೆ. ಅಲ್ಲಿ ಕೇಕೆ, ಶಿಳ್ಳೆಗಳದ್ದೇ ಸದ್ದು. ಎತ್ತ ನೋಡಿದರೂ ಅಭಿಮಾನಿಗಳ ಜೈಕಾರ... ಇದಕ್ಕೆ ಕಾರಣವಾಗಿದ್ದು ಅಲ್ಲಿ ನಡೆದ ಸೌಹಾರ್ಧಯುತ ಕ್ರಿಕೆಟ್‌ ಪಂದ್ಯ.
        ನಟ ಕಿಚ್ಚ ಸುದೀಪ್‌ ನೇತೃತ್ವದ ತಂಡ ಹಾಗೂ ಪತ್ರಕರ್ತ ಸದಾಶಿವ ಶೆಣೈ ನೇತೃತ್ವದ ಬೆಂಗಳೂರು ಪ್ರಸ್‌ಕ್ಲಬ್‌ ತಂಡದ ನಡುವೆ ಸೌಹಾರ್ಧಯುತ ಕ್ರಿಕೆಟ್‌ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸುದೀಪ್‌ ನೇತೃತ್ವದ ಇಲೆವೆನ್‌ ತಂಡ ಪ್ರಸ್‌ಕ್ಲಬ್‌ ತಂಡದ ವಿರುದ್ಧ ಜಯಗಳಿಸಿತು. ಇದಕ್ಕೂ ಮುನ್ನ ಪಂದ್ಯಾವಳಿಗೆ ಮೂಡಬಿದ್ರೆ ಆಳ್ವಾಸ್‌ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷರಾದ ಡಾ.ಮೋಹನ್‌ ಆಳ್ವ ಚಾಲನೆ ನೀಡಿದರು. ಇದೇ ವೇಳೆ ಡಾ.ಡಿ.ಹಷೇìಂದ್ರಹೆಗ್ಡೆ ನಟ ಸುದೀಪ್‌ ಅವರನ್ನು ಸನ್ಮಾನಿಸಿದರು. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಡೆ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಪಂದ್ಯ ವೀಕ್ಷಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ವಿಜಯಕುಮಾರ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ಸೂರಪ್ಪಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಅದೊಂದು ರೀತಿಯ ಹಬ್ಬ. ಅದನ್ನು ಹಬ್ಬ ಅನ್ನಬೇಕೋ, ಜಾತ್ರೆ ಅನ್ನಬೇಕೋ ಗೊತ್ತಿಲ್ಲ. ಒಟ್ಟಲ್ಲಿ ಕಾಲಿಡಲಾಗದಷ್ಟೂ ಜನಜಂಗುಳಿ. ಎತ್ತ ನೋಡಿದರೂ ಉದ್ದನೆಯ ಸಾಲು. ಅಲ್ಲಿ ಕೇಕೆ
      image
      • Copyright @ 2009 Udayavani.All rights reserved.
      • Designed & Hosted By 4cplus