ಬಿ. ಎ. ವಿವೇಕ ರೈ | Jan 28, 2013
ತುಳುವ ನಾಡಿನಲ್ಲಿ ಯಹೂದ್ಯ ವ್ಯಾಪಾರಿ ಅಬ್ರಹಾಂ ಬೆನ್ ಈಜೂ 800 ವರ್ಷಗಳ ಹಿಂದೆ ಪಿಸುಗುಟ್ಟಿದ ತುಳು ಶಬ್ದಗಳು...
ಅಬ್ರಹಾಂ ಬೆನ್ ಈಜೂ : ಈ ಹೆಸರನ್ನು ನಾನು ಮೊದಲು ಕೇಳಿದ್ದು ಇಪ್ಪತ್ತೆರಡು ವರ್ಷಗಳ ಹಿಂದೆ. 1990ರ ಮೇ ತಿಂಗಳಲ್ಲಿ. ನನ್ನನ್ನು ಭೇಟಿ ಆಗಲು ಮಂಗಳೂರಿಗೆ ಬಂದ ಪ್ರಸಿದ್ಧ ಸಾಮಾಜಿಕ ಮಾನವ ವಿಜ್ಞಾನಿ ಮತ್ತು ಈಗ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಇಂಗ್ಲಿಷ್ ಕಾದಂಬರಿಕಾರ ಅಮಿತಾವ್ ಘೋಷ್ ಅವರು ತುಳುನಾಡು ಮತ್ತು ಈಜಿಪ್ತ್ ನಡುವಿನ ಎಂಟು ನೂರು ವರ್ಷಗಳ ಹಿಂದಿನ ವ್ಯಾಪಾರ ಸಂಬಂಧದ ಕೆಲವು ನಿಗೂಢಗಳನ್ನು ನನ್ನ ಮುಂದೆ ಬಿಚ್ಚಿಟ್ಟರು. ಅಬ್ರಹಾಂ ಬೆನ್ ಈಜೂ ಎಂಬ ಯಹೂದ್ಯ ವ್ಯಾಪಾರಿ ಟ್ಯುನಿಸಿಯದವನು. ಈಜಿಪ್ತ್ , ಆಡೆನ್ ಮತ್ತು ಭಾರತದಲ್ಲಿ ವ್ಯಾಪಾರ ಮಾಡಿದವನು.
1132ರಲ್ಲಿ ಭಾರತದ ಪಶ್ಚಿಮ ಕರಾವಳಿಯ "ಮಂಜರೂರ್' (ಮಂಗಳೂರು)ಗೆ ಹಡಗಿನಲ್ಲಿ ಬಂದದ್ದು , ಮಂಗಳೂರು ಬಂದರಿನಲ್ಲಿ ಗುಲಾಮಳಾಗಿ ಮಾರಾಟಕ್ಕೆ ತಂದಿದ್ದ ಹೆಣ್ಣು "ಆಶು' ಎನ್ನುವಾಕೆಯನ್ನು ಹಣ ಕೊಟ್ಟು ಮಾರಾಟದ ಜಾಲದಿಂದ ಬಿಡಿಸಿ ಅವಳನ್ನು ಮದುವೆಯಾಗಿ ತನ್ನ ಹೆಂಡತಿಯನ್ನಾಗಿ ಮಾಡಿಕೊಂಡದ್ದು, ಇನ್ನೊಬ್ಬ ಗುಲಾಮ "ಬಮ(?)' ನನ್ನು ಕೂಡಾ ಹಣ ಕೊಟ್ಟು ಬಿಡಿಸಿ ತನ್ನ ಸಹಾಯಕನಾಗಿ ಇರಿಸಿಕೊಂಡದ್ದು -ಇತ್ಯಾದಿ ವಿವರಗಳನ್ನು ಅಮಿತಾವ್ ಘೋಷ್ ತಮ್ಮ ಅಧ್ಯಯನ ಸಾಮಗ್ರಿಗಳ ನೆರವಿನಿಂದ ನನ್ನೊಡನೆ ಹಂಚಿಕೊಂಡರು. ಅಬ್ರಹಾಂ ಬೆನ್ ಈಜೂ ಮಂಗಳೂರಿನಲ್ಲಿ ಇದ್ದದ್ದು 1132ರಿಂದ 1149ರವರೆಗೆ ಒಟ್ಟು ಹದಿನೇಳು ವರ್ಷಗಳು. ಆ ಅವಧಿಯಲ್ಲಿ ಅವನು ಆಡೆನ್‌ನಲ್ಲಿ ನೆಲಸಿದ್ದ ಅವನ ಸ್ನೇಹಿತ ಖಲಾಫ್ ಇಸಾಕ್‌ಗೆ ಬರೆದ ಪತ್ರವೊಂದರಲ್ಲಿ ಉÇÉೇಖಗೊಂಡ ಮಂಗಳೂರು ಪರಿಸರದ ಗುಲಾಮನ ಹೆಸರು ಮತ್ತು ವಿವರಗಳನ್ನು ಸರಿಯಾಗಿ ಗ್ರಹಿಸಲು ಅಮಿತಾವ್ ನನ್ನೊಡನೆ ಸಮಾಲೋಚಿಸಿದರು. ಬೆನ್ ಈಜೂ ಬರೆದ ಮತ್ತು ಅವನಿಗೆ ಹೊರ ದೇಶಗಳಿಂದ ಬಂದ ಎಲ್ಲ ಪತ್ರಗಳೂ ಜೂಡೋ ಅರೇಬಿಕ್ ಭಾಷೆಯಲ್ಲಿ ಹೀಬ್ರೂ ಲಿಪಿಯಲ್ಲಿ ಇವೆ. ಎಂಟು ನೂರು ವರ್ಷಗಳ ಹಿಂದಿನ ಆ ಭಾಷೆ ಮತ್ತು ಲಿಪಿಯಲ್ಲಿ ವಿಶೇಷ ಪರಿಣತಿ ಇದ್ದವರು ಮಾತ್ರವೇ ಓದಬಹುದಾದ ದಾಖಲೆಗಳು ಅವು. ಸಾಕಷ್ಟು ವಿವರಗಳನ್ನು ಕೇಳಿ ತಿಳಿದುಕೊಂಡ ಬಳಿಕ ನಾನು ಆ ಗುಲಾಮನ ಹೆಸರು ತುಳುವಿನ "ಬೊಮ್ಮ' ಆಗಿರಬಹುದು ಎಂದು ಹೇಳಿದೆ. ತುಳುವ ಸಂಸ್ಕೃತಿಯಲ್ಲಿ ಇರುವ ಬೆರ್ಮೆರ್ ಆರಾಧನೆ ಮತ್ತು ಬೊಮ್ಮ ಹೆಸರಿನ ತುಳು ಶಬ್ದಗಳ ಮಾಹಿತಿ ಕೊಟ್ಟೆ. ಜ್ಯೂಡೋ ಅರೇಬಿಕ್ ಭಾಷೆ ಮತ್ತು ಪ್ರಾಚೀನ ಹಿಬ್ರೂ ಲಿಪಿಯ ವಿಶೇಷ ಅಭ್ಯಾಸ ಇದ್ದ ಅಮಿತಾವ್ ಘೋಷ್ ತುಂಬಾ ಸಂತೋಷ ಪಟ್ಟರು ಮತ್ತು ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡರು. ಅವರು ಮಂಗಳೂರಿನಿಂದ ಅವರ ಊರು ಕೊಲ್ಕತಾಕ್ಕೆ ಹೋದ ಮೇಲೆ ಬೆನ್ ಈಜೂ, ಆಶು ಮತ್ತು ಬೊಮ್ಮ ನನ್ನ ನೆನಪಿನಿಂದ ಮತ್ತೆ ಇತಿಹಾಸದ ದಾಖಲೆಗೆ ಸರಿದರು. ಎರಡು ವರ್ಷಗಳ ಬಳಿಕ, 1992ರಲ್ಲಿ ಅಮಿತಾವ್ ಘೋಷ್ ಅವರ ಹೊಸ ಗ್ರಂಥ ಅಂಚೆಯಲ್ಲಿ ನನ್ನ ಕೈಸೇರಿತು. ಅದೊಂದು ಕಾದಂಬರಿ ರೂಪದ ಅಧ್ಯಯನ ಸಂಕಥನ. ಅದರಲ್ಲಿ ಅಬ್ರಹಾಂ ಬೆನ್ ಈಜೂ ಮುಖ್ಯ ಪಾತ್ರವಾಗಿ ಕಾಣಿಸಿಕೊಂಡಿದ್ದ. ಅಮಿತಾವ್ ಘೋಷ್ ತಮ್ಮ ಸಂಶೋಧನೆಯ ಕಥನವನ್ನು ದಾಖಲೆಗಳ ಸಹಿತ ಕಾದಂಬರಿಯ ಮಾದರಿಯಲ್ಲಿ ಅಲ್ಲಿ ವಿವರಿಸಿ¨ªಾರೆ. ಎಂಟು ನೂರು ವರ್ಷಗಳ ಹಿಂದೆ ಯಹೂದ್ಯ ವ್ಯಾಪಾರಿ ಬೆನ್ ಈಜೂ ಮಂಗಳೂರಿಗೆ ಬಂದು ಇಲ್ಲಿ ನಡೆಸಿದ ಚಟುವಟಿಕೆಗಳನ್ನು ಕಥಿಸುತ್ತ "ಮಂಗಳೂರು' ಎಂಬ ಹೆಸರಿನ ಪ್ರತ್ಯೇಕ ಅಧ್ಯಾಯವನ್ನು ಈ ಕೃತಿಯಲ್ಲಿ ಕೊಟ್ಟಿ¨ªಾರೆ. ಈ ಭಾಗದಲ್ಲಿ ಲೇಖಕ ಅಮಿತಾವ್ ಘೋಷ್ ನನ್ನನ್ನು ಒಂದು ಜೀವಂತ ಪಾತ್ರವನ್ನಾಗಿ ವಾಸ್ತವಿಕ ವಿವರಗಳ ಸಹಿತ ಚಿತ್ರಿಸಿ¨ªಾರೆ. ಅವರು ನನ್ನನ್ನು ಮಂಗಳೂರಲ್ಲಿ ಭೇಟಿ ಆದದ್ದು , ನಮ್ಮ ನಡುವಿನ ಸಂಭಾಷಣೆ, "ಬೊಮ್ಮ' ಶಬ್ದದ ಬಗ್ಗೆ ನಾನು ಕೊಟ್ಟ ವಿವರಣೆ, ಇತರ ಮಾಹಿತಿಗಳು-ಎಲ್ಲವನ್ನು ಯಥಾವತ್ತಾಗಿ ಕೊಟ್ಟಿ¨ªಾರೆ. ನನಗೆ ವೈಯಕ್ತಿಕವಾಗಿ ಮುಜುಗರವನ್ನೂ, ಜಾಗತಿಕ ಮಟ್ಟದಲ್ಲಿ ಆಕಸ್ಮಿಕ ಗೌರವವನ್ನೂ ತಂದು ಕೊಟ್ಟ ಭಾಗ ಇದು. ಜಗತ್ತಿನ ಯಾವ ಭಾಗಕ್ಕೆ ಹೋದರೂ ಇಂಗ್ಲಿಷ್ ಸಾಹಿತ್ಯ ವಿದ್ಯಾರ್ಥಿಗಳು ಈ ಗ್ರಂಥದ ಮೂಲಕ ನನ್ನನ್ನು ಗುರುತಿಸುವ ಬಗೆಗೆ ಆಶ್ಚರ್ಯಗೊಂಡಿದ್ದೇನೆ. ಅಬ್ರಹಾಂ ಬೆನ್ ಈಜೂ ಮತ್ತು ಬೊಮ್ಮ -ತುಳುನಾಡಿಗೆ ಜಾಗತಿಕ ಮನ್ನಣೆ ತಂದುಕೊಟ್ಟ ಈ ಕೃತಿಯ ಕಥನ ರೋಮಾಂಚಕಾರಿ.
ಅಮಿತಾವ್ ಘೋಷ್ ಅವರ ಐn ಅn ಅnಠಿಜಿಟಿuಛಿ ಔಚnಛ (1992) ಪ್ರಕಟವಾಗಿ ಇಪ್ಪತ್ತು ವರ್ಷಗಳೇ ಸಂದಿವೆ. ಆ ಗ್ರಂಥ ಆಮೇಲೆ ಅನೇಕ ಮರುಮುದ್ರಣಗಳನ್ನು ಕಂಡಿದೆ. ಆದರೆ, ನನ್ನ ಪಾಲಿಗೆ ಈ ಇಪ್ಪತ್ತು ವರ್ಷಗಳಲ್ಲಿ ಬೆನ್ ಈಜೂ, ಬೊಮ್ಮ , ಆಶು ಮತ್ತೆ ಇತಿಹಾಸದ ಇರುಳಲ್ಲಿ ಕಣ್ಮರೆಯಾಗಿ ಹೋಗಿದ್ದರು. ಆದರೆ, ಈಗ ಅವರೆಲ್ಲ ಮತ್ತೆ ಬಂದು ತುಳುನಾಡಿನ, ಮಂಗಳೂರಿನ ಪರಿಸರದಲ್ಲಿ ಅಲೆದಾಡಲು ತೊಡಗಿ¨ªಾರೆ. ಸುಮಾರು ಎರಡು ತಿಂಗಳ ಹಿಂದೆ ಕಳೆದ ನವಂಬರದಲ್ಲಿ ನನಗೆ ಒಂದು ಅನಿರೀಕ್ಷಿತ ಈಮೈಲ್ ಬಂತು. ಅದನ್ನು ಕಳುಹಿಸಿದವರು ಎಲಿಜಬೆತ್ ಲಮೌºರ್ನ್ ಎನ್ನುವ ಮಹಿಳೆ. ನನಗೆ ಸಂಪೂರ್ಣ ಅಪರಿಚಿತರು. ತಾನು ಮಾನವವಿಜ್ಞಾನದ ಪ್ರಾಧ್ಯಾಪಕಿ, ಇಂಗ್ಲೆಂಡಿನಲ್ಲಿ ಸಂಶೋಧನೆ ಮಾಡುತ್ತಿದ್ದೇನೆ ಎಂದು ತಮ್ಮ ಬಗ್ಗೆ ತಿಳಿಸುತ್ತ ತಮ್ಮ ಸಂಶೋಧನೆಯ ಒಂದು ಸಮಸ್ಯೆಯ ಪರಿಹಾರಕ್ಕಾಗಿ ನನ್ನ ನೆರವನ್ನು ಕೋರಿದ್ದರು. ಅವರು ಕಳುಹಿಸಿದ ಸಂಪ್ರಬಂಧದ ಕರಡನ್ನು ಓದಿದಾಗ ಆಶ್ಚರ್ಯ ಮತ್ತು ಕುತೂಹಲ. ಅದು ಮತ್ತೆ ಅಬ್ರಹಾಂ ಬಿನ್ ಈಜೂವಿಗೆ ಸಂಬಂಧಪಟ್ಟದ್ದು.
ಎಲಿಜಬೆತ್ ಅವರ ಕರಡು ಲೇಖನವನ್ನು ಮತ್ತು ಅದರಲ್ಲಿ ಅವರು ಉÇÉೇಖೀಸಿದ ಗ್ರಂಥಗಳ ಪಟ್ಟಿಯನ್ನು ಅವಲೋಕಿಸಿದಾಗ ಅಬ್ರಹಾಂ ಬಿನ್ ಈಜೂವಿಗೆ ಸಂಬಂಧಪಟ್ಟ ಹಾಗೆ ಪ್ರಕಟವಾಗಿರುವ ಅಪೂರ್ವ ಹೊಸ ಸಾಮಗ್ರಿಗಳ ಪರಿಚಯ ಆಯಿತು. ಅದರಲ್ಲಿ ಬಹಳ ಮುಖ್ಯವಾದ ಪ್ರಕಟಣೆಗಳು ಎರಡು :
1: India traders of the Middle Ages : documents from Cairo Geniza (India Book): Goitein S D and Mordechai., 2008.
2. Abraham Ben Yiju India trader and manufacturer : India Book
3 : Goitein .,
2010. ಈ ಗ್ರಂಥಗಳಲ್ಲಿ ಬೆನ್ ಈಜೂವಿನ ಅನೇಕ ಮುಖ್ಯ ಪತ್ರಗಳನ್ನು ಜುಡಿಯೋ
ಅರೇಬಿಕ್‌ನಿಂದ ಮೊದಲ ಬಾರಿ ಇಂಗ್ಲಿಷಿಗೆ ಅನುವಾದಮಾಡಿ ಕೊಡಲಾಗಿದೆ. ಹಾಗಾಗಿ, ಈಗ ಅನೇಕ ಅಸ್ಪಷ್ಟ ಸಂಗತಿಗಳು ಸ್ಪಷ್ಟವಾಗತೊಡಗಿವೆ.
ಬೆನ್ ಈಜೂ ಬರೆದ ಮೊದಲನೆಯ ಮಹತ್ವದ ದಾಖಲೆಯು 17, ಅಕ್ಟೋಬರ್ 1132ರದ್ದು. ಅದರಲ್ಲಿ ಆತನು ಸೆರೆಯಿಂದ ಬಿಡಿಸಿದ ಗುಲಾಮ ಹೆಣ್ಣು "ಆಶು'ವಿನ ಉÇÉೇಖ ಬರುತ್ತದೆ. ಈ ದಾಖಲೆಯನ್ನು ತಾನು ಬರೆದದ್ದು ಭಾರತ ದೇಶದಲ್ಲಿ ಇರುವ ಮಲಿಬಾರತ್ (ಮಲಬಾರ್) ನ ತುಳುವದ ಮಂಜರೂರ್ ಪಟ್ಟಣದಲ್ಲಿ ; ಅದು ವಿಶಾಲ ಸಮುದ್ರದ ಕರಾವಳಿಯಲ್ಲಿ ಇರುವ ದೊಡ್ಡ ನಗರ ಎಂದು ಹೇಳಿಕೊಂಡಿ¨ªಾನೆ. ತಾನು ಇದ್ದ ಪ್ರದೇಶವನ್ನು "ತುಳುವ' ಎಂದೂ ಪಟ್ಟಣವನ್ನು "ಮಂಜರೂರ್' (ಮಂಗಳೂರು) ಎಂದು ದಾಖಲಿಸಿರುವುದು ಒಂದು ಐತಿಹಾಸಿಕ ಉÇÉೇಖ. ಅಂದರೆ 1132ರÇÉೇ ಈ ಪ್ರದೇಶಕ್ಕೆ "ತುಳುವ' ಎಂಬ ಹೆಸರು ಇತ್ತು ಮತ್ತು ತುಳು ಭಾಷೆ ಇಲ್ಲಿ ಪ್ರಚಲಿತವಾಗಿತ್ತು ಎನ್ನುವ ಸ್ಪಷ್ಟ ಮಾಹಿತಿ ಇದರಲ್ಲಿ ದೊರೆಯುತ್ತದೆ. ಬೆನ್ ಈಜೂ ತಾನು ಬಿಡುಗಡೆ ಮಾಡಿದ ಭಾರತೀಯ ಗುಲಾಮ ಹೆಣ್ಣಿನ ಬಗ್ಗೆ ಹೀಗೆ ದಾಖಲಿಸಿ¨ªಾನೆ : "ತುಳುವದ ಗುಲಾಮ ಹೆಣ್ಣು ಆಶು, ಯಹೂದ್ಯ ಧರ್ಮಕ್ಕೆ ಮತಾಂತರಗೊಂಡವಳು'. ಆಶು - ತುಳುವ ಹೆಣ್ಣು ಎನ್ನುವ ಸೂಚನೆ ಇಲ್ಲಿ ಸಿಗುತ್ತದೆ. ಇದಕ್ಕೆ ಮೊದಲು ಕೆಲವು ವಿದ್ವಾಂಸರು ಆಶು "ನಾಯರ್ ಹೆಣ್ಣು' ಎಂದು ಬರೆದಿ¨ªಾರೆ. ಬೆನ್ ಈಜೂ ತಾನು ಆಶುವನ್ನು ಮದುವೆ ಆದ ಮೇಲೆ ಅವಳಿಗೆ ಯಹೂದ್ಯ ಹೆಸರನ್ನು -ಬೆರಾಖಾ (= ಆಶೀರ್ವಾದ ಅಥವಾ ಅದೃಷ್ಟ ) ಎಂದು ಇಡುತ್ತಾನೆ. ಬೆನ್ ಈಜೂ ಮತ್ತು ಆಶು ಅವರಿಗೆ ಮಂಗಳೂರಿನಲ್ಲಿ ಇರುವಾಗಲೇ ಮೂವರು ಮಕ್ಕಳು ಜನಿಸುತ್ತಾರೆ. ಮೊದಲನೆಯವನು ಹುಡುಗ -ಸುರೂರ್.
ಎರಡನೆಯವಳು ಹುಡುಗಿ- ಸಿತ್ತ್ ಅಲ್ ದಾರ್. ಮೂರನೆಯವನು ಹುಡುಗ, ಅವನು ಭಾರತದಲ್ಲಿ ಇರುವಾಗಲೇ 1148ರಲ್ಲಿ ನಿಧನನಾಗುತ್ತಾನೆ. ಬೆನ್ ಈಜೂ 1149ರಲ್ಲಿ ಅಂತಿಮವಾಗಿ ಕುಟುಂಬ ಸಹಿತ ಮಂಗಳೂರನ್ನು ಬಿಟ್ಟು , ಆಡೆನ್ -ಯೆಮೆನ್‌ಗೆ ಹೋಗಿ ಅಲ್ಲಿಂದ ಕೈರೋ- ಈಜಿಪ್ಟ್ಗೆ ಹೋಗಿ ನೆಲಸುತ್ತಾನೆ.
ಬೆನ್ ಈಜೂ ಮಂಗಳೂರಿನಲ್ಲಿ ಇ¨ªಾಗ ಯೆಮೆನ್, ಈಜಿಪ್ತ್ ಮತ್ತು ಉತ್ತರ ಆಫ್ರಿಕಾಗಳ ಜೊತೆಗೆ ಹಡಗುಗಳ ಮೂಲಕ ಆಮದು- ರಫ್ತು ವ್ಯಾಪಾರ ನಡೆಸುತ್ತಿದ್ದ. ಆಡೆನ್‌ನ ವ್ಯಾಪಾರಿಗಳ ಜೊತೆಗೆ ಆತನ ವ್ಯಾಪಾರ ಸಂಬಂಧಿ ಪತ್ರಗಳು ಆಗಿನ ಕಾಲದ ಭಾರತದ ಪಶ್ಚಿಮ ಕರಾವಳಿಯ ಬಂದರುಗಳ ಮೂಲಕದ ವಾಣಿಜ್ಯ ವ್ಯವಹಾರಗಳ ಚಿತ್ರಣವನ್ನು ಕೊಡುತ್ತವೆ. ಬೆನ್ ಈಜೂ ಮಂಗಳೂರಿನಿಂದ ಹೆಚ್ಚಾಗಿ ರಫ್ತು ಮಾಡುತ್ತಿದ್ದ ಸಾಮಗ್ರಿಗಳು- ಕಾಳುಮೆಣಸು, ಅಡಕೆ, ಸಂಬಾರ ಜೀನಸುಗಳು, ಸುಗಂಧದ್ರವ್ಯಗಳು, ಕಬ್ಬಿಣದ ಸಾಮಗ್ರಿಗಳು. ಆಡೆನ್ ಮತ್ತು ಈಜಿಪ್ತಿನಿಂದ ಮಂಗಳೂರಿಗೆ ಆಮದು ಮಾಡುತ್ತಿದ್ದ ಸಾಮಗ್ರಿಗಳು- ಚಿನ್ನ, ಬೆಳ್ಳಿ, ಸಿಲ್ಕ್, ಗಾಜು, ಸಾಬೂನು, ಕಾಗದ, ಪುಸ್ತಕಗಳು, ಹಾಸುಗಂಬಳಿ, ಮೇಜು, ಬಾಣಲೆಯಂತಹ ಗೃಹೋಪಯೋಗಿ ವಸ್ತುಗಳು, ಹವಳ, ಸಕ್ಕರೆ, ಒಣದ್ರಾಕ್ಷಿ , ಚೀಸ್, ಆಲಿವ್ ಎಣ್ಣೆಯಂತಹ ಆಹಾರ ಪದಾರ್ಥಗಳು, ಮಸ್ಲಿನ್ ಬಟ್ಟೆ, ಹತ್ತಿ ಬಟ್ಟೆ, ಪಿಂಗಾಣಿ ವಸ್ತುಗಳು.
ಬೆನ್ ಈಜೂ ತುಳುವದಲ್ಲಿ ಇ¨ªಾಗ ವ್ಯಾಪಾರದ ಜೊತೆಗೆ ಹಿತ್ತಾಳೆ ಮತ್ತು ಕಂಚಿನ ಒಂದು ಕಾರ್ಖಾನೆ /ಕರ್ಮಸಾಲೆ ಕುಲುಮೆಯನ್ನು ಹೊಂದಿದ್ದ ಎನ್ನುವ ಮಾಹಿತಿ ದೊರೆಯುತ್ತದೆ. ಆಡೆನ್‌ನಿಂದ ಕಚ್ಚಾ ಕಬ್ಬಿಣ, ತಾಮ್ರ, ತವರಗಳನ್ನು ತರಿಸಿಕೊಂಡು, ತನ್ನ ಕಾರ್ಖಾನೆಯಲ್ಲಿ ಅವನ್ನು ಕರಗಿಸಿ ಬಗೆ ಬಗೆಯ ಪಾತ್ರೆಗಳನ್ನು ವಸ್ತುಗಳನ್ನು ತಯಾರಿಸಿ, ಅನೇಕವನ್ನು ಹೊರದೇಶಗಳಿಗೆ ರಫ್ತು ಮಾಡುತ್ತಿದ್ದ ಉÇÉೇಖಗಳು ಅವನ ಪತ್ರಗಳಿಂದ ದೊರೆಯುತ್ತವೆ.
ಅಂತಹ ಒಂದು ದಾಖಲೆಯಲ್ಲಿ ಬರುವ ಒಂದು ಶಬ್ದವು ಮಂಗಳೂರು ಪರಿಸರದ ಸ್ಥಳೀಯ ಭಾಷೆಯದ್ದು ಆಗಿರಬೇಕು ಎಂದು ಅಭಿಪ್ರಾಯಪಡಲಾಗಿದೆ. ಇದು ಅರೇಬಿಕ್ ಶಬ್ದ ಅಲ್ಲ , ಆದ್ದರಿಂದ ಅದನ್ನು ಇಂಗ್ಲಿಷಿಗೆ ಅನುವಾದ ಮಾಡಲು ಸಾಧ್ಯ ಆಗಿಲ್ಲ. ಅದರ ರೂಪಗಳು ಭಿನ್ನ ಭಿನ್ನ ವಿವರಣೆಗಳಿಗೆ ಅವಕಾಶ ಕಲ್ಪಿಸುತ್ತವೆ. ಏಕೆಂದರೆ, ಅದನ್ನು ಬರೆದದ್ದು ಹೀಬ್ರೂ ಲಿಪಿಯಲ್ಲಿ , ಜ್ಯೂಡೋ ಅರೇಬಿಕ್ ಭಾಷೆಯ ಜಾಯಮಾನಕ್ಕೆ ಅನುಸಾರವಾಗಿ. ಹಾಗಾಗಿ, ಅದನ್ನು ಯಾವ ಭಾಷೆಯ ಯಾವ ಶಬ್ದ ರೂಪ ಎಂದು ಎಂಟು ನೂರು ವರ್ಷಗಳ ಬಳಿಕ ನಿರ್ಣಯಿಸುವ ಸವಾಲು ಇದೆ. t’lm ಎನ್ನುವ ಪದವನ್ನು taalim /taalamಎಂದು ಅರೇಬಿಕ್ ಬಲ್ಲ ವಿದ್ವಾಂಸರು ಲಿಪ್ಯಂತರ ಮಾಡಿ¨ªಾರೆ. ಅಬ್ರಹಾಂ ಬಿನ್ ಈಜೂವಿನ ವ್ಯಾಪಾರಿ ಸ್ನೇಹಿತ ಜೋಸೆಫ್ ಅಬ್ರಹಾಂ ಎನ್ನುವವನು 1134-37ರ ವೇಳೆಗೆ ಆಡೆನ್‌ನಿಂದ ಬೆನ್ ಈಜೂವಿಗೆ ಬರೆದ ಕೋರಿಕೆಯ ದಾಖಲೆಯಲ್ಲಿ ಈ ಕೆಳಗಿನ ವಸ್ತುಗಳ ಉÇÉೇಖ ದೊರೆಯುತ್ತದೆ :
""ಹತ್ತು ಮೂಲೆಗಳ ಒಂದು ಟ್ರೇ; ಮೇಜಿನ ಮೇಲೆ ಇರಿಸುವ ಒಂದು ಬೋಗುಣಿ; ಒಂದು ಸಣ್ಣ ಕ್ಯಾಂಡಲ್ ಸ್ಟಿಕ್; ಒಂದು ಸಣ್ಣ ಠಿ’lಞ ಅದರ ಬಾಯಿಯು ಒಂದೂವರೆ ಅಂಗುಲಕ್ಕಿಂತ ಹೆಚ್ಚು ಅಗಲ ಇರಬಾರದು. ಅದು ಒಳ್ಳೆಯ ಕುಶಲತೆಯಿಂದ ಮಾಡಿ¨ªಾಗಿರಬೇಕು.'
ಇಬ್° ಬತ್ತುತನ ದಾಖಲೆ...
ಇದನ್ನು ಹೋಲುವ ಶಬ್ದ ಮತ್ತೆ ಕಾಣಿಸಿಕೊಳ್ಳುವುದು 1340ರಲ್ಲಿ ಪ್ರವಾಸಿ ಲೇಖಕ ಇಬ್° ಬತ್ತುತನ ದಾಖಲೆಯಲ್ಲಿ. ಬತ್ತುತನು ಹೊನ್ನಾವರದ ಸುಲ್ತಾನ ಜಮೆಲ್ ಅಲ್ ದಿನ್ ಮುಹಮ್ಮದ್ ಹಸನ್‌ನ ಜೊತೆಗಿನ ತನ್ನ ಔತಣದ ವರ್ಣನೆ ಮಾಡುವಾಗ ಊಟದ ಮೇಜಿನ ಮೇಲೆ ಇರಿಸಿದ ಊಟ ಮಾಡುವ ತಾಮ್ರದ ತಟ್ಟೆಯನ್ನು "ತಾಲಮ…' ಎಂದು ಹೆಸರಿಸುತ್ತಾನೆ. ಕೆಲಸದ ಹೆಣ್ಣೊಬ್ಬಳು ಉದ್ದವಾದ ತಾಮ್ರದ ಸೌಟಿನಿಂದ ಅವರ "ತಾಲಮ…' ಗಳಲ್ಲಿ ಅನ್ನವನ್ನು ಬಡಿಸಿದ್ದು , ಅದರ ಮೇಲೆ ತುಪ್ಪಸುರಿದದ್ದು, ಹಸಿಶುಂಠಿ ಲಿಂಬೆ ಮಾವಿನಕಾಯಿಯ ಉಪ್ಪಿನಕಾಯಿ ಬಡಿಸಿದ್ದು , ಮತ್ತೆ ಅನ್ನ ಹಾಕಿ, ಕೋಳಿ ಪದಾರ್ಥ ಬಡಿಸಿದ್ದು, ಹೊಟ್ಟೆ ತುಂಬ ಊಟ ಮಾಡಿದ್ದು.
ಅಬ್ರಹಾಂ ಬೆನ್ ಈಜೂ ಇದ್ದದ್ದು ಮಂಗಳೂರಿನಲ್ಲಿ. ಹಾಗಾಗಿ, ಅರಬೇತರ ಈ ಶಬ್ದವು ತುಳುವಿನದ್ದು ಆಗಿರುವ ಸಾಧ್ಯತೆ ಹೆಚ್ಚಾಗಿದೆ. ಇಬ್° ಬತ್ತುತ ಉÇÉೇಖೀಸುವ ಔತಣ ನಡೆದದ್ದು ಸುಮಾರು 1340ರಲ್ಲಿ ಹೊನ್ನಾವರದಲ್ಲಿ. ಈಗ ಹೊನ್ನಾವರ ಕನ್ನಡ ಪ್ರದೇಶ. ತುಳು ಆಗ ಅಲ್ಲಿ ಬಳಕೆಯಲ್ಲಿ ಇತ್ತೇ ಎನ್ನುವುದಕ್ಕೆ ಸ್ಪಷ್ಟ ಆಧಾರ ಇಲ್ಲ. ಆದರೆ, ತುಳು ಪಾಡªನಗಳಲ್ಲಿ ತುಳುನಾಡಿನಗಡಿಗಳ ಉÇÉೇಖ ಮಾಡುವಾಗ ದಕ್ಷಿಣದಲ್ಲಿ ನೀಲೇಶ್ವರ ಮತ್ತು ಉತ್ತರದಲ್ಲಿ ಗೋಕರ್ಣ ಎಂಬ ಮಾತು ಬರುತ್ತದೆ. ದ್ರಾವಿಡ ಭಾಷಾ ವರ್ಗದಲ್ಲಿ ಪ್ರಾಚೀನ ಕನ್ನಡ ಮತ್ತು ತುಳು ಶಬ್ದರೂಪಗಳಲ್ಲಿ ಬಹಳ ಸಾಮ್ಯ ಕಂಡುಬರುತ್ತದೆ. ಊಟ ಮಾಡುವ ತಟ್ಟೆಗೆ "ಬಟ್ಟಲು, ಕಂಗಣ' ಮುಂತಾದ ತುಳು ಶಬ್ದಗಳಿವೆ. "ತಾಲಿ' ಎಂಬ ಶಬ್ದ ಕನ್ನಡ ಮತ್ತು ತುಳುವಿನಲ್ಲಿ ಪ್ರಾಚೀನ ಕಾಲದಿಂದಲೂ ಇದ್ದಿರಬೇಕು. "ಸ್ಥಾಲಿ' ( ಸಂಸ್ಕೃತ )- ತಾಲಿ. (ಮರಾಠಿ ಮತ್ತು ಹಿಂದಿಯ ಪ್ರಭಾವದಿಂದ "ಥಾಲಿ' ಪದ ಬಳಕೆಗೆ ಬಂದದ್ದು ತಡವಾಗಿ.) "ತಳಿಗೆ' ಪದವು ಪಂಪಭಾರತ (10ನೇ ಶತಮಾನ), ಬಸವಣ್ಣನ ವಚನ (12ನೇ ಶತಮಾನ)ಗಳಲ್ಲಿ ಬಳಕೆ ಆಗಿದೆ. ಉಡುಪಿಯ ತುಳು ನಿಘಂಟಿನಲ್ಲಿ "ತಾಲಿ' = ಹಾಲು ಕಾಯಿಸಲು, ಪದಾರ್ಥ ಮಾಡಲು ಉಪಯೋಗಿಸುವ ಪಾತ್ರೆ.
ಸೇಡಿಯಾಪು ಕೃಷ್ಣ ಭಟ್ಟರ ಲೇಖನ "ತಾಲಿ (ತಾಳಿ)'ಯಲ್ಲಿ ಹೆಂಗುಸರು ಕೊರಳಲ್ಲಿ ಧರಿಸುವ "ತಾಲಿ' ಚಿಕ್ಕ ಬಟ್ಟಲಿನ ಆಕಾರದ್ದು ಎಂದು ಸಮರ್ಥವಾಗಿ ತಿಳಿಸಿ¨ªಾರೆ. (ವಿಚಾರ ಪ್ರಪಂಚ, 2002). ಈ ಎಲ್ಲ ಆಧಾರಗಳಿಂದ ಬೆನ್ ಈಜೂವಿನ ದಾಖಲೆಯ ಅರಬೇತರ ಶಬ್ದ "ತಾಲಿ' (=ಊಟದ ತಟ್ಟೆ ) ತುಳು ಶಬ್ದ ಆಗಿರಬಹುದು ಎಂದು ಊಹಿಸಬಹುದು.
ಹದಿನಾಲ್ಕು "ಫಾತಿಯ'ಗಳು
ಅಬ್ರಹಾಂ ಹಡಗಿನ ಮೂಲಕ ಮಂಗಳೂರಿನಿಂದ ಕಳುಹಿಸಿದ ಸಾಮಗ್ರಿಗಳನ್ನು ಇರಿಸಿದ್ದು ಹದಿನಾಲ್ಕು "ಫಾತಿಯ'ಗಳಲ್ಲಿ . ಡಾ. ಎಲಿಜಬೆತ್ ಲಮೊºàರ್ನ್ ಅವರು ನನ್ನಲ್ಲಿ ಈ ಶಬ್ದದ ಬಗ್ಗೆ ಕೂಡಾ ವಿಚಾರಿಸಿದ್ದರು. ಇದು ಅರಬೇತರ ಶಬ್ದ ಮತ್ತು ಮಂಗಳೂರಿನ ಸ್ಥಳೀಯ ಭಾಷೆಯ ಪದ ಆಗಿರಬೇಕು ಎಂದು ಎಲ್ಲ ವಿದ್ವಾಂಸರು ಅಭಿಪ್ರಾಯ ಪಟ್ಟಿ¨ªಾರೆ. ನಾನು ಈ ಶಬ್ದವನ್ನು ತುಳುವಿನ "ಪೆಟ್ಟಿಗೆ /ಪೆಟ್ಟಿಯೆ' ಎಂದು ಗುರುತಿಸಿ, ಕಾರಣಗಳನ್ನು ಕೊಟ್ಟದ್ದನ್ನು ಅವರು ಒಪ್ಪಿಕೊಂಡಿ¨ªಾರೆ. ಹೀಬ್ರೂ ಅಕ್ಷರ ಮತ್ತು ಜ್ಯೂಡೋ ಅರೇಬಿಕ್ ಭಾಷೆಯ ಜಾಯಮಾನದ ಪ್ರಕಾರ "ಪೆಟ್ಟಿಯೆ' ಪದವು "ಫಾತಿಯ' ಆಗುವುದು ಮನವರಿಕೆ ಆಗುವ ವಿವರಣೆ ಎಂದು ಅವರು ನನಗೆ ತಿಳಿಸಿ¨ªಾರೆ. ಬೆನ್ ಈಜೂವಿನ ದಾಖಲೆಯಲ್ಲಿ ಈ ರೀತಿ ಇದೆ : ಒಂದು ಪೆಟ್ಟಿಗೆಯಲ್ಲಿ ಕಲ್ಲು ಹೂವು, ಒಂದು ಪೆಟ್ಟಿಗೆಯಲ್ಲಿ ತಾಮ್ರ, ಮೀನುಗಾರರ ಲಂಗರು ಉಳ್ಳ ಒಂದು ಪೆಟ್ಟಿಗೆ, ಬೀಗಗಳು ಇರುವ ಒಂದು ಬೆತ್ತದ ಪೆಟ್ಟಿಗೆ, ಗಾಜು ಇರುವ ಎರಡು ಪೆಟ್ಟಿಗೆಗಳು, ಬಟ್ಟೆ ಇರುವ ನಾಲ್ಕು ಪೆಟ್ಟಿಗೆಗಳು ಇತ್ಯಾದಿ. ಇಂತಹ ಪೆಟ್ಟಿಯೆ /ಪೆಟ್ಟಿಗೆಗಳನ್ನು ಆ ಕಾಲದಲ್ಲಿ ಮರ, ಬೆತ್ತ ಮತ್ತು ಚರ್ಮದಿಂದ ಮಾಡುತ್ತಿದ್ದರು ಎಂದು ಆಗಿನ ದಾಖಲೆಗಳಿಂದ ತಿಳಿಯುತ್ತದೆ. (ಕನ್ನಡ ಮತ್ತು ತುಳು ಪದಗಳ ರೂಪಗಳಲ್ಲಿ "ಗ' ಮತ್ತು "ಯ' ವ್ಯತ್ಯಾಸವನ್ನು ಕಾಣಬಹುದು : ನಾಲಗೆ -ನಾಲಾಯಿ. ಬಾಡಿಗೆ -ಬಾಡಾಯಿ. ತಾರಗೆ -ತಾರಾಯಿ. ಸಂಪಗೆ -ಸಂಪಾಯಿ. ಪೆಟ್ಟಿಗೆ -ಪೆಟ್ಟಿಯೆ. ತುಳುವಿನÇÉೇ ಅನೇಕ ಬಾರಿ ಈ ಎರಡೂ ರೂಪಗಳು ಇರುತ್ತವೆ.)
ಅಬ್ರಹಾಂ ಬೆನ್ ಈಜೂ ಮಂಗಳೂರು ಅಲ್ಲದೆ ಬೇರೆ ಸಣ್ಣ ಪುಟ್ಟ ಬಂದರು ಪ್ರದೇಶಗಳಲ್ಲೂ ವ್ಯಾಪಾರ ನಡೆಸುತ್ತಿದ್ದ. ಆತನಿಗೆ "ಫಾಕ್ ನೂರ್' (ಬಾಕೂìರು)ನಲ್ಲಿ ವ್ಯಾಪಾರ ಇತ್ತು. ಆ ಕಾಲದ ದಾಖಲೆಗಳಲ್ಲಿ ಬಂದರು ಆಗಿದ್ದ "ಬಸರೂರು'ವನ್ನು ಕೂಡಾ ಬಾರಕೂರು ಎಂದೇ ಉÇÉೇಖೀಸಿದ ನಿದರ್ಶನಗಳು ದೊರೆಯುತ್ತವೆ. ಬೆನ್ ಈಜೂ ಮಲಬಾರಿನ ಬಂದರು ಪ್ರದೇಶಗಳಾದ ಫನªರಾಯ° (ಪಂತಲಾಯಿನಿ?), ದಹ್ ಬತ್ತನ್ (ವಲರಪತ್ತನಂ?)ಗಳಲ್ಲಿ ಕೂಡಾ ವ್ಯವಹಾರ ನಡೆಸುತ್ತಿದ್ದ.
ಅಬ್ರಹಾಂ ಬೆನ್ ಈಜೂ ಬಹುಮುಖ ಪ್ರತಿಭೆಯ ಸಾಹಸಿ ಆಗಿದ್ದ. ವ್ಯಾಪಾರದ ಜೊತೆಗೆ ಹಿತ್ತಾಳೆ-ಕಂಚು ಪಾತ್ರೆ ಪರಡಿ ತಯಾರಿಸುವ ಕರ್ಮಸಾಲೆ ನಡೆಸುತ್ತಿದ್ದ. ಆತ ಬಹಳ ಸುಂದರ ಕೈಬರಹದ ಕರಣಿಕ ಕೂಡಾ ಆಗಿದ್ದ. ಆಡೆನ್‌ನಿಂದ ಅವನು ನಿಯತವಾಗಿ ತರಿಸುತ್ತಿದ್ದ ಒಂದು ಸಾಮಗ್ರಿ ಎಂದರೆ - ಕಾಗದ. ಮಂಗಳೂರಿನಲ್ಲಿ ಆಗ ಕಾಗದ ಸಿಗುತ್ತಿರಲಿಲ್ಲ. ಅವನ ಪತ್ರಗಳು, ದಾಖಲೆ ಬರಹಗಳು ಎಲ್ಲವೂ ಸುಂದರವಾದ ಕೈಬರಹದಲ್ಲಿ ಕಾಗದದ ಹಸ್ತಪ್ರತಿಗಳಲ್ಲಿ ಇವೆ. ಬೆನ್ ಈಜೂ ಒಬ್ಬ ಕವಿಯೂ ಆಗಿದ್ದ. ತನ್ನ ಪತ್ರಗಳ, ದಾಖಲೆ ಬರಹಗಳ ಅಂಚುಗಳಲ್ಲಿ ಕೂಡಾ ಆತ ಹೀಬ್ರೂ ಭಾಷೆಯಲ್ಲಿ$ಕವನಗಳನ್ನು ಬರೆಯುತ್ತಿದ್ದ. ಕಾನೂನಿನ ಸರಿಯಾದ ತಿಳುವಳಿಕೆಯನ್ನು ಹೊಂದಿದ್ದ ಬೆನ್ ಈಜೂ, ಕಾನೂನು ದಸ್ತಾವೇಜುಗಳನ್ನು ಬರೆದು ಕೊಡುತ್ತಿದ್ದ. ಅವನಿಗೆ ಕಾಯಿಲೆಗಳ ಚಿಕಿತ್ಸೆಯ ಅನುಭವ ಕೂಡಾ ಇತ್ತು.
ಅಬ್ರಹಾಂ ಬೆನ್ ಈಜೂ ಒಬ್ಬ ಮಾನವತಾವಾದಿಯಾಗಿ ಗಮನ ಸೆಳೆಯುತ್ತಾನೆ. ಮಾರಾಟವಾಗುತ್ತಿದ್ದ ತುಳುವ ಗುಲಾಮ ಬೊಮ್ಮನನ್ನು ಬಿಡುಗಡೆ ಮಾಡಿ, ತನ್ನ ಸಂಗಾತಿ ಮತ್ತು ಸಹಾಯಕನಾಗಿ ಮಾಡಿಕೊಂಡು, ಅವನ ಕುಡುಕತನದ ಅತಿರೇಕಗಳನ್ನು ಸಹಿಸಿಕೊಳ್ಳುತ್ತಾನೆ. ಗುಲಾಮ ಹೆಣ್ಣು ಆಶುವನ್ನು ಬಂಧಮುಕ್ತಳನ್ನಾಗಿ ಮಾಡಿ ಮದುವೆಯಾಗಿ ಜೀವನಪರ್ಯಂತ ಅವಳ ಯೋಗಕ್ಷೇಮ ನೋಡಿಕೊಳ್ಳುತ್ತಾನೆ. ಸಾಂಪ್ರದಾಯಿಕ ಯಹೂದ್ಯ ಮತಗುರುಗಳು ಆಶು ಜೊತೆಗಿನ ಆತನ ಮದುವೆಯನ್ನು ನಿರಾಕರಿಸಿದಾಗ, ಯಹೂದ್ಯ ಧರ್ಮದ ಸಾಂಪ್ರದಾಯಿಕ ಕಟ್ಟುಪಾಡನ್ನು ವಿರೋಧಿಸಿ ವಾದ ಮಾಡಿ ತನ್ನ ನೆಲೆಯನ್ನು ಕಂಡುಕೊಳ್ಳುತ್ತಾನೆ... ನೆನಪಿಡಬೇಕು ಇವೆಲ್ಲ ನಡೆದದ್ದು ಎಂಟು ನೂರು ವರ್ಷಗಳ ಹಿಂದೆ. ತುಳುವ - ಯಹೂದ್ಯ ಸಂಬಂಧ ಕೇವಲ ಕೊಡುಕೊಳೆಯ ವ್ಯಾಪಾರ ಮಾತ್ರ ಆಗಿರಲಿಲ್ಲ. ಅದು ಗುಲಾಮತನದಿಂದ ಹೆಣ್ಣುಗಂಡುಗಳ ಬಿಡುಗಡೆಯ ಪ್ರಯಾಣವೂ ಆಗಿತ್ತು. ಇಲ್ಲಿಯದೇ ಕರ್ಮಸಾಲೆಯಲ್ಲಿ ಕಾಸಿ ಕರಗಿಸಿ ಮಾಡಿದ "ತಾಲಿ'ಯಲ್ಲಿ ಇಲ್ಲಿನದೇ ಅನ್ನವನ್ನು ಒಟ್ಟಿಗೆ ಉಣ್ಣುವ ಬಂಧುತ್ವವೂ ಆಗಿತ್ತು. ಅಬ್ರಹಾಂ ಬೆನ್ ಈಜೂ ಮತ್ತು ಆಶು ಯಾವ ಭಾಷೆಯಲ್ಲಿ ಪರಸ್ಪರ ಮಾತಾಡಿಕೊಳ್ಳುತ್ತಿದ್ದರು ಎನ್ನುವುದು ಎಲ್ಲೂ ದಾಖಲಾಗಿಲ್ಲ. ಜ್ಯೂಡೋ ಅರೇಬಿಕ್, ಹೀಬ್ರೂ ಮತ್ತು ತುಳು ಮಿಶ್ರಣದ ಭಾಷೆಯೊಂದು ತುಳುವದ ಮಂಜರೂರ್‌ನಲ್ಲಿ ಎಂಟು ನೂರು ವರ್ಷಗಳ ಹಿಂದೆ ಪಿಸುಗುಟ್ಟಿದ್ದನ್ನು ಮತ್ತೆ ಆಲಿಸುವುದೇ ಒಂದು ಕುತೂಹಲ, ಒಂದು ಸಂಭ್ರಮ.