Udayavani | Jan 28, 2013
ನದಿಯಿಲ್ಲ, ಗುಡ್ಡದ ಮೇಲೆ ನಿಗೂಢ ಮನೆಯೂ ಇಲ್ಲ
ರಜೆಯಲ್ಲಿ ಅಜ್ಜಿ ಮನೆ ಪಕ್ಕದಲ್ಲಿ ಹಾದುಹೋಗುತ್ತಿದ್ದ ತೊರೆಯಲ್ಲಿ ನಾವೆಲ್ಲಾ ಪುಟ್ಟ ಪುಟ್ಟ ಮಕ್ಕಳು ಕಾಲು ಚಾಚಿ ಕೂತು ನೀರೆರಚಿಕೊಂಡ ನೆನಪು. ಈಗ ಹೊತ್ತಲ್ಲದ ಹೊತ್ತಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ನಮಗೆ ರಜೆ ಸಿಕ್ಕಿದೆ. ತೊರೆ ಪಕ್ಕ ಕೂರೋಣವೆಂದರೆ ಗೆಳೆಯರಿಲ್ಲ. ಸಿನಿಮಾ ಹೋಗೋಣವೆಂದರೆ ಒಂದು ಸೊಳ್ಳೆಯೂ ಸಿಗುತ್ತಿಲ್ಲ. ಏಕಾಂಗಿತನವೇ ಎಫ್ಬಿ ಕಡೆಗೆ ಕರೆದೊಯ್ಯುತ್ತಿದೆಯಾ?
ಚಿಕ್ಕಂದಿನಲ್ಲಿ ಪರೀಕ್ಷೆ ಮುಗಿದು ಬೇಸಿಗೆ ರಜೆ ಬರುತ್ತದೆಂದರೆ ಏನೋ ಸಂತಸ, ಅಜ್ಜಿ ಮನೆಗೆ ಹೋಗಲು ಹಾತೊರೆಯುತ್ತಿದ್ದಂತಹ ಮನಸ್ಸು. ಮೇಲಾಗಿ ಎÇÉಾ ಊರುಗಳಿಂದಲೂ ಬಂದ ನಮ್ಮ ವಯಸ್ಸಿನವರೇ ಆದ ಮಕ್ಕಳೊಡಗೂಡಿ ಹೊಲ-ಗ¨ªೆ, ತೋಟಗಳಲ್ಲಿ ಹಸಿವು-ದಣಿವು ಇಲ್ಲದೆ ಸುತ್ತಾಡುತ್ತಿದ್ದರೆ ಸಮಯ ಹೋಗುವುದೇ ತಿಳಿಯುತ್ತಿರಲಿಲ್ಲ. ಒಂದೂವರೆ-ಎರಡು ತಿಂಗಳ ರಜೆ ಒಂದು ವಾರವೂ ಕಳೆದೇ ಇಲ್ಲವೆಂಬಂತೆ ಮುಗಿದುಬಿಡುತ್ತಿತ್ತು. ಇಷ್ಟು ಬೇಗ ಸ್ಟಾರ್ಟ್ ಆಗಬೇಕೆ ಎಂದು ಶಾಲೆಗೆ ಹಿಡಿಹಿಡಿ ಶಾಪ ಹಾಕಿಕೊಂಡು ಒಲ್ಲದ ಮನಸ್ಸಿನಿಂದ ಶಾಲೆಗೆ ಹೊರಡಲು ಅಣಿಯಾಗುತ್ತಿ¨ªೆವು.
ಆದರೆ ಈಗ ರಜೆ ಯಾಕಪ್ಪಾ ಬಂತು ಅನ್ನೋ ಹಾಗೆ ಆಗಿದೆ. ಕೊಟ್ಟಿರೋದೇ ಇಪ್ಪತ್ತು ದಿನ. ಇವೇ ಇಪ್ಪತ್ತು ತಿಂಗಳುಗಳಾಗಿವೆ. ಒಂದೊಂದು ದಿನವೂ ಒಂದೊಂದು ತಿಂಗಳಿನಂತೆ ಕಳೆಯುತ್ತಿದೆ. ಯಾವೊಬ್ಬ ಫ್ರೆಂಡೂ ಸಾಲದ್ದಕ್ಕೆ ಚಿಕ್ಕ ಮಕ್ಕಳೂ ಸಹ ತುಂಬಾ ಬ್ಯುಸಿಯಾಗಿ¨ªಾರೆ. ಏಕೆಂದರೆ ಅವರ ಮುಖ್ಯ ಪರೀಕ್ಷೆ ಹತ್ತಿರವಾಗುತ್ತಿದೆಯÇÉಾ. ಹಾಗೂ ಹೀಗೂ ಅಜ್ಜಿ ಊರಿನಲ್ಲಿ ಒಂಟಿಪಿಶಾಚಿಯಂತೆ ಹೊಲಗ¨ªೆಗಳಲ್ಲಿ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾ ಅಲೆದು ಎರಡೂ¾ರು ದಿನ ಕಳೆದ¨ªಾಯಿತು.
ಈ ಬಿಇ ಸ್ಟೂಡೆಂಟ್ಸ್‌ಗಳ ಪರದಾಟ ಹೇಳಲಾಗದ್ದು. ಪಿಯುವರೆಗಿನ ಯಾವುದೇ ಒಂದು ವಿದ್ಯಾರ್ಥಿಯೂ ಈ ಸಮಯದಲ್ಲಿ ಬಿಡುವಾಗಿಲ್ಲ. ಇನ್ನು ಡಿಗ್ರಿ ಹಂತ ಅಂದ್ರೆ ಬಿಎಸ್ಸಿ, ಬಿಕಾಂ, ಬಿಎ ಓದುವವರಿಗೆಲ್ಲಾ ನಮಗೆ ಎಕ್ಸಾಮ್ ಸ್ಟಾರ್ಟ್ ಆಗ್ಬೇಕಾದ್ರೆ ಅವ್ರಿಗೆ ಹಾಲಿಡೇಸ್ ಮುಗಿದು ಕಾಲೇಜ್ ಶುರುವಾಗಿದೆ. ಇನ್ನು ಡಿಪ್ಲೊಮಾ, ಐಟಿಐನವ್ರಿಗೆ ನಮಗೆ ಹಾಲಿಡೇಸ್ ಸ್ಟಾರ್ಟ್ ಆಗ್ಬೇಕಾದ್ರೆ ಅವ್ರಿಗೆ ಪಾಠಗಳು ಸ್ಟಾರ್ಟ್ ಆಗಿವೆ. ಒಟ್ಟಿನಲ್ಲಿ ಹೀಗೆ ಬಾಲ್ಯ ಸ್ನೇಹಿತರೆÇÉಾ ಕೈಗೆ ಸಿಗದ ಹಾಗೆ ಮತ್ತೆ ತಮ್ಮ ತಮ್ಮ ಹಾಸ್ಟೆಲ್, ಪಿಜಿಗಳಿಗೆ ಹೋಗಿ ತಮ್ಮ ಕೆಲಸಗಳಲ್ಲಿ ನಿರತರಾಗಿ¨ªಾರೆ. ಬಿಇ ಓದೋರಾದ್ರೂ ಕೈಗೆ ಸಿಕ್ತಾರಾ, ಅದೂ ನಮ್ಮ ಕ್ಲಾಸ್‌ಮೇಟ್ಸ್..? ಅದಕ್ಕೂ ಉತ್ತರ ನೋ.. ಎÇÉಾ ನೇಟಿವ್ ಅಂತ ಹೋದ ಕಾರಣ ಸಿಗ್ತಿಲ್ಲ. ಇನ್ನೂ ಊರಿಗೆ ಹೋಗಿಲ್ಲ ಹಾಸ್ಟೆಲ್‌ನÇÉೇ ಇದೀವಿ ಅನ್ನೋರು ಬ್ಯಾಕ್ ಇರೋ ಸಬೆjಕ್ಟ್$Õ ಕ್ಲಿಯರ್ ಮಾಡ್ಕೊಳ್ಳೋಕೆ ಸೀರಿಯಸ್ಸಾಗಿ ಓದಿ¤ದಾರೆ. ಅಬ್ಟಾ! ಜನರು ಹೋಗ್ತಾ ಹೋಗ್ತಾ ಇಷ್ಟೊಂದು ಬ್ಯುಸಿಯಾಗ್ತಾರಾ? ಸಿನಿಮಾಗೆ ಹೋಗೋಕೂ, ಟ್ರಿಪ್ ಹೋಗೋಕೂ ಒಂದು ಸೊಳ್ಳೇನೂ ಜೊತೆಗೆ ಸಿಗದ ಹಾಗೆ ಹಾಗಿದೆ. ಎಂಥ ಜೀವನಾರೀ ಇದು..?
ಯಾವ ಫ್ರೆಂಡ್ಸ್‌ನಿಂದಲೂ ಒಂದು ಮೆಸೇಜ್ ಇಲ್ಲ, ಕಾಲ್ ಇಲ್ಲ. ನಾನೇ ಮಾಡಿದ್ರೂ ಆ ಕಡೆಯಿಂದ ನೋ ರಿಪ್ಲೆ„. ಒಂದು ಕಡೆ ಕೂರೋಕೂ ನಿÇÉೋಕೂ ಟಿವಿಯಲ್ಲಿ ಸಿನಿಮಾ ನೋಡೋಕೂ ಬೇಜಾರಾಗಿ ಯಾವಾªದ್ರೂ ಕೋರ್ಸ್‌ಗೆ ಸೇರೋಣ ಅಂದ್‌ಕೊಂಡೆ. ಈಗಾಗಲೇ ಒಂದೈದು ದಿನ ಕಳೆದೊØàಗಿತ್ತು. ಇನ್ನುಳಿದ ಹದಿನೈದು ದಿನಗಳಿಗೆ ಯಾವ ಕೋರ್ಸ್ ತಾನೇ ಸಿಕ್ಕೀತು, ಅದೂ ಆಗೋಲ್ಲ ಎಂದು ತಿಳಿದ ಮೇಲೆ ಉಳಿದ ನನ್ನಂತಹ ಲೋಕಲ್ ಫ್ರೆಂಡ್ಸ್ ಏನ್ ಮಾಡ್ತಿರ್ತಾರೆ ಅನ್ಸಿ ಫ್ರೆಂಡ್ ಒಬ್ಳಿಗೆ ಮೆಸೇಜ್ ಹಾಕೆª.
ವಾಟ್ ಆರ್ ಯೂ ಡುಯಿಂಗ್?
ಉತ್ತರ ಬರಬಹುದೆಂದು ನಾನು ಊಹಿಸಿರಲಿಲ್ಲ ಆದರೆ ನನ್ನ ಯೋಚನೆಗಳಿಗೆÇÉಾ ಕಡಿವಾಣ ಹಾಕುವಂತೆ ಬಂತು ಅವಳ ಉತ್ತರ.
ಐ ಆ್ಯಮ್ ಆನ್‌ಲೈನ್.
ವಾರೆವ್ಹಾ ಇಷ್ಟು ದಿನ ನನ್ನ ಈ ದಡ್ಡ ತಲೆಗೆ ಹೊಳೆದೇ ಇರಲಿಲ್ಲವÇÉಾ. ಕೆಲವು ಫೋಟೋ ಅಪ್‌ಲೋಡ್ ಮಾಡೋದಿತ್ತು ಆದ್ರೆ ಎಕ್ಸಾಮ್ ಟೆನÒನ್‌ನಲ್ಲಿ ಎÇÉಾ ಮರೆತೇ ಹೋಗಿತ್ತು. ಹೇಗೋ ಒಂದು ದಿನ ಕಳೆಯತ್ತೆ ಅಂತ ಫೇಸ್‌ಬುಕ್‌ಗೆ ಲಾಗಿನ್ ಆದೆ. ಆಹಾ ಆಗಲೇ ಗೊತ್ತಾಗಿದ್ದು ಬರೀ ಲೋಕಲ್ ಅಲ್ಲ ನೇಟಿವ್ ಸೇರಿರೋ ಫ್ರೆಂಡೂÕ ಬೇಜಾರ್ ಕಳೊÂàಕೆ ಎಫ್ಬಿ ಲೋಕ ಸೇರಿಬಿಟ್ಟಿದ್ದಾರೆ ಅಂತ. ಅಬ್ಟಾ! ಗೊತ್ತಿರೋ ಗೊತ್ತಿಲ್ಲದಿರೋ ಬರಿ ಮುಖ ಪರಿಚಯ ಮಾತ್ರ ಇರುವ ಎಷ್ಟೋ ಮಂದಿ ಚಾಟಿಂಗ್‌ನಲ್ಲಿ ಕಾಯುತ್ತಿರುತ್ತಾರೆ.
ನನ್ನ ಫ್ರೆಂಡ್‌ನ ಉತ್ತರ ಕೇಳಿ ಇದುವರೆಗೆ ಒಂದು ವಾರ ಕಳೆದಿದ್ದರೂ ಇನ್ನೂ ನನ್ನ ನೆಚ್ಚಿನ ಫೋಟೋಗಳ ಅಪ್‌ಲೋಡಿಂಗ್ ಕತೆ ಪೂರ್ಣಗೊಂಡಿಲ್ಲ. ಯಾರಾದ್ರೂ ಚಾಟ್ ಮಾಡ್ತಾನೇ ಇರ್ತಾರೆ. ಎಲ್ರೂ ಒಟ್ಟಿಗೆ ಮೆಸೇಜ್ ಮಾಡಿದ್ರೆ ಯಾರಿಗೆ ಅಂತ ರಿಪ್ಲೆ„ ಕೊಡೋದು. ಒಬ್ರಿಗೆ ರಿಪ್ಲೆ„ ಮಾಡ್ತಿದ್ರೆ ಇನ್ನುಳಿದವರು ವೈ ಸೋ ಲೇಟ್ ಅಂತ ಕೇಳ್ತಾರೆ. ಹಿಂದೊಮ್ಮೆ ಎಕ್ಸಾಮ್ ನಡೀಬೇಕಾದ್ರೆ ಓದೋದು ತುಂಬಾ ಬೋರ್ ಅನ್ನಿಸಾªಗ ಎಫ್ಬಿ ಓಪನ್ ಮಾಡ್ತಿ¨ªೆ. ಒಂದೇ ಒಂದು ಹೆಸರು ಕೂಡಾ ಆನ್‌ಲೈನ್‌ನಲ್ಲಿಲ್ದಿರೋದ್ ನೋಡಿ ಫ್ರೆಂಡ್ಸ್ ಎಫ್ಬಿ ನೋಡೋದೇ ಇಲ್ವೇನೋ ಅಂದ್‌ಕೊಂಡಿ¨ªೆ. ಆದರೆ ನನ್ನ ಊಹೆ ಇಷ್ಟರ ಮಟ್ಟಿಗೆ ಸುಳ್ಳಾಗತ್ತೆ ಅಂತ ನಾನು ಎಣಿಸಿಯೇ ಇರಲಿಲ್ಲ. Howz the day ಅನ್ನೋ ನನ್ನ ಪ್ರಶ್ನೆಗೆ ಅವರೆಲ್ಲರುಗಳಿಂದ ಒಂದೇ ಉತ್ತರ its too boring. ಎಫ್ಬಿ ಮುಂದೆ ಕೂತು ಇಷ್ಟು ಚೆನ್ನಾಗಿ ಕಾಲಹರಣ ಮಾಡೋ ಫ್ರೆಂಡ್ಸ್‌ಗೆ ಬೋರ್ ಹೇಗಾಗತ್ತೆ? ಅದಕ್ಕೂ ಅವರಿಂದಲೇ ಉತ್ತರ ಸಿಕು¤ ಹಾಲಿಡೇಸ್ ಬೋರ್ ಆಗ್ತಿರೋದಕ್ಕೆ ಎಫ್ಬಿ ಮುಂದೆ ಕೂತಿರೋದು ಅಂತ!
ಒಟ್ಟಿನಲ್ಲಿ ರಜೆ ಕಳೊÂàದಕ್ಕೆ ನನ್ನ ಫ್ರೆಂಡ್ಸ್ ಫೇಸ್‌ಬುಕ್ಕಲ್ಲೇ ಇದ್ದಂತಿದೆ. ಅದಕ್ಕೆ ಕಾರಣವೂ ಸಿಕ್ಕಂತಿದೆ. ಒಂಥರಾ ಆಧುನಿಕ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕಷ್ಟ ಕಾಲದಂತೆ ಭಾಸವಾಗುತ್ತಿದೆ. ಎಫ್ಬಿ ಇಲ್ಲದೆಯೂ ಇರಬಹುದು. ಆದರೆ ಬದಲಾದ ಕಾಲ ಎಫ್ಬಿ ಕಡೆ ತಳ್ಳುತ್ತದೆ. ಸುಮ್ಮನೆ ಮಲಗಿರುವ ಹುಲಿಯನ್ನು ಕೆಣಕಿ ಮೇಲೆರಗಿಸಿಕೊಂಡರೆ ಮುಗೀತು, ಎಫ್ಬಿ ನಮ್ಮ ಮೇಲೆ ಮುಗಿ ಬೀಳುತ್ತದೆ. ಏನಕ್ಕೂ ಒಂಚೂರು ಎಚ್ಚರಿಕೆಯಿಂದಿರಬೇಕು!
ಯಾಶಿಕ ಎನ್.
ಮೂರನೇ ಸೆಮಿಸ್ಟರ್,
ಬಿಇ ವಿಭಾಗ, ಎಸ್‌ಐಇಟಿ ಕಾಲೇಜ್, ತುಮಕೂರು.