ಶ್ರೀನಗರ ಕಿಟ್ಟಿ ಟೋನಿ ಚಿತ್ರದ ನಾಯಕ. ಈಗಾಗಲೇ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಕಿಟ್ಟಿಗೆ ಟೋನಿ ಮೇಲೆ ತುಂಬಾ ನಂಬಿಕೆ. ಇಲ್ಲಿ ಅವರ ಪಾತ್ರ ವಿಭಿನ್ನ ಎನ್ನುವುದರಿಂದ ಹಿಡಿದು ಕಥೆಯೂ ಕೂಡಾ ಈಗಿನ ಟ್ರೆಂಡ್‌ಗೆ ಹೇಳಿಮಾಡಿಸಿದ್ದು ಎಂಬ ಭರವಸೆ ಅವರದು. ಕಿಟ್ಟಿ 'ಟೋನಿ'ಯ ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ.