Wednesday, May 22, 2013
Last Updated: 6:59:39 PM IST
  • ನಾನೆಲ್ಲಿರುವೆ:
  • ಮುಖಪುಟ Cinema ಸ್ಯಾಂಡಲ್‌ವುಡ್‌ ವಾರ್ತೆಗಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಟೋನಿ ಇನ್‌ ಬ್ಯಾಂಕಾಕ್‌
    • ''''ಈ ಹಾಡಲ್ಲಿ ಕಿಟ್ಟಪ್ಪನ ಜೊತೆಗೆ ಒಂದು ಹುಲಿ ಇದ್ದರೆ ...''

      • Udayavani | Jan 28, 2013

        'ಈ ಹಾಡಲ್ಲಿ ಕಿಟ್ಟಪ್ಪನ ಜೊತೆಗೆ ಒಂದು ಹುಲಿ ಇದ್ದರೆ ...'
        'ಟೋನಿ' ಚಿತ್ರದ 'ಪಕ್ಕಾ ಪಾಪಿ ನಾನು ಪಾಪ ಮಾಡುವೆನು ಸ್ವರ್ಗ ನನ್ನದು ನರಕ ನನ್ನದು ...' ಎನ್ನುವ ಹಾಡನ್ನು ಎಲ್ಲಿ ಮತ್ತು ಹೇಗೆ ಚಿತ್ರೀಕರಿಸಬೇಕೆಂದು ಚಿತ್ರತಂಡ ಯೋಚಿಸುತ್ತಿರುವಾಗ, ಡ್ಯಾನ್ಸ್‌ ಮಾಸ್ಟರ್‌ ಇಮ್ರಾನ್‌ ಸರ್ದಾರಿಯಾ ಇಂಥದ್ದೊಂದು ಐಡಿಯಾ ಕೊಟ್ಟರಂತೆ. ಸುತ್ತ ಒಂದಿಷ್ಟು ಹುಲಿಗಳು ಮಧ್ಯೆ ಶ್ರೀನಗರ ಕಿಟ್ಟಿ ಕುಳಿತುಕೊಂಡು 'ಪಕ್ಕಾ ಪಾಪಿ ನಾನು ...' ಎಂಬ ಟೋನಿಯ ಟೈಟಲ್‌
        ಸಾಂಗ್‌ ಸೆರೆ ಹಿಡಿದರೆ ಹೆಂಗೆ?
        ಇಂಥದ್ದೊಂದು ಐಡಿಯಾ ಹೊರಬರುತ್ತಿದ್ದಂತೆ ಹುಲಿಯ ಹುಡುಕಾಟ ಶುರುವಾಯಿತು. ಮೊದಲು ಭಾರತದಲ್ಲೇ ಗುಜರಾತಿನ ರಣ್‌ ಆಫ್ ಕಚ್‌ನಲ್ಲಿ ಸೂರ್ಯಾಸ್ಥಾಮಾನದ ಸಂದರ್ಭದಲ್ಲಿ ಇಂಥದ್ದೊಂದು ದೃಶ್ಯ ಸೆರೆಹಿಡಿದರೆ ಹೇಗೆ ಎಂಬ ಚರ್ಚೆ ಶುರುವಾಗಿದು. ಅದು ಕೊನೆಗೆ ಬಂದು ಮುಟ್ಟಿದ್ದೇ ಬ್ಯಾಂಕಾಕ್‌ಗೆ. ಇದುವರೆಗೂ ಬ್ಯಾಂಕಾಕ್‌ನ ಸುಂದರ ಬೀಚುಗಳಲ್ಲಿ, ಸುಂದರ ಹುಡುಗಿಯರ ಮಧ್ಯೆ ಹಲವು ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಆದರೆ, ಅಲ್ಲಿನ ಟೈಗರ್‌ ಟೆಂಪಲ್‌ನಲ್ಲಿ ಇದುವರೆಗೂ ಯಾವುದೇ ಭಾರತೀಯ ಚಿತ್ರದ ಚಿತ್ರೀಕರಣವಾಗಿರಲಿಲ್ಲ. ಅಂಥದ್ದೊಂದು ಸಾಧನೆಯನ್ನು ಕನ್ನಡದಲ್ಲಿ ಮೊದಲ ಬಾರಿಗೆ 'ಟೋನಿ' ಚಿತ್ರತಂಡವು ಮಾಡಿದೆ.
        ಬ್ಯಾಂಕಾಕ್‌ ಸಿಟಿಯಿಂದು ಸುಮಾರು ಮೂರೂವರೆ ಗಂಟೆ ಪ್ರಯಾಣದ ನಂತರ ಸಿಗುವುದೇ ಟೈಗರ್‌ ಟೆಂಪಲ್‌ ಎಂಬ ಹುಲಿಧಾಮ. ಇಲ್ಲಿ ಸುಮಾರು 150ಕ್ಕೂ ಹೆಚ್ಚು ಹುಲಿಗಳಿವೆ. ಇಂಥದ್ದೊಂದು ಅಪರೂಪದ ಲೊಕೇಶನ್‌ನಲ್ಲಿ ಸೋಮವಾರ ಬೆಳಿಗ್ಗೆ 'ಟೋನಿ' ಚಿತ್ರದ 'ಪಕ್ಕಾ ಪಾಪಿ ನಾನು ...' ಎಂಬ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಹಾಡಿನಲ್ಲಿ ಒಂದಲ್ಲ, ಹಲವು ವಿಶೇಷತೆಗಳಿವೆ. ಹಾಡು ಬರೆದಿದ್ದು ಯೋಗರಾಜ್‌ ಭಟ್‌. ಸಂಗೀತ ಸಂಯೋಜಿಸಿದ್ದು ಸಾಧು ಕೋಕಿಲ. ಹಾಡಿದ್ದು ಪುನೀತ್‌ ರಾಜ್‌ಕುಮಾರ್‌. ನೃತ್ಯ ನಿರ್ದೇಶನ ಇಮ್ರಾನ್‌ ಸರ್ದಾರಿಯಾದು. ಹೀಗೆ ಹಲವು ವಿಶೇಷತೆಗಳಿರುವ ಈ ಹಾಡನ್ನು ಸಖತ್‌ ರಗೆಡ್‌ ಲುಕ್‌ ನಲ್ಲಿ ಚಿತ್ರೀಕರಿಸಬೇಕೆಂದು 17 ಜನರ ತಂಡ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಭಾನುವಾರ ಆಗಮಿಸಿದೆ. ಚಿತ್ರದ ಪ್ರಾರಂಭ ಇದೇ ಹಾಡಿನಿಂದ ಆಗಲಿದೆ. ಈ ಹಾಡಿನಲ್ಲಿ ನಾಯಕನ
        ಗುಣಗಾನ ಇದೆ. ಮೊದಲ ದಿನ ಟೈಗರ್‌ ಟೆಂಪಲ್‌ನಲ್ಲಿ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ ಇನ್ನು ಮುಂದಿನ ನಾಲ್ಕು ದಿನಗಳ ಕಾಲ ಎಲಿಫೆಂಟ್‌ ವಿಲೇಜ್‌, ಪಟ್ಟಾಯ ಮುಂತಾದ ಹಲವು ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • picಮೆಂಟ್ಲು ಸಾಂಗ್‌
        ಅದ್ಯಾಕೋ ನಿರ್ದೇಶಕ ಪ್ರೇಮ್‌ ಈಗ ನಿರ್ದೇಶನಕ್ಕಿಂತ ಇತರ ಕಡೆ ಸ್ವಲ್ಪ ಹೆಚ್ಚು ಗಮನಕೊಡುತ್ತಿರುವಂತಿದೆ. ''ಪ್ರೇಮ್‌ ಅಡ್ಡ' ನಂತರ ಅವರಿಗೆ ನಾಯಕರಾಗಿಯೂ ಒಂದಷ್ಟು ಬೇಡಿಕೆ ಬಂದಿದೆ. ಅದಕ್ಕೆ ಸಾಕ್ಷಿ ನಾಯಕರಾಗಿ ನಟಿಸುವುದಾಗಿ ಒಂದಷ್ಟು ಸಿನಿಮಾಗಳನ್ನು ಪ್ರೇಮ್‌ ಒಪ್ಪಿಕೊಂಡಿರುವುದು.
      image
      • Copyright @ 2009 Udayavani.All rights reserved.
      • Designed & Hosted By 4cplus