Monday, May 20, 2013
Last Updated: 1:53:19 PM IST
  • ನಾನೆಲ್ಲಿರುವೆ:
  • ಮುಖಪುಟ Supplements ಅವಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸೂಪ್‌ಗಳು: ತರಕಾರಿ ಸೂಪ್‌
    • ಎಲ್ಲ ತರಕಾರಿಗಳನ್ನು ಹೆಚ್ಚಿಕೊಳ್ಳಿ. ಒಂದು ಪಾತ್ರೆಗೆ ಬೆಣ್ಣೆ, ಹೆಚ್ಚಿದ ತರಕಾರಿಗಳನ್ನು ಹಾಕಿ ಸಣ್ಣ ಉರಿಯಲ್ಲಿ 5 ನಿಮ

      • Udayavani | Jan 29, 2013

        ಬೇಕಾಗುವ ಪದಾರ್ಥಗಳು
        ಕ್ಯಾರೆಟ್‌ 1, 4 ಕ್ಯಾಬೇಜ್‌ಎಲೆ, ಈರುಳ್ಳಿ ಎಲೆ 2, ಕೊತ್ತಂಬರಿ ಸೊಪ್ಪು 2 ಎಸಳು, ಹಸಿ ಮೆಣಸು 1, ಟೊಮೆಟೊ 1, ಜೀರಿಗೆ ಪುಡಿ 1/2 ಚಮಚ, ಕಾಳುಮೆಣಸಿನ ಪುಡಿ 1 ಚಮಚ, ಬೆಣ್ಣೆ 4 ಚಮಚ, ಲಿಂಬು ರಸ ಸ್ವಲ್ಪ, ಉಪ್ಪು ರುಚಿಗೆ.

        ವಿಧಾನ
        ಎಲ್ಲ ತರಕಾರಿಗಳನ್ನು ಹೆಚ್ಚಿಕೊಳ್ಳಿ. ಒಂದು ಪಾತ್ರೆಗೆ ಬೆಣ್ಣೆ, ಹೆಚ್ಚಿದ ತರಕಾರಿಗಳನ್ನು ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷ ಕೈಯಾಡಿ ಇದಕ್ಕೆ ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ ಸೇರಿಸಿ. ನಂತರ ಬೇಕಾದಷ್ಟು ನೀರು, ಉಪ್ಪು , ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ನಂತರ 5 ನಿಮಿಷ ಮುಚ್ಚಿಡಿ. ಇಳಿಸುವ‌ ಮುನ್ನ ಲಿಂಬು ರಸ ಸೇರಿಸಿಕೊಳ್ಳಿ.

        ಮಸಾಲಾ ಸೂಪ್‌
        ಬೇಕಾಗುವ ಪದಾರ್ಥಗಳು
        ಟೊಮೆಟೊ 2, ಈರುಳ್ಳಿ 1, ಕೊತ್ತಂಬರಿ ಸೊಪ್ಪು 6 ಎಸಳು, ಗರಂ ಮಸಾಲಾ 2 ಚಮಚ, ಸಕ್ಕರೆ 1 ಚಮಚ, ಬೆಣ್ಣೆ 2 ಚಮಚ, ಉಪ್ಪು ರುಚಿಗೆ.

        ವಿಧಾನ
        ಟೊಮೆಟೊವನ್ನು ಗರಂ ಮಸಾಲಾ ಜೊತೆ ರುಬ್ಬಿಕೊಳ್ಳಿ. ಇದಕ್ಕೆ ಬೇಕಾದ ಪ್ರಮಾಣದಲ್ಲಿ ನೀರನ್ನು ಬೆರೆಸಿ. ಇದಕ್ಕೆ ಉಪ್ಪು ಸಕ್ಕರೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ನಂತರ ಹೆಚ್ಚಿದ ಈರುಳ್ಳಿಯನ್ನು ಬೆಣ್ಣೆಯಲ್ಲಿ ಹುರಿದು ಹಾಕಿ ಕುಡಿಯಲು ನೀಡಿ.

        ಬೆಂಡೆಕಾಯಿ ಸೂಪ್‌
        ಬೇಕಾಗುವ ಪದಾರ್ಥಗಳು
        ಬೆಂಡೆ ಕಾಯಿ 6-8. ಕಾಳು ಮೆಣಸಿನ ಪುಡಿ 1 ಚಮಚ, ಕರಿಬೇವಿನಸೊಪ್ಪು 1 ಎಸಳು, ಎಣ್ಣೆ ಅಥವಾ ಬೆಣ್ಣೆ 2 ಚಮಚ, ಲಿಂಬು ರಸ 2 ಚಮಚ,

        ವಿಧಾನ
        1/2 ಲೀ. ನೀರಿಗೆ ಲಿಂಬು ರಸ, ಹೆಚ್ಚಿಕೊಂಡ ಬೆಂಡೆ ಕಾಯನ್ನು ಹಾಕಿ 3-4 ನಿಮಿಷ ಕುದಿಸಿ. ನಂತರ ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ 3-4 ನಿಮಿಷ ಕುದಿಯಲು ಬಿಡಿ. ಬೇಕಾದರೆ ಸಾಸಿವೆ, ಜೀರಿಗೆ ಬೇವಿನ ಸೊಪ್ಪಿನ ಒಗ್ಗರಣೆ ಹಾಕಿಕೊಂಡು ರುಚಿ ನೋಡಿ.

        *ಅಶ್ವಿ‌ನಿ ಹೆಗಡೆ, ಭೈರುಂಬೆ



      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕಿರುತೆರೆ ಮತ್ತು ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿದವರು ಸುಶ್ಮಿತಾ. ''ಕವಲುದಾರಿ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತರೆಗೂ, ''ಎಕ್ಸ್‌ಕ್ಯೂಸ್‌ ಮಿ' ಮೂಲಕ ಹಿರಿತ
      • ಈ ವಿಭಾಗದಲ್ಲಿಯೂ ಇದೆ
      • picವಸಂತ ಬರೆದನು ಒಲವಿನ ಓಲೆ...
        ಹೇಳಿ ಕೇಳಿ ಇದು ಮೇ ತಿಂಗಳು. ಇಂಗ್ಲೆಂಡ್‌ನ‌ಂಥ ದೇಶಕ್ಕೆ ಲವಲವಿಕೆಯ ಕಾಲವಿದು. ಅಂತೂ ಎಲ್ಲರೂ ಕಾಯುತ್ತಿರುವ ಸ್ಪ್ರಿಂಗ್‌ ಕಾಲ ಬಂದುಬಿಟ್ಟಿತು ಎಂಬುದು ಸಂತಸದ ವಿಷಯ.
      image
      • Copyright @ 2009 Udayavani.All rights reserved.
      • Designed & Hosted By 4cplus