ಭಾರತ ಅಗ್ರಮಾನ್ಯ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ತೆಲುಗು ಚಿತ್ರ'ಗುಂಡೆ ಜಾರಿ ಗಲ್ಲಾಂಥಯೆಂಡೆ'ಯಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಈ ವಿಷಯ ತಿಳಿಸಿದ ಜ್ವಾಲಾ ಗುಟ್ಟಾ, ನಟ ನಿತಿನ್ ಮತ್ತು ಚಿತ್ರದ ನಿರ್ಮಾಪಕ ನನ್ನ ಉತ್ತಮ ಸ್ನೇಹಿತರು. ತಮ್ಮ ಚಿತ್ರದಲ್ಲಿ ನಟಿಸಲು ಹೇಳಿದಾಗ ಹಾಸ್ಯ ಮಾಡುತ್ತಿದ್ದಾರೆ ಎಂದು ಭಾವಿಸಿದ್ದೆ. ಆದರೆ ಹಾಡು ಕೇಳಿದ ನಂತರ ನಾನೇಕೆ ನೃತ್ಯ ಮಾಡಬಾರದು ಅನಿಸಿತು. ಅಷ್ಟಕ್ಕೂ ಜೀವನ ಇರುವುದೇ ಒಂದು. ಹೊಸ ವಿಷಯಗಳತ್ತ ಏಕೆ ಗಮನ ಹರಿಸಬಾರದು ಎಂದು ಡಾನ್ಸ್ ಮಾಡಲು ಒಪ್ಪಿದ್ದೇನೆ ಎಂದರು. ಹಾಡಿಗೆ ನೃತ್ಯ ಮಾಡುವಾಗ ಮೊದಲ ದಿನ ಒತ್ತಡಕ್ಕೆ ಒಳಗಾಗಿದ್ದೆ. ತುಂಬಾ ಜನರ ನಡುವೆ ನಟಿಸುವುದು ಹೊಸ ಅನುಭವ ನೀಡಿತು. ಆದರೆ ನಂತರ ಎಂಜಾಯ್ ಮಾಡಿದೆ ಎಂದು ಜ್ವಾಲಾ ವಿವರಿಸಿದರು.