Saturday, May 25, 2013
Last Updated: 1:06:49 AM IST
  • ನಾನೆಲ್ಲಿರುವೆ:
  • ಮುಖಪುಟ Supplements ಬಹುಮುಖಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಲಕ್ಷ್ಮಣ ಬಿದರಿ! : ಮೈಸೂರಲ್ಲೊಂದು ಮೂಡು-ಬಿದರಿ
    • ವಿಶ್ವದ ಅತ್ಯುತ್ತಮ ಬಿದಿರುಗಳು ಲಕ್ಷ್ಮಣ್‌ ಮನೆಯ ಅತಿಥಿಗಳು. ಅವರ ಪ್ರೀತಿಯಿಂದಾಗಿಯೇ ಇಡೀ ಮನೆಯ ಅಂಗಳವನ್ನು ಹಬ್ಬಿ ತಬ್

      • Udayavani | Jan 30, 2013

        ವಿಶ್ವದ ಅತ್ಯುತ್ತಮ ಬಿದಿರುಗಳು ಲಕ್ಷ್ಮಣ್‌ ಮನೆಯ ಅತಿಥಿಗಳು. ಅವರ ಪ್ರೀತಿಯಿಂದಾಗಿಯೇ ಇಡೀ ಮನೆಯ ಅಂಗಳವನ್ನು ಹಬ್ಬಿ ತಬ್ಬಿ ನಿಂತಿವೆ.

        ಮೈಸೂರು ಕೆಆರ್‌ಎಸ್‌ ರಸ್ತೆಯಲ್ಲಿ ಸಾಗಿದರೆ ಬಿದಿರು ತುಂಬಿಕೊಂಡ ಕಾಂಪೌಂಡ್‌ ಕಾಣುತ್ತದೆ. ಬಹುಶಃ ಕಾಡು ಇಲ್ಲೇ ಇರಬೇಕು ಅನ್ನೋ ಅನುಮಾನ ಬಂದರೂ ಆಶ್ಚರ್ಯವಿಲ್ಲ.
        ಗೇಟು ತೆಗೆದು ಮುಂದಡಿ ಇಟ್ಟರೆ ಮತ್ತದೇ ಬಿದಿರು. ತಲೆ ತುಂಬಾ ಕೂದಲು ಬಿಟ್ಟುಕೊಂಡಂಥ ಎಳೆ ಮರಗಳು. ಮನೆ ಅಳತೆ ಸುಮಾರು 85ಧಿ-95 ಇರಬಹುದು. ಇದರಲ್ಲಿ ಶೇ.35ರಷ್ಟು ಬಿದಿರಿನ ಅಂಗಳ. ಅಪ್ಪ ಮನೆಯ ಒಳಗೆ ಬಂದಾಗ ಮಕ್ಕಳು ಸುತ್ತುವರಿದಂತೆ ಇಡೀ ಬಿದಿರು ಎದುರು ನಿಲ್ಲುತ್ತದೆ.

        ಮನೆಯ ಮುಂದೆ ಆರ್ನಮೆಂಟಲ್‌ ಬಿದಿರುಗಳು. ಮನೆಯ ಅಂಚಿಗೆ ಮರಗಳು. ಅದರಲ್ಲೂ ಬಿದಿರಿನ ಕುಡಿಗಳು. ಮನೆಯ ಮುಂದೆ ನಿಂತರೆ ಕಾಡಲ್ಲಿ ನಿಂತ ಅನುಭವ. ಕಾಂಪೌಂಡ್‌ನ‌ ಆಚೆ ತಲೆ ಹಾಕಿ ಇಣುಕುತ್ತಿರುವ ಬಿದಿರುಗಳನ್ನು ಕಂಡು ಬೆರಗಾಗುವ ಸರದಿ ನಮ್ಮದು. ಮನೆಯ ಹೊಸ್ತಿಲ ಬಳಿ ಕಂಡವರು ಎ.ಸಿ. ಲಕ್ಷ್ಮಣ್‌.

        'ಬನ್ನಿ, ಬನ್ನಿ. ಬಿದಿರು ನೋಡಿ ಬೆರಗಾದರಾ?' ನಾವು ಕೇಳಬೇಕು ಅಂದುಕೊಂಡ ಪ್ರಶ್ನೆಗೆ ಅವರೇ ಉತ್ತರ ಕೊಟ್ಟರು. ಅಕ್ಷರಶಃ ಮನೆ ಮಕ್ಕಳು, ಮೊಮ್ಮಕ್ಕಳನ್ನು ಪರಿಚಯಿಸುವಂತೆ, ಮನೆಯಂಗಳದಲ್ಲಿ ಬೆಳೆಸುತ್ತಿರುವ ಬಿದಿರು ತಳಿಗಳ ಕುರಿತು ಬಹು ಪ್ರೀತಿಯಿಂದ ಮಾತನಾಡಲು ಶುರುಮಾಡಿದರು.

        ಪ್ರಪಂಚದಲ್ಲಿ ಇರುವ ಮೂರು ಜಾತಿಯ ಬ್ಲಾಕ್‌ ಬ್ಯಾಂಬೋಗಳು ಇವರಲ್ಲಿದೆ. ದೊಡ್ಡದಾಗಿ ಬೆಳೆಯುವ ಇಂಡೋನೇಷಿಯಾ ಬ್ಯಾಂಬೋ ಇವರ ಮುದ್ದಿನ ಕೂಸು. ಹಳದಿ ಬ್ಯಾಂಬೋ ನೋಡೋದು ಚೆನ್ನ. ಪ್ರಪಂಚದಲ್ಲಿ ಸುಮಾರು 1200 ಜಾತಿಯ ಬ್ಯಾಂಬೋ ಇರಬಹುದು. ಇದರಲ್ಲಿ 60 ಜಾತಿ ಇವರಲ್ಲಿದೆ.

        ಬಿದಿರು ಈ ವಸುಂಧರೆಯ ಪ್ರೀತಿಯ ಪುತ್ರಿ ಎನ್ನುವ ಅಭಿಮಾನ ಅವರಿಗೆ. ಅತ್ಯಂತ ಅಪರೂಪ ಎನ್ನಬಹುದಾದ ನಾಲ್ಕೈದು ತಳಿಗಳೊಂದಿಗೆ 20ಕ್ಕೂ ಹೆಚ್ಚು ತಳಿಗಳನ್ನು ಲಕ್ಷ್ಮಣ್‌ ಕಾಪಾಡಿಕೊಂಡು ಬಂದಿದ್ದಾರೆ. ಇದನ್ನು ನೋಡಲೆಂದು ಹೋದವರ ಕೈಗೆ ಒಂದು ಬಿದಿರು ತಳಿ ಕೊಟ್ಟು 'ಬೆಳೆಸಿ, ಇದೇ ರೀತಿ ಹತ್ತು ಮಂದಿಗೆ ಹಂಚಿ' ಎಂಬ ಹೊಣೆಗಾರಿಕೆಯನ್ನು ಹೊರೆಸುತ್ತಾರೆ.

        ಇದಕ್ಕೆ ಕಾರಣ- ಬಿದಿರು ಭೂಮಿಗೆ ನೀರುಣಿಸುವ ತಾಕತ್ತು ಹೊಂದಿದೆ ಅನ್ನೋದು. ನಾವು ಬರ, ಬರ ಎಂದು ನೀರಿಲ್ಲದೆ ನರಳುತ್ತಿರುವ ನಗರಗಳನ್ನು ಅಷ್ಟೇಕೆ ಕಾಡುಗಳನ್ನು ಕಂಡಿದ್ದೇವೆ. ಆದರೆ ಲಕ್ಷ್ಮಣ್‌ ಹೇಳ್ಳೋ ಪ್ರಕಾರ ಎಲ್ಲದಕ್ಕೂ ಮದ್ದು ಬಿದಿರು. ನಮ್ಮ ಸಂಸ್ಕೃತಿ ಬೆಳೆಯುವುದು ಬಿದಿರಿನಿಂದ, ಬಿದಿರಿನಂತೆ ಎನ್ನುತ್ತಾರೆ.

        ಕುಚೋದ್ಯ ಎಂದರೆ ಇವತ್ತು ಕಾಡಲ್ಲಿ ಪ್ರಾಣಿಗಳಿಗೆ ನೀರು ಕುಡಿಸಲು ಕೆರೆ ನಿರ್ಮಿಸುವ ಅರಣ್ಯ ಅಧಿಕಾರಿಗಳಿದ್ದಾರೆ. ಇವರಿಗೆ ಇಂಥ ಬಿದಿರಿನ ಪಾಠ ಆಗಬೇಕು ಅನಿಸಿತು.

        ಮನೆಯ ಅಂಗಳದ ಮುಂದೆ ಕರೆದುಕೊಂಡು ಹೋಗಿ... ಬಹು ಅಪರೂಪದ, ಪೀಠೊಪಕರಣಕ್ಕೆ ಬಳಸಬಹುದಾದ ಕಪ್ಪು ಸುಂದರಿ-ಬ್ಲಾಕ್‌ ಬ್ಯಾಂಬೊ, ಕಲಾಕೃತಿಗಳಿಗೆಂದೇ ಪ್ರತ್ಯೇಕವಾಗಿ ಬಳಸುವ ಬಿದಿರನ್ನು ಪರಿಚಯಿಸಿದರು. ಬೆತ್ತ, ಬುದ್ಧ ಇದರ ಕೆಳಗೆ ಉಪನ್ಯಾಸ ನೀಡುತ್ತಿದ್ದ ಬಿದಿರುಗಳು ಇನ್ನೊಂದು ಮೂಲೆಯಲ್ಲಿತ್ತು.

        ಒಂದು ಮೀಟರ್‌ ಸುತ್ತಳತೆ ಬೆಳೆಯುವ ಬಿದಿರುಗಳಲ್ಲೇ ನಂ.1 ಎನ್ನಬಹುದಾದ ಜಯಂಟ್‌ ಬಿದಿರು ಅಲ್ಲಿತ್ತು. ಹಕ್ಕಿಪಕ್ಷಿಗಳ ಸಂತಾನಾಭಿವೃದ್ಧಿಗೆ ಬಹು ಪ್ರಿಯವಾದ ಬಿದಿರು ಇದು. ಹೀಗೆ ಬಿದಿರಿನ ಪ್ರಪಂಚದ ಇವರ ಅಂಗಳದಲ್ಲಿ ತೆರುದು ಕೊಂಡಿದೆ.
        ಟುಲ್ಡ್‌, ಮಾನ್‌ಸ್ಟ್ರಿ, ಗೋಲ್ಡನ್‌, ಬ್ಲಾಕ್‌, ಪಾಂಡಾ ಬಹು ಎತ್ತರಕ್ಕೆ ಬೆಳೆಯುವ ಬಿದಿರು. ಪ್ರಪಂಚದ ಅತ್ಯುತ್ತಮ ಬ್ಯಾಂಬೊ, ಅತೀ ಕಡಿಮೆ ಶೀತ ವಾತಾವರಣದಲ್ಲಿ ಬೆಳೆಯುವ ಚೀನಾ ಬ್ಯಾಂಬೋ ಅನ್ನು ಐಸ್‌ನಿàರಲ್ಲಿ ಬೆಳೆಸುತ್ತಿದ್ದಾರೆ. ಕರ್ನಾಟಕದಲ್ಲಿ ಅತೀ ಹೆಚ್ಚಾಗಿರುವ ಬರ್ಮಾ ಬಿದಿರು ಇವರಲ್ಲಿದೆ. ಕಲಾಕೃತಿಗಳಿಗೆ ಬಳಸುವ ಫ‌ಗೇìಸಿಯಾ ಬಿದಿರು( ಹಕ್ಕಿಪಕ್ಷಿಗಳ ಸಂತಾನಾಭಿವೃದ್ಧಿಗೆ ಬಹು ನೆಚ್ಚಿನ ತಾಣ), ಶ್ರೀಗಂಧ ಮರ ರಕ್ಷಿಸುವ ತಾಕತ್ತಿರುವ ಮುಳ್ಳಿನ ಬಿದಿರು ಹೀಗೆ ಅದರ ಜಾತಕಗಳನ್ನು ವಿವರಿಸುತ್ತಾ ಹೋದರು.

        ಇವರ ಇಷ್ಟೆಲ್ಲಾ ಬಿದಿರ ಆಸಕ್ತಿಗೆ ಕಾರಣ ಏನು? ಇವರ ವೃತ್ತಿ. ಇವರು ಅರಣ್ಯ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ನಾನಾ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ ಬಂದವರು. ಬಿದಿರು ಎಂದರೆ ಲಕ್ಷ್ಮಣ್‌ ಅಂತಲೇ ಕರೆಯಬೇಕು. ಅಷ್ಟೊಂದು ಜ್ಞಾನ ಭಂಡಾರ ಇವರಲ್ಲಿದೆ. ಕಾಲಿಗೆ ಚಕ್ಕರ ಕಟ್ಟಿಕೊಂಡವರಂತೆ ಲಕ್ಷ್ಮಣ್‌ ದೇಶವಿದೇಶಗಳಲ್ಲಿ ತಿರುಗುತ್ತಾರೆ. ಕೈಯಲ್ಲಿ ಬಿದಿರು ಹಿಡಿದು ಕೊಂಡು. ಇದರ ಫ‌ಲಶ್ರುತಿಯೇ ವಿದೇಶಿ ಬಿದಿರುಗಳು ಇವರ ಮನೆಯ ಅಂಗಳದಲ್ಲಿ ನಿಂತಿರುವುದು.

        ಲಕ್ಷ್ಮಣ್‌ ಸಲಹೆಯನ್ನು ಸೀರಿಯಸ್ಸಾಗಿ ತೆಗೆದುಕೊಂಡರೆ ಕಾಡಿನ ಪ್ರಾಣಿಗಳು ನಾಡಿಗೆ ಬರುವುದಿಲ್ಲ. ಇದೂ ಕೂಡ ಬಿದಿರಿನಿಂದ ಸಾಧ್ಯವಂತೆ. ಕಾಡಿನಲ್ಲಿ ಬಿದಿರಿಗೆ ಸರಿಯಾದ ಆರೈಕೆ ಆದರೆ ಆನೆ ಮತ್ತಿತರ ವನ್ಯಜೀವಿಗಳು ನಾಡಿನೆಡೆ ಮುಖ ಮಾಡುವುದನ್ನು ತಪ್ಪಿಸಬಹುದು ಎನ್ನುತ್ತಾರೆ ಲಕ್ಷ್ಮಣ್‌.

        ಮನೆಯ ಎಡಭಾಗಕ್ಕೆ ಕರೆದೊಯ್ದು 'ನೋಡಿ ಇಲ್ಲಿ ಹಕ್ಕಿ ಗೂಡು ಕಟ್ಟುತ್ತೆ. ಇದಕ್ಕೂ ಬಿದಿರೇ ಕಾರಣ' ಅಂದರು. ಫ‌ಗಿರ್ಜೀಯ ಹಕ್ಕಿಯ ಎರಡು ಗೂಡು ನೋಡಿ ಸಂತಸ ಪಟ್ಟರು. ಬುಲ್‌, ಬುಲ್‌ನಂಥ ಹಕ್ಕಿ ಇವರ ಮನೆಯ ಅತಿಥಿ.
        ಗೇಟಿನ ಬಳಿ ನಿಂತಾಗ ಕುಂಡವೊಂದನ್ನು ಕೈಯಲ್ಲಿ ಇಟ್ಟರು ಲಕ್ಷ್ಮಣ್‌. ನಿಮ್ಮ ಮನೆಯಲ್ಲೂ ಬೆಳೆಸಿ ನೋಡಿ ಹೇಗಿರುತ್ತೆ ಅಂತ ಅಂದರು. ಅವರ ಬಿದಿರ ಉತ್ಸಾಹ ನೋಡಿದ ಕುಂಡ ಭಾರ ಅನಿಸಲೇ ಇಲ್ಲ.

        ಆ ಸಾವು ನ್ಯಾಯವೇ?
        ಲಕ್ಷ್ಮಣ್‌ ಮೈಸೂರಿಗೆ ವಲಸೆ ಬರಲು ಕಾರಣ ಬೆಂಗಳೂರಲ್ಲಿ ಅವರಿಗಾದ ಆಘಾತ. ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್‌ ಲಕ್ಷ್ಮಣ್‌ 10 ವರ್ಷಗಳ ಕಾಲ ಮಕ್ಕಳಂತೆ ಸಾಕಿದ್ದ ನೂರಾರು ಬಿದಿರಿನ ಸ್ಮಶಾನದ ಮೇಲೆ ತಲೆ ಎತ್ತಿರುವುದು. ಮೊದಲು ಇಲ್ಲಿದ್ದ ತಮ್ಮ ಒಂದೂವರೆ ಎಕರೆ ಜಾಗದಲ್ಲಿ ಎ.ಸಿ ಲಕ್ಷ್ಮಣ್‌ ಜಗತ್ತು ತಲೆ ದೂಗುವಂತೆ ಎಲ್ಲ ಜಾತಿಯ ಬಿದಿರನ್ನು ತಂದು ಬೆಳೆಸಿ ಬೆರಗು ಮೂಡಿಸಿದ್ದರು. ಆದರೆ ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬೆರಗೇ ಅನಿಸಲಿಲ್ಲ. ಇವರ ಒಂದೂವರೆ ಎಕರೆ ಜಾಗವನ್ನು ನೋಟಿಫೈ ಮಾಡಿ, ಅಲ್ಲಿದ್ದ ನೂರಾರು ಮರಗಳ ಮಾರಣ ಹೋಮ ಮಾಡಿ, ಅದರ ಸಮಾಧಿ ಮೇಲೆ ಈಗಿನ ವಿಶ್ವೇಶ್ವರಯ್ಯ ಲೇಔಟ್‌ ನಿರ್ಮಾಣ ಮಾಡಿದರು. ಇವರ ಶ್ರಮಕ್ಕೆ, ಹೋರಾಟಕ್ಕೆ ಯಾವ ಬೆಲೆಯೂ ಸಿಗಲಿಲ್ಲ.
        ಇದ್ದಿದ್ದರೆ ಇಂದು ವಿಶ್ವ ಅಹುದಹುದೆನ್ನುವ ಬಿದಿರು ಮ್ಯೂಸಿಯಂ ಎನ್ನುವ ಹೆಗ್ಗಳಿಕೆ ಬೆಂಗಳೂರಿಗೆ ಇರುತ್ತಿತ್ತು. ಅಭಿವೃದ್ಧಿ ಎನ್ನುವುದು ಸಮಾಧಿಯ ಮೇಲಿನ ಹೂ ಅಲ್ಲವೇ?

        -ಡಿಪಿಎನ್‌ ಶ್ರೇಷ್ಠಿ
        ಚಿತ್ರಗಳು-ಮಧುಸೂದನ್‌

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಸಾಧನೆಗೆ ಪಣತೊಟ್ಟು ನಿರಂತರ ಕಠಿಣ ಶ್ರಮ ಹಾಕಿದಲ್ಲಿ ತಡವಾಗಿಯಾದರೂ ಯಶಸ್ಸು ಕಟ್ಟಿಟ್ಟಬುತ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅದಕ್ಕೆ ನಿದರ್ಶನವಾಗಿದ್ದು ಸತತ ಕಠಿಣ
      • ಈ ವಿಭಾಗದಲ್ಲಿಯೂ ಇದೆ
      • picಗೊತ್ತೇ ಇಲ್ಲದವರ ಭಾರೀ ಸಾಫ‌ಲ್ಯ
        ಆರನೇ ಆವತರಿಣಿಕೆಯ ಐಪಿಎಲ್‌ ಟೂರ್ನಿ ಇನ್ನೇನು ಅಂತಿಮ ಘಟ್ಟಕ್ಕೆ ಬಂದು ಮುಟ್ಟಿದೆ. ಲೀಗ್‌ ಹಂತ ಮುಗಿದು ಹಲವು ತಂಡಗಳು ಪ್ಲೇ ಆಫ್ನತ್ತ ಸಾಗಿವೆ. ಆದರೆ ಈ ಬಾರಿಯ ಐಪಿಎಲ್‌ ಅನುಭವಿ ಮತ್ತು ಅನನುಭವಿಗಳ ನಡುವೆ ನಡೆದ ಹೋರಾಟ ಹಾಗೂ ಹಳತು -ಹೊಸತು ಮೇಳೈಸಿ ಹೊಸತೊಂದು ರೂಪ ಪಡೆದುಕೊಂಡಂತಾಗಿರುವುದು ವಿಶೇಷ.
      • Copyright @ 2009 Udayavani.All rights reserved.
      • Designed & Hosted By 4cplus