Tuesday, May 21, 2013
Last Updated: 11:09:12 PM IST
  • ನಾನೆಲ್ಲಿರುವೆ:
  • ಮುಖಪುಟ Supplements ಬಹುಮುಖಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅಗ್ರರ ಆಟ ಉಳಿದವರ ಪರದಾಟ
    • ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ ಹಲವು ಏರಿಳಿತಗಳ ನಡುವೆಯೂ ಚಾಂಪಿಯನ್‌ಗಳನ್ನು ಹಾಗೆ ಉಳಿಸಿಕೊಂಡು ಬೀಗಿತು. ಆಸ್ಟ್ರೇಲಿ

      • Udayavani | Jan 30, 2013

        ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ ಹಲವು ಏರಿಳಿತಗಳ ನಡುವೆಯೂ ಚಾಂಪಿಯನ್‌ಗಳನ್ನು ಹಾಗೆ ಉಳಿಸಿಕೊಂಡು ಬೀಗಿತು. ಆಸ್ಟ್ರೇಲಿಯನ್‌ ಓಪನ್‌ ಎಂದರೆ ಸಾಕು ಆಗಷ್ಟೇ ಕಣ್ಣು ಬಿಡುತ್ತಿರುವ ಯುವ ಪ್ರತಿಭೆಗಳಿಂದ ಹಿಡಿದು ಜಗಜಗಟ್ಟಿಗಳವರೆಗೂ ಎಲ್ಲರೂ ತಮ್ಮ ತಾಕತ್ತಿನ ವಿರಾಟ್‌ ದರ್ಶನಕ್ಕೆ ಎದುರು ನೋಡುತ್ತಿರುತ್ತಾರೆ. ಆದರೆ ಈ ಬಾರಿ ವನಿತೆಯರ ಸಿಂಗಲ್ಸ್‌ ಮತ್ತು ಡಬಲ್ಸ್‌ಗಳನ್ನು ಗಮನಿಸಿದರೆ ಅಂತಹ ಅಚ್ಚರಿಯ ಫ‌ಲಿತಾಂಶವೇನೂ ಬಂದಿಲ್ಲ. ಕಳೆದ ಎರಡು ಬಾರಿ ಪ್ರಭುತ್ವ ಸಾಧಿಸಿದ್ದ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಆಸ್ಟ್ರೇಲಿಯನ್‌ ಓಪನ್‌ ಅನ್ನು ಸತತ ಮೂರು ಬಾರಿ ಗೆದ್ದ ವಿಶ್ವದ ಮೊದಲ ಆಟಗಾರ ಎನಿಸಿದರೆ, ಬೈಲೋರಷ್ಯಾದ ವಿಕ್ಟೋರಿಯಾ ಅಜರೆಂಕಾ ಸತತ ಎರಡನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದರು. ಇವರಿಬ್ಬರು ನಂ.1 ಆಟಗಾರರು ಮತ್ತು ಹಾಲಿ ಚಾಂಪಿಯನ್‌ಗಳು. ಇದರ ಹೊರತಾಗಿಯೂ ಉಳಿದ ಫ‌ಲಿತಾಂಶಗಳು ಹಾಗೂ ಆಟಗಾರರ ಸಾಧನೆ ಮಾತ್ರ ಎಂದಿನಂತೆ ಇತ್ತು. ಹಾಗೆ ನೋಡಿದರೆ ಭಾರತೀಯ ಸ್ಪರ್ಧಿಗಳು ಮಾತ್ರ ನಿರೀಕ್ಷೆಗೂ ಮುನ್ನವೇ ಗಂಟು ಮೂಟೆ ಕಟ್ಟಿದರು. ಅದರಲ್ಲೂ ಲಿಯಾಂಡರ್‌ ಪೇಸ್‌ ಪುರುಷರ ಡಬಲ್ಸ್‌ ಚಾಂಪಿಯನ್‌ ಪಟ್ಟ ಉಳಿಸಿಕೊಳ್ಳುವಲ್ಲಿ ವಿಫ‌ಲರಾಗಿದ್ದೂ ಮಾತ್ರವಲ್ಲ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದು ದೊಡ್ಡ ಆಘಾತವೇ ಸರಿ.

        ಜೊಕೊವಿಕ್‌: ಹ್ಯಾಟ್ರಿಧಿಕ್‌ ಸಾಧಧಿನೆ:
        ಸ್ಪೇನ್‌ನ ರಾಫೆಲ್‌ ನಡಾಲ್‌ ಅನುಪಸ್ಥಿತಿ ಈ ಬಾರಿ ಪುರುಷರ ಸಿಂಗಲ್ಸ್‌ನಲ್ಲಿ ಮುಕ್ತ ಹೋರಾಟಕ್ಕೆ ಸೂಚನೆ ಆಗಿತ್ತು. ಆದರೆ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಸತತ ಮೂರನೇ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಗೆದ್ದು ಈ ಸಾಧನೆ ಮಾಡಿದ ಮೊದಲಿಗ ಎಂಬ ಗೌರವಕ್ಕೆ ಪಾತ್ರರಾದರು. ನಿರೀಕ್ಷೆಗೂ ಮೀರಿದ ಹೋರಾಟ ಎದುರಿಸದೇ ಇದ್ದರೂ ಘನತೆ ತಕ್ಕಂತೆ ಆಡಿ ಫೈನಲ್‌ನಲ್ಲಿ ಮರ್ರೆಗೆ ಚಳ್ಳೆಹಣ್ಣು ತಿನ್ನಿಸಿದ

        ಘನತೆಗೆ ತಕ್ಕ ಸಾಧನೆರು.
        ವಿಶ್ವದ ನಂ.1 ಆಟಗಾರ್ತಿ, ಹಾಲಿ ಚಾಂಪಿಯನ್‌ ಎಂಬ ತಮ್ಮ ಘನತೆಯನ್ನು ಉಳಿಸಿಕೊಂಡರು. ಕಳೆದ ಬಾರಿ ಶರಪೋವಾ ಅವರನ್ನು ಸೋಲಿಸಿದ್ದ ಅಜರೆಂಕಾ ಈ ಬಾರಿ ಫೈನಲ್‌ನಲ್ಲಿ ಚೀನಾದ ನಾ ಲೀ ಅವರನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದರು. ಸದ್ಯದ ಮಟ್ಟಿಗೆ ಅಗ್ರಪಟ್ಟದಿಂದ ತಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದರು.

        ಮರುಗಿದ ಮರ್ರೆ
        ಯುಎಸ್‌ ಓಪನ್‌ ಮತ್ತು ಲಂಡನ್‌ ಒಲಿಂಪಿಕ್ಸ್‌ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದ ಬ್ರಿಟನ್‌ನ ಆ್ಯಂಡಿ ಮರ್ರೆ ಸತತ ಎರಡನೇ ಗ್ರ್ಯಾನ್‌ಸ್ಲಾಮ್‌ ಗೆದ್ದು 1934ರಲ್ಲಿ ಫ್ರೆಡಿ ಪೆಡ್ಡಿ ಸತತ ಎರಡು ಗ್ರ್ಯಾನ್‌ಸ್ಲಾಮ್‌ ಗೆದ್ದ ತಮ್ಮದೇ ದೇಶದ ಸಾಧನೆಯನ್ನು ಮುರಿಯವ ಅವಕಾಶವನ್ನು ಕೂದಲೆಳೆ ಅಂತರದಿಂದ ಕಳೆದುಕೊಂಡರು. ಸೆಮಿಫೈನಲ್‌ನಲ್ಲಿ ಫೆಡರರ್‌ ನನ್ನೇ ಸೋಲಿಸಿದ್ದ ಮರ್ರೆಗೆ ಫೈನಲ್‌ನಲ್ಲಿ
        ಜೊಕೊವಿಕ್‌ ಕಬ್ಬಿಣದ ಕಡಲೆಯಾದರು.

        ಸೆರೆನಾ ವಿಲಿಯಮ್ಸ್‌
        5 ಬಾರಿಯ ಚಾಂಪಿಯನ್‌, ಲಂಡನ್‌ ಒಲಿಂಪಿಕ್ಸ್‌, ವಿಂಬಲ್ಡನ್‌ ಮತ್ತು ಯುಎಸ್‌ ಓಪನ್‌ ಗೆದ್ದು ಅದ್ಭುತ ಫಾರ್ಮ್ನಲ್ಲಿದ್ದ ಸೆರೆನಾ ವಿಲಿಯಮ್ಸ್‌ ಈ ಬಾರಿ ಪ್ರಶಸ್ತಿ ಗೆಲ್ಲುವ ಹಾಟ್‌ ಫೇವರಿಟ್‌ ಆಗಿದ್ದರು. ಅದ್ಭುತ ಗೆಲುವುಗಳೊಂದಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಅಮೆರಿಕದ ಸೆರೆನಾ ತಮ್ಮದೇ ದೇಶದ ಯುವ ಆಟಗಾರ್ತಿ ಸ್ಲೊನ್‌ ಸ್ಟೆಫಾನ್ಸ್‌ ವಿರುದಟಛಿ ಆಘಾತ ಅನುಭವಿಸಿದ್ದು ಟೂರ್ನಿಯ ಅಚ್ಚರಿ
        ಫ‌ಲಿತಾಂಶಗಳಲ್ಲಿ ಒಂದಾಯಿತು.

        ಫೆಡರರ್‌ಗೆ ಮತ್ತೆ ನಿರಾಸೆ
        ದಾಖಲೆಯ 17 ಗ್ರ್ಯಾನ್‌ಸ್ಲಾಮ್‌ ಗೆದ್ದಿರುವ ಸ್ವಿಜರ್‌ಲೆಂಡ್‌ನ‌ ರೋಜರ್‌ ಫೆಡರರ್‌ ಮಂಕಾಗಿರುವುದು ಈ ಬಾರಿ ಟೂರ್ನಿಯಲ್ಲಿ ರುಜುವಾತಾಯಿತು. ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ 250ನೇ ಪಂದ್ಯ ಗೆದ್ದ
        ಸಾಧನೆಯೊಂದೇ ಫೆಡರರ್‌ ಪಾಲಾಯಿತು. ಮರ್ರೆ ಎದುರು ಮತ್ತೂಮ್ಮೆ ಸೋತ ಫೆಡರರ್‌ ಪ್ರಶಸ್ತಿ ಸುತ್ತಿಗೂ ಬಾರದೇ ನಿರ್ಗಮಿಸಿದರು.

        ಭಾರತೀಯರಿಗೆ ಆಘಾತ
        ವಿವಾದಗಳಿಂದ ತತ್ತರಿಸಿರುವ ಭಾರತ ಟೆನಿಸ್‌ಗೆ ಈ ಬಾರಿ ಆಸ್ಟ್ರೇಲಿಯನ್‌ ಓಪನ್‌ ಹೊಸ ಪಾಠ. ಟೂರ್ನಿಯ ಆರಂಭದಲ್ಲೇ ಡೇವಿಸ್‌ ಕಪ್‌ ಆಯ್ಕೆಯಲ್ಲಿ ಬದಲಾವಣೆ ಬಯಸಿದ ಆಟಗಾರರು
        ಬಂಡಾಯ ಘೋಷಿಸಿದರು. ಬಂಡಾಯದ ನಾಯಕತ್ವದ ವಹಿಸಿದ ಸೋಮ್‌ದೇವ್‌ ದೇವ್‌ ವರ್ಮನ್‌ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನಲ್ಲೇ ಅಭಿಯಾನ ಆಂತ್ಯಗೊಳಿಸಿದರು.
        ಪುರುಷರ ಡಬಲ್ಸ್‌ ವಿಭಾಗದ ಹಾಲಿ ಚಾಂಪಿಯನ್‌ ಲಿಯಾಂಡರ್‌ ಪೇಸ್‌ ಮತ್ತು ಜೆಕ್‌ ಗಣರಾಜ್ಯದ ರಾಡೆಕ್‌ ಸ್ಟೆಫಾನೆಕ್‌ ಜೋಡಿ ಟೂರ್ನಿಯ ಎರಡನೇ ಶ್ರೇಯಾಂಕ ಪಡೆದಿದ್ದರೂ ಮೊದಲ ಸುತ್ತಿನಲ್ಲೇ ಕೆವಿನ್‌ ಆ್ಯಂಡರ್ಸನ್‌ ಮತ್ತು ಜೊನಾಥನ್‌ ಎರ್ಲಿಚ್‌ ವಿರುದಟಛಿ ಆಘಾತ ಅನುಭವಿಸಿತು.
        ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥಾನಿ ಮಾಟೆಕ್‌ ಸ್ಯಾಂಡ್ಸ್‌ ಜೋಡಿ ಮೊದಲ ಸುತ್ತಿನಲ್ಲೇ ಗಂಟುಮೂಟೆ ಕಟ್ಟಿದರೆ, ಪುರುಷರ ಡಬಲ್ಸ್‌ನಲ್ಲಿ ಭೂಪತಿ- ಡೇನಿಯಲ್‌
        ನೆಸ್ಟರ್‌, ರೋಹನ್‌ ಬೋಪಣ್ಣ-ರಾಜೀವ್‌ ರಾಮ್‌ ಜೋಡಿ ಶುಭಾರಂಭ ಮತ್ತು ನಿರ್ಗಮನಕ್ಕೆ ಹೋರಾಟ ಅಂತ್ಯಗೊಳಿಸಿತು.
        ಹಾಗೆ ನೋಡಿದರೆ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಎಲ್ಲಾ ಜೋಡಿಗಳು ಉತ್ತಮ ಆರಂಭ ಪಡೆದವರಾದರೂ ಕ್ವಾರ್ಟರ್‌ಫೈನಲ್‌ ಘಟ್ಟದಲ್ಲೇ ಸೋಲುಂಡವು. ಮಿಶ್ರ ಡಬಲ್ಸ್‌ನಲ್ಲಿ ಪೇಸ್‌, ಭೂಪತಿ,
        ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಪ್ರತ್ಯೇಕ ಜತೆಗಾರರೊಂದಿಗೆ ಸ್ಪರ್ಧಿಸಿದ್ದು ಫ‌ಲ ನೀಡಲಿಲ್ಲ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಆರನೇ ಆವತರಿಣಿಕೆಯ ಐಪಿಎಲ್‌ ಟೂರ್ನಿ ಇನ್ನೇನು ಅಂತಿಮ ಘಟ್ಟಕ್ಕೆ ಬಂದು ಮುಟ್ಟಿದೆ. ಲೀಗ್‌ ಹಂತ ಮುಗಿದು ಹಲವು ತಂಡಗಳು ಪ್ಲೇ ಆಫ್ನತ್ತ ಸಾಗಿವೆ. ಆದರೆ ಈ ಬಾರಿಯ ಐಪಿಎಲ್‌
      • ಈ ವಿಭಾಗದಲ್ಲಿಯೂ ಇದೆ
      • picಓಂ ನಮಃ ಶಿವಾಯ: ಶಿವಾಸ್‌ ರೀಗಲ್‌!
        ಈ ತಲೆಮಾರಿನ ಹುಡುಗ ಹುಡುಗೆಯರ ಫೇವರಿಟ್‌ ದೇವರು ಶಿವ. ಅವನು ಕೇವಲ ದೇವರಲ್ಲ. ಹೀರೋ, ಐಕಾನ್‌ ಮತ್ತು ಆ ಆರಾಧ್ಯ ದೈವ. ಸಿನಿಮಾ ನಟರನ್ನು ಮೆಚ್ಚಿಕೊಂಡಿದ್ದ ಹೆಣ್ಮಕ್ಕಳು ಈ ಹುಲುಮಾನವರನ್ನು ಬಿಟ್ಟು ಕೈಲಾಸಕ್ಕೇ ಲಗ್ಗೆ ಇಟ್ಟಿದ್ದರೆ ಅದಕ್ಕೆ ಕಾರಣ ಶಿವನ ಕುರಿತು ಬಂದಿರುವ ಮೂರು ಕಾದಂಬರಿಗಳು. ನಾಗಾಲ್ಯಾಂಡಿ
      image
      • Copyright @ 2009 Udayavani.All rights reserved.
      • Designed & Hosted By 4cplus