'ಅಪ್ಪಯ್ಯ' ಮುಂದೆ ಹೋಗಿದ್ದಾನೆ ಕಾರಣ, ಆತನ ಹಿಂದೆ ಇದ್ದ ಎರಡು ಬ್ರಾಂಡ್ಗಳು! ಹೌದು, ಎಸ್. ನಾರಾಯಣ್ ನಿರ್ದೇಶನದ 'ಅಪ್ಪಯ್ಯ' ಚಿತ್ರ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಫೆಬ್ರವರಿ 1 ಕ್ಕೆ ತೆರೆಕಾಣಬೇಕಿತ್ತು. ಆದರೆ ಈಗ ಚಿತ್ರ ಮುಂದೆ ಹೋಗಿದೆ. ಕಾರಣ, ಒಂದೆರಡು ದೃಶ್ಯ ಶೂಟಿಂಗ್ ಮಾಡುವಾಗ ಅದರ ಹಿಂದಿದ್ದ ಮದ್ಯದ ಬ್ರಾಂಡ್ ಗಳು. ಆ ಬ್ರಾಂಡ್ಗಳು ಸರಿಯಾಗಿ ಕಾಣುವಂತಿತ್ತು. ಆದರೆ ಸಿನಿಮಾದಲ್ಲಿ ಅದನ್ನು ಪ್ರೊಮೋಟ್ ಮಾಡುವಂತಿಲ್ಲ. ಹಾಗಾಗಿ ಈಗ ನಾರಾಯಣ್ ಆ ಬ್ರಾಂಡ್ಗಳ ಹೆಸರನ್ನು ಬ್ಲಿರ್ ಮಾಡಲು ಮುಂದಾಗಿದ್ದಾರೆ. ಸಿಜಿ ವರ್ಕ್ನಲ್ಲಿ ಮಾಡಿರುವುದರಿಂದ ಅದಕ್ಕೊಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಮುಂದೆ ಅಪ್ಪಯ್ಯ ಯಾವಾಗ ದರ್ಶನ ನೀಡುತ್ತಾನೆಂಬುದು ಹೇಳುವಂತಿಲ್ಲ. 'ಆ ದೃಶ್ಯದಲ್ಲಿ ತುಂಬಾ ಅಗತ್ಯವಾದ ಡೈಲಾಗ್ ಇದೆ. ಹಾಗಾಗಿ ಆ ದೃಶ್ಯವನ್ನು ಕಿತ್ತು ಹಾಕುವಂತಿಲ್ಲ. ಬದಲಿಗೆ ಬ್ಲಿರ್ ಮಾಡಿಸಬೇಕು. ಅದಕ್ಕೊಂದಿಷ್ಟು ಸಮಯ ಬೇಕು' ಎನ್ನುತ್ತಾರೆ ಎಸ್.ನಾರಾಯಣ್.