ಬೆಂಗಳೂರು: ನಟಿ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧಾ ಈಗ ತಾಯಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಕೆಂಗೇರಿ ಸಮೀಪವಿರುವ ಸೃಷ್ಟಿ ಗ್ಲೋಬಲ್ ಆಸ್ಪತ್ರೆಯಲ್ಲಿ ಮುದ್ದಾದ ಗಂಡು ಮಗುವಿಗೆ ಅವರು ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ಸೃಷ್ಟಿ ಆಸ್ಪತ್ರೆಯ ವೈದ್ಯ ಡಾ| ಗುರುಮೂರ್ತಿ ತಿಳಿಸಿದ್ದಾರೆ. ವೈದ್ಯರು ನಿಗದಿಪಡಿಸಿದ್ದ ದಿನಾಂಕ (ಫೆ.6)ಗಿಂತ ಮೊದಲೇ ತಾರಾ ಮಗುವಿಗೆ ಜನ್ಮ ನೀಡಿದ್ದಾರಾದರೂ, ಯಾವುದೇ ತೊಂದರೆ ಇಲ್ಲದೆ ಅವರು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ತಾರಾಗೆ ತಾಯಿ ಆಗಬೇಕು ಅನ್ನುವ ಆಸೆ ಇದೀಗ ಈಡೇರಿದೆ. ಪತಿ, ಛಾಯಾಗ್ರಾಹಕ ಎಚ್.ಸಿ.ವೇಣು ಕೂಡ ಮುದ್ದು ಗಂಡು ಮಗು ಜನಿಸಿರುವುದರಿಂದ ಸಂಭ್ರಮದಲ್ಲಿದ್ದಾರೆ. ಈ ಹಿಂದೆ ತಾಯಿ ಆಗುತ್ತಿದ್ದೇನೆ ಅಂತ ಗೊತ್ತಾಗುತ್ತಿದ್ದಂತೆಯೇ ತಾರಾ ತಮ್ಮ ಆಪ್ತರನ್ನು ಕರೆದು ಚಿಕ್ಕದೊಂದು ಸಂತೋಷಕೂಟ ಏರ್ಪಡಿಸಿ, ತಾಯಿ ಆಗುವ ಸಂಭ್ರಮದ ಕ್ಷಣಗಳ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದರು.
ಮಾನ್ಯರೇ, ಒಂದು ಹೆಣ್ಣು ತಾಯಿಯಾಗುವುದೆಂದರೆ, ಪುನರ್ಜನ್ಮ ಪಡೆದಂತೆ ಎನ್ನುತ್ತಾರೆ. ಸಾಮಾನ್ಯವಾಗಿ ೩೫-೩೮ ವರುಷಗಳ ನಂತರ ಮಕ್ಕಳಾಗುವುದು ಕಷ್ಟವೆನ್ನುತ್ತಾರೆ. ಆ ದೇವರ ದಯೆಯಿಂದ ೪೮ ವರುಷಗಳಿಗೆ ಮಗುವಾಗಿರುವುದು ಅವರ ಅದೃಷ್ಟವೇ ಸರಿ. ಅದರಲ್ಲೂ ಮುಖ್ಯವಾಗಿ ಗಂಡು ಮಗು ಎಂದರೆ ದಂಪತಿಗಳಿಬ್ಬರಿಗೂ ಸಂತೋಷವಾಗಿರಲೇ ಬೇಕು. ಆ ದೇವರ ದಯೆಯಿಂದ ಆ ದಂಪತಿಗಳಿಗೆ ಒಳ್ಳೆಯದು ಮಾಡಲಿ ಮತ್ತು ಹೊಸದಾಗಿ ಪ್ರಪಂಚಕ್ಕೆ ಕಾಲಿಟ್ಟ ಆ ಪುಟ್ಟ ಕಂದನಿಗೆ ಆಯುರಾರೋಗ್ಯದಿಂದ ಬದುಕಲಿ ಬಾಳಲಿ ಆ ಮಗುವಿನ ತಂದೆ ತಾಯಿಯಂತೆ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರಲೆಂದು ನಾವೆಲ್ಲಾ ಹಾರೈಸೋಣ.