Friday, May 24, 2013
Last Updated: 3:56:13 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪಾಕಸಂಪುಟ
    • ಘಮಘಮ ಅವರೇಕಾಳು
    • ಹಸಿ ಅವರೇಕಾಳಿನ ಪರಿಮಳವನ್ನು , ರುಚಿಯನ್ನು ಬಲ್ಲವರೇ ಬಲ್ಲರು.

      • ಪುಷ್ಪಾ ರಾವ್‌ | Feb 02, 2013

        ಮಳೆಗಾಲ ಮುಗಿದು ಚಳಿಗಾಲ ಶುರುವಾಗಿದೆ. ಎಲ್ಲೆಡೆ ಚುಮು ಚುಮು ಚಳಿ. ಕೊರೆಯುವ ಚಳಿಗಾಳಿಗೆ ಏನಾದರೂ ಖಾರಖಾರವಾಗಿ ತಿನ್ನಬೇಕೆಂಬ ಬಾಯಿಚಪಲ ಹುಟ್ಟುತ್ತದೆ. ಕೆಲವಾರು ಕಾಯಿಗಳು ಚಳಿಗಾಲದಲ್ಲಿಯೇ ಹೂ ಬಿಟ್ಟು ಕಾಯಿಗಳಾಗುವುದು. ಅವರೇಕಾಯಿ ಸೊಂಪಾಗಿ ಬೆಳೆಯಬೇಕೆಂದರೆ ಅತಿಯಾದ ಚಳಿ ಅಗತ್ಯ. ಸೊನೆೆ ತುಂಬಿದ ಕಾಳುಗಳು ಮೈತುಂಬಿಕೊಳ್ಳುವುದು ಆವಾಗಲೇ. ಹಸಿ ಅವರೇಕಾಳಿನ ಪರಿಮಳವನ್ನು , ರುಚಿಯನ್ನು ಬಲ್ಲವರೇ ಬಲ್ಲರು. ಒಮ್ಮೆ ರುಚಿ ಹಿಡಿಯಿತೆಂದರೆ ಎಷ್ಟು ಹಣವಾದರೂ ಕೊಟ್ಟು ತಂದೇ ತರುತ್ತಾರೆ. ಅದರಿಂದ ಅನೇಕ ಸ್ವಾದಿಷ್ಟವಾದ ತಿಂಡಿಗಳನ್ನು ತಯಾರಿಸಬಹುದು.

        ಅವರೇಕಾಳಿನ ಸಮೋಸಾ

        ಬೇಕಾಗುವ ಸಾಮಾನು :
          ಗೋಧಿಹಿಟ್ಟು 1 ಬಟ್ಟಲು, ಮೈದಾಹಿಟ್ಟು 1 ಬಟ್ಟಲು, ಹಿತಕಿದ ಅವರೇಕಾಳು 1 ಬಟ್ಟಲು, ಸಣ್ಣಗೆ ಕತ್ತರಿಸಿಟ್ಟ ಬೀನ್ಸ್‌ , ಕ್ಯಾರೆಟ್‌, ಈರುಳ್ಳಿ , ಬೀಟ್‌ರೂಟ್‌, ಕೊತ್ತಂಬರಿ, ಕರಿಬೇವಿನ ಸೊಪ್ಪು , ಶುಂಠಿ, ಉಪ್ಪು ರುಚಿಗೆ, ಕರಿಯಲು ಬೇಕಾದಷ್ಟು ಎಣ್ಣೆ , ಲಿಂಬೆಹಣ್ಣು 1, ಗರಂಮಸಾಲೆಪುಡಿ 1 ಚಮಚ.
        ತಯಾರಿಸುವ ವಿಧಾನ : ಗೋಧಿಹಿಟ್ಟು , ಮೈದಾಹಿಟ್ಟಿಗೆ ಸ್ವಲ್ಪ ಉಪ್ಪು ಹಾಕಿ ಬಿಸಿ ಎಣ್ಣೆ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

        ಅವರೇಕಾಳಿನ ಜೊತೆ ಎಲ್ಲ ತರಕಾರಿಗಳನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಗರಂಮಸಾಲೆಪುಡಿಯನ್ನು ಸೇರಿಸಿ. ಕೊತ್ತಂಬರಿ, ಕರಿಬೇವು, ಶುಂಠಿ ಹಾಕಿ ಪಲ್ಯದಂತೆ ಮಾಡಿಟ್ಟುಕೊಳ್ಳಿ. ಆರಿದ ನಂತರ ಲಿಂಬೆರಸ ಸೇರಿಸಿ.

        ಗೋಧಿ ಹಿಟ್ಟಿನ ಮಿಶ್ರಣವನ್ನು ಪೂರಿಯಂತೆ ಲಟ್ಟಿಸಿ, ಸರಿ ಅರ್ಧಕ್ಕೆ ಕತ್ತರಿಸಿ.

        ಒಂದೊಂದು ಭಾಗವನ್ನು ಶಂಕುವಿನ ಆಕಾರದಲ್ಲಿ ಸುತ್ತಿ ಅದರ ಒಳಗೆ ಮಾಡಿಟ್ಟ ಪಲ್ಯದ ಮಿಶ್ರಣವನ್ನು ತುಂಬಿಸಿ.

        ಮಿಶ್ರಣ ಹೊರಬಾರದಂತೆ ಸುತ್ತಲೂ ಸರಿಯಾಗಿ ಒತ್ತಿ.

        ಎಣ್ಣೆಯನ್ನು ಕಾಯಲು ಇಟ್ಟು ಒಂದೊಂದೇ ಸಮೋಸವನ್ನು ಹಾಕುತ್ತಾ ನಿಧಾನವಾಗಿ ಹೊಂಬಣ್ಣ ಬರುವವರೆಗೆ ಕಾಯಿಸಿ. ಸಾಯಂಕಾಲದ ತಿಂಡಿಗೆ ಸ್ವಾದಿಷ್ಟವಾದ ತಿನಿಸು ಇದು.

        ಅವರೇಕಾಳಿನ ರವೆ ಬಾತ್‌

        ಬೇಕಾಗುವ ಸಾಮಾನು
        : ದಪ್ಪ ರವೆ 1 ಲೋಟ, ಅವರೇಕಾಳು 1 ಲೋಟ, ಕೊತ್ತಂಬರಿಸೊಪ್ಪು ಸ್ವಲ್ಪ , ಕರಿಬೇವು, ಒಗ್ಗರಣೆಗೆ ಮೆಣಸಿನಕಾಯಿ, ಉದ್ದಿನಬೇಳೆ-

        ಕಡಲೆಬೇಳೆ-ಸಾಸಿವೆ ತಲಾ 1 ಚಮಚ, ಎಣ್ಣೆ ಕಾಲು ಲೋಟ, ತೆಂಗಿನ ತುರಿ ಅರ್ಧ ಬಟ್ಟಲು, ಹಸಿಮೆಣಸಿನಕಾಯಿ 2, ಉಪ್ಪು ರುಚಿಗೆ, ವಾಂಗೀಬಾತ್‌ಪುಡಿ 2 ಚಮಚ.

        ತಯಾರಿಸುವ ವಿಧಾನ : ಅವರೇಕಾಳನ್ನು ಸ್ವಲ್ಪ ಉಪ್ಪು ಹಾಕಿ ಮೊದಲೇ ಬೇಯಿಸಿಟ್ಟುಕೊಳ್ಳಿ.

        .ರವೆಯನ್ನು ಹುರಿದು ತೆಗೆದಿಡಿ.

        .ಬಾಣಲೆಗೆ ಎಣ್ಣೆ , ಒಗ್ಗರಣೆ ಸಾಮಾನುಗಳನ್ನು ಹಾಕಿ, ನಂತರ ಸಣ್ಣಗೆ ಕತ್ತರಿಸಿ ಹಸಿಮೆಣಸನ್ನು ಸೇರಿಸಿ.

        .ಸ್ವಲ್ಪ ಹುರಿದು ಅದಕ್ಕೆ 2 ಲೋಟ ನೀರು ಹಾಕಿ ಸ್ವಲ್ಪ ಉಪ್ಪನ್ನು ಹಾಕಿ. ಅವರೇಕಾಳಿಗೆ ಮೊದಲೇ ಸ್ವಲ್ಪ ಉಪ್ಪು ಹಾಕಿರುವುದರಿಂದ ನೋಡಿಕೊಂಡು ಉಪ್ಪು ಹಾಕಿ.

        .ನಂತರ ಅದಕ್ಕೆ ಅವರೇಕಾಳನ್ನು ಹಾಕಿ ಕೈಯಾಡಿಸಿ.

        .ಹುರಿದ ರವೆಯನ್ನು ಆ ನೀರಿಗೆ ಹಾಕಿ ವಾಂಗೀಬಾತ್‌ ಪುಡಿಯನ್ನು ಹಾಕಿ.

        .ಕೆಳಗಿಡುವ ಮುನ್ನ ತೆಂಗಿನತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ರುಚಿಯಾದ ಬೆಳಗಿನ ತಿಂಡಿಯು ಸಿದ್ಧ.

        ಅವರೇಕಾಳು ಇಡ್ಲಿ

        ಬೇಕಾಗುವ ಸಾಮಾನು :
        ಅಕ್ಕಿ 2 ಕಪ್‌, ಉದ್ದಿನಬೇಳೆ 1 ಕಪ್‌, ಅವರೇಕಾಳು 1 ಕಪ್‌, ಶುಂಠಿ 50 ಗ್ರಾಂ, ಹಸಿಮೆಣಸು 6, ನೆನೆಸಿಟ್ಟ ಕಡಲೆಬೇಳೆ ಅರ್ಧ ಕಪ್‌, ತೆಂಗಿನಕಾಯಿ ಸಣ್ಣಗೆ ಕತ್ತರಿಸಿದ ಚೂರುಗಳು ಕಾಲು ಕಪ್‌, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಸ್ವಲ್ಪ , ಉಪ್ಪು ರುಚಿಗೆ.

        ತಯಾರಿಸುವ ವಿಧಾನ: ಅಕ್ಕಿ, ಉದ್ದಿನಬೇಳೆ ಹಾಗೂ ಅವರೇಕಾಳನ್ನು ಇಡ್ಲಿಗೆ ರುಬ್ಬುವಂತೆ ರುಬ್ಬಿಡಿ. ಮರುದಿವಸ ಶುಂಠಿ, ಹಸಿಮೆಣಸು, ಕೊತ್ತಂಬರಿಸೊಪ್ಪು, ಕರಿಬೇವಿನ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಕಡಲೆಬೇಳೆ, ತೆಂಗಿನಕಾಯಿಯ ಚೂರುಗಳನ್ನು ಸೇರಿಸಿ ಉಪ್ಪು ಹಾಕಿ ಇಡ್ಲಿಯ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈಗ ಇಡ್ಲಿಯಂತೆ ಬೇಯಿಸಿ. ಹಾಗೆಯೇ ತಿನ್ನಲೂಬಹುದು. ತೆಂಗಿನಕಾಯಿ ಚಟ್ನಿ ಅಥವಾ ಚಟ್ನಿಪುಡಿಯೊಂದಿಗೆ ರುಚಿಕರ.

        ಅವರೇಕಾಳು ಸಾಗು

        ಬೇಕಾಗುವ ಸಾಮಾನು :
        ಹಿತಕಿದ ಅವರೆಕಾಳು 2 ಬಟ್ಟಲು, ಬೀನ್ಸ್‌ , ಕ್ಯಾರೆಟ್‌, ಆಲೂಗಡ್ಡೆ , ಬೀಟ್‌ರೂಟ್‌ ಎಲ್ಲವೂ ಸೇರಿ 1 ಬಟ್ಟಲು, ತೆಂಗಿನಕಾಯಿ 1 ಬಟ್ಟಲು, ಶುಂಠಿ 1 ಇಂಚು, ಲವಂಗ 6, ಚಕ್ಕೆ 2-3 ತುಂಡು, ಹಸಿಮೆಣಸು 8, ಉಪ್ಪು ರುಚಿಗೆ, ಕೊತ್ತಂಬರಿಸೊಪ್ಪು ಸ್ವಲ್ಪ , ಲಿಂಬೆಹಣ್ಣು 1, ಕರಿಬೇವು ಸ್ವಲ್ಪ.
        ತಯಾರಿಸುವ ವಿಧಾನ :  ಮೊದಲು ಮಿಕ್ಸಿ ಜಾರಿಗೆ ಹಸಿಮೆಣಸು, ತೆಂಗಿನತುರಿ, ಶುಂಠಿ, ಲವಂಗ, ಚಕ್ಕೆ, ಕೊತ್ತಂಬರಿಸೊಪ್ಪನ್ನು ಹಾಕಿ ರುಬ್ಬಿಡಿ.

        ಸಣ್ಣಗೆ ಕತ್ತರಿಸಿದ ಬೀನ್ಸ್‌ , ಕ್ಯಾರೆಟ್‌, ಬೀಟ್‌ರೂಟ್‌, ಆಲೂಗಡ್ಡೆಯ ಜೊತೆ ಅವರೇಕಾಳನ್ನು ಬೇಯಿಸಿಕೊಳ್ಳಿ.
        ನಂತರ ರುಬ್ಬಿಟ್ಟ ಮಿಶ್ರಣವನ್ನು ಸೇರಿಸಿ ಬೇಕಿದ್ದಷ್ಟು ಉಪ್ಪು ಹಾಕಿ ಕರಿಬೇವು, ಕೊತ್ತಂಬರಿಸೊಪ್ಪು ಹಾಕಿ.
        ಕೆಳಗಿಟ್ಟ ನಂತರ ಲಿಂಬೆಹಣ್ಣನ್ನು ಹಿಂಡಿ.

        ಚಪಾತಿ, ಪೂರಿ, ರೊಟ್ಟಿಯ ಜೊತೆ ಮಾತ್ರವಲ್ಲದೆ ಇಡ್ಲಿ, ದೋಸೆಯ ಜೊತೆಯೂ ರುಚಿಕರ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಸಾಂಸಾರಿಕ ಬದುಕಿನ ಬಗ್ಗೆ , ಗಂಡ- ಹೆಂಡತಿಯರ ಬಗ್ಗೆ, ಮದುವೆಯ ಬಗ್ಗೆ ಎಷ್ಟೊಂದು ಜೋಕ್‌ಗಳನ್ನು ಓದುತ್ತ ಇರುತ್ತೇವೆ. ಹೆಚ್ಚಿನವುಗಳನ್ನು ಓದಿ ನಕ್ಕು ಬಿಡುತ್ತೇವೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus