Wednesday, June 19, 2013
Last Updated: 11:01:39 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸ್ಕೋಲಿಯೊಸಿಸ್‌ (ಗೂನು ಬೆನ್ನು ) ಎಂದರೇನು ?
    • ಅಸ್ವಾಭಾವಿಕವಾದ ಬೆನ್ನಿನ ಬಾಗುವಿಕೆಯನ್ನು ಗೂನುಬೆನ್ನು (ಸ್ಕೋಲಿಯೊಸಿಸ್‌) ಎನ್ನುತ್ತಾರೆ.

      • ಡಾ| ಈಶ್ವರ ಕೀರ್ತಿ,ಬೆನ್ನುಹುರಿ ತಜ್ಞರು, ಕೆಎಂಸಿ ಆಸ್ಪತ್ರೆ, ಅಂಬೇಡ್ಕರ್‌ ವೃತ್ತ, ಮಂಗಳೂರು. | Feb 04, 2013

        ಅಸ್ವಾಭಾವಿಕವಾದ ಬೆನ್ನಿನ ಬಾಗುವಿಕೆಯನ್ನು  ಗೂನುಬೆನ್ನು  (ಸ್ಕೋಲಿಯೊಸಿಸ್‌) ಎನ್ನುತ್ತಾರೆ. ಇದರಲ್ಲಿ ಬೆನ್ನು ಆಕಾರದಲ್ಲಿ ಬಾಗಿರುವುದು ಕಂಡು ಬರುತ್ತದೆ.

        ಸಾಧಾರಣವಾಗಿ, 2-3 ಶೇಕಡಾ ಬೆಳೆಯುವ ಮಕ್ಕಳಲ್ಲಿ  ಇದು ಕಂಡು ಬರುತ್ತದೆ. ಸಣ್ಣ ಮಟ್ಟಿನ ಗೂನು ಬೆನ್ನು  ಸಾಮಾನ್ಯವಾಗಿ ಏನೂ ತೊಂದರೆಯನ್ನು  ಮಾಡುವುದಿಲ್ಲ . ಆದರೆ, ಪ್ರತಿ ಸಾವಿರದಲ್ಲಿ ಸುಮಾರು 3ರಿಂದ 5 ಮಕ್ಕಳಲ್ಲಿ ಗೂನು ಬೆನ್ನಿಗೆ ಸರಿಯಾದ ಚಿಕಿತ್ಸೆಯ ಆವಶ್ಯಕತೆಯಿರುತ್ತದೆ. ಇವರಲ್ಲಿ, ಗೂನುಬೆನ್ನನ್ನು  ಹಾಗೆಯೇ ಬಿಟ್ಟು ಬಿಟ್ಟರೆ, ಅದು ಮುಂದಕ್ಕೆ ತೀವ್ರವಾದ ತೊಂದರೆಗಳನ್ನು ಉಂಟು ಮಾಡಬಹುದು. ಅಂತಹ ಕೆಲವು ತೊಂದರೆಗಳು ಯಾವುವೆಂದರೆ, ಬೆನ್ನಿನ ನೋವು, ಬೆನ್ನು  ಗಟ್ಟಿಯಾಗುವುದು, ಅಸಮರ್ಪಕ ಬಾಗುವಿಕೆ, ಹೆಚ್ಚಿನ ಸವೆತ ಕಾಣಿಸಬಹುದು ಮತ್ತು ಇನ್ನು  ಕೆಲವರಲ್ಲಿ  ಹೃದಯ ಹಾಗೂ ಶ್ವಾಸಕೋಶಗಳ ತೊಂದರೆಯನ್ನು ಇದು ಉಂಟುಮಾಡ ಬಹುದು. ಈ ಗೂನು ಬೆನ್ನಿನ ವಿಕಾರವನ್ನು ಕಡಿಮೆ ಮಾಡಲು, ಮೊದಲಿನ ಹಂತದಲ್ಲಿ  ಇದನ್ನು ನಿಖರವಾಗಿ ಪತ್ತೆಚ್ಚಿಕೊಳ್ಳುವುದೊಂದೆ ದಾರಿ. ಈ  ಗೂನು ಬೆನ್ನು  ತೊಂದರೆಯನ್ನು ಸುಲಭವಾದ ವೈದ್ಯಕೀಯ  ಪರೀಕ್ಷೆಯೊಂದರಲ್ಲಿ ಕಂಡು ಹಿಡಿಯಬಹುದು. ಮಕ್ಕಳ ಹೆತ್ತವ‌ರು ಈ ಬಗ್ಗೆ ಗಮನವಿರಿಸಿ, ತಮ್ಮ  ಮಕ್ಕಳ  ಬೆನ್ನಿನ ಆರೋಗ್ಯವನ್ನು  ಕಾಪಾಡಿಕೊಳ್ಳುವುದು ಆತೀ ಮುಖ್ಯ .

        ಇದರ ಗುಣ ಲಕ್ಷಣಗಳೇನು ?

        1.ಒಂದು ಭುಜ ಮತ್ತೂಂದರಿಂದ ಎತ್ತರದಲ್ಲಿರುವುದು.

        2. ಒಂದು ಬದಿಯ ಪಕ್ಕೆಲುಬು  ಎದ್ದು ಕಾಣುವುದು.

        3. ಕೈಗಳು ದೇಹದಿಂದ ಬೇರೆ ಬೇರೆ ರೀತಿಯ ಅಂತರದಲ್ಲಿರುವುದು.

        4. ಒಂದು ಬದಿಯ ಸೊಂಟ ಮತ್ತೂಂದರಿಂದ ಎತ್ತರದಲ್ಲಿರುವುದು ಅಥವಾ ಎದ್ದು ಕಾಣುವುದು.

        5. ತಲೆಯು ಒಂದು ಬದಿಗೆ ಬಾಗಿರುವುದು.

        6. ಮಗುವನ್ನು  ಮುಂದಕ್ಕೆ  ಬಾಗಲು ಹೇಳಿ, ಹಿಂಬದಿಯಿಂದ ಬೆನ್ನನ್ನು  ನೋಡಿದಾಗ ಒಂದು  ಬದಿಯ ಪಕ್ಕೆಲುಬು ಎದ್ದು ಕಾಣುವುದು... ಇತ್ಯಾದಿ.

        ಇದಕ್ಕೆ ಕಾರಣಗಳೇನು ?

        ಸುಮಾರು 80-85 ಶೇಕಡಾ ಗೂನು ಬೆನ್ನಿನ ಮಕ್ಕಳಲ್ಲಿ, ಇದಕ್ಕೆ ನಿಖರವಾದ ಕಾರಣ ಇನ್ನೂ  ತಿಳಿದು ಬಂದಿಲ್ಲ . ಇದನ್ನು  ಈಡಿಯೊಪಾಥಿಕ್‌ ಸ್ಕೋಲಿಯೊಸಿಸ್‌ ಎನ್ನುತ್ತಾರೆ. ಇನ್ನು ಕೆಲವರಲ್ಲಿ  ಆನುವಂಶಿಕ ಕಾಯಿಲೆ, ಹುಟ್ಟುವಾಗಲೆ ಬೆನ್ನೆಲುಬಿನ ವಿಕಾರ ಇರುವಿಕೆ, ಹಾಗೂ ಇನ್ನಿತರ ನರಗಳ ದೌರ್ಬಲ್ಯ... ಇತ್ಯಾದಿ ಕಾರಣಗಳಿಂದ ಗೂನುಬೆನ್ನು  ಬಂದಿರುವ ಸಾಧ್ಯತೆಯಿದೆ. ಹೆಚ್ಚಾಗಿ ಇದು ಹೆಣ್ಣು ಮಕ್ಕಳಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ಇದು ಕಂಡು ಬರುವುದು,  10 ರಿಂದ 18 ವರ್ಷ ವಯಸ್ಸಿನಲ್ಲಿ ಅಂದರೆ, ಅವರ ಬೆಳವಣಿಗೆಯಲ್ಲಿ ಪ್ರಧಾನವಾಗಿರುವ ಕೊನೆಯ ಹಂತದಲ್ಲಿಯೆ.

        ಇದನ್ನು ಪತ್ತೆಹಚ್ಚುವುದು ಹೇಗೆ ?

        ಗೂನು ಬೆನ್ನನ್ನು  ವೈದ್ಯಕೀಯ  ಪರೀಕ್ಷೆಗಳಿಂದ ಪತ್ತೆ ಹಚ್ಚಬಹುದು. ಈ ಮೇಲೆ ತಿಳಿಸಿದ ಗುಣಲಕ್ಷಣಗಳು ಮಗುವಿನಲ್ಲಿ ಇದ್ದಲ್ಲಿ, ಸ್ಕೋಲಿಯೊಮೀಟರ್‌ ಸಹಾಯದಿಂದ, ಕಾಯಿಲೆಯ ಇರುವಿಕೆಯ ಬಗ್ಗೆ ಸಂದೇಹ ಪಡಬಹುದು. ಸ್ಕೋಲಿಯೊಮೀಟರ್‌ ಎಂಬುದು, ಬೆನ್ನು ಎಷ್ಟು ವಕ್ರವಾಗಿದೆ ಎಂದು ಅಂದಾಜು ಮಾಡುವ ಸಾಧನ. ಹೆಚ್ಚಿನ ಪರೀಕ್ಷೆಯ ಆವಶ್ಯಕತೆ ಇದ್ದರೆ ನಿಮ್ಮ ವೈದ್ಯರು ನಿಮ್ಮ ಮಗುವಿನ ಕ್ಷ-ಕಿರಣ ಬಿಂಬತೆಗೆಸಲು ಸೂಚಿಸಬಹುದು. ಸ್ಕೋಲಿಯೊಸಿಸ್‌ ಸಂಶೋಧನಾ ಸೊಸೈಟಿಯ ಪ್ರಕಾರ, ಬೆನ್ನೆಲುಬು 10 ಡಿಗ್ರಿ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಾಗಿರುವಂತೆ ಕ್ಷ-ಕಿರಣ ಬಿಂಬದಲ್ಲಿ ಗೋಚರಿಸುವುದು ಸ್ಕೋಲಿಯೊಸಿಸ್‌ ಲಕ್ಷಣ.

        ಇದನ್ನು ಗುಣಪಡಿಸುವುದು ಹೇಗೆ ?

         ನಿಯತವಾದ ವೈದ್ಯಕೀಯ  ಪರೀಕ್ಷೆ  ಮಾಡಿಸುವುದು, ಅಂದರೆ 4- 6 ತಿಂಗಳಿಗೊಮ್ಮೆ  (ಇದು ಗೂನು ಬೆನ್ನಿನ ತೀವ್ರತೆಯನ್ನು  ಹೊಂದಿಕೊಂಡಿರುತ್ತದೆ) ಬೆನ್ನಿನ ತೊಂದರೆಯ ತೀವ್ರತೆ ಹೆಚ್ಚುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು.

         ವೈದ್ಯರು ಯಾವ ರೀತಿಯ ಗೂನುಬೆನ್ನು  ಎಂಬುದನ್ನು  ಹೊಂದಿಕೊಂಡು, ಇದಕ್ಕೆ ಚಿಕಿತ್ಸೆಯನ್ನು ಯೋಜಿಸಿಕೊಳ್ಳಬೇಕಾಗುತ್ತದೆ.

         25-40 ಡಿಗ್ರಿಗಳಷ್ಟಿರುವ ಗೂನು ಬೆನ್ನಿಗೆಆದಾರ ನೀಡಲು ಬ್ರೇಸಿಂಗ್‌ ಆವಶ್ಯಕತೆ ಇದೆ.

         ಗೂನು ಬೆನ್ನು  40 ಡಿಗ್ರಿಗಿಂತಲು ಹೆಚ್ಚಾಗಿದ್ದಲ್ಲಿ , ವಕ್ರತೆಯನ್ನು ಸರಿಪಡಿಸಲು ಬ್ರೇಸಿಂಗ್‌ ವಿಫಲಗೊಂಡರೆ, 

        ಶಸ್ತ್ರಚಿಕಿತ್ಸೆಯನ್ನು  ಮಾಡಬೇಕಾಗಿ ಬರುವ ಸಾಧ್ಯತೆಗಳಿವೆ. ಇದರಲ್ಲಿ ಹಲವಾರು ವಿಧದ ಶಸ್ತ್ರಚಿಕಿತ್ಸೆಗಳಿವೆ.
        ನೀವು ನಿಮ್ಮ ಮಕ್ಕಳ ಬೆನ್ನಿನ ಆರೋಗ್ಯದ ಮೇಲೆ ಸಂಶಯ ಹೊಂದಿದ್ದಲ್ಲಿ  ಅಥವಾ ಗೂನು ಬೆನ್ನಿನ ಗುಣ ಲಕ್ಷಣಗಳನ್ನು  ಅವರಲ್ಲಿ ನೋಡಿದ್ದಲ್ಲಿ, ಅವಶ್ಯವಾಗಿ  ನಿಮ್ಮ ವೈದ್ಯರನ್ನು ಭೇಟಿ ಮಾಡಿರಿ.


         

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      ಪೋಸ್ಟ್‌ ಹಪೆìಟಿಕ್‌ ನ್ಯುರಾಲ್ಜಿಯಾ ಅಂದರೆ, ಸರ್ಪಸುತ್ತಿನ ನಂತರ ನರಗಳಲ್ಲಿ ಕಾಣಿಸಿಕೊಳ್ಳುವ ನೋವು. ಇದನ್ನು ಸರ್ಪಸುತ್ತಿನ ನಂತರದ ನರವೇದನೆ ಎಂದು ಕರೆಯಬಹುದು..
      • ಈ ವಿಭಾಗದಲ್ಲಿಯೂ ಇದೆ
      • picಆರೋಗ್ಯಶಾಲಿ ಹೃದಯ - ಆನಂದಮಯ ಹೃದಯ
        ಜಗತ್ತಿನಾದ್ಯಂತ ಲಕ್ಷಾಂತರ ಸ್ತ್ರೀ-ಪುರುಷರ ಮರಣಕ್ಕೆ ಕಾರಣವಾಗುತ್ತಿರುವ ಹೃದಯದ ಕಾಯಿಲೆಗಳನ್ನು ತಗ್ಗಿಸುವಲ್ಲಿ ಆರೋಗ್ಯಕರ ಆಹಾರಗಳ ಆಯ್ಕೆಯು ಗಮನಾರ್ಹ ಪಾತ್ರವನ್ನು ವಹಿಸಬಹುದು..
      • Copyright @ 2009 Udayavani.All rights reserved.
      • Designed & Hosted By 4cplus