ಮಾವೆಂಸ | Feb 05, 2013
ಮೊಬೈಲ್ ಬೇಡಿಕೆ ಹೆಚ್ಚಾಗುತ್ತಿದೆ. ಆದಲೆ ಲ್ಯಾಂಡ್‌ಲೈನ್ ಬೇಡಿಕೆ ಇಳಿಯುತ್ತಿದೆ. ಇಡೀ ಜಗತ್ತೇ ಸಿಮ್ ಕಾರ್ಡನಂತೆ ಅನ್ನುವುದಕ್ಕೆ ಇಲ್ಲಿದೆ ನೋಡಿ ಅಂಕಿಅಂಶ.
ನಮ್ಮ ದೇಶದ ಮೊಬೈಲ್ ಹಾಗೂ ಲ್ಯಾಂಡ್‌ಲೈನ್‌ಗಳ ಒಟ್ಟಾರೆ ಚಂದಾದಾರರು
ಮೊಬೈಲ್
ನಗರ ಪ್ರದೇಶದಲ್ಲಿ 553.91 ಮಿಲಿಯನ್ ಬಳಕೆದಾರರು
ಗ್ರಾಮೀಣ ಪ್ರದೇಶದಲ್ಲಿ 336.70 ಮಿಲಿಯನ್ ಬಳಕೆದಾರರು
ಲ್ಯಾಂಡ್‌ಲೈನ್ ಬಳಕೆದಾರರು
ನಗರ ಪ್ರದೇಶದಲ್ಲಿ 23.87 ಮಿಲಿಯನ್
ಗ್ರಾಮೀಣ ಪ್ರದೇಶದಲ್ಲಿ 6.99 ಮಿಲಿಯನ್ ಬಳಕೆದಾರರು
ಇಂಟರ್‌ನೆಟ್
ಇಂಟರ್‌ನೆಟ್ ಒಂದು ರೀತಿ ವರದಾನ ಏಕೆಂದರೆ 14.81 ಮಿಲಿಯನ್ ಜನ ಇದಕ್ಕೆ ಚಂದಾದಾರರಾಗಿದ್ದಾರೆ.
ನಿಮ್ಮ ದುಡ್ಡು, ನಿಮ್ಮ ಸಿಮ್ಮು, ಕಂಪನಿಗೆ ತಲೆನೋವು
ಮೊಬೈಲ್ ಸಿಮ್‌ಗೆ ನಮ್ಮಲ್ಲಿ ಡಿಮ್ಯಾಂಡ್. ಎಷ್ಟರ ಮಟ್ಟಿಗೆ ಅಂತೀರ? ಇರುವ ಲ್ಯಾಂಡ್‌ಲೈನ್ ಸರಣಿ ನಂಬರ್‌ಗಳೆಲ್ಲಾ ಮೊಬೈಲ್ ಸಿಮ್‌ಗೆ ಹೊಸ ನಂಬರ್‌ಗಳಾಗಿ ರವಾನೆಯಾಗುತ್ತಿವೆ. ಪೂರೈಸಲು ಇನ್ನೂ ಕಂಪನಿಗಳು ಹರ ಸಾಹಸ ಮಾಡುತ್ತಿವೆ. ಇದರ ಮಧ್ಯೆ ಬಳಸದ ಸಿಮ್‌ನ ಕಾಟ ಬೇರೆ.
ಸಿಮ್ ಕೊಂಡು ಹಾಗೇ ಎತ್ತಿಟ್ಟವರು ಇಪ್ಪತ್ತು ಕೋಟಿಗೂ ಅಧಿಕ. ಅಂದರೆ ದೇಶದಲ್ಲಿ ಸಿಮ್ ಪಡೆದ ಕಾಲು ಭಾಗದಷ್ಟು ಜನ ಸಿಮ್ ಬಳಸುತ್ತಲೇ ಇಲ್ಲ. ಇದರಲ್ಲಿರುವ ಹಣ 1,289 ಮಿಲಿಯನ್ ರೂ. ಅಂದರೆ ನೀವು ನಂಬಲೇ ಬೇಕು.
ಇವರೇಕೆ ಹೀಗೆ?
ಹೌದು. ಮೊಬೈಲ್ ಇಟ್ಟುಕೊಳ್ಳುವುದು ಶ್ರೀಮಂತಿಕೆ ಸಂಕೇತ ಅನ್ನುವ ಕಾಲವೊಂದಿತ್ತು. ಈಗ ಅದು ದೈನಿಕ ಅಗತ್ಯ. ಮೂಲ ಭೂತ ಸೌಕರ್ಯದಂತಾಗಿದೆ. ಆದರೆ ಎರಡೆರಡು ಸಿಮ್, ಮೊಬೈಲ್‌ಗಳನ್ನು ಇಟ್ಟುಕೊಳ್ಳುವುದು ಈಗ ಪ್ರೇಸ್ಟೀಜ್, ಅನಿವಾರ್ಯ ಎನ್ನುವ ಸ್ಥಿತಿಯಲ್ಲಿದ್ದೇವೆ. ಕೆಲವರು ಶೋಕಿಗೆ ಇನ್ನೂ ಕೆಲವರು ತಮ್ಮ ಖಾಸಗಿ ಬಳಕೆಗಾಗಿ ಹೊಸ, ಹೊಸ ಸಿಮ್‌ಗಳನ್ನು ಬದಲಾಯಿಸುತ್ತಾರೆ. ಆದರೆ ಕೆಲಸವಾದ ನಂತರ ಹಳೇ ಸಿಮ್‌ಗಳ ಕಡೆ ಮುಖ ತಿರುಗಿಸುವುದಿಲ್ಲ. ಅದರಲ್ಲಿರುವ ಹಣ ಏನಾಯ್ತು ಎನ್ನುವ ಗೋಜಿಗೆ ಹೋಗುವುದಿಲ್ಲ.
ದೇಶದಲ್ಲಿನ ಲೆಕ್ಕಾಚಾರ ನೋಡೋಣ. ಭಾರತದಲ್ಲಿ 90.7 ಕೋಟಿ ಮೊಬೈಲ್ ಸಿಮ್‌ಗಳು ಮಾರಾಟವಾಗಿವೆ. ಸ್ವಲ್ಪ ನಿಲ್ಲಿ. ಈ ಅಂಕಿಅಂಶದ ಆಧಾರ ಮೇಲೆ ಇಷ್ಟು ಜನರಲ್ಲಿ ಮೊಬೈಲ್‌ಗಳಿವೆ ಎಂದು ವ್ಯಾಖ್ಯಾನಿಸಲು ಬರುವುದಿಲ್ಲ. ಅದರಲ್ಲೂ ಡ್ಯುಯಲ್ ಸಿಮ್ ಸೆಟ್, ಮೂರು ಸಿಮ್ ಹಾಕುವ ಸೆಟ್ ಬಂದ ನಂತರ ಒಬ್ಬರು ಒಂದಕ್ಕಿಂತ ಹೆಚ್ಚಿ ಸಿಮ್ ಹೊಂದಿರುವುದು ಸಾಮಾನ್ಯವಾಗಿದೆ. ಸಿಮ್ ಮಾರಾಟ ಹೆಚ್ಚಿದ್ದರೂ ಮೊಬೈಲ್ ಸೇವಾದಾತರು ಅರ್ಥಾತ್ ಟಿಎಸ್‌ಪಿಗಳ ಗೊಣಗಾಟ ಹೆಚ್ಚುತ್ತಿದೆ. ಯಾಕೆ ಗೊತ್ತೇ?
ವಾಸ್ತವವಾಗಿ ಸಿಮ್ ಬಳಕೆಯಾಗುತ್ತಿರುವುದು ಕೇವಲ 69.9 ಕೋಟಿ ಮಾತ್ರ. ಅಂದರೆ ಮಾರಾಟದ ಶೇ. 77 ಮಾತ್ರ. ಕಳೆದ ಸೆಪ್ಟೆಂಬರ್‌ನ ಲೆಕ್ಕಾಚಾರದಂತೆ ಆ ತಿಂಗಳಿನಲ್ಲಿ 20.8 ಕೋಟಿ ಸಿಮ್‌ಗಳು ಕನಿಷ್ಟ ಒಂದು ಬಾರಿಯೂ ಚಾಲನೆಗೆ ಬಂದಿಲ್ಲ. ಇದು ಟಿಎಸ್‌ಪಿಗಳ ಹುಬ್ಬುಗಂಟಿಕ್ಕುವಂತೆ ಮಾಡಿದೆ.
ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೂಡ ಈ ವಿದ್ಯಮಾನವನ್ನು ಗಮನಿಸಿ ತಲೆ ಕೆಡಿಸಿಕೊಂಡಿದೆ. ಕನಿಷ್ಟ ಒಂದು ತಿಂಗಳಿನಿಂದ ಚಾಲನೆಯಲ್ಲಿಲ್ಲದ ಸಿಮ್‌ಗಳನ್ನು ಕಂಪನಿಗಳು ವಾಪಾಸು ಪಡೆದು ಆ ಸಂಖ್ಯೆಯನ್ನು ಮತ್ತೂಬ್ಬರಿಗೆ ಕೊಡಲಿ ಎಂದು ಹೇಳುವಂತಿಲ್ಲ. ಈಗ ಕಾನೂನು ಬದಲಾಗಿದೆ. ಇದರ ಎರಡು ನಿಯಮಗಳು ಈ ಆದೇಶವನ್ನು ಕಾನೂನುಬಾಹಿರ ಮಾಡಿಬಿಡಬಲ್ಲದು.
ಲೈಫ್ ಟೈಮ್ ಇದೆ ಎಚ್ಚರ
2006ರ 43ನೇ ಟ್ರಾಯ್ ಟಾರೀಫ್ ತಿದ್ದುಪಡಿಯ ಪ್ರಕಾರ ಜೀವನಪರ್ಯಂತ ಗ್ರಾಹಕ ಯೋಜನೆ ಜಾರಿಗೆ ಬಂದಿದೆ. ಈ ಲೈಫ್ ಟೈಮ್ ಪ್ಲಾನ್ ಪ್ರಕಾರ ಗ್ರಾಹಕ ಯಾವುದೇ ಮಾದರಿಯ ದೂರವಾಣಿ ವ್ಯವಹಾರ ನಡೆಸದಿದ್ದರೂ ಆತನ ಸಿಮ್ ವ್ಯಾಲಿಡಿಟಿ ಕೊನೆಪಕ್ಷ ಆ ಸೇವಾ ಕಂಪನಿಯ ಪರವಾನಗಿ ಇರುವವರೆಗೆ ಚಾಲನೆಯಲ್ಲಿರುತ್ತದೆ. ಇದನ್ನು ಟಾರಿಫ್ ಆರ್ಡರ್‌ನ 48ನೇ ತಿದ್ದುಪಡಿಯಲ್ಲಿ ಮತ್ತೂಮ್ಮೆ ಸ್ಪಷ್ಟಪಡಿಸಲಾಗಿದೆ.
ಅಷ್ಟಕ್ಕೂ ತಣ್ಣಗಿರುವ ಸಿಮ್ ಕುರಿತಾಗಿ ಕಂಪನಿಗಳೇಕೆ ಅಸಮಾಧಾನಗೊಂಡಿವೆ ಅದಕ್ಕೆ ಈ ಅಂಶಗಳನ್ನು ನೋಡಬೇಕಾಗುತ್ತದೆ. ಟಿಎಪಿಗಳು 2 ಮಾದರಿಯ ದಾಖಲೆಗಳನ್ನು ನಿರ್ವಹಿಸಬೇಕಾಗುತ್ತದೆ. ಹೋಮ್‌ಲೊಕೇಷನ್ ರಿಜಿಸ್ಟರ್ ಅಂದರೆ ಹೆಚ್‌ಎಲ್‌ಆರ್ ಅಂತ. ಇದರಲ್ಲಿ ಸಿಮ್‌ನಿಂದ ಹೊರಹೋದ ಕರೆ, ಎಸ್‌ಎಂಎಸ್ ದಾಖಲೆಗಳು ನಮೂದಾಗುತ್ತವೆ.
ಇನ್ನೊಂದು ವಿಸಿಟರ್ ಲೊಕೇಷನ್ ರಿಜಿಸ್ಟರ್(ವಿಎಲ್‌ಆರ್). ಇದು ಹೊರಗಿನಿಂದ ಬಂದ ದೂರವಾಣಿ ಮಾಹಿತಿಯನ್ನು ಸಂಗ್ರಹಿಸುತ್ತದೆ. ಮೊಬೈಲ್ ಸೇವಾದಾತ ಸಿಮ್ ಚಾಲನೆಯಲ್ಲಿಲ್ಲದಿದ್ದರೂ ಒಮ್ಮೆ ಮಾರಾಟ ಮಾಡಿದ ಮೊಬೈಲ್ ಸಂಖ್ಯೆಗಳು ಡಿ ಆ್ಯಕ್ಟೀವ್ ಆಗುವವರೆಗೆ ಈ ಸಿಮ್ ಮಾಹಿತಿಗಾಗಿ ಜಾಗ ಮೀಸಲಿಡಲೇಬೇಕು.
ಇನ್ನೊಂದು ಮುಖ್ಯ ಅಂಶವೆಂದರೆ, ಸಿಮ್ ಸಂಖ್ಯೆ ಹೆಚ್ಚಿದಂತೆಲ್ಲ ಹೊಸ ಹೊಸ ಸರಣಿಯನ್ನು ದೇಶದ ದೂರವಾಣಿ ಇಲಾಖೆ ಡಿಓಟಿ ಜಾರಿಗೊಳಿಸಬೇಕಾಗುತ್ತದೆ. ಪ್ರಸ್ತುತ ಮೊಬೈಲ್ ಸಿಮ್ ಬೇಡಿಕೆ ವಿಪರೀತವಾಗುತ್ತಿರುವುದರಿಂದ ಅದರ ಕೈಯಲ್ಲಿರುವ ಸರಣಿಗಳು ಖಾಲಿಯಾಗುತ್ತಿವೆ. ಹಾಗಾಗಿ ಸ್ಥಿರ ದೂರವಾಣಿಗೆ ಮೀಸಲಿರಿಸಿದ ಸರಣಿಯನ್ನು ಇತ್ತ ನೀಡುವ ಚಿಂತನೆಯೂ ಇದೆ.
ಈಗಾಗಲೇ ಸ್ಥಿರ ದೂರವಾಣಿ ಬೇಡಿಕೆ ಕಳೆದುಕೊಂಡ ಹೀರೋನಂತಾಗಿದೆ. ಇದರಿಂದ ಸರಣಿ ಬಳಸಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ತಕ್ಷಣ ಈ ಕ್ರಮ ತೆಗೆದುಕೊಳ್ಳುವುದಕ್ಕಿಂತ ಬಳಕೆಯಲ್ಲಿಲ್ಲದ ಸಿಮ್ ಅನ್ನು ಪುನರ್ಬಳಕೆಗೆ ಒದಗಿಸಿದರೂ ಸಮಸ್ಯೆಯ ಪರಿಹಾರ ಸಿಗಬಲ್ಲದು.
ಸಾರಾಸಗಟಾಗಿ ಈ ಕೆಲಸ ಮಾಡುವುದು ಕೂಡ ಕಾನೂನು ತೊಡಕುಗಳನ್ನು ಸೃಷ್ಟಿಸುತ್ತದೆ. ಈಗಾಗಲೇ ಹಲವು ಕಂಪನಿಗಳು ಡಿ ಆ್ಯಕ್ಟೀವ್ ಸಿಮ್‌ಗಳನ್ನು ಹೊಸ ಗ್ರಾಹಕರಿಗೆ ನೀಡುತ್ತವೆ. ಅಧ್ಯಯನಗಳ ಪ್ರಕಾರ, 1,289 ಮಿಲಿಯನ್ ರೂಪಾಯಿ ಟಾಕ್‌ಟೈಮ್ ಇಂತಹ ಸತ್ತ ಸಿಮ್‌ಗಳಲ್ಲಿ ಜತನವಾಗಿದೆ. ಇದನ್ನೇ ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ಒಂದು ಸಿಮ್‌ನಲ್ಲಿ ಆರು ರೂ. ಟಾಕ್‌ಟೈಮ್ ಅಡಕವಾಗಿದೆ. ಇದರ ನಿರ್ವಹಣೆ ಹೇಗೆ? ಇದನ್ನು ಯಾರು ಬಹಳಬೇಕು? ಕಂಪನಿಯೋ.. ಗ್ರಾಹಕನೋ...? ಉತ್ತರ ಸಿಗದ ಪ್ರಶ್ನೆಗಳು ಇವು.
ಈ ಸಿಮ್ ಏನು ಮಾಡಬೇಕು?
ಈ ನಿಟ್ಟಿನಲ್ಲಿ ಟ್ರಾಯ್ ಡಿ ಆ್ಯಕ್ಟೀವ್ ಸಿಮ್‌ಗಳ ಸಂಬಂಧವಾಗಿಯೇ ಹೊಸ ನಿಯಮ ಜಾರಿಗೆ ತರಲು ಚಿಂತಿಸಿದೆ. ಈಗಾಗಲೇ ಅದು ಕರಡು ಮಾಹಿತಿಯನ್ನು ಎಲ್ಲ ಟಿಎಸ್‌ಪಿಗಳಿಗೆ ಹಾಗೂ ಗ್ರಾಹಕ ಮತ್ತು ಗ್ರಾಹಕಪರ ಸಂಘಟನೆಗಳ ಪ್ರತಿಕ್ರಿಯೆಗೆ ಆಹ್ವಾನ ನೀಡಿದೆ. ಈ ಸಂಬಂಧ ಪ್ರಶ್ನೆಗಳು ಹಲವು. ಸಿಮ್ ಡಿ ಆ್ಯಕ್ಟೀವ್‌ಗೆ ನಿಗದಿಪಡಿಸಬಹುದಾದ ಸಮಯ ಯಾವುದು? 30 ದಿನದಿಂದ ಆರಂಭಿಸಿ ಆರು ತಿಂಗಳವರೆಗಿನ ಸಮಯವನ್ನು ಹೇಳಬಹುದು. ಒಂದು ಸಿಮ್‌ನಲ್ಲಿ ಟಿಎಸ್‌ಪಿ ಕನಿಷ್ಟ ಆರು ತಿಂಗಳಿಗೆ ಅನ್ವಯವಾಗುವಂತೆ ವ್ಯಾಲಿಡಿಟಿ ಹಾಗೂ ಪ್ಲಾನ್ ಕೊಡುವಾಗ ಅದಕ್ಕಿಂತ ಮುಂಚಿತ ಅವಧಿಗೆ ಸಿಮ್ ಸೇವೆ ನಿಲ್ಲಿಸುವುದು ಸಮರ್ಪಕವಲ್ಲ ಎಂದು ಗ್ರಾಹಕ ಪರ ಧ್ವನಿಗಳು ವಾದಿಸಿವೆ.
ಏಕೆಂದರೆ ಇಲ್ಲಿದೆ ಅದಕ್ಕೆ ಉದಾಹರಣೆ- ವಿದೇಶಿ ಪ್ರವಾಸದಲ್ಲಿರುವ ಗ್ರಾಹಕ ಒಂದೆರಡು ತಿಂಗಳು ಮರಳದಿದ್ದ ಮಾತ್ರಕ್ಕೆ ಆತನ ಐಡೆಂಟಿಟಿಗಳಲ್ಲಿ ಒಂದಾದ ಸಿಮ್ ಸಂಖೆಯನ್ನು ಬೇರೆಯವರಿಗೆ ಕೊಡುವುದು ಉಚಿತವೇ? ಇದು ಸರಿಯಲ್ಲ ಎನ್ನುವುದಾದರೆ ಸಿಮ್ ಬಳಸದೇ ಇರಲು ಕಾರಣ ಗೊತ್ತಿಲದೇ ಸೇವೆ ನಿಲ್ಲಿಸುವುದರಲ್ಲೂ ಅರ್ಥವಿಲ್ಲ.
ಯಾವುದರ ಆಧಾರದ ಮೇಲೆ ಸಿಮ್ ಸುಸ್ತನ್ನು ಲೆಕ್ಕ ಹಾಕುವುದು ಎಂಬುದು ಕೂಡ ಸ್ಪಷ್ಟವಾಗಿ ನಿರ್ಧಾರವಾಗಬೇಕಾಗಿದೆ. ಒಳಬರುವ ಸಂದೇಶ ಈ ಪರಿಶೋಧನಾ ಪರಿಕರಗಳಲ್ಲಿ ಸೇರಬಾರದು ಎಂಬ ವಾದವಿದೆ. ಕೆಲವು ಟಿಎಸ್‌ಪಿಗಳು ತಿಂಗಳಲ್ಲಿ ಕನಿಷ್ಟ ಒಂದು ನಿಮಿಷಕ್ಕಿಂತ ಕಡಿಮೆಯದಲ್ಲದ ಕರೆ ಸೇವೆ ನಡೆದಿರಬೇಕು ಎಂಬ ಮಾತನ್ನು ಉಲ್ಲೇಖೀಸಿವೆ.
ಟ್ರಾಯ್ ಸಲಹೆ ನಿರೀಕ್ಷಿಸಿರುವ 10 ಮಾದರಿಯ ಮಾನದಂಡಗಳಲ್ಲಿ ಕರೆಗಳ ಹೊರತಾಗಿ ಸಿಮ್ ಇರುವ ಸೆಟ್ ಚಾಲ್ತಿಯಲ್ಲಿರುವುದು ಕೂಡ ಸೇರಿದೆ. ದೇಶದ ನೈಲ್ಸೆನ್ ಸಂಸ್ಥೆ ಅಧ್ಯಯನದ ಪ್ರಕಾರ ದೇಶದಲ್ಲಿ 7.1 ಕೋಟಿ ಚಂದಾದಾರರು ಮಲ್ಟಿ ಸಿಮ್ ಸೆಟ್‌ಗಳನ್ನು ಬಳಸುತ್ತಿದ್ದಾರೆ. ಶೇ. ಈ ಸಂಖ್ಯೆ ಜ್ವರಗತಿಯಲ್ಲಿ ಏರುತ್ತಿದೆ!
ಈಗಿನ ಮೊಬೈಲ್ ನೆಟ್ ಕಾಲದಲ್ಲಿ ಡಾಟಾ ವರ್ಗಾವಣೆ, ಕೊನೆಗೆ ಸೆ³ಷಲ್ ಟಾರಿಫ್ ರೀಚಾರ್ಜ್ ನಡೆದಿದ್ದರೂ ಅಂಥ ಸಿಮ್‌ಗಳನ್ನು ಬದುಕಿರುವ ಸಾಲಿನಲ್ಲಿ ಸೇರಿಸಬೇಕು ಎಂದು ಪ್ರತಿಪಾದಿಸಲಾಗಿದೆ.
ನಮ್ಮಲ್ಲಿ ಈಗಲೂ 180 ದಿನ ಕ್ರಿಯಾಶೀಲವಾಗಿಲ್ಲದ 55 ಮಿಲಿಯನ್ ಸಿಮ್‌ಗಳಿವೆ. ಇವುಗಳನ್ನು ಟಿಎಸ್‌ಪಿ ಮುಟ್ಟುಗೋಲು ಹಾಕಿಕೊಳ್ಳುತ್ತವೆ ಎಂದರೂ ಅವುಗಳಲ್ಲಿರುವ ಟಾಕ್‌ಟೈಮ್ ಯಾವುದೇ ಸೇವೆ ಕೊಡದ ಮೊಬೈಲ್ ಕಂಪನಿಗಳ ಬೊಕ್ಕಸ ಸೇರಬೇಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಎಂದಿನಂತೆ ಟಿಎಸ್‌ಪಿಗಳಲ್ಲಿ ಬಹುಸಂಖ್ಯಾತರು ಅದು ನಮಗೆ ಸಿಗಬೇಕು ಎಂದು ವರಾತ ಹಚ್ಚಿದ್ದಾರೆ. ಈ ಹಣವನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲಾಗದಿದ್ದರೆ ಟೆಲಿಕಮ್ಯುನಿಕೇಷನ್ ಕನ್ಸೂ$Âಮರ್‌ಗಳ ಎಜುಕೇಷನ್ ಮತ್ತು ಪೊ›ಟೆಕ್ಷನ್ ಫಂಡ್ ಟಿಸಿಇಪಿಎಫ್ಗೆ ವರ್ಗಾಯಿಸಬಹುದಲ್ಲ ಎಂಬ ಪ್ರಶ್ನೆಗೆ ಟ್ರಾಯ್ ಮುಂದೆ ಇದೆ.
ಸಿಮ್ ಬಳಕೆ ಮತ್ತು ಸಿಮ್‌ನಲ್ಲಿರುವ ಹಣ ಠೇವಣಿಯಂತೆ ಇದೆ.
ಯಾರ ದುಡ್ಡು ಯಾರ ಜೇಬಿಗೋ ನೋಡಬೇಕು.