ಡಾ.ಕೆ.ಪಿ.ಗುರುಸ್ವಾಮಿ | Feb 05, 2013
ರೆಪೋ ಇಳೀತು. ಸಾಲ ಸುಲಭವಾಯ್ತು. ಅದೇನೋ ಖರೆ. ಆದರೆ ಇದರಿಂದ ಸಾಮಾನ್ಯ ಗ್ರಾಹಕರಿಗೆ ಏನು ಲಾಭ?
ಇನ್ನು ಮಂದೆ ನಿರಾಳ. ಸಾಲ ಸುಲಭ; ಬಡ್ಡಿ ಇಳಿತ. ಏಕೆಂದರೆ ಆರ್‌ಬಿಐ ರೆಪೋ .25ರಷ್ಟು ಇಳಿಸಿದೆ. ಈ ಕಾರಣಕ್ಕೆ ಗೃಹ, ವಾಹನ ಸಾಲಗಳೆಲ್ಲವೂ ಚೀಪ್. ಹೀಗೆ ಆರ್‌ಬಿಐ ರೆಪೋ ರೇಟು ಇಳಿಸಿದ ಮೇಲೆ ಸಾಲ ಸುಲಭ ಎಂದುಕೊಂಡರೆ ಸುಳ್ಳು. ಇದು ಆರ್‌ಬಿಐ ಮತ್ತು ಬ್ಯಾಂಕ್‌ಗಳು ಮಾಡುತ್ತಿರುವ ತ್ತೈಮಾಸಿಕ ಕಸರತ್ತು. ಆರ್‌ಬಿಐ ಹಣದುಬ್ಬರವನ್ನು ಶೇ. 6.8 ತಗ್ಗಿಸಲು ಮಾಡುತ್ತಿರುವ ಕಸರತ್ತು ಇದಂತೆ.
ಕಸರತ್ತಿನಿಂದ ಸಾಮಾನ್ಯ ಗ್ರಾಹಕರಿಗೆ ಏನು ಲಾಭ?
ದೇವರಾಣೆ ಏನೂ ಲಾಭ ಇಲ್ಲ. ರಿಪೋ ಇಳಿಸಿದ ಮೇಲೆ ಬ್ಯಾಂಕ್‌ಗಳ ಠೇವಣಿ ಮೇಲಿನ ಬಡ್ಡಿ ದರ ಇಳಿಸುವ ಯೋಚನೆ ಮಾಡುತ್ತಿದೆ. ಅಂದರೆ ನೀವು ಠೇವಣಿ ಇಡುವ ಯೋಚನೆ ಮಾಡಿದ್ದರೆ ರಿಪೋ ಪರಿಣಾಮ ಬಡ್ಡಿಯ ಮೇಲೆ ಆಗುತ್ತದೆ. ತಕ್ಷಣವೇ ಠೇವಣಿ ಇಟ್ಟರೆ ಬಚಾವ್. ಇಲ್ಲವಾದರೆ ಅರ್ಧದಿಂದ ಶೇ. ಕಾಲರಷ್ಟು ಬಡ್ಡಿಗಳು ಇಳಿಯುತ್ತವೆ.
ರೆಪೋ ಇಳಿಸಿದರೆ ಯಾರಿಗೆ ಲಾಭ?
ಇಂದು ಭಾರತದ ಎಲ್ಲಾ ಬ್ಯಾಂಕ್‌ಗಳಲ್ಲಿ 82ಲಕ್ಷ ಕೋಟಿ. ಠೇವಣಿಗಳಿವೆ. ಇದರಲ್ಲಿ 45ಲಕ್ಷ ಕೋಟಿ ಸಾಲ ಕೊಟ್ಟಿವೆ. ಇನ್ನೂ 6ಲಕ್ಷ ಕೋಟಿ ಸಾಲ ಕೊಡಬಹುದು. ಅದಕ್ಕೆ ಗ್ರಾಹಕರು ಮುಂದೆ ಬರುತ್ತಿಲ್ಲ ಅನ್ನೋ ಆರೋಪವೂ ಇದೆ. ಗ್ರಾಹಕರನ್ನು ಸೆಳೆಯ ಮಾಡಿರುವ ತಂತ್ರ ಎಂದರೆ ರೆಪೋ ಇಳಿಕೆ.
ಏನೂ ನಿರೀಕ್ಷಿಸದ ಗ್ರಾಹಕನಿಗೆ ಇದು ಬರೆ ಎಳೆದಂತೆ. ಏಕೆಂದರೆ ರೆಪೋ ಇಳಿದ ನಂತರ ಆತ ಠೇವಣಿ ಇಡಲು ಬಂದರೆ ಬ್ಯಾಂಕ್‌ಗಳು ಬಡ್ಡಿ ಇಳಿಸುತ್ತವೆ. ಆದರೆ ಹೆಚ್ಚಿನ ಲಾಭ ಇರುವುದು ಮನೆ, ವಾಹನ ಸಾಲ ಪಡೆಯುವವರಿಗೆ. ಆರ್‌ಬಿಐ ಹೇಳಿರುವುದು ಇದನ್ನೇ. ಹೆಚ್ಚು, ಹೆಚ್ಚು ಸಾಲ ಕೊಡಿ ಅಂಥ. ಸಾಲ ಕೊಡುವುದು ಎಂದರೆ ಮನೆ ಕೊಳ್ಳುವ ಹಸಿವು ಇರುವವರಿಗೆ. ಅರ್ಥಾತ್ ಹೊಟ್ಟೆ ತುಂಬಿದವರಿಗೆ, ಸ್ವಲ್ಪ ಮಟ್ಟಿನ ಉಳ್ಳವರಿಗೆ. ಆದರೆ ಸಾಮಾನ್ಯ ಗ್ರಾಹಕರಿಗೆ ಏನಿದೆ ಲಾಭ? ಗೊತ್ತಿಲ್ಲ. ಗ್ರಾಮೀಣ ಪ್ರದೇಶದವರಿಗೆ ಆಗುತ್ತದೆಯೇ ಪ್ರಯೋಜನಾ? ಏನೇನು ಇಲ್ಲ.
.25 ರೆಪೋ ಇಳಿಕೆಯಿಂದ ಬ್ಯಾಂಕ್‌ಗಳಿಗೆ ದಿಲ್ ಖುಷ್ ಆಗಿವೆ. ಏಕೆಂದರೆ ಕಟ್ಟುವ ಬಡ್ಡಿಯಲ್ಲಿ ಇಳಿಕೆಯ ಆಯಿತಲ್ಲ ಅಂಥ. ಹಿಂದೆ ಆರ್‌ಬಿಐ. ರೆಪೋ ಮೇಲಿನ ಬಡ್ಡಿ ಶೇ.8ರಷ್ಟು ಇತ್ತು. ಈಗ 7.75. ಇದರ ಬೆನ್ನಲ್ಲೇ ನಗದು ಮೀಸಲು ಅನುಪಾತ ಶೇ. ನಾಲ್ಕು ಕಾಲು ಇತ್ತು ಈಗ ನಾಲ್ಕಕ್ಕೆ ಇಳಿಸಿದೆ. ಇದರಿಂದ ಬ್ಯಾಂಕ್‌ಗಳು ಉಳಿದ 18 ಸಾವಿರ ಕೋಟಿ ವಾಪಸ್ಸು ಬಳಸಬಹುದು. ಇದನ್ನೂ ಸಾಲವಾಗಿ ಕೊಡಿ ಅಂತ ಆರ್‌ಬಿಐ ಹೇಳಿದೆ. ಜೊತೆಗೆ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಶೇ.2ರಷ್ಟು ಇದ್ದದ್ದು, ಈಗ 4ರಷ್ಟು ಏರಿಕೆಯಾಗಿದೆ ಅನ್ನೋದು ಮಹತ್ವದ ವಿಷಯವೇ.
ಠೇವಣಿ ಮೇಲಿನ ಬಡ್ಡಿ ಇಳಿಕೆಮಾಡಿದರೆ ಮತ್ತೇ ಠೇವಣಿ ಸಂಗ್ರಹವಾಗುವ ಸಂಭವವಿರುತ್ತದೆ. ಆಗ ಮತ್ತೆ ಬ್ಯಾಂಕ್‌ಗಳು ಆಡಳಿತ ಮಂಡಳಿ ಸಭೆಯಲ್ಲಿಟ್ಟು ಠೇವಣಿ ಮೇಲಿನ ಬಡ್ಡಿಗಳ ದರ ಹೆಚ್ಚಿಸಿ ಠೇವಣಿ ಸಂಗ್ರಹಕ್ಕೆ ಮುಂದಾಗುತ್ತವೆ. ಹಣ ಇಲ್ಲದೇ ಇದ್ದಾಗ ಹೀಗೆ, ಹಣ ಬಂದಾಗ ಹಾಗೆ ಮಾಡುವುದು ಬ್ಯಾಂಕ್‌ಗಳ ಪ್ರತಿ ವರ್ಷದ ಸರ್ಕಸ್ಸು.
ರೆಪೋ ಅಂದರೆ ಏನು ಗೊತ್ತಾ?
ಬ್ಯಾಂಕ್‌ಗಳಿಗೆ ಹಣದ ಅವಶ್ಯಕತೆ ಬಿದ್ದಾಗ ಆರ್‌ಬಿಐನಿಂದ ಸಾಲ ಪಡೆಯುತ್ತದೆ. ಇದನ್ನು ರೆಪೋ ಅಂತ ಕರೆಯುತ್ತಾರೆ. ರೆಪೋ ಮೇಲಿನ ಬಡ್ಡಿದರ 8 ಇತ್ತು. ಇಳಿಸಿದ ಮೇಲೆ 7.75ರಷ್ಟಾಗಿದೆ.
ಇದರಂತೆ ರಿವರ್ಸ್‌ರೆಪೋ ಅನ್ನೋದೂ ಇದೆ. ಅಂದರೆ ಆರ್‌ಬಿಐಗೆ ಹಣ ಬೇಕಿದ್ದಾಗ ಎಲ್ಲಾ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತದೆ.