ಸುರೇಶ. ಎನ್.ಧಾರವಾಡಕರ | Feb 05, 2013
ಹತ್ತಿ ಬೆಳೆಯೋರು ಇನ್ನು ಮುಂದೆ ಕಣ್ಣೀರು ಇಡಬೇಕಿಲ್ಲ. ಕೀಟ ದಾಳಿಗೆ ಇಲ್ಲಿದೆ ರಾಮಬಾಣ. ಇದನ್ನು ಬಳಸಲು ಮುಂದಾಗಬೇಕು ಅಷ್ಟೇ.
ಹತ್ತಿಗೆ ಕೀಟದ ಕಾಟ ಇದೆ. ಎಷ್ಟೇ ರಾಸಾಯನಿಕ ಔಷಧಿ ಸಿಂಪರಣೆ ಮಾಡಿದರೂ ಕೀಟದ ಬಾಧೆ ಕಡಿಮೆಯಾಗಿಲ್ಲ. ಬಿಟಿ ತಳಿಯಲ್ಲಿ ಕೀಟದ ಕಾಟ ಕಡಿಮೆ. ಆದರೂ ಕೀಟದ ಕಾಟ ನಿಂತಿಲ್ಲ. ಹತ್ತಿ ಬೆಳೆಗಾರರು ಯಾರನ್ನೇ ಕೇಳಿ. ಹೀಗೆ ಕೀಟಕಾಟದ ಬಗ್ಗೆ ಅವಲತ್ತುಕೊಳ್ಳುತ್ತಾರೆ. ಆದರೆ ಜೈವಿಕ ತಂತ್ರಜ್ಞಾನದಿಂದ ಇದಕ್ಕೆ ಪರಿಹಾರ ಇದೆ.
ಒಂದು ಕೀಟದಿಂದ ಇನ್ನೊಂದು ಕೀಟದ ಮೂಲಕ ನಿಯಂತ್ರಿಸುವ ಪರಿಸರಸ್ನೇಹಿ ವಿಧಾನ. ಟ್ರೈಕೋಗ್ರಾಮಾ ಎನ್ನುವ ಅತಿಸಣ್ಣ ಕಣಜ ಹುಳು ಈ ಕೀಟದ ಮೊಟ್ಟೆಯನ್ನು ತಿಂದು ಬದುಕುತ್ತದೆ. ಬೆಳಗಾಂ ಜಿÇÉೆಯ ಬೈಲಹೊಂಗಲ… ತಾಲೂಕಿನಲ್ಲಿರುವ ಪರತಂತ್ರ ಜೀವಿ ಪ್ರಯೋಗಾಲಯ ಸಂಸ್ಥೆಯಲ್ಲಿ ಈ ಟ್ರೈಕೋಗ್ರಾಮಾ ಕೀಟವನ್ನು ಬೆಳೆಸುತ್ತಾರೆ. ಕೀಟಗಳನ್ನು ಬಿಳಿಹಾಳೆಗೆ ಅಂಟಿಸಿ ರೈತರಿಗೆ ನೀಡುತ್ತಾರೆ.
ಹತ್ತಿ ಬೆಳೆ ಮೊಣಕಾಲು ಎತ್ತರ ಬೆಳೆದ ನಂತರ ಈ ಟ್ರೈಕೋಕಾರ್ಡನ್ನು ಹತ್ತಿ ಗಿಡದ ಎಲೆಗಳ ಬುಡಕ್ಕೆ ಕಟ್ಟಬೇಕು ಅಥವಾ ಪಿನ್ ಹಾಕಿ ತಗುಲಿಸಬೇಕು. ಈ ಟ್ರೈಕೋಕಾರ್ಡ್ ಕಟ್ಟುವ ಸಮಯದಲ್ಲಿ ಕಣಜ ಹುಳು ಹಾಳೆಯಲ್ಲಿ ಬಲಿತು ಹೊರಬರಲು ಸಿದ್ಧಗೊಂಡಿರಬೇಕು. ಒಂದು ಎಕರೆಗೆ ಒಂದು ಕಾರ್ಡ್ ಸಾಕು. ಅದಕ್ಕೆ 65ರೂ. ದರ ಇದೆ. ಒಂದು ಕಾರ್ಡನಲ್ಲಿ 16 ರಿಂದ 20 ಭಾಗ ಮಾಡಬಹುದು. ಈ ರೀತಿ ಭಾಗ ಮಾಡಿದ ತುಂಡುಗಳನ್ನು ಕೀಟ ಹೆಚ್ಚು ಕಾಣಿಸುವ ಗಿಡಗಳಲ್ಲಿ ಮೊದಲು ಅಂಟಿಸಬೇಕು. ಇದರಿಂದ ಕೀಟ ಬೇರೆ ಗಿಡಗಳಿಗೆ ಹರಡದಂತೆ ತಡೆಗಟ್ಟಬಹುದಾಗಿದೆ.
ಸವದತ್ತಿ ತಾಲೂಕಿನ ಸಂಗ್ರೇಶಕೊಪ್ಪಗ್ರಾಮದ ರೈತ ಯಲ್ಲಪ್ಪ ಸೋಮಲಿಂಗಪ್ಪ ಅಗಸಿಬಾಗಿಲು ಅವರು ಹತ್ತಿ ಬೆಳೆಗೆ ಬರುವ ಕೀಟದ ನಿಯಂತ್ರಣಕ್ಕೆ ಈ ಟ್ರೈಕೋಕಾರ್ಡ್ ಬಳಸುತ್ತಿ¨ªಾರೆ.
ಟ್ರೈಕೋಕಾರ್ಡ್ ಬಳಸಿದ ನಂತರ, ಹೊಲದಲ್ಲಿ ಕೀಟ ಬಾಧೆಯನ್ನು ಗಮನಿಸುತ್ತಿದ್ದೇನೆ. ಒಂದು ಕೀಟ ಕಣ್ಣಿಗೆ ಬಿದ್ದಿಲ್ಲ. ರಾಸಾಯನಿಕ ಔಷಧಿಯ ಹಣ ಉಳಿತಾಯ ಆಗಿದೆ. ಹೊಲದಲ್ಲಿರುವ ಹತ್ತಿ ಬೆಳೆಗೆ ಕೀಟದ ಕಾಟ ಕಡಿಮೆ ಆಗಿದೆ ಎನ್ನುವ ಖುಷಿಯೂ ಇದೆ. ಇದೊಂದು ಅಡ್ಡ ಪರಿಣಾಮವಿಲ್ಲದ ಪರಿಸರಸ್ನೇಹಿ ವಿಧಾನ ಎನ್ನುತ್ತಾರೆ ಯಲ್ಲಪ್ಪ.
ಈ ವಿಧಾನ ಬಳಸುತ್ತಿರುವುದರಿಂದ ಯಲ್ಲಪ್ಪ ಹೊಲ ಸ್ಥಳಿಯ ರೈತರಿಗೆ ಪಾಠಶಾಲೆಯಂತಾಗಿದೆ. ಯಲ್ಲಪ್ಪ
ಅವರ ಪ್ರಾಯೋಗಿಕ ಜ್ಞಾನ, ವೈಜ್ಞಾನಿಕ ತಾಂತ್ರಿಕತೆ, ಲಘು ಪೋಶಕಾಂಶಗಳು, ಸಾವಯವ ಕೃಷಿ ಕೈಗೊಳ್ಳಲು ರೈತರಿಗೆ ಅಗತ್ಯ ಮಾರ್ಗದರ್ಶನ ಸಿಕ್ಕಂತಾಗಿದೆ.