Thursday, May 23, 2013
Last Updated: 1:03:06 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕೃಷಿ-ವಾಣಿಜ್ಯ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಭೌಗೋಳಿಕ ಸೂಚಕದ ಕಸರತ್ತು
    • ಬಹುಧಾನ್ಯ
      • ಅಡೂರು ಕೃಷ್ಣರಾವ್‌ | Feb 05, 2013

        ಕಷ್ಟದಾಯಕವಾದ ಎಲ್ಲಾ  ವಿಧಿವಿಧಾನ ಅನುಸರಿಸಿ, ಭೌಗೋಳಿಕ ಸೂಚಕ ಪಡೆಯುತ್ತಿರುವ ಸಮುದಾಯಗಳ ತಪ್ಪು ನಂಬಿಕೆ ಏನೆಂದರೆ, ಒಮ್ಮೆ ಅದನ್ನು ಪಡೆದುಕೊಂಡರೆ, ಅದು ತಾನಾಗಿಯೇ ತಮ್ಮ ಉತ್ಪನ್ನದ ಮಾರುಕಟ್ಟೆ ಮತ್ತು ವ್ಯವಹಾರ ರಕ್ಷಿಸುತ್ತದೆ.


        ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಮಲ್ಲಿಗೆ ಹೆಸರುವಾಸಿ. 28,000 ಜನಸಂಖ್ಯೆಯ ತಾಲೂಕು ಕೇಂದ್ರವಾದ ಆ ಊರಿನಲ್ಲಿ ಇತ್ತೀಚೆಗೆ ಎಲ್ಲರಿಗೂ ಸಂಭ್ರಮ. ಯಾಕೆಂದರೆ ಅವರ ಊರಿನ ಹೂವಿಗೆ ಭೌಗೋಳಿದ ಸೂಚಕ ಸಿಕ್ಕಿದೆ.

         ಉಡುಪಿ ಮಲ್ಲಿಗೆಯ ಹಾಗೂ ಮೈಸೂರು ಮಲ್ಲಿಗೆಯ ಬೆಳೆಗಾರರಿಗೂ ಹೀಗೆಯೇ ಸಂಭ್ರಮ. ಪರಿಮಳ ತುಂಬಿದ ಈ ಅಚ್ಚ ಬಿಳಿಯ ಹೂಗಳು ಮಹಿಳೆಯರ ಮುಡಿಗೇರಿ ಅಥವಾ ದೇವರಮೂರ್ತಿ ಅಲಂಕರಿಸಿ, ಸಂಜೆಯ ಹೊತ್ತಿಗೆ ಬಾಡಿಹೋಗುತ್ತವೆ. ಬೇರೆಬೇರೆ ಸ್ಥಳಗಳಲ್ಲಿ ಬೇರೆಬೇರೆ ತಳಿಯ ಕೃಷಿ. ಆಯಾ ಸ್ಥಳದ ತಳಿಯ ವಿಶೇಷ ಗುಣದ (ಪರಿಮಳ, ಆಕಾರ ಇತ್ಯಾದಿ)  ಆಧಾರದಿಂದ ಅದಕ್ಕೆ ಭೌಗೋಳಿಕ ಸೂಚಕ ನೀಡಲಾಗುತ್ತದೆ. ಭಾರತದಲ್ಲಿ ಹಲವು ಸ್ಥಳಗಳಲ್ಲಿ ಮಲ್ಲಿಗೆ ಹೂವನ್ನು ಬೆಳೆಯುತ್ತಾರೆ. ಆದರೆ, ಈ ಮೂರು ಊರುಗಳ ಸಮುದಾಯಗಳು ಮಾತ್ರ ಭೌಗೋಳಿಕ ಸೂಚಕ ಪಡೆದುಕೊಂಡಿವೆ. ಈಗ ಹತ್ತು ವರ್ಷಗಳಿಂದ, ಭೌಗೋಳಿಕ ಸೂಚಕವನ್ನು ಅಧಿಕಾರಿಗಳು ಪ್ರಚಾರ ಮಾಡುತ್ತಿದ್ದು, ವಿವಿಧ ತಳಿ ಹಾಗೂ ವಸ್ತುಗಳಿಗೆ ಅದನ್ನು ಪಡೆಯುವ ಪ್ರಯತ್ನ ಹೆಚ್ಚುತ್ತಿದೆ.

         ಭೌಗೋಳಿಕ ಸೂಚಕವು ಒಂದು ಬೌದ್ಧಿಕ ಸೊತ್ತು. ಒಂದು ವಸ್ತುವಿನ ಭೌಗೋಳಿಕ ವಿಶೇಷತೆಯೇ ಅದಕ್ಕೆ ಆಧಾರ. ಉದಾಹರಣೆಗೆ: ಡಾರ್ಜಿಲಿಂಗ್‌ ಚಹಾ, ಚೆನ್ನಪಟ್ಟಣದ ಮರದ ಗೊಂಬೆಗಳು.  ಇದರ ಉದ್ದೇಶ ಆ ವಸ್ತುಗಳ ಬೇಡಿಕೆ ಹಾಗೂ ಮಾರುಕಟ್ಟೆಯನ್ನು ರಕ್ಷಿಸುವುದು ಮತ್ತು ವಿಸ್ತರಿಸುವುದು. ಇದು ಒಂದು ಸಮುದಾಯಕ್ಕೆ ಸಿಗುವ ಸವಲತ್ತು ವಿನಃ ವ್ಯಕ್ತಿಗಳಿಗೆ ಅಥವಾ ವ್ಯಾಪಾರಿ ಘಟಕಗಳಿಗೆ ಸಿಗುವುದಿಲ್ಲ. ಇಂತಹ ಉತ್ಪನ್ನಗಳು, ಅವು ರೂಪಿತವಾದ ಭೌಗೋಳಿಕ ಸ್ಥಳದ ಹೆಸರನ್ನು ಹೊಂದಿರುತ್ತವೆ.

         ಭೌಗೋಳಿಕ ಸೂಚಕ ಎಂಬುದು ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರದಲ್ಲಿ ಬಳಕೆಯಾಗುವ ಪ್ರಧಾನ ವಿಷಯ. ಹಾಗಿರುವಾಗ, ಹೂಬೆಳೆಗಾರರ ಸಣ್ಣ ತಂಡಕ್ಕೆ ಈ ಹಣೆಪಟ್ಟಿ ಯಾತಕ್ಕೆ? ಹೂವಿನ ಹಡಗಲಿಯ ಮಲ್ಲಿಗೆ ಬೆಳೆಗಾರರಿಗೆ, ತಮ್ಮ ಭೌದ್ಧಿಕ ಸೊತ್ತಿನ ಹಕ್ಕನ್ನು ಬೇರೆ ಯಾವುದೋ ದೇಶದ ಪ್ರಜೆಗಳು ಕದಿಯುತ್ತಾರೆ ಎಂಬ ಭಯವಿದೆಯೇ? ಅಥವಾ ಸ್ಥಳೀಯವಾಗಿ ಯಾರಾದರೂ ಕದಿಯುತ್ತಾರೆ ಎಂಬ ಆತಂಕವೇ ಅಥವಾ ಕರ್ನಾಟಕದ ಇತರ ಪ್ರದೇಶಗಳಲ್ಲಿ ಬೆಳೆದ ಕಡಿಮೆ ಗುಣಮಟ್ಟದ ಮಲ್ಲಿಗೆಯನ್ನು ಹೂವಿನ ಹಡಗಲಿಯ ಮಲ್ಲಿಗೆ ಎಂದು ಮಾರುತ್ತಾರೆಂಬ ಚಿಂತೆಯೇ?

         ಚೆನ್ನೈಯಲ್ಲಿರುವ ಭೌಗೋಳಿಕ ಸೂಚಕ ರಿಜಿಸ್ಟ್ರಿ (ಕಚೇರಿ)ಯು, ಏಪ್ರಿಲ… 2004ರಿಂದೀಚೆಗೆ 178 ಭೌಗೋಳಿಕ ಸೂಚಕಗಳನ್ನು ನೀಡಿದೆ. ಇದನ್ನು ನೀಡುವ ತರ್ಕ ಹಾಗೂ ವಿಧಾನಗಳು ವಿವಾದಗಳನ್ನು ಹುಟ್ಟು ಹಾಕಿವೆ. ಕೆಲವು ವಿವಾದಗಳು ಕೋರ್ಟ್‌ ಮೆಟ್ಟಿಲೇರಿವೆ.

         ಒಂದು ವಿಷಯವಂತೂ ಸ್ಪಷ್ಟ: ಕಷ್ಟದಾಯಕವಾದ ಎÇÉಾ ವಿಧಿವಿಧಾನ ಅನುಸರಿಸಿ, ಭೌಗೋಳಿಕ ಸೂಚಕ ಪಡೆಯುತ್ತಿರುವ ಸಮುದಾಯಗಳ ತಪ್ಪು$ ನಂಬಿಕೆ ಏನೆಂದರೆ, ಒಮ್ಮೆ ಅದನ್ನು ಪಡೆದುಕೊಂಡರೆ, ಅದು ತಾನಾಗಿಯೇ ತಮ್ಮ ಉತ್ಪನ್ನದ ಮಾರುಕಟ್ಟೆ ಮತ್ತು ವ್ಯವಹಾರ ರಕ್ಷಿಸುತ್ತದೆ. ಈಗ ಮಲ್ಲಿಗೆ ಹೂವಿನ ಉದಾಹರಣೆಯನ್ನೇ ಪರೀಕ್ಷಿಸೋಣ. ಹೂವಿನ ಹಡಗಲಿ, ಮೈಸೂರು ಅಥವಾ ಉಡುಪಿಯ ಮಲ್ಲಿಗೆ ಬೆಳೆಗಾರರು ತಮ್ಮ ಉತ್ಪನ್ನವನ್ನು ಬ್ರಾಂಡೆಡ್‌ ಉತ್ಪನ್ನವಾಗಿ ಮಾರುತ್ತಿದಾರೆಯೇ? ಮಹಾನಗರವೊಂದರ ರಸ್ತೆಬದಿಗಳಲ್ಲಿ ಮಲ್ಲಿಗೆ ಮಾರುವ ಮಕ್ಕಳು ಯಾವುದೋ ಊರಿನ ಹೆಸರು ಹೇಳುತ್ತಾ ಮಾರಿದರೆ, ಯಾರಿಗಾದರೂ ನಷ್ಟವಿದೆಯೇ? ಅಂದರೆ, ವಿದೇಶಗಳಲ್ಲಿ ಒಂದು ಉತ್ಪನ್ನಕ್ಕೆ ಭಾರೀ ಬೇಡಿಕೆ ಇ¨ªಾಗ ಭೌಗೋಳಿಕ ಸೂಚಕದಿಂದ ಪ್ರಯೋಜನವಾದೀತು; ಇಲ್ಲವಾದರೆ ಅದೆಲ್ಲ ಶ್ರಮ ವ್ಯರ್ಥವಾದೀತು.
         ಚೆನ್ನೈ ರಿಜಿಸ್ಟ್ರಿಯೂ ಭೌಗೋಳಿಕ ಸೂಚಕ ವಿಷಯದಲ್ಲಿ ಗೊಂದಲದಲ್ಲಿದೆ ಎಂಬುದಕ್ಕೆ ಒಂದು ಉದಾಹರಣೆ: ಪಯ್ಯನೂರಿನ ಪವಿತ್ರ ಉಂಗುರಕ್ಕೆ ನೀಡಲಾದ ಭೌಗೋಳಿಕ ಸೂಚಕ. ಇದನ್ನು ನವಂಬರ್‌ 2012ರಲ್ಲಿ ಬೌದ್ಧಿಕ ಸೊತ್ತಿನ ಮೇಲ್ಮನವಿ ಮಂಡಳಿ ರದ್ದು ಮಾಡಿತು. ಆ ಉಂಗುರವು, ಕೇರಳದ ಕಣ್ಣೂರು ಜಿÇÉೆಯ ಪಯ್ಯನೂರಿನಲ್ಲಿ ತಯಾರಿಸಲಾಗುವ ಉಂಗುರ. ಚಿನ್ನಬೆಳ್ಳಿಯ ವಿಶೇಷ ವಿನ್ಯಾಸದ ಆ ಉಂಗುರವನ್ನು ಅಲ್ಲಿನ ದೇವಸ್ಥಾನದ ಅರ್ಚಕರು ಪೂಜೆ ಮಾಡುವಾಗ ಧರಿಸುತ್ತಿದ್ದರಂತೆ.

         ಕ್ರಮೇಣ, ಆ ಉಂಗುರ ಧರಿಸಿದರೆ ಆಧ್ಯಾತ್ಮಿಕ ಶಕ್ತಿ ಮತ್ತು ಸಂಪತ್ತು ಒದಗುತ್ತದೆ ಎಂದು ಪ್ರಚಾರ ಮಾಡಲಾಯಿತು. ಇದರಿಂದಾಗಿ, ಆ ಉಂಗುರದ ಭಾರೀ ವ್ಯಾಪಾರೀಕರಣ ಆಯಿತು. ಹಲವು ಆಭರಣ ತಯಾರಕರು ತಮ್ಮದು ಅಸಲಿ ಉಂಗುರ ಎಂದು ಮಾರುತ್ತಿ¨ªಾರೆ. ಅವರÇÉೊಬ್ಬರು, ಮದ್ರಾಸ್‌ ಹೈಕೋರ್ಟಿನಲ್ಲಿ ಭೌಗೋಳಿಕ ಸೂಚಕ ವಿರುದ್ಧ ದಾವೆ ಹೂಡಿದರು; ಬೌದ್ಧಿಕ ಸೊತ್ತಿನ ಮೇಲ್ಮನವಿ ಮಂಡಳಿಯಲ್ಲಿಯೂ ಇದನ್ನು ಪ್ರಶ್ನಿಸಿದರು. ಅಂತಿಮವಾಗಿ, 2009ರಲ್ಲಿ ನೀಡಲಾದ ಭೌಗೋಳಿಕ ಸೂಚಕವು ರ¨ªಾಗಿದೆ. ಏಕೆಂದರೆ, ಭೌಗೋಳಿಕ ಸೂಚಕಕ್ಕಾಗಿ ಅರ್ಜಿ ಸಲ್ಲಿಸಿದ್ದ ಸೊಸೈಟಿಯು ಈ ಉಂಗುರಗಳನ್ನು ತಯಾರಿಸುತ್ತಿದ್ದ ಕುಶಲ ಕೆಲಸಗಾರರ ಪರವಾಗಿ ಆ ಅರ್ಜಿ ಸಲ್ಲಿಸಿರಲಿಲ್ಲ.

         ಹಲವಾರು ಕೃಷಿ ಉತ್ಪ$ನ್ನಗಳಿಗೆ ಭೌಗೋಳಿಕ ಸೂಚಕ ಪಡೆಯಲಿಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿದೆ. ಯಾಕೆಂದರೆ, ಸ್ಥಳೀಯ ಮಣ್ಣು ಮತ್ತು ಹವಾಮಾನದಿಂದಾಗಿ ಕೃಷಿ ಉತ್ಪ$ನ್ನಗಳು ವಿಶೇಷ ಗುಣ ಪಡೆದುಕೊಳ್ಳುತ್ತವೆ. ಆದರೆ, ಭೌಗೋಳಿಕ ಸೂಚಕಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಅದರ ಅನುಕೂಲ - ಅನಾನುಕೂಲಗಳ ಬಗ್ಗೆ ಅಧ್ಯಯನ ಅಗತ್ಯ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus