Monday, May 20, 2013
Last Updated: 8:50:18 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕೃಷಿ-ವಾಣಿಜ್ಯ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಾರ್ಪೊರೇಟ್‌ ಜಗತ್ತನ್ನು ಒಲಿಸಿಕೊಳ್ಳುವ ಕಲೆ
    • ಸೂಟು ತೊಟ್ಟುಕೊಂಡರೂ ನಗುವಾ ನಯನ
    • ಆ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುವುದು ತಮಾಷೆಯ ದೃಶ್ಯ.

      • Udayavani | Feb 05, 2013

        ಆ ಜಗತ್ತಲ್ಲಿ ನಿಮ್ಮನ್ನು ಉಳಿಸಿಕೊಳ್ಳುವುದು ತಮಾಷೆ ಮಾತು. ಆ ಜಗತ್ತಲ್ಲಿ ನಿಮ್ಮನ್ನು ಬೆಳೆಸುವುದು ತಮಾಷೆಯ ಸಾಲು. ಆ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುವುದು ತಮಾಷೆಯ ದೃಶ್ಯ.

        ಸೈಕಾಲಜಿಸ್ಟ್‌ಗಳೇ ಹೇಳಿದಂತೆ ನಗು ಒಳಗನ್ನು ಬೆಳಗುತ್ತದೆ. ಮಿಸ್ಟರಿಗಳು, ರಹಸ್ಯಗಳು, ನೋವುಗಳು ನಗುವಲ್ಲಿ ತೆರೆದುಕೊಳ್ಳುತ್ತವೆ. ಅಂತರ ತಗ್ಗುವುದು ನಗುವಿನಿಂದಲೇ. ಬತ್ತಿ ಹೊತ್ತಿಕೊಳ್ಳುವುದು ನಗುವಿನಿಂದ ಉಂಟಾದ ಆಹ್ಲಾದಕರ ವಾತಾವರಣದಿಂದಲೇ. ಮೆಮೋ, ಇ ಮೇಲ್‌, ಆ್ಯನುವಲ್‌ ಲೆಟರ್‌ಗಳಲ್ಲೇ ಮುಳುಗಿರುವ ಈ ಜಗತ್ತಲ್ಲಿ ಎರಡೇ ಸಾಲಿನ ಒಂದು ತಮಾಷೆ ಜೀವಿಸುವ ಹುಮ್ಮಸ್ಸನ್ನು ತುಂಬಬಲ್ಲದು.

        ಅವನು ಅಮೆರಿಕಾದ ಅಧ್ಯಕ್ಷ. ಹೆಸರು ರೇಗನ್‌. ಮತ್ತೂಬ್ಬ ಗೋರ್ಬಚೆವ್‌. ಇವನು ರಷ್ಯಾದ ಪ್ರಧಾನಿ.
        ಎಂಬತ್ತರ ದಶಕದಲ್ಲಿ ಒಂದು ದಿನ ಅವರಿಬ್ಬರೂ ಒಟ್ಟಾಗುತ್ತಾರೆ. ಯಾವುದೋ ಮೀಟಿಂಗಲ್ಲಿ ಒಟ್ಟಾದಾಗ ಸೌಹಾರ್ದ ಭೇಟಿ ನಡೆಯುವ ಸಂದರ್ಭ ಒದಗಿಬರುತ್ತದೆ. ಆ ಹೊತ್ತಿಗಾಗಲೇ ಶೀತಲ ಸಮರ ಇತ್ತಲ್ಲ ಎರಡು ದೇಶಕ್ಕೆ. ತುಂಬಾ ಎಚ್ಚರಿಕೆಯಿಂದ ಮಾತನಾಡಬೇಕು. ಇಬ್ಬರೂ ಸೂಟು ಬೂಟು ತೊಟ್ಟು ಇಡೀ ದೇಶವನ್ನು ಪ್ರತಿನಿಧಿಸುತ್ತಿರುವ ಸನ್ನಿವೇಶ. ಸುಮ್ಮನೆ ಹೀಗೆ ಮಾತನಾಡುತ್ತಿದ್ದ ರೇಗನ್‌ ಆ ಸನ್ನಿವೇಶ ತಿಳಿಗೊಳಿಸಲು ಒಂದು ಕತೆ ಹೇಳುತ್ತಾನೆ.

        ಇಬ್ಬರು ಮಾತನಾಡಿಕೊಳ್ಳುತ್ತಿದ್ದಾರೆ. ಒಬ್ಬ ಅಮೆರಿಕನ್‌. ಇನ್ನೊಬ್ಬ ರಷ್ಯನ್‌. ಅಮೆರಿಕಾದ ರಷ್ಯಾದವನಿಗೆ ಹೇಳುತ್ತಾನೆ.ನಿಮ್ಮ ದೇಶದಲ್ಲಿ ನಮ್ಮ ದೇಶದ ಪ್ರಜೆಗಳಿಗಿರುವಷ್ಟು ಸ್ವಾತಂತ್ರ ಇದೆಯಾ? ನಾನು ಬೇಕಾದರೆ ವೈಟ್‌ಹೌಸಿಗೆ ಹೋಗಿ ಮಿಸ್ಟರ್‌ ಪ್ರಸಿಡೆಂಟ್‌ ನೀನು ಅಮೆರಿಕಾ ದೇಶ ಮುನ್ನಡೆಸುವುದು ನನಗೆ ಇಷ್ಟವಿಲ್ಲ ಅಂತ ನೇರವಾಗಿ ಹೇಳಬಲ್ಲೆ. ಅಷ್ಟು ಸ್ವಾತಂತ್ರವಿದೆ. ಇಷ್ಟು ಹೇಳಿ ಹೆಮ್ಮೆಯಿಂದ ರಷ್ಯಾದವನ ಮುಖ ನೋಡುತ್ತಾನೆ. ನಿಮ್ಮ ದೇಶದಲ್ಲಿ ಹಾಗೆಲ್ಲಾ ಇಲ್ಲ ಅನ್ನೋ ಭಾವ ಅವನ ಮುಖದಲ್ಲಿದೆ. ಆಗ ರಷ್ಯನ್‌ ಮಾತಾಡುತ್ತಾನೆ.

        ಯಾಕಿಲ್ಲ? ನಮಗೂ ಸ್ವಾತಂತ್ರವಿದೆ. ನಾನೂ ನಮ್ಮ ದೇಶದ ಪ್ರಧಾನಿಯ ಕಚೇರಿಗೆ ಹೋಗಿ ಅಮೆರಿಕಾದ ಅಧ್ಯಕ್ಷ ಅಮೆರಿಕಾ ಮುನ್ನಡೆಸುವುದು ನನಗಿಷ್ಟವಿಲ್ಲ ಅಂತ ಕಡ್ಡಿಮುರಿದಂತೆ ಹೇಳಿ ಬರಬಲ್ಲೆ.
        ಅಲ್ಲಿದ್ದವರೆಲ್ಲಾ ಗೊಳ್ಳನೆ ನಗುತ್ತಾರೆ. ಇಲ್ಲಿ ಈ ಕತೆ ಹೇಳಿದ್ದು ಅಮೆರಿಕಾದ ಅಧ್ಯಕ್ಷ ರೇಗನ್‌. ಅವನು ಹೇಳಿದ್ದು ರಷ್ಯಾದ ಅಧ್ಯಕ್ಷರಿಗೆ. ಕಾರ್ಪೋರೇಟ್‌ ಜಗತ್ತಲ್ಲಿ ಹ್ಯೂಮರ್‌ ಹೇಗೆ ಕೆಲಸ ಮಾಡುತ್ತದೆ ಅಂತ ಸೂಕ್ಷ್ಮವಾಗಿ ಈ ಕತೆಯಿಂದ ಕಲಿಯಬೇಕು. ಕಾಮಿಡಿ ಅನ್ನಿಸೋ ಕತೆಯ ಹಿಂದೆ ಏನೇನೋ ಇದೆ. ನಗುವಿದೆ, ಸೂಕ್ಷ್ಮವಾದ ಅಹಂ ಇದೆ, ತನ್ನನ್ನು ತಾನೇ ರೇಗಿಸಿ ಅವನಿಗೆ ಬಿಸಿ ಮುಟ್ಟಿಸುವ ಚಾಕಚಕ್ಯತೆ ಇದೆ, ನಿನ್ನ ದೇಶ ಹಾಗಿದೆ ನಮ್ಮದು ಹೀಗಿದೆ ಅನ್ನೋ ಹೆಚ್ಚುಗಾರಿಕೆ ಇದ್ದರೂ ಇರಬಹುದು.ಆಮೇಲೆ ರೇಗನ್‌ ಥ್ಯಾಂಕ್‌ಗಾಡ್‌! ಗೋರ್ಬಚೆವ್‌ ನಕ್ಕರು ಎಂದರಂತೆ. ನೀವು ಕಾರ್ಪೋರೇಟ್‌ ಜಗತ್ತಲ್ಲಿದ್ದರೆ ಈ ಕತೆಯನ್ನು, ಇದರ ನೀತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು.

        ಕಾರ್ಪೋರೇಟ್‌ ಜಗತ್ತು ಒಂಥರಾ ವಿಚಿತ್ರ ಜಗತ್ತು. ಇಲ್ಲಿ ನಿಜವನ್ನು ಮರೆಮಾಚಿ ಒಂದು ಭಾÅಮಕ ಜಗತ್ತಲ್ಲಿ ಇರಬೇಕಾಗುತ್ತದೆ. ಮನೆಯಲ್ಲಿ ಹೇಗಿದ್ದರೂ ಚೆಂದ ಸೂಟು, ಕಪ್ಪು ಬೂಟು ತೊಟ್ಟಿರಬೇಕಾಗುತ್ತದೆ. ವಿಚಿತ್ರ ಎಂದರೆ ಎಂಪ್ಲಾಯಿಗಳ ವರ್ತನೆ ಹೇಗಿದೆ ಅಂತ ನೋಡಲು, ಚಿಂತಿಸಲು ಕೂಡ ಒಬ್ಬ ಕನ್ಸಲ್ಟೆಂಟ್‌ ಇರುತ್ತಾನೆ. ಅಂಥಾ ಜಗತ್ತಲ್ಲಿ ಲೈಟ್‌ ಹ್ಯೂಮರ್‌ ಇರದೇಹೋದರೆ ವಿಚಿತ್ರ ತಳಮಳ ಮತ್ತು ಸಂಕಟದಲ್ಲಿ ತಿರುಗಾಡುತ್ತಿರಬೇಕಾಗುವ ಸಂದರ್ಭ ಒದಗಿಬರುತ್ತದೆ.
        ಇಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಮತ್ತು  ನಾಯಕತ್ವ ಗುಣದಿಂದ ಎಲ್ಲವೂ ನಿರ್ಧಾರವಾಗುತ್ತದೆ. ಸಿಕ್ಕಾಪಟ್ಟೆ ಆತಂಕದಲ್ಲಿ, ಒತ್ತಡದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು.

        ಬೇರೆ ಯಾವುದೋ ದೇಶದ ಒಂದು ಕಂಪನಿ ತಮಗಿಂತ ವೇಗವಾಗಿ ಅಭಿವೃದ್ಧಿ ಗಳಿಸುತ್ತಿದೆ ಅಂದಾಗ ಆ ಕಡೆಗೆ ಗಮನ ಹರಿಸಬೇಕು. ಅದೊಂದು ಬೇರೆ ದೇಶದ ಕಂಪನಿಯಾಗಿದ್ದು, ಅವುಗಳ ಬಗೆಗೆ ತಿಳಿಯಲು ಅಲ್ಲಿನವರ ಜೊತೆ ಮಾತನಾಡಬೇಕಾಗಬಹುದು. ಹಾಗೆ ಮಾತನಾಡಬೇಕಾದಾಗಲೆಲ್ಲಾ ಕಂಗಾಲಾದರೆ ಕಷ್ಟ.

        ಆಗಾಗ ಬೇರೆಯವರನ್ನು ಮಣಿಸಲು ಯಾರ ಜೊತೆಗಾದರೂ ಕೈಕೈ ಮಿಲಾಯಿಸ ಬೇಕಾಗುತ್ತದೆ. ಆದುದರಿಂದಲೇ ದೊಡ್ಡ ದೊಡ್ಡ ಕಂಪನಿಗಳು ಬೇರೆ ಯಾವುದೋ ಕಂಪನಿಯನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತದೆ. ಆಗೆಲ್ಲಾ ಆ ಹೊಸ ಕಂಪನಿಯವರ ಜೊತೆ ಮಾತಾಡಬೇಕು. ಅಲ್ಲಿ ಎಲ್ಲವೂ ಭಿನ್ನ. ಅಂಥಾ ಹೊತ್ತಲ್ಲಿ ನಗದೇ, ನಗಿಸದೇ ಹೋದರೆ ಸಂಕಷ್ಟ.

        ಸಂಸ್ಕೃತಿ, ದಿರಿಸು, ಆಹಾರ ಎಲ್ಲಾ ವಿಚಾರದಲ್ಲೂ ಹೊಂದಿಕೊಂಡು ಮುಂದುವರಿಯ ಬೇಕಾದ ಅನಿವಾರ್ಯತೆ. ಅನಿವಾರ್ಯ ಸಂದರ್ಭಗಳಲ್ಲಿ ಹೇಗೆ ಹೇಗೆ ಇರಬೇಕೋ ಅದನ್ನೆಲ್ಲಾ ತಿಳಿದುಕೊಳ್ಳಬೇಕಾದದ್ದು ಆಜನ್ಮಸಿದ್ಧ ಹಕ್ಕು. ಒಂದು ವಾತಾವರಣದಿಂದ ಇನ್ನೊಂದು ವಾತಾವರಣಕ್ಕೆ ಹೋದಾಗ ಹೊಂದಿಕೊಂಡು ಬದುಕಬೇಕಾದ ಸಮಯದಲ್ಲಿ, ದಿನನಿತ್ಯದ ಕೆಲಸಗಳಲ್ಲಿ ಆರಾಮಾಗಿ ಇರಬೇಕೆಂದು ಬಯಸುವವರಿಗೆ ಅಮೃತ ಕೊಟ್ಟು ಕಾಪಾಡುವುದು ಸೆನ್ಸ್‌ ಆಫ್ ಹ್ಯೂಮರ್‌.

        ಸೈಕಾಲಜಿಸ್ಟ್‌ಗಳೇ ಹೇಳಿದಂತೆ ನಗು ಒಳಗನ್ನು ಬೆಳಗುತ್ತದೆ. ಮಿಸ್ಟರಿಗಳು, ರಹಸ್ಯಗಳು, ನೋವುಗಳು ನಗುವಲ್ಲಿ ತೆರೆದುಕೊಳ್ಳುತ್ತವೆ. ಅಂತರ ತಗ್ಗುವುದು ನಗುವಿನಿಂದಲೇ. ಬತ್ತಿ ಹೊತ್ತಿಕೊಳ್ಳುವುದು ನಗುವಿನಿಂದ ಉಂಟಾದ ಆಹ್ಲಾದಕರ ವಾತಾವರಣದಿಂದಲೇ. ಮೆಮೋ, ಇ ಮೇಲ್‌, ಆ್ಯನುವಲ್‌ ಲೆಟರ್‌ಗಳಲ್ಲೇ ಮುಳುಗಿರುವ ಈ ಜಗತ್ತಲ್ಲಿ ಎರಡೇ ಸಾಲಿನ ಒಂದು ತಮಾಷೆ ಜೀವಿಸುವ ಹುಮ್ಮಸ್ಸನ್ನು ತುಂಬಬಲ್ಲದು.

        ಹೊಸಬರು ಆಫೀಸು ಸೇರಿದಾಗ, ಬೇರೆ ಯಾವುದೋ ದೇಶದಿಂದ ಬಂದವರ ಜೊತೆ ಕಾಫಿ ಕುಡಿಯಬೇಕೆಂದಾಗ, ಬೇರೆ ಕಂಪನಿಯ ಮಂದಿ ಸಿಕ್ಕಿ ಅವರ ಜೊತೆ ಮಾತನಾಡಲೇಬೇಕಾಗಿ ಬಂದಾಗ ಒಂದು ಸಣ್ಣ ತಮಾಷೆ ಮಾತು ಎಷ್ಟು ಪರಿಣಾಮಕಾರಿಯಾಗಿರುತ್ತದೆ ಅನ್ನೋದು ಅಂಥದ್ದೊಂದು ವಿಚಿತ್ರ ಸನ್ನಿವೇಶದಲ್ಲಿ ಸಿಲುಕಿಕೊಂಡವರಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಆ ಜಗತ್ತಲ್ಲಿ ನಿಮ್ಮನ್ನು ಉಳಿಸಿಕೊಳ್ಳುವುದು ತಮಾಷೆ ಮಾತು. ಆ ಜಗತ್ತಲ್ಲಿ ನಿಮ್ಮನ್ನು ಬೆಸುವುದು ತಮಾಷೆ ಸಾಲು. ಆ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುವುದು ತಮಾಷೆ ದೃಶ್ಯ.
        ಇಷ್ಟೆಲ್ಲಾ ಹೇಳಿದ ಆ ಕಾರ್ಪೋರೇಟ್‌ ಗುರು ಕಾರ್ಪೋರೇಟ್‌ ಜಗತ್ತಿನ ಹ್ಯೂಮರ್‌ ಪ್ರೀತಿ ಕುರಿತು ಇಂಟರೆಸ್ಟಿಂಗ್‌ ಮಾಹಿತಿ ಕೊಟ್ಟರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus