Thursday, June 20, 2013
Last Updated: 12:50:22 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೆ. ಎನ್‌. ಟೇಲರ್‌ ಸೆಕೆಂಡ್‌ ಇನ್ನಿಂಗ್ಸ್‌
      • ಪಿ.ಪಿ. ರೈ | Feb 08, 2013

        ತುಳು ರಂಗಭೂಮಿ ಮತ್ತು ಸಿನೆಮಾ ಬಗ್ಗೆ  ಕಿಂಚಿತ್ತು ಮಾಹಿತಿ ಇದ್ದ ವರಿಗೂ ಚಿರಪರಿಚಿತ ಹೆಸರು ಕೆ. ಎನ್‌. ಟೇಲರ್‌. ಅವರು ತುಳು ರಂಗ ಭೂಮಿಯ ಭೀಷ್ಮ. ರಂಗಭೂಮಿಯಲ್ಲಿ ಅದ್ವಿತೀಯ ಸೇವೆ ಸಲ್ಲಿಸಿರುವ ಇವರ ಹೆಸರು ಈಗಿನ ತಲೆಮಾರಿನ ಯುವಕರಿಗೆ ಗೊತ್ತಿದ್ದರೂ ಅವರ ಅಭಿನಯವನ್ನು ವೀಕ್ಷಿಸುವ ಅವಕಾಶ ಸಿಕ್ಕಿಲ್ಲ. ಯಾಕೆಂದರೆ ಅವರು ಕಳೆದ ಸುಮಾರು ಮೂರು ದಶಕಗಳಿಂದ ಬಣ್ಣದ ಸಂಗದಿಂದ ದೂರವಿದ್ದಾರೆ.

        ಆದರೆ ಈಗ ಒಂದು ಹೊಸ ಸುದ್ದಿ ಸಿಕ್ಕಿದೆ- ಕೆ.ಎನ್‌. ಟೇಲರ್‌ ಈಗ ಮತ್ತೆ ಬಣ್ಣ ಬಳಿದುಕೊಳ್ಳಲು ಉದ್ಯುಕ್ತರಾಗಿದ್ದಾರೆ, ನಾಟಕದಲ್ಲಿ ಅಭಿನಯಿಸಿ ರಂಜಿಸಲಿದ್ದಾರೆ. ಒಂದು ಕಾಲದಲ್ಲಿ ಅವರ ಸೂಪರ್‌ ಹಿಟ್‌ ಆಗಿದ್ದ ನಾಟಕ ಏರೆನಾÉ ನಂಬೊಡಿc  ಮೂಲಕ ಅವರು ತುಳು ರಂಗಭೂಮಿಯಲ್ಲಿ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ ಎಂಬ  ಸುದ್ದಿ ತುಳು ರಂಗಭೂಮಿಯಲ್ಲಿ ಹೊಸ ನಿರೀಕ್ಷೆ, ಕುತೂಹಲ ಉಂಟು ಮಾಡಿದೆ.

        ಕೆ.ಎನ್‌. ಟೇಲರ್‌ ಅವರಿಗೆ ಈಗ 74 ವರ್ಷ ವಯಸ್ಸು. ತುಳು ನಾಟಕ ವನ್ನು ವಿದೇಶಕ್ಕೆ ಕೊಂಡೊಯ್ಯುವ ಮೂಲಕ ಅದಕ್ಕೆ ಅಂತಾರಾಷ್ಟ್ರೀಯ ಸ್ಪರ್ಶ ನೀಡಿದವರು ಇವರು. ತುಳು ನಾಟಕ ರಂಗಕ್ಕೆ ಸರ್ವಾಂಗ ಸೌಂದರ್ಯ ನೀಡಿದ ನಾಟಕಕಾರರಲ್ಲಿ ಮೊದಲ ಸಾಲಲ್ಲಿ ನಿಲ್ಲುವ ಟೇಲರ್‌ ಅವರು ಸುಮಾರು ಏಳು ತುಳು ಸಿನೆಮಾಗಳನ್ನೂ ಮಾಡಿದ ಖ್ಯಾತಿಗೆ ಭಾಜನರು.

        ಟೇಲರ್‌ ಅವರು ಫೆ. 9ರಂದು ಮಂಗಳೂರಿನ ಪುರಭವನದಲ್ಲಿ ಏರೆನಾ  ನಂಬೊಡಿc ನಾಟಕದ ಮೂಲಕ ತುಳು ರಂಗಭೂಮಿಯನ್ನು ತನ್ನ ಎರಡನೆಯ ಇನ್ಸಿಂಗ್ಸ್‌ ಆರಂಭಿಸಲು ಮುಂದಾಗಿದ್ದಾರೆ.

        ವೃತ್ತಿಪರ ತುಳು ರಂಗಭೂಮಿ ಸಿನೆಮಾದ ಬೆನ್ನು ಬೀಳುತ್ತಿರುವ ಮತ್ತು ಗುಣಮಟ್ಟದ ಕೊರತೆಯ ಆರೋಪ ಎದುರಿಸುತ್ತಿರುವ ದಿನಗಳಲ್ಲಿ ಕೆ.ಎನ್‌. ಟೇಲರ್‌ ಅವರು ಮರಳಿ ನಾಟಕದತ್ತ ಮುಖ ಮಾಡಿರುವುದು ಒಂದು ಹೊಸ ಬೆಳವಣಿಗೆ. ಒಂದು ದೀರ್ಘ‌ ವಿರಾಮದ ಬಳಿಕ ತುಳು ರಂಗಭೂಮಿಗೆ ಮರಳುತ್ತಿರುವ ಟೇಲರ್‌ ಮೇಲೆ ದೊಡ್ಡ ಜವಾಬ್ದಾರಿಯೂ ನಿರೀಕ್ಷೆಗಳನ್ನು ಪೂರೈಸುವ ಹೊಣೆಗಾರಿಕೆಯೂ ಇದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ತುಳುವರದ್ದು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus