Sunday, May 19, 2013
Last Updated: 1:09:48 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆಹಾ ಸುಗಂಧವೆ !
    • ಸೆಂಟ್‌ಗಳ ಬಳಕೆ ಒಂದೊಂದು ದೇಶದಲ್ಲಿ ಒಂದೊಂದು ತೆರನಾಗಿದೆ.

      • ಶೀಲಾ ನಟರಾಜ್‌ | Feb 08, 2013

        ಜಗತ್ತಿಗೆ ಆಧುನಿಕತೆ ಪ್ರವೇಶಿಸುವ ಮೊದಲೆ ಪರಿಮಳದ ಸಂವೇದನೆಯನ್ನು ಮಾನವ ಅರಿತಿದ್ದ. ಹೂ, ಹಣ್ಣು , ಸಾಂಬಾರ ಪದಾರ್ಥಗಳಿಂದ ವಿಶಿಷ್ಟ ಗಂಧವನ್ನು ಕಂಡುಹಿಡಿದು ಅವುಗಳಿಂದ ಸುಗಂಧ ದ್ರವ್ಯ ತಯಾರಿಸಿದ. ಅನಂತರ ಈ ದ್ರವ್ಯವನ್ನು ಸಂಗ್ರಹಿಸಿ ಇಡಲು, ಮೈಗೆ ಲೇಪಿಸಿಕೊಳ್ಳಲು ಪ್ರಾರಂಭಿಸಿದ.
        ಈಗ ಸುಗಂಧ ದ್ರವ್ಯದ ವಹಿವಾಟು ಜಗತ್ತಿನಾದ್ಯಂತ ಬಿಲಿಯಗಟ್ಟಲೆ ನಡೆಯುತ್ತಿದೆ. ಪರ್ಫ್ಯೂಮ್‌ ತಯಾರಿಸಲು ಮಲ್ಲಿಗೆ, ಗುಲಾಬಿ, ಲಿಲ್ಲಿ ಮುಂತಾದ ಪರಿಮಳಯುಕ್ತ ಹೂಗಳನ್ನು , ಸಾಂಬಾರ ಪದಾರ್ಥಗಳಾದ ಲವಂಗ, ನೀಲಗಿರಿ, ಜಾಯಿಕಾಯಿ, ಜಾಪತ್ರೆ ಹಾಗೂ ಕೆಲವು ಮರದ ತೊಗಟೆಗಳನ್ನು ಉಪಯೋಗಿಸುತ್ತಾರೆ.

        ಸೆಂಟ್‌ಗಳ ಬಳಕೆ ಒಂದೊಂದು ದೇಶದಲ್ಲಿ ಒಂದೊಂದು ತೆರನಾಗಿದೆ. ಭಾರತದಲ್ಲಿ ಮೈಗೆ, ಬಟ್ಟೆಗಳಿಗೆ ಹಾಕಿಕೊಳ್ಳುತ್ತಾರೆ. ಈಜಿಪ್ತ್ನಲ್ಲಿ ಮನೆಯ ಗೋಡೆಗೆ ಸೆಂಟ್‌ ಬಾಟಲ್‌ ಹಾಕುತ್ತಾರೆ. ಯುರೋಪ್‌ನಲ್ಲಿ ಸ್ನಾನ ಮಾಡದೆ ಇದ್ದರೂ ಸೆಂಟ್‌ ಹಾಕಿಕೊಂಡು ತಿಂಗಳುಗಟ್ಟಲೆ ಹಾಗೆ ಇರಬಹುದಂತೆ. ಪರ್ಶಿಯಾದಲ್ಲಿ ಹೆಣಕ್ಕೆ ದುಬಾರಿ ಬೆಲೆಯ ಸೆಂಟ್‌ ಸಿಂಪಡಿಸುವ ಸಂಪ್ರದಾಯವಿದೆ!

        ಆ ಶಿವಾಜಿನಗರದ ಖ್ಯಾತ ಅತ್ತರ್‌ ಅಂಗಡಿಯ ಭಾಷಾ ಸಾಹೇಬರು ತಮ್ಮ ಅಂಗಡಿಯಲ್ಲಿನ ಚಿಕ್ಕ ದೊಡ್ಡ ಬಾಟಲುಗಳನ್ನು ತೋರಿಸುತ್ತ ವಿವರಿಸುತ್ತಾರೆ, ""ನಮ್ಮ ಅಂಗಡಿ ಪ್ರಾರಂಭಿಸಿ ನೂರು ವರ್ಷ ಆಗುತ್ತ ಬಂದಿದೆ. ನಮ್ಮದು ಅತ್ತರ್‌ ಅಂಗಡಿ, ಎಲ್ಲ ಮನೋಧರ್ಮದ ಜನಗಳು ನಮ್ಮ ಅಂಗಡಿಯ ಅತ್ತರ್‌ನ್ನು ಇಷ್ಟಪಡುತ್ತಾರೆ. ವಿದೇಶಕ್ಕೂ ನಮ್ಮ ಈ ಅತ್ತರ್‌ ರವಾನೆ ಆಗುತ್ತಿದೆ. ತೊಲದ ಲೆಕ್ಕದಲ್ಲಿ ಮಾರುತ್ತೇವೆ. ಐದು ರೂಪಾಯಿಯಿಂದ ಐದು ಸಾವಿರ ರೂಪಾಯಿಯ ಅತ್ತರ್‌ ಕೂಡ ನಮ್ಮಲ್ಲಿ ಲಭ್ಯ' ಎನ್ನುತ್ತಾರೆ.
        ನಮ್ಮಲ್ಲಿ ಏನಿದ್ರೂ ವಿದೇಶಿ ಸೆಂಟ್‌ಗಳಿಗೆ ಬೇಡಿಕೆ. 1925ರಲ್ಲಿ ಪ್ರಾರಂಭವಾದ ಗ್ಲೋರಿಯನ್ಸ್‌ ಶಾಲಿಮಾರ್‌ 1931ರಲ್ಲಿ ಹುಟ್ಟಿಕೊಂಡಿತು. ಜಾಯ್‌ ಸೆಂಟ್‌ಗಳಿಂದ  ಹಿಡಿದು ಡೆನಿಮ್‌, ಮೆಕ್ಸಪ್ಯಾಕ್ಟರ್‌, ರೆವಲೆಂಡರ್‌,  ಪ್ಯಾರಿಸ್‌, ಚಾರ್ಲ್ಸ್‌... ಹೀಗೆ ತುಂಬಾ ನಮೂನೆಗಳಲ್ಲಿ ದೊರಕುತ್ತವೆ. ಬೆಲೆಗಳಲ್ಲಿ ಕೂಡ ವ್ಯತ್ಯಾಸವಿರುತ್ತದೆ. ಎಂ.ಜಿ. ರೋಡ್‌ನ‌ ನಿವಾಸಿ ನವೀನ್‌, "ನಿಮಗೆ ಒಂದು ವಿಷಯ ಗೊತ್ತಾ? ನಾನು ಪುಟ್ಟ ಮಗುವಿದ್ದಾಗಿನಿಂದಲೇ ಅಮ್ಮ ನನಗೆ ಈ "ಚಾರ್ಮಿ' ಅನ್ನುವ ಸೆಂಟ್‌ ಹಾಕುತ್ತಿದ್ದರು. ಅದರ ಪರಿಮಳ ಬಿಟ್ಟರೆ ಬೇರೆ ಸೆಂಟ್‌ ಆಗುವುದಿಲ್ಲ. ಬಹುಶಃ ಆ ಕಂಪೆನಿ ನಿಂತು ಹೋದರೆ ನನಗೆ ಹುಚ್ಚು ಹಿಡಿಯುವುದಂತೂ ಗ್ಯಾರಂಟಿ' ಎನ್ನುತ್ತಾರೆ. ಕೆಲವು ಸೆಂಟ್‌ಗಳ ಪರಿಮಳಕ್ಕೆ ದಾಸರಾದ ಜನಗಳು ಇಲ್ಲದಿಲ್ಲ.

        "ಹುಡುಗಿಯರು ತುಂಬಾ ಮೈಲ್ಡ್‌ ಆಗಿರುವ ಸೆಂಟ್‌ ಇಷ್ಟಪಡುತ್ತಾರೆ. ಕೆಲವೊಮ್ಮೆ ಬೇರೆ ಬ್ರ್ಯಾಂಡ್‌ ಆರಿಸಿ ಕೊಳ್ಳುವುದೂ ಉಂಟು. ವಯಸ್ಸಾದ ಮಹಿಳೆಯರು ರೇಷ್ಮೆ ಸೀರೆಗಳಿಗೆ, ಸಮಾರಂಭಗಳಿಗೆ  ಉಡುವ ಉಡುಪಿಗೆ ಸೆಂಟ್‌ ಚುಮುಕಿಸಿಕೊಳ್ಳುತ್ತಾರೆ. ಗಂಡಸರು ಗಾಢವೆನಿಸುವ ಪರಿಮಳ ಇಷ್ಟಪಡುತ್ತಾರೆ' ಎಂದು ವಿವರಿಸುತ್ತಾರೆ ಮಹೇಶ.

        ಸೆಂಟ್‌ ಬಳಕೆ

        ಸ್ನಾನದ ಆನಂತರ ಒಣಗಿದ ಟವೆಲ್‌ನಿಂದ ಮೈ ಒರೆಸಿಕೊಂಡು ಅನಂತರ ಪೌಡರ್‌ ಅಥವಾ ಡಿಯೊಡ್ರೆಂಟ್‌ ಹಾಕಿಕೊಂಡು ಹತ್ತಿಯ ತುಂಡಿಗೆ ಸೆಂಟ್‌ ಹಾಕಿಕೊಂಡು ಕಿವಿಯ ಹಿಂಭಾಗ, ಕುತ್ತಿಗೆ, ಕಂಕುಳ, ಮೊಣಕಾಲು, ಮೊಣಕೈಗಳ ಮೇಲೆ ಸೆಂಟ್‌ ಲೇಪಿಸಿಕೊಳ್ಳಬೇಕು. ಸೆಂಟ್‌ ಅನ್ನು ಸ್ಪ್ರೆà ಮೂಲಕ ಹಾಕಿಕೊಳ್ಳುವುದು ಅಷ್ಟು ಸೂಕ್ತವಲ್ಲ.

        ಸೆಂಟ್‌ ಬಾಟಲಿ ಖರೀದಿಸುವಾಗಲೂ ಎಚ್ಚರವಿರಲಿ, ಪ್ಲಾಸ್ಟಿಕ್‌ ಅಥವಾ ಸ್ಟೀಟ್‌ ಡಬ್ಬಿಯಲ್ಲಿನ ಸೆಂಟ್‌ಬಳಕೆ ಸೂಕ್ತವಲ್ಲ. ದೊಡ್ಡ ಬಾಟಲಿಯನ್ನು ಖರೀದಿಸಬೇಡಿ. ತುಂಬಾ ದಿನಗಳವರೆಗೂ ಪರಿಮಳ ಇರಲಾರದು. ಕೆಲವೊಮ್ಮೆ ಸೆಂಟ್‌ಗಳ ಪರಿಮಳ ನಿಧಾನವಾಗಿ ಹರಡುತ್ತದೆ. ಅರ್ಧ ಗಂಟೆ, ಕೆಲವೊಮ್ಮೆ ಒಂದು ಗಂಟೆಯ ಅನಂತರ ಸೆಂಟ್‌ ವಾಸನೆ ಹರಡಲು ಪ್ರಾರಂಭವಾಗುತ್ತದೆ. ಸೆಂಟ್‌ ಬಾಟಲಿಗಳನ್ನು ಫ್ರಿಡ್ಜ್ನಲ್ಲಿ ಇಡಬಾರದು. ಸೂರ್ಯನ ಕಿರಣಗಳು ತಾಗುವಲ್ಲಿಯೂ ಇಡಬಾರದು. ನಿಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬಾರದು. ಬಾಟಲಿಯ ಮುಚ್ಚಳ ತೆರೆದುಕೊಂಡು ಸೆಂಟ್‌ ಜೆಲ್ಲಿ ಅಲ್ಲಿರುವ ವಸ್ತುಗಳೆಲ್ಲ ಸೆಂಟ್‌ ವಾಸನೆಯಿಂದ ಕಿರಿಕಿರಿ ಹುಟ್ಟಿಸುತ್ತವೆ.

        ಬೇಸಿಗೆ ಕಾಲದಲ್ಲಿ ನಿಂಬೆಯ ಪರಿಮಳಯುಕ್ತ ಅಥವಾ ಕಡಿಮೆ ಪರಿಮಳಯುಕ್ತ ಸೆಂಟ್‌ ಹಾಕಿಕೊಳ್ಳಿ. ಚಳಿಗಾಲದಲ್ಲಿ, ಮಳೆಗಾಲದಲ್ಲಿ ಗಾಢ, ಸುವಾಸನೆಯುಕ್ತ, ಮನಸ್ಸಿಗೆ ಮುದ ನೀಡುವ ಸೆಂಟ್‌ ಹಾಕಿಕೊಳ್ಳಬಹುದು. ಸೆಂಟ್‌ ಹಾಕಿಕೊಳ್ಳುವುದರಿಂದ ಮೈ ದುರ್ಗಂಧ ಕಡಿಮೆ ಆಗುವುದಿಲ್ಲ. ಬೆವರು ನಿವಾರಣೆ ಆಗುವುದಿಲ್ಲ. ಶುಭ್ರ ದೇಹಕ್ಕೆ ಸೆಂಟ್‌ ಚಿಮುಕಿಸಬೇಕು.

        ಸೆಂಟ್‌ಗಳನ್ನು ಬ್ಯೂಟಿ ಟ್ರೀಟ್‌ಮೆಂಟ್‌ಗಳಿಗೂ ಉಪಯೋಗಿಸುತ್ತಾರೆ. "ಅರೋವಾ ಥೆರಪಿ' ಎನ್ನುತ್ತಾರೆ. ವಿದೇಶಗಳಲ್ಲಿ ಬ್ಯೂಟಿ ಸೆಲೂನ್‌ಗಳಲ್ಲಿ ದುಬಾರಿ ಬೆಲೆಯ ಪರಿಮಳ ದ್ರವ್ಯ ಉಪಯೋಗಿಸಿ ಚಿನ್ನದ, ಬೆಳ್ಳಿಯ ಚಮಚದಿಂದ ಫೇಶಿಯಲ್‌ ಮಾಡುತ್ತಾರೆ. ಈ ಫೇಶಿಯಲ್‌ನಿಂದ ಮುಖದ ಚರ್ಮ ನುಣುಪಾಗಿ, ಕಲೆಗಳೇ ಇಲ್ಲದ ಪೂರ್ಣಚಂದ್ರನಂತೆ ಕಂಗೊಳಿಸುವುದು ಎಂದು ಹೇಳುತ್ತಾರೆ. ಆಯ್ದ ಕೆಲವು ಪರಿಮಳ ದ್ರವ್ಯಗಳನ್ನು ಉಪಯೋಗಿಸಿ ಹೆಡ್‌ ಮಸಾಜ್‌ ಮಾಡುವುದರಿಂದ ಕಿವಿನೋವು, ತಲೆನೋವು, ಕಣ್ಣುನೋವಿನ ನಿವಾರಣೆ ಸಾಧ್ಯ ಎಂದು ಅಮೆರಿಕದ ವಿಜ್ಞಾನ ಸಂಸ್ಥೆ ತಿಳಿಸಿದೆ.

         

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus