Wednesday, May 22, 2013
Last Updated: 7:45:14 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಓ ನನ್ನ ಒಲವೇ...
    • ಓ ನನ್ನ ಒಲವೇ...

      • ಜಾನ್‌ | Feb 10, 2013

        ಫೆ. 14ರ ಪ್ರೇಮಿಗಳ ದಿನಕ್ಕಾಗಿ ಈ ಪ್ರೇಮ ಪತ್ರ...

        ನನ್ನ  ಒಲವೇ,

        ವಾಲೆಂಟೈನ್‌ ದಿನದಂದು ನಿನ್ನಿಂದ ದೂರವಾಗಿ ಇರುವುದೆಷ್ಟು  ಕಷ್ಟ  ಎಂಬ ಕಲ್ಪನೆಯೇ ನಿನಗಿಲ್ಲ . ಸೂರ್ಯ ಎಂದಿನಂತೆ ಬೆಚ್ಚಗಿನ ಕಿರಣಗಳನ್ನು ಪ್ರಸಾದಿಸುತ್ತಿದ್ದರೂ ನನಗೂ ನಿನಗೂ ನಡುವೆ ಇರುವ ಈ ದೂರವಿದೆಯಲ್ಲ , ಇದು ನನ್ನ  ಪಾಲಿಗೆ ಪ್ರತಿದಿನವನ್ನೂ  ಮೈನಡುಗಿಸುವ ಚಳಿಯ ದಿನವನ್ನಾಗಿಸುವುದು ಹಾಗೂ ದುಗುಡ ತುಂಬಿದ ಮಳೆಗಾಲದ ದಿನವನ್ನಾಗಿಸಿ ಕಾಡುವುದು ಬಹುಶಃ ನಿನಗೆ ತಿಳಿಯದು. ಕೆಲವು ಸಾರಿ ನಿದ್ದೆಯೇ ಹಾರಿಹೋಗುತ್ತದೆ. ಇನ್ನು  ಕೆಲವೊಮ್ಮೆ  ಪ್ರಯತ್ನಪಟ್ಟು  ನಿದ್ರೆಗಿಳಿದರೆ ಅಲ್ಲೂ  ಬಿಡದೆ ಕಾಡುವ ನಿನ್ನ  ಕನಸು- ನೀನು ನೀಲಾಗಸದಿಂದ ನನ್ನ  ಕೊಠಡಿಯೊಳಕ್ಕೆ  ಇಳಿದು ಬರುತ್ತಿ. ಹಾಗೇ  ಹಗುರಾಗಿ ನನ್ನ   ಬಳಿ ಸಾರಿ ಸಾವಿರದೆಂಟು ಚುಂಬನಗಳ ಮಳೆಗರೆದು ನನ್ನನ್ನು  ಎಚ್ಚರಗೊಳಿಸುತ್ತಿ.
        ನೀನು ಈಗ ನನ್ನ  ತೋಳಲ್ಲಿಲ್ಲ - ಇದೇ  ನನ್ನ  ದುಃಖ. ನಿನ್ನ  ಒಲವಿನ ಬೆಚ್ಚಗಿನ ಧ್ವನಿ ನನ್ನ  ಕಿವಿದೆರೆಗಳನ್ನು  ತುಂಬುತ್ತಿಲ್ಲ- ಇದೇ ನನ್ನ  ಬೇಸರ. ನಿನ್ನ  ಮಾತಿನ  ಗರ್ಭದಲ್ಲಿರುವ ಭರವಸೆಯ ಅಲೆಗಳು  ನನ್ನನ್ನೀಗ ಮೀಯಿಸುತ್ತಿಲ್ಲ- ಇದೇ  ನನ್ನ  ಸಂಕಟ. ಈ ನಡುವೆ ಒಂದೇ  ಒಂದು ಸಮಾಧಾನ - ನನ್ನ  ಈ ಪರಿತ್ಯಕ್ತ  ಪಾಡು ಹೆಚ್ಚು  ಕಾಲವೇನೂ  ಮುಂದುವರಿಯಲಾರದು. ಯಾಕೆಂದರೆ, ನಿನ್ನೆಲ್ಲ  ಕರ್ತವ್ಯಗಳನ್ನೂ  ಮುಗಿಸಿದ ಬಳಿಕ ಮತ್ತೆ  ಮನೆಗೆ ಮರಳಿಯೇ ಮರಳುತ್ತಿ. ಅರ್ಥಾತ್‌, ನನ್ನ  ಬಳಿ ಬಂದೇ ಬರುತ್ತಿ.

        ಹಾಗೆ ನೀನು ಮರಳಿ ಬಂದಾಗ, ಗೆಳತೀ, ನಾವು ಜತೆಗೂಡಿ ಏನೆಲ್ಲ  ಮಾಡಬೇಕೆಂದಿದ್ದೆವೋ ಅದೆಲ್ಲವನ್ನೂ  ಸಾಧಿಸಲು ನಮ್ಮ  ಪಾಲಿಗೆ ಧಾರಾಳ ಸಮಯವಿರುತ್ತದೆ. ನೀನು ಬರುವ ದಿನದಂದು ನಾನು ತಯಾರಿಸಬೇಕೆಂದಿರುವ ಕೆಲವೊಂದು ವಿಶಿಷ್ಟ ಪಾಕ ವೈವಿಧ್ಯಗಳ ಪ್ರಯೋಗ ಪ್ರಯತ್ನಕ್ಕೆ  ನಾನು ಈಗಾಗಲೇ ಇಳಿದಾಗಿದೆ. ನೀ ನಡೆದು ಬರುವ  ಹಾದಿಯನ್ನು  ಬೆಚ್ಚಗಿಡಲೆಂದು ನಾನು ಈಗಾಗಲೇ ಕೆಲವು ಕಲಾತ್ಮಕ ಹಾಗೂ ಪರಿಮಳಯುಕ್ತ  ಮೊಂಬತ್ತಿಗಳನ್ನೂ  ತಂದಿರಿಸಿಕೊಂಡಾಗಿದೆ.

        ಪ್ರೇಮಿಗಳ ದಿನದಂದು ಹೃದಯಕ್ಕೆ  ಹತ್ತಿರವಾದವರು ದೂರವಿದ್ದರೆ  ನಿಜಕ್ಕೂ ಎಲ್ಲವನ್ನೂ  ಕಳೆದುಕೊಂಡಂತಾಗುತ್ತದೆ ಎಂದು ನಿನಗೆ ಪ್ರತ್ಯೇಕವಾಗಿ ಹೇಳಬೇಕೆ ? ಯಾವಾಗ ನಿನ್ನನ್ನು  ನೋಡಿಯೇನು, ಯಾವಾಗ ನಿನ್ನನ್ನು  ಸ್ಪರ್ಶಿಸಿಯೇನು, ಯಾವಾಗ ನಿನ್ನ  ಮುಖದ ಮೇಲೆ ಮೃದುವಾಗಿ ಬೆರಳನ್ನಾಡಿಸುತ್ತ  ಹಾಗೇ ಮೈಮರೆತೇನು ...! ದೇವರೇ, ಸಮಯ ಇಷ್ಟೊಂದೇಕೆ  ನಿಧಾನ ಚಲಿಸುತ್ತಿದೆ ! ಕ್ಷಣಗಳು ಬೇಗ ಬೇಗನೆ ಉರುಳಬಾರದೆ? ನನ್ನ   ಈ  ಏಕಾಂಗಿತನದ ಅವಧಿ ಕೊಂಚ ಹೃಸ್ವವಾಗಬಾರದೆ?
        ನನ್ನ  ಜೀವದ ಜೀವವೆ ! ನಿನಗೆ ನಾನು ಹೇಳಲಿಕ್ಕಿರುವುದು ಒಂದೇ ಒಂದು ಮಾತು : ನೆನಪಿರಲಿ - ನಿನ್ನನ್ನು  ಅಗಲಿ ಇರುವುದು ನನ್ನ  ಪಾಲಿಗೆ ನಿಜಕ್ಕೂ  ದೊಡ್ಡ  ಕಷ್ಟ . ನಿನ್ನನ್ನು  ನಾನು ಅಗಾಧವಾಗಿ ಪ್ರೀತಿಸುತ್ತೇನೆ !

        ಹೃದಯದಾಳದ ಚುಂಬನದೊಂದಿಗೆ,

        ಇಂತು ನಿನ್ನ ....

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus