Udayavani | Feb 10, 2013
ಆ ಹುಚ್ಚ ಇವನನ್ನು ನೋಡದಂತೆ ಬರೆಯುತ್ತಲೇ ಇರುತ್ತಾನೆ. ಆ ಹೊತ್ತಿಗೆ ಹುಚ್ಚನಿಗೆ ಏನೋ ಅನ್ನಿಸಿ ಮತ್ತದೇ ನಾಲ್ಕು ಬೆರಳು ತೋರಿಸುತ್ತಾನೆ. ಇವನು ಬೈಸ್ಕೋಬೇಕಲ್ಲ ಅನ್ನೋ ಬೇಜಾರಲ್ಲೇ ಮತ್ತೆ ನಾಲ್ಕು ಅನ್ನುತ್ತಾನೆ.
ವಿಜ್ಞಾನ ಹೇಳಿದ ಸತ್ಯ ತುಂಬಾ ಸಲ ಮರೆತುಹೋಗುತ್ತದೆ. ತಮಾಷೆ ನಗಿಸುತ್ತದೆ. ನಗು ಸೆರೆಟಾನಿನ್ ಅನ್ನೋ ಹಾರ್ಮೋನು ರಿಲೀಸ್ ಮಾಡಿಸುತ್ತದೆ. ಆ ಹಾರ್ಮೋನು ಉಲ್ಲಸಿತರನ್ನಾಗಿಸುತ್ತದೆ. ಉಲ್ಲಸಿತ ಮನಸ್ಸು ಕೆಲಸ ಸುಲಭ ಮಾಡಿಸುತ್ತದೆ. ಕೆಲಸ ಸುಲಭವಾದರೆ ಸುಸ್ತಾಗದು. ಸುಸ್ತಾಗದಿದ್ದರೆ ಎಷ್ಟು ಬೇಕಾದರೂ ಕೆಲಸ ಮಾಡಿಸಬಹುದು. ಈ ಸತ್ಯ ಎಲ್ಲರಿಗೂ ತಿಳಿದಿರಬೇಕು.
ಬಹಳ ಇಷ್ಟದ ಕತೆ.
ಅವನೊಬ್ಬ ಹುಚ್ಚ. ಜಗತ್ತು ಹಾಗೆಂದು ಕರೆದು ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಿರುತ್ತದೆ. ಅವನು ಅಲ್ಲಿ ಆರಾಮಾಗಿ ಸುತ್ತಾಡಿಕೊಂಡಿರುತ್ತಾನೆ. ಅಲ್ಲಿ ಅಲೆದಾಡುತ್ತಾ ಸಿಕ್ಕವರೆದುರಿಗೆಲ್ಲಾ ತನ್ನ ನಾಲ್ಕು ಬೆರಳನ್ನು ತೋರಿಸಿ ಇದು ಎಷ್ಟು ಅಂತ ಕೇಳುತ್ತಿರುತ್ತಾನೆ. ಎಲ್ಲರೂ ನಾಲ್ಕು ಅಂದಾಗ ಅವನು ಈಡಿಯೆಟ್ ಅಂತ ಬೈದು ಅಲ್ಲಿಂದ ಹೋಗುತ್ತಾನೆ.
ಹೀಗೆಯೇ ಇರುವಾಗ ಅದೇ ಹುಚ್ಚಾಸ್ಪತ್ರೆಗೆ ಮತ್ತೂಬ್ಬ ಬರುತ್ತಾನೆ. ಅವನಿಗೇನೂ ಮಾನಸಿಕ ಕಾಯಿಲೆ ಇರುವುದಿಲ್ಲ. ಡಿಪ್ರಷನ್‌ನಿಂದ ನರಳುತ್ತಿರುತ್ತಾನೆ ಅಷ್ಟೇ. ಅವನು ಸಣ್ಣ ಮುಖ ಮಾಡಿಕೊಂಡು ಆಸ್ಪತ್ರೆಗೆ ಪ್ರವೇಶ ಪಡೆದು ಅತ್ತಿತ್ತ ನೋಡುತ್ತಿರುತ್ತಾನೆ. ಅಷ್ಟು ಹೊತ್ತಿಗಾಗಲೇ ಆ ಹುಚ್ಚ ಅವನೆದುರಿಗೆ ದಬಕ್ಕನೆ ಹಾರಿ ತನ್ನ ನಾಲ್ಕು ಕೈಬೆರಳನ್ನು ತೋರಿಸಿ ಎಷ್ಟು ಅನ್ನುತ್ತಾನೆ. ಇವನು ಎಲ್ಲರಂತೆ ನಾಲ್ಕು ಎಂದು ಹೇಳಉತ್ತಾನೆ. ಆ ಹುಚ್ಚ ಕೋಪದಿಂದ ಮೂರ್ಖ ಎಂದು ಬೈದು ಹೋಗುತ್ತಾನೆ.
ಇವನಿಗೆ ಒಂಥರಾ ಅನ್ನಿಸಿ ಸಣ್ಣಗೆ ಆತಂಕ. ಆಮೇಲೆ ಇವನು ಎಲ್ಲರನ್ನು ನೋಡುತ್ತಾ ಒಂದು ಸುತ್ತು ಬರುತ್ತಾನೆ. ಆಗ ಯಾವುದೋ ಒಂದು ಕೊಣೆಯಲ್ಲಿ ಆ ಹುಚ್ಚ ಕಾಣಿಸುತ್ತಾನೆ. ಅವನು ಏನೋ ಬರೆಯುತ್ತಿರುತ್ತಾನೆ. ಇವನಿಗೆ ಅಚ್ಚರಿ. ಅವನ ಹತ್ತಿರ ಹೋಗಿ ನಿಲ್ಲುತ್ತಾನೆ. ಆ ಹುಚ್ಚ ಇವನನ್ನು ನೋಡದಂತೆ ಬರೆಯುತ್ತಲೇ ಇರುತ್ತಾನೆ. ಆ ಹೊತ್ತಿಗೆ ಹುಚ್ಚನಿಗೆ ಏನೋ ಅನ್ನಿಸಿ ಮತ್ತದೇ ನಾಲ್ಕು ಬೆರಳು ತೋರಿಸುತ್ತಾನೆ. ಇವನು ಬೈಸ್ಕೋಬೇಕಲ್ಲ ಅನ್ನೋ ಬೇಜಾರಲ್ಲೇ ಮತ್ತೆ ನಾಲ್ಕು ಅನ್ನುತ್ತಾನೆ. ಅತ್ಯಾಶ್ಚರ್ಯವೆಂಬಂತೆ ಆ ಹುಚ್ಚ ಈಗ ಬೈಯುವುದಿಲ್ಲ. ತುಂಬಾ ಸಮಾಧಾನವಾಗಿ ನೋ, ಸೀ ಬಿಯಾಂಡ್ ದ ಆಬೆjಕ್ಟ್ ಅನ್ನುತ್ತಾನೆ.
ಸೀ ಬಿಯಾಂಡ್ ದ ಆಬೆjಕ್ಟ್ ಅನ್ನೋದು ಮಂತ್ರ.
ಈಗ ಇವನು ಆ ಬೆರಳುಗಳನ್ನು ದಿಟ್ಟಿಸಿ ನೋಡುತ್ತಾನೆ. ನೋಡುತ್ತಲೇ ಇರುತ್ತಾನೆ. ಈಗ ಆ ಒಂದೊಂದು ಬೆರಳಿನ ಹಿಂದೆಯೂ ಮತ್ತೂಂದು ಬೆರಳು ಕಂಡಂತಾಗುತ್ತದೆ. ಬೆರಳ ಹಿಂದೆ ಬೆರಳು. ಬೆರಳ ನೆರಳು. ಮಂತ್ರಮುಗ್ಧನಾಗಿ ಎಂಟು ಅನ್ನುತ್ತಾನೆ. ಆ ಹುಚ್ಚ ಚಪ್ಪಾಳೆ ತಟ್ಟಿ ನಗುತ್ತಾ ಕರೆಕ್ಟ್ ಅನ್ನುತ್ತಾ ಎದ್ದು ನಿಲ್ಲುತ್ತಾನೆ.
ಇವನಿಗೆ ಜ್ಞಾನೋದಯ. ಏನೋ ಒಂದು ಕಾಣುತ್ತಿದೆ. ಅದರ ಹಿಂದೆ ಮತ್ತಿನ್ನೇನೋ ಇದೆ. ಎಕ್ಸಾಕ್ಟಿ$Éà ಕಾರ್ಪೋರೇಟ್ ಕಲ್ಚರ್‌ನಲ್ಲೂ ಇದರ ಹಿನ್ನೆಲೆಯಲ್ಲಿ ಯೋಚಿಸಬಹುದು ತಾನೇ?
ಕಾರ್ಪೋರೇಟ್‌ನಲ್ಲಿ ತಮಾಷೆ ನಿಷಿದ್ಧ. ಹಾಗೊಂದು ಅಗೋಚರ, ಪರೋಕ್ಷ ನಂಬಿಕೆ ಚಾಲ್ತಿಯಲ್ಲಿದೆ. ಇರುತ್ತದೆ. ಸೀರಿಯಸ್ ಆಗಿದ್ದರೇನೇ ಗೆಲ್ಲಬಹುದು ಅನ್ನೋ ನಂಬಿಕೆ. ವಿಶ್ವಾಸ. ಇಲ್ಲಿ ನಂಬರ್ ಗೇಮ್. ಕಾಮನ್‌ಸೆನ್ಸ್‌ಗೆ ಹೆಚ್ಚು ಆದ್ಯತೆ. ಇಷ್ಟು ಹಾಕಿದರೆ ಎಷ್ಟು ಬರುತ್ತದೆ? ಇಷ್ಟು ಖರ್ಚಿಗೆ ಅಷ್ಟು ಲಾಭವೇ? ಅಲ್ಲಿ ಅಷ್ಟೊಂದು ಹೋದರೆ ಅಲ್ಲಿಂದ ಎಷ್ಟೊಂದು ಬರುತ್ತದೆ? ಇನ್‌ವೆಸ್ಟ್ ಮಾಡೋಕೆ ಒಳ್ಳೆ ಕಾಲ ಯಾವುದು?
ಒಂದಾ ನಂಬರ್ ಗೇಮ್. ಅಥವಾ ಕಾಮನ್‌ಸೆನ್ಸ್. ಅದಕ್ಕಿಂತ ಆಚೆಗೆ ಏನೂ ಬೇಡ್ವಾ? ಸೀ ಬಿಯಾಂಡ್ ದ ಆಬೆjಕ್ಟ್.
ಗೆಲ್ಲಲು ಅಷ್ಟೇ ಅಲ್ಲ ಬೇಕಾಗೋದು. ಹ್ಯೂಮರ್ ಸೆನ್ಸ್ ಕೂಡ ಬೇಕಲ್ಲವೇ? ಒಂದು ಸಂಸ್ಥೆಯತ್ತ ಒಂದೊಳ್ಳೆ ಕೆಲಸಗಾರ ಬರುವುದು ಯಾಕಾಗಿ? ಒಂದು ಒಳ್ಳೆ ಸಂಸ್ಥೆ ಅನ್ನೋದು. ಇನ್ನೊಂದು ಅಲ್ಲಿ ಚೆನ್ನಾಗಿ ಕೆಲಸ ಮಾಡುವ ವಾತಾವರಣ ಇದೆಯಾ ಅನ್ನೋದು. ಮೂರನೆಯದು ಬಾಸ್‌ಗಳು ಹೇಗೆ ನೋಡಿಕೊಳ್ಳುತ್ತಾರೆ ಅನ್ನೋದು.
ಕಾರ್ಪೋರೇಟ್ ಜಗತ್ತಲ್ಲಿ ಎಂಪ್ಲಾಯ್‌ಗಳಿಗೆ ಬಾಸ್, ಮ್ಯಾನೇಜರ್ ಹೇಗೆ ಅಂತ ಗೊತ್ತಾಗೋದು ಎರಡು ವಿಧಗಳಲ್ಲಿ. ಒಂದು ಪರ್ಸನಲ್. ಇನ್ನೊಂದು ಫಾರ್ಮಲ್. ಪರ್ಸನಲ್ ಆಗಿ ಆರಾಮಾಗಿ ಮಾತಾಡ್ತಾ, ನಗಿಸ್ಕೊಂಡು ಇರುವುದು ಒಂದು ರೀತಿ. ಅಲ್ಲಿ ಬಾಸ್ ದೇವರಾಗ್ತಾರೆ. ಎಷ್ಟು ಕೆಲಸ ಮಾಡಿದ್ರೂ ಕೆಲಸ ಮಾಡಿದ ಫೀಲ್ ಅಲ್ಲ. ನಂಬರ್ ಗೇಮ್ ತಲೆನೋವು ತರಿಸಲ್ಲ. ಗಂಭೀರವಾಗಿ ಯೋಚೆ° ಮಾಡಿದ್ರೂ ಕಷ್ಟ ಅನ್ನಿಸಲ್ಲ. ಸಮಾಧಾನವಾಗಿ ಎಲ್ಲವೂ ಆಗಿಹೋಗುತ್ತದೆ. ಕಂಪನಿ ಟಾಪ್ ಆಗುತ್ತದೋ ಇಲ್ವೋ ಆದರೆ ಅಲ್ಲಿ ಇರುವವರೆಲ್ಲಾ ಕಂಪನಿ ಟಾಪ್‌ಗೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಅಂತೂ ಮಾಡೇ ಮಾಡುತ್ತಾರೆ.
ಇನ್ನೊಂದು ವಿಧ ಫಾರ್ಮಲ್ ಆಗಿ ಹತ್ತಿರ ಆಗೋದು. ಅಂದ್ರೆ ಬರ್ತ್‌ಡೇ ಮತ್ತು ಮುಖ್ಯ ಸಂದರ್ಭಗಳಲ್ಲಿ ಗ್ರೀಟಿಂಗ್ಸ್ ಕೊಡೋದು ಅಥವಾ ಕಾರ್ಡ್ ಬರೆದು ಹಾಕೋದು. ಇದು ಆ ಹೊತ್ತಿಗೆ ಖುಷಿ ಕೊಡುವ ಸಂಗತಿ. ಯಾವುದೋ ಕೋತಿ ಹ್ಯಾಪ್ಪಿ ಬರ್ತ್‌ಡೇ ಹೇಳ್ಳೋ ಥರದ ಗ್ರೀಟಿಂಗ್ ಕಾರ್ಡನ್ನು ಬಾಸ್ ಕೊಟ್ಟರೆ ಸಂತೋಷವಾಗೇ ಆಗುತ್ತದೆ. ಅಷ್ಟೇನೂ ಪರಿಣಾಮಕಾರಿಯಲ್ಲದಿದ್ದರೂ ಏನೂ ಮಾಡದೇ ಇರುವುದಕ್ಕಿಂತ ಎಷ್ಟೋ ಪಾಲು ಒಳ್ಳೆಯದು.
ವಿಜ್ಞಾನ ಹೇಳಿದ ಸತ್ಯ ತುಂಬಾ ಸಲ ಮರೆತುಹೋಗುತ್ತದೆ. ತಮಾಷೆ ನಗಿಸುತ್ತದೆ. ನಗು ಸೆರೆಟಾನಿನ್ ಅನ್ನೋ ಹಾರ್ಮೋನು ರಿಲೀಸ್ ಮಾಡಿಸುತ್ತದೆ. ಆ ಹಾರ್ಮೋನು ಉಲ್ಲಸಿತರನ್ನಾಗಿಸುತ್ತದೆ. ಉಲ್ಲಸಿತ ಮನಸ್ಸು ಕೆಲಸ ಸುಲಭ ಮಾಡಿಸುತ್ತದೆ. ಕೆಲಸ ಸುಲಭವಾದರೆ ಸುಸ್ತಾಗದು. ಸುಸ್ತಾಗದಿದ್ದರೆ ಎಷ್ಟು ಬೇಕಾದರೂ ಕೆಲಸ ಮಾಡಿಸಬಹುದು. ಈ ಸತ್ಯ ಎಲ್ಲರಿಗೂ ತಿಳಿದಿರಬೇಕು.
ಮಾತಾಡಬಾರದು, ಇಂತಿಷ್ಟು ಹೊತ್ತಿಗೆ ಸರಿಯಾಗಿ ಆಫೀಸಲ್ಲಿರಬೇಕು ಅನ್ನೋ ನೀತಿ, ನಿಯಮಗಳಿಗಿಂತ ಹ್ಯೂಮರ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಕಡ್ಡಾಯ ನಿಯಮಗಳು ಹೇರುವುದರಿಂದ ಯಾವುದೂ ಸರಿಯಾಗದು. ಸರಿಯಾಗುವುದೇ ಆದರೆ ತೋರಿಕೆಗಷ್ಟೇ. ಒಳಗಿಂದೊಳಗೆ ಸರಿಯಾಗಬೇಕಲ್ಲ. ಅದು ಆಪ್ತತೆಯಿಂದ ಸಾಧ್ಯ. ಆಪ್ತತೆ ಸೆನ್ಸ್ ಆಫ್ ಹ್ಯೂಮರ್‌ನಿಂದ ಸಾಧ್ಯ.ಇಲ್ಲಿ ಕೆಲವೊಂದು ಟೆಕ್ನಿಕ್‌ಗಳು ಕೆಲಸ ಮಾಡುತ್ತವೆ. ಆ ಟೆಕ್ನಿಕ್‌ಗಳಿಂದಲೇ ಗೆಲ್ಲುವುದು ಸುಲಭವಾಗುತ್ತದೆ. ಆ ಟೆಕ್ನಿಕ್ ಹೇಳಿದ ಕಾರ್ಪೋರೇಟ್ ಗುರು ಸಿಕ್ಕಿದ್ದ.