Wednesday, May 22, 2013
Last Updated: 12:01:03 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕೃಷಿ-ವಾಣಿಜ್ಯ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಾಸ್ಟಲಿ ಫ್ಲವರ್‌!
    • ಕೋಸು ಎಂಬ ಕಾಸು ಕೊಡೋ ಕೋರ್ಸು
    • ಗ್ರಾಮಗಳ ಜಮೀನು ಗಳಲ್ಲೀಗ ರೈತರು ಸಾಮೂಹಿಕವಾಗಿ ಹೂಕೋಸು ಕೃಷಿ ಮಾಡುತ್ತಿದ್ದಾರೆ.

      • ರಾಘವೇಂದ್ರ ಮೆದಿಕೇರಿ | Feb 10, 2013

        ಗುರುಗಳು 40 ಎಕರೆ ಜಮೀನು ಖರೀದಿಸಿದರು.  ಸೋನ್ಲ ಎಸ್ಟೆತಂಪಾದ ಹವಾಗುಣ ಹೊಂದಿರುವ ಪ್ರದೇಶದಲ್ಲಿ ಮಾತ್ರ ಹೂಕೋಸು ಬೆಳೆಯಲು ಯೋಗ್ಯ ಎಂಬ ನಂಬಿಕೆ ಸುಳ್ಳು.  ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ಕುರೆಕೋಪ್ಪದ ರೈತರು ಇದನ್ನು ಹುಸಿಮಾಡಿದ್ದಾರೆ.  ಸರಿಯಾಗಿ ಕೃಷಿ ಮಾಡಿದರೆ ಈ ಬಿಸಿಲು ನೆಲದಲ್ಲೂ ಭರ್ಜರಿ ಹೂ ಕೋಸು ಬೆಳೆಯಬಹು ಎಂಬುದಕ್ಕೆ ಇವರೇ ಉದಾಹರಣೆ. ಬಳ್ಳಾರಿ ಬಿಸಲಿಗೆ ಮೀಸಲೆನ್ನಿಸಿದ ಬೆಳೆಗಳಾದ ಜೋಳ, ಭತ್ತ, ಸಜ್ಜೆಯ ಬೆಸ್ಟು. ಆದರೆ ಸ್ವಲ್ಪ ಜಮೀನಿನಲ್ಲಿ ಲಾಭ ತರುವ ಈ ಹೂಕೋಸಿಗೆ ಪ್ರಯತ್ನಿಸಿ

        ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಬೆಳೆಗಳಿಗಿಂತ ಹೆಚ್ಚು ನಿವ್ವಳ ಲಾಭ ಕಂಡುಕೊಂಡಿದ್ದರಿಂದಲೇ ಕುರೆಕೋಪ್ಪ ಸುತ್ತಮುತ್ತಲಿನ ಸಂಡೂರ, ಗಾದನೂರ, ತೋರಣಗಲ್ಲುಗಳಂತಹ ಹತ್ತಾರು ಗ್ರಾಮಗಳ ಜಮೀನು ಗಳಲ್ಲೀಗ ರೈತರು ಸಾಮೂಹಿಕವಾಗಿ ಹೂಕೋಸು ಕೃಷಿ ಮಾಡುತ್ತಿದ್ದಾರೆ.

        ನೀರು ಬಸಿದು ಹೋಗುವಂತಹ ಫ‌ಲವತ್ತಾದ ಮರಳು ಮಿ]ತ ಗೋಡು ಮಣ್ಣು ಇಲ್ಲವೆ ಕೆಂಪು ಮಣ್ಣು ಈ ಬೆಳೆಗೆ ಉತ್ತಮ.  ಜೌಗು ಪ್ರದೇಶ ಈ ಬೆಳೆಗೆ ಯೋಗ್ಯವಲ್ಲ. ಅಂತಹ ಸೂಕ್ತ ಸ್ವಲ್ಪ ಜಮೀನುಗಳನ್ನು ಆಯ್ಕೆ ಮಾಡಿಕೊಂಡು ಅಲ್ಪಾವಧಿ ತಳಿಯ ಈ ಹೂಕೋಸು ಬೆಳೆದು ಅದನ್ನೇ ಈಗ ಮುಖ್ಯ ಬೆಳೆಯನ್ನಾಗಿಸಿಕೊಂಡಿದ್ದಾರೆ. ಮೂರು ತಿಂಗಳಲ್ಲಿ ಫ‌ಸಲು ಕೊಡುವ ಈ ಬೆಳೆಯನ್ನು ರೈತರು ಮೂರು ಬಾರಿ ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ.

        ಬೆಳೆಯೋದು ಹೀಗೆ

        ಮೊದಲು ಭೂಮಿಯನ್ನು ಹದಗೊಳಿಸಿ ಅದರಲ್ಲಿ ಹೂಕೋಸು ಬೀಜಗಳನ್ನು ಹಾಕುತ್ತಾರೆ. ಎರಡು ದಿನಕ್ಕೊಮ್ಮೆ ನೀರು ಹಾಯಿಸುತ್ತಾರೆ. ಹೀಗೆ ಹದಿನೈದು ಇಪ್ಪತ್ತು ದಿನಗಳಲ್ಲಿ ಬೀಜಗಳು ಮೊಳಕೆ ಹೊಡೆದು ಸಸಿಗಳಾಗುತ್ತವೆ.  ಆರೋಗ್ಯವಾಗಿ ಬೆಳೆದ ಹೂ ಕೋಸಿನ ಸಸಿಗಳನ್ನು ಕಿತ್ತು ಹದಗೋಳಿಸಿದ ಹೊಲದ ಮಡಿಗಳಲ್ಲಿ ನಾಟಿ ಮಾಡುತ್ತಾರೆ. ಬಿಸಿಲಿನ ತಾಪಕ್ಕನುಗುಣವಾಗಿ ನೀರನ್ನು ಹಾಯಿಸುತ್ತಾರೆ.  ಸುಮಾರು ಎರಡರಿಂದ ಮೂರು ತಿಂಗಳುಗಳಲ್ಲಿ ಹೂಕೋಸುಹುಲುಸಾಗಿ ಬೆಳೆಯುತ್ತದೆ. ಹೂಕೋಸನ್ನು ಅಗತ್ಯಕ್ಕನುಗುಣ ವಾಗಿ ಹತ್ತು ಹದಿನೈದು ದಿನಗಳಲ್ಲಿ ಕಟಾವು ಮಾಡಲಾಗುತ್ತದೆ.

        ಒಂದು ಎಕರೆಗೆ ಸುಮಾರು 10-12ಸಾವಿರ ಸಸಿಗಳು ನಾಟಿ ಮಾಡಬಹುದು. ಹದಿನೈದು ದಿನಕ್ಕೊಮ್ಮೆಯಂತೆ 3 ಬಾರಿ ಯೂರಿಯಾ ಗೊಬ್ಬರವನ್ನು ನೀಡುತ್ತಾರೆ. ಬೆಳೆಗೆ ರೋಗ ಬರದಂತೆ ತಡೆಯಲು ಕೋರೋಜಿನ ರಾಸಾಯನಿಕವನ್ನು ಬಳಸಲಾಗುತ್ತದೆ. ಬೆಳೆಗೆ ಜಿಗಿ ಬರದಂತೆ ತಡೆಯಲು ಕಾನ್ಫಿàಡಾನ್‌ ಸಿಂಪಡಿಸಲಾಗುತ್ತದೆ. ಹೂ ಕಟ್ಟುವ ಸಮಯದಲ್ಲಿ ಬೋರೋಪುಡಿಯನ್ನು ಸಿಂಪಡಿಸಲಾಗುತ್ತದೆ. ಇದರಿಂದ ಹೂಕೋಸಿನ ಎಲೆಯು ಉತ್ತಮ ಬಣ್ಣಕಟ್ಟಲು ಸಾಧ್ಯವಾಗುತ್ತದೆ. ಒಂದುವರೆ ತಿಂಗಳಲ್ಲಿ ಗೊಬ್ಬರ ನೀಡಿ ಮತ್ತು ಕಳೇ ತೆಗೆದು ಉತ್ತಮ ಫ‌ಸಲು ಬರಲು ಅಣಿಮಾಡಲಾಗುತ್ತದೆ.

        "ನಮ್ಮ ಭಾಗದಲ್ಲಿ ಬಿಸಿಲು ಜಾಸ್ತಿ ಇರೋದ್ರಿಂದ ನೀರು ಹಾಸಿದ ಅರಗಳಿಗ್ಯಾಗ ಜಮೀನಿನ ಹಸಿ ಆರಿಹೋಕೈತ್ತಿ. ಅದ್ಕ ನಾವು 2-3 ದಿನನಕ್ಕೊಮ್ಮೆ ನೀರು ಉಣಿಸಿ ನೆಲ ಹೆಚ್ಚು ಸಮಯ ತನುವು ಉಳಿಸಿಕೊಳ್ಳುವಂತೆ ಮಾಡ್ತೀವಿ ಎನ್ನುತ್ತಾರೆ ರೈತ ಪೂಜಾರಿ ತಿಮ್ಮಣ್ಣ,

          ಸಾಮಾನ್ಯವಾಗಿ ಪ್ರತಿಯೊಬ್ಬ ರೈತರು ಎಕರೆ ಇಲ್ಲವೆ ಅರ್ಧ ಎಕರೆ ಪ್ರದೇಶದಲ್ಲಿ ಈ ಹೂ ಕೋಸು ನಾಟಿ ಮಾಡುತ್ತಾರೆ. ಒಂದು ಬೆಳೆ ಸಂಪೂರ್ಣ ಕೊಯ್ಲಿಗೆ ಬರುವುದರೊಳಗೆ ಮತ್ತೂಂದು ಹಂತಕ್ಕೆ ಸಸಿ ಮಾಡಿ ನಾಟಿಗೆ ಸಿದ್ಧಮಾಡಿಟ್ಟಿರುತ್ತಾರೆ. ಎರಡು ವರ್ಷದ ಹಿಂದೆ ಎಲ್ಲರೂ ರೊಕ್ಕದ ಆಸ್ಯಾಕ ಎರಡೂ¾ರು ಎಕರೆ ಬೆಳೆ  ಮಾಡ್ತಿದ್ವಿ, ಆದ್ರ ರೇಟ್‌ ಸಿಗದ ಮಾರ್ಕೆಟ್ನಾಗ ಅಗ್ಗ ಆಗೋದು ಕಂಡು ಈಗ ಅರ್ಧ ಎಕರೆ ಮಾಡ್ತೇವ್ರಿ ಎಂದು ಹೇಳುವ ತಿಮ್ಮಣ್ಣನ ಮಾತಿನಲ್ಲಿ ಮಾರು ಕಟ್ಟೆಯಲ್ಲಿ ಬೆಲೆ ಹಾಗೂ ಬೇಡಿಕೆಯ ಸಮತೋಲನ ಕಾಯ್ದುಕೊಂಡಿರುವುದು ಅರ್ಥವಾಗುತ್ತದೆ.

        ಖರ್ಚು- ಆದಾಯ

        ಹೂ ಕೋಸಿನ ಕೃಷಿ ಮಾಡಲು ಒಂದು ಎಕರೆಗೆ ಸುಮಾರು 20ರಿಂದ 25 ಸಾವಿರ ರೂಪಾಯಿವರೆಗೆ ಖರ್ಚು ಬರುತ್ತದೆ. 10 ಗ್ರಾಮನ ಒಂದು ಬೀಜದ ಪ್ಯಾಕೆಟ್‌ಗೆ  300 ರಿಂದ 350 ರೂ. ಬೆಲೆ ಇದೆ.   ಒಂದು ಎಕರೆಗೆ
        ಅಂದಾಜು 12 ಪ್ಯಾಕೆಟ್‌ ಬೀಜಗಳು ಅಂದರೆ 120 ಗ್ರಾಮ್‌ ಬೀಜಗಳು ಬೇಕಾಗುತ್ತದೆ. ಒಂದು ಎಕರೆಯಲ್ಲಿ ಈ ಕೃಷಿಮಾಡಲು ಸುಮಾರು ಮೂರರಿಂದ ನಾಲ್ಕು ಸಾವಿರ ರೂಪಾಯಿ ಬೀಜದ ಖರ್ಚು ಬರುತ್ತದೆ. ಹೀಗೆ ಅವರು ಬೆಳೆಯುವ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಬೀಜದ ಬೆಲೆ ಹೆಚ್ಚಾಗುತ್ತದೆ.

        ಉತ್ತಮವಾಗಿ ಬೆಳೆದ ನಂತರ ಹೂ ಕೋಸನ್ನು ಕಟಾವು ಮಾಡಿ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಮಾರಾಟ ಮಾಡಲಾಗುತ್ತದೆ. ಸುಮಾರು 20 ರಿಂದ 25 ಹೂ ಕೋಸಿನ ಪೀಸ್‌ಗಳನ್ನೊಳಗೊಂಡಂತೆ ಒಂದೂಂದು ಚೀಲವನ್ನು ಮಾಡಲಾಗುತ್ತದೆ. ಒಂದು ಚೀಲವು ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ 220 ರಿಂದ 250 ರೂಪಾಯಿವರೆಗೆ ಮಾರಾಟವಾಗುತ್ತದೆ. ಹೀಗೆ ಎಕರೆಗೆ ಏನಿಲ್ಲಾ ಅಂದರೂ ಸುಮಾರು 1 ಲಕ್ಷ ರೂಪಾಯಿ ಆದಾಯ ಬರುತ್ತದೆ. ಬೆಳೆಗೆ ಮಾಡಿದ ಬೀಜ, ಗೊಬ್ಬರ, ಹಾಗೂ ಕೂಲಿಯ ಮತ್ತಿತರ ಖರ್ಚುನ್ನು ತೆಗೆದರೆ ಸುಮಾರು 60 ರಿಂದ 75 ಸಾವಿರ ರೂಪಾಯಿವರೆಗೆ ನಿವ್ವಳ ಲಾಭ ಸಿಗುತ್ತದೆ. 

        ಸೂಕ್ತ ಸಮಯದಲ್ಲಿ ಹೂಗಳು ಕೊಯ್ಲಿಗೆ ಬರುವುದರಿಂದ ಹಾಗೂ ಮಾರುಕಟ್ಟೆಗೆ ತಾಜಾ ಸ್ಥಿತಿಯಲ್ಲಿಯೇ ಹೂ ಕೋಸು ಕಳಿಸಬೇಕಾಗಿರುವುದರಿಂದಲೇ ಪ್ರತಿ ದಿನ ಸಾಯಂಕಾಲವೇ ಬಲಿತ ಹೂಗಳನ್ನು ಕೊಯ್ಲು ಮಾಡುತ್ತಾರೆ. ಹಿಂಗಾಗಿ ಅರ್ಧ ಎಕರೆ ಬೆಳೆ ನಮ್ಮ ಕೈ ಸೇರಬೇಕೆಂದ್ರ ಸುಮಾರು ಆರು ಸಾವಿರ ಖರ್ಚು ಬರತೈತ್ರಿ ಎಂದು ಹೇಳುವ ನಾಗರಾಜ ಕೂಲಿ ಆಳು ನಂಬಿಕೊಳ್ಳುವುದರ ಬದಲಿಗೆ ಮನೆಯವರು ದುಡಿದರೆ ಇನ್ನಷ್ಟೂ ಹೆಚ್ಚು ಲಾಭ ತೆಗೆದುಕೊಳ್ಳಬಹುದು ಎನ್ನುವ ಕಿವಿ ಮಾತು ಹೇಳುತ್ತಾರೆ.

        ರೋಗ-ರುಜಿನಗಳ ಕಾಟವಿಲ್ಲದೇ ಪಕ್ಕಾ ಬೆಳೆ ಬಂತೆಂದರೆ ಏನಿಲ್ಲವೆಂದರೂ ಎಕರೆಗೆ 60 ರಿಂದ 75 ಸಾವಿರ ಲಾಭ ಕಟ್ಟಿಟ್ಟ ಬುತ್ತಿ ಎಂಬುದು ಇವರ ಐದಾರು ವರ್ಷದ ಅನುಭವದ ಮಾತು. ಅಂದ ಹಾಗೆ ಲಾಭದ ಜೊತೆಗೆ ತಿಗಣೆ, ಕೋಮಡಿ ಹುಳು, ಸುರಳಿಪೂಜಿಗಳಂಥ ಕೀಟದ ಹಾವಳಿಗಳಲ್ಲದೆ ಕಪ್ಪು ಕೊಳೆ, ಬುಡಕೊಓಳೆ ರೋಗದಂತಹ ಬಾಧೆಗೆ ಸಾಕಷ್ಟು ರೈತರು ಹೈರಾಣರಾಗಿದ್ದಾರೆ.  ಆದಾಗ್ಯೂ ಈಗಿನ ನಾಲ್ಕು ಎಕರೆ ಬೆಳೆ ಯಾವುದೇ ರೋಗ-ರುಜಿನಗಳ ಕಾಟವಿಲ್ಲದಿರುವುದರಿಂದ ರೈತರು ಕೈತುಂಬ ಕಾಂಚಾಣ ಎಣಿಸುತ್ತಿದ್ದಾರೆ.

        ಮೊಬೈಲ್‌ ಸಂಖೈ: 8904358784

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus