Sunday, May 26, 2013
Last Updated: 2:20:45 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆಧುನಿಕ ಮನೆಯ ಆಂತರಿಕ ಅಲಂಕಾರ
    • ಆಧುನಿಕ ಮನೆಯ ಆಂತರಿಕ ಅಲಂಕಾರ

      • ಅನುರಾಧಾ | Feb 16, 2013

        ಆಧುನಿಕ ಗೃಹಾಲಂಕರಣದ ಮುಖ್ಯ ವೈಶಿಷ್ಟé, ವೈವಿಧ್ಯಗಳು ಇಂತಿವೆ. ಸರಳತೆ ಆಧುನಿಕ ಗೃಹಾಲಂಕರಣದ ಅಡಿಪಾಯ. ಹಾಂ! ಸರಳತೆಯ ಸೊಬಗು ಸೋಜಿಗ ನೀಡುವಂಥದ್ದು. ಸಿಂಪಲ್‌ ಎಂದ ಕೂಡಲೇ ಬೋರಿಂಗ್‌ ಎಂದು ಅನಿಸುವುದುಂಟು. ಆದರೆ, ಸಿಂಪಲ್‌ ಇರುವ ಗೃಹಾಲಂಕಾರದಿಂದಲೇ ಎಲ್ಲರ ಗಮನ ಸೆಳೆಯಬಹುದು ಗೊತ್ತೆ? ಬೆಚ್ಚಗಿನ, ಸ್ವಾಗತವೀಯುವ ಅಂದಚಂದದ ಬಣ್ಣ , ವಿನ್ಯಾಸಗಳು, ಆಧುನಿಕ ಆಲಂಕಾರಿಕ ಸಾಮಗ್ರಿಗಳು, ಆಕರ್ಷಕ ಪೀಠೊಪಕರಣಗಳು ಇಲ್ಲಿ ಮುಖ್ಯ. ಗುಂಪು ಗುಂಪಾಗಿ ಇರುವ ಮನೆಯ ಪೀಠೊಪಕರಣ, ಆಲಂಕಾರಿಕ ಸಾಮಗ್ರಿಗಳಿಗಿಂತ, ಸರಳವಾಗಿ ಸಿಂಗರಿಸಿದ ಆಕರ್ಷಕ ಪೀಠೊಪಕರಣ ಸಾಮಗ್ರಿಗಳು ಮಾನಸಿಕ ಪ್ರಸನ್ನತೆ, ಉತ್ಸಾಹ ಹೆಚ್ಚಿಸುತ್ತವೆ ಗೊತ್ತೇನು?! ಅಚ್ಚುಕಟ್ಟುತನ ಮತ್ತು ವ್ಯವಸ್ಥಿತ ಜೋಡಣೆ ಗೃಹಾಲಂಕಾರಕ್ಕೆ ಹೆಮ್ಮೆಯ ಕೋಡು ಮೂಡಿಸುವ ಅಂಶಗಳು.

        ಅಡುಗೆಮನೆಯ ಅಂದ ಮತ್ತು ಕ್ರಿಯಾಶೀಲತೆಗೆ ಇದು ಬಹುಮುಖ್ಯ ಅಂಶ. ಅಲ್ಲವೇ ಮತ್ತೆ ಜೀರಿಗೆಯ ಡಬ್ಬದಲ್ಲಿ ಓಮ ಹಾಕಿಟ್ಟರೆ ಜೀರಾರೈಸ್‌ನ ತಯಾರಿ ಹೇಗಾದೀತು ಕಲ್ಪಿಸಿ ನೋಡೋಣ!?! ಅಂತೆಯೇ ಶೂ ರ್ಯಾಕ್‌ನ ಮೇಲೆ ಪೆನ್‌ ಸ್ಟಾಂಡ್‌, ಟೀಪಾಯ್‌ ಮೇಲೆ ಸಾಕ್ಸ್‌ , ಹೂವಿನ ವಾಜ್‌ನಲ್ಲಿ ಹಳತು,
        ಕೊಳೆತುಹೋದ ಹೂವುಗಳಿದ್ದರೆ - ಈ ಅವ್ಯವಸ್ಥಿತತೆ ಮನೆಯ ಅಂದ ಕಡಿಮೆ ಮಾಡುವುದು ಮಾತ್ರವಲ್ಲ, ಮನದ ಮೂಲೆಯಲ್ಲೂ ಅಸಮಾಧಾನ ಮೂಡಿಸುತ್ತದೆ. ಆದ್ದರಿಂದ ಕ್ರಮಬದ್ಧ ವ್ಯವಸ್ಥಿತ ಜೋಡಣೆ ಮುಖ್ಯ.
        ಆಧುನಿಕ ಅಲಂಕರಣದ ಮೂರನೆಯ ವೈಶಿಷ್ಟéವೆಂದರೆ ತಂತ್ರಜ್ಞಾನದ ಸದುಪಯೋಗ! ಇಲೆಕ್ಟ್ರಾನಿಕ್‌ ಉಪಕರಣ ಇತ್ಯಾದಿಗಳನ್ನು ಮನೆಯ ಒಳಗಿನ ಹಾಗೂ ಕೋಣೆಗಳ ಒಳಗಿನ ಜಾಗ ಅಥವಾ ಸ್ಥಳಾವಕಾಶ ಹೆಚ್ಚಿಸುವಂತಹ ಆಧುನಿಕ ತಂತ್ರಜ್ಞಾನದ, ಉಪಕರಣಗಳ ಉಪಯೋಗ ಮನೆಯ ಸೊಬಗು ಹೆಚ್ಚಿಸುತ್ತದೆ.

        ಉದಾ: ಫ್ಲ್ಯಾಟ್‌ಪ್ಯಾನೆಲ್‌ ಟಿವಿ., ಬಿಲ್ಟ್ ಇನ್‌ ಡಿ. ವಿ.ಡಿ. ಪ್ಲೇಯರ್‌, ಸಣ್ಣ ಫ್ಲ್ಯಾಟ್‌ ಸ್ಕ್ರೀನ್‌ ಟಿವಿ ಇತರ ರೂಮು ಅಥವಾ ಅಡುಗೆ ಮನೆಯಲ್ಲಿ ಇಡಲು- ಹೀಗೆ ಇವು ನೋಡಲೂ ಅಂದ, ಸ್ಥಳಾವಕಾಶವೂ ವರ್ಧಿಸುತ್ತದೆ.

        ಆಧುನಿಕ ಗೃಹಾಲಂಕರಣದ ಇನ್ನೊಂದು ವೈಶಿಷ್ಟéವೆಂದರೆ ಮನೆಯಲ್ಲಿ ಅಲ್ಲಲ್ಲಿ ಸ್ಥಳಾವಕಾಶ (ಸ್ಪೇಸ್‌ ಅಥವಾ ಖಾಲಿ ಜಾಗಗಳನ್ನು) ಬಿಟ್ಟಿರುವುದು. ಮಾತುಗಳ ಮಧ್ಯದ ಮೌನ ಮಾತಿಗೆ ಅಂದ ನೀಡುವಂತೆ, ಓಘ ಹೆಚ್ಚಿಸುವಂತೆ, ಮನೆಯನ್ನು ಅಲಂಕರಿಸುವಾಗ, ಬಗೆಬಗೆಯ ವಸ್ತುಗಳಿಂದ ಅಲಂಕರಿಸುವಾಗ ಅಲ್ಲಲ್ಲಿ ಖಾಲಿಜಾಗ (ಸ್ಪೇಸ್‌) ಇದ್ದಷ್ಟು ಅಂದ ಹೆಚ್ಚುತ್ತದೆ. ಹಾಲ್‌, ಕೋಣೆ ಇತ್ಯಾದಿ ಉದ್ದ ಅಗಲ ಎತ್ತರ ಇತ್ಯಾದಿಗಳಿಗೆ ತಕ್ಕಂತೆ ಉಪಕರಣ ಇತ್ಯಾದಿಗಳನ್ನು ಜೋಡಿಸಬೇಕು. ಸಣ್ಣ ಹಾಲ್‌ನಲ್ಲಿ ದೊಡ್ಡ ಪೀಠೊಪಕರಣಗಳು ಚಂದ ಹೆಚ್ಚಿಸಲಾರವು. ಒಂದರ ಮೇಲೆ ಒಂದರಂತೆ ಉಪಕರಣ ಸಾಮಗ್ರಿಗಳನ್ನು ಹೇರಿ ಅಲಂಕರಿಸುವುದಕ್ಕಿಂತ ಹಿತಮಿತವಾಗಿ ಉಪಕರಣ ಸಾಮಗ್ರಿ ಬಳಸಿದಾಗ ನಡುವಿನ ಸ್ಪೇಸ್‌ ಅಂದ ಹೆಚ್ಚಿಸುತ್ತದೆ.

        ಹಾಂ ಕೊನೆಯದಾಗಿ, ಇನ್ನೊಂದು ವೈಶಿಷ್ಟéವೆಂದರೆ ಅಂತ‌ಹ ಸ್ಪೇಸ್‌ ಅಥವಾ ಖಾಲಿ ಜಾಗಗಳಲ್ಲಿ ಜೀವಂತಿಕೆ ತುಂಬುವ ಸೃಜನಶೀಲ ಕೌಶಲ! ಇದರಿಂದ ಮನೆಗೆ ವಿಶಿಷ್ಟ ಶೋಭೆ ಬರುತ್ತದೆ. ಬಣ್ಣಗಳ ಆಯ್ಕೆ, ಸೂಕ್ತ ವಿನ್ಯಾಸಗಳ ಬಳಕೆ, ವೈಯಕ್ತಿಕತೆಯ ಛಾಪು ಇವೆಲ್ಲವೂ ಮುಖ್ಯ. ಕೋಣೆಯ ಕಾರ್ನರ್‌ನಲ್ಲಿ ನೀವೇ ಪೇಯಿಂಟ್‌ ಮಾಡಿದ ಹೂದಾನಿ, ಜೊತೆಗೆ ನೀವೇ ಜೋಡಿಸಿಟ್ಟ ನಿಮ್ಮ ತೋಟದ ಹೂಗಳು ಹೆಚ್ಚು ಖುಷಿ ಮತ್ತು ಆಪ್ತತೆ ನೀಡುತ್ತವೆ! ಖಾಲಿ ಗೋಡೆಯ ಮೇಲೆ ನಿಮ್ಮ ಮಕ್ಕಳ, ಮೊಮ್ಮಕ್ಕಳ ನಗುವ ಫೋಟೋ ಎಷ್ಟು ಚೇತೋಹಾರಿ ಅಲ್ಲವೇ!

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಸಾಂಸಾರಿಕ ಬದುಕಿನ ಬಗ್ಗೆ , ಗಂಡ- ಹೆಂಡತಿಯರ ಬಗ್ಗೆ, ಮದುವೆಯ ಬಗ್ಗೆ ಎಷ್ಟೊಂದು ಜೋಕ್‌ಗಳನ್ನು ಓದುತ್ತ ಇರುತ್ತೇವೆ. ಹೆಚ್ಚಿನವುಗಳನ್ನು ಓದಿ ನಕ್ಕು ಬಿಡುತ್ತೇವೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus