Tuesday, May 21, 2013
Last Updated: 12:21:30 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಉದ್ಯೋಗದ ಹೊಸ ವ್ಯಾಖ್ಯಾನ !
    • ಉದ್ಯೋಗದ ಹೊಸ ವ್ಯಾಖ್ಯಾನ

      • ರಶ್ಮಿ ಅಭಯಸಿಂಹ | Feb 16, 2013

        ಕಾಲವೊಂದಿತ್ತು. ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ದಕ್ಕಿಸಿಕೊಳ್ಳುವುದೇ ಒಂದು ಸಾಧನೆಯಾಗಿತ್ತು. ಅದು ಸಾಮಾನ್ಯವಾಗುತ್ತಲೇ ಸಾಫr…ವೇರ್‌, ಬಿಪಿಓಗಳ ಹಾವಳಿಯಲ್ಲಿ ಇಡೀ ಉದ್ಯೋಗದ ಕಲ್ಪನೆಯೇ ಹವಾನಿಯಂತ್ರಿತ ಕೊಠಡಿಗೆ ಸೀಮಿತವಾಯಿತು. ಆದರೆ, ಇಂದು ಉದ್ಯೋಗ ಎಂಬುದು ವ್ಯಾಖ್ಯಾನಕ್ಕೂ ಮೀರಿ ಬೆಳೆಯುತ್ತಿದೆಯೇನೋ ಅನಿಸುತ್ತಿದೆ. ಉದ್ಯೋಗಕ್ಕೂ ಹವ್ಯಾಸಕ್ಕೂ ನಡುವೆ ಇರುವ ಅಂತರ ಕಡಿಮೆಯಾಗಿ ಹವ್ಯಾಸವನ್ನೇ ಉದ್ಯೋಗವಾಗಿಸಿಕೊಂಡು ಯಶಸ್ವಿಯಾಗಿ ಬದುಕುತ್ತಿರುವ ಎಷ್ಟೋ ಮಂದಿ ನಮ್ಮ ನಡುವೇ ಇ¨ªಾರೆ.

        ನನ್ನ ವೈಯುಕ್ತಿಕ ನೆಲೆಯಲ್ಲಿ ಹೇಳುವುದಾದರೆ, ಮೊದಲು ನಟನೆ ನನ್ನ ಹವ್ಯಾಸವಾಗಿತ್ತು. ಆದರೆ ಇಂದು ನಾನದನ್ನು ನನ್ನ ಕೆಲಸ ಎಂದೇ ಹೇಳುತ್ತೇನೆ. ಇಂದು ಸುಮಾರು ಅರುವತ್ತರಷ್ಟು ಟಿ.ವಿ. ಧಾರಾವಾಹಿಗಳು ಕನ್ನಡದÇÉೇ ಪ್ರಸಾರವಾಗುತ್ತಿವೆ. ಇÇÉೇ ಉದ್ಯೋಗಾವಕಾಶಗಳ ಮಟ್ಟವನ್ನು ನಾವು ಊಹಿಸಬಹುದು. ಸ್ವತ್ಛ ಭಾಷೆ, ಮಾತುಗಳನ್ನು ನೆನಪಿಟ್ಟುಕೊಳ್ಳುವ ತಾಕತ್ತು, ನಿರ್ದೇಶಕ ಹೇಳಿದ್ದನ್ನು ಅರ್ಥೈಸಿಕೊಂಡು ಅಭಿವ್ಯಕ್ತಿಸುವ ಸಾಮರ್ಥ್ಯ ಇದ್ದರೆ ನಟನಾಗಿ ಇಲ್ಲಿ ಗೆದ್ದಂತೆಯೇ. ನಮಗೆ ಹೊಂದುವ ಅಥವಾ ನಾವು ಇಷ್ಟ ಪಡುವ ಪಾತ್ರದ ಆಯ್ಕೆಯ ಸ್ವಾತಂತ್ರ್ಯ ನಮ್ಮದೇ. ನಮ್ಮ ಅಭಿರುಚಿ, ನಮ್ಮ ವ್ಯಕ್ತಿತ್ವಕ್ಕೆ ತಕ್ಕಂಥ ಪಾತ್ರಗಳಲ್ಲಿ ಸುಲಭವಾಗಿ ಗೆಲ್ಲಬಹುದು. ಪಾತ್ರದ ಆಯ್ಕೆಯ ಜೊತೆಗೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುತ್ತಿರುತ್ತೇವೆಂಬುದು ವಿಶೇಷವೇ ತಾನೇ? ಪಾತ್ರವನ್ನು ಅರ್ಥ ಮಾಡಿಕೊಳ್ಳುತ್ತ ನಮ್ಮನ್ನೂ ನಾವು ಗೊತ್ತಿಲ್ಲದಂತೇ ವಿಶ್ಲೇಷಿಸುತ್ತೇವೆ. ಹಾಗಾಗಿ, ಈ ಕೆಲಸ ವೈಯುಕ್ತಿಕವಾಗಿಯೂ ನಮ್ಮನ್ನು ಬೆಳೆಸುತ್ತದೆಂದೇ ನನ್ನ ಅಭಿಪ್ರಾಯ.

        ಇನ್ನೊಂದು ಮುಖ್ಯವಾದ ಸಂಗತಿ ಹೇಳಲೇ ಬೇಕು. ಈ ಧಾರಾವಾಹಿ ನಟನೆಯ ವಿಶೇಷ ಎಂದರೆ ನಮ್ಮ ಕೆಲಸದ ಬಗ್ಗೆ ಜನರ ಅಭಿಪ್ರಾಯ ನಿರಂತರವಾಗಿ, ನೇರವಾಗಿ ನಮಗೇ ಗೊತ್ತಾಗುತ್ತಿರುತ್ತದೆ. ಎಷ್ಟೋ ಬಾರಿ ತರಕಾರಿ ಕೊಳ್ಳಲು ಹೋದಾಗ, ಹೊಟೇಲ್‌ಗ‌ಳಲ್ಲಿ, ಟ್ರಾಫಿಕ್‌ನಲ್ಲಿ, ಪಾರ್ಲರ್‌ನಲ್ಲಿ,  ಹೀಗೆ ಅಲ್ಲಲ್ಲಿ ಜನ ನಾವು ಮಾಡಿರುವ ಅವರಿಗಿಷ್ಟವಾದ ಪಾತ್ರಗಳ ಮೂಲಕ ನಮ್ಮನ್ನು ಗುರುತಿಸುತ್ತಲೇ ಇರುತ್ತಾರೆ ಮತ್ತು ಅವರಿಗನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಅದು ಕೆಟ್ಟದ್ದಿರಬಹುದು ಒಳ್ಳೆಯದೂ ಇರಬಹುದು, ಜೀರ್ಣಿಸಿಕೊಳ್ಳುವ ಶಕ್ತಿ ನಮಗಿರಬೇಕಷ್ಟೇ! ಟಿ.ವಿ ಧಾರಾವಾಹಿ ವೀಕ್ಷಕರು ಈ ವಿಷಯದಲ್ಲಿ ಬಹಳವೇ ಮುಗ್ಧರು.

        "ಕಾಟ ಕೊಡುವ ಅತ್ತೆಗೆ ಚೆನ್ನಾಗಿ ಪಾಠ ಕಲಿಸು' ಎಂದು ಬುದ್ಧಿ ಮಾತು ಹೇಳುತ್ತಾರೆ, "ಎಷ್ಟು ಎಳೀತೀರಾ ಸೀರಿಯಲ…? ಇನ್ನಾದ್ರೂ ಮುಗ್ಸಿ, ಬೈಕ್ಕೊಂಡು ಬೈಕ್ಕೊಂಡು ನೋಡ್ತೀವಿ' ಎನ್ನುವವರೂ ಇರುತ್ತಾರೆ. ಇನ್ನೆಷ್ಟೋ ಮಂದಿ ಪಾತ್ರಗಳ ಜೊತೆಗೆ ಭಾವನಾತ್ಮಕ ಸಂಬಂಧವನ್ನೇ ಬೆಳೆಸಿಕೊಂಡಿರುತ್ತಾರೆ. ದಾರಿಯಲ್ಲಿ ನನ್ನ ಪಾಡಿಗೆ ತರಕಾರಿ ಕೊಂಡು ಹೋಗುತ್ತಿದ್ದವಳನ್ನು ಕೈ ಹಿಡಿದೆಳೆದು ಮನೆಗೆ ಕರಕೊಂಡು ಹೋಗಿ ಬೋರ್ನ್ವಿಟಾ, ಬಿಸ್ಕಟ್‌ ಕೊಟ್ಟ ಅಜ್ಜಿಯನ್ನು ನಾನೆಂದಿಗೂ ಮರೆಯುವುದು ಸಾಧ್ಯವಿಲ್ಲ. ಅದೇ ದಿನವೇ ಕಾಂಪೌಂಡ್‌ ಗಿಡಗಳಿಗೆ ನೀರು ಹಾಕುತ್ತಿದ್ದ ಹೆಂಗಸೊಬ್ಬಳು  ""ಓ.. ನೀವು ಇಷ್ಟೇ ಚೆನ್ನಾಗಿರೋದಾ? ಟಿ.ವಿ. ಯಲ್ಲಿ ಲೈಟಿಂಗ್‌, ಮೇಕ್‌ಅಪ್‌ ಎÇÉಾ ಮಾಡ್ತೀರÇÉಾ ಅದಕ್ಕೇ ತುಂಬಾ ಚಂದ ಅನಿಸ್ತೀರೇನೋ' ಎಂದದ್ದನ್ನೂ ಮರೆಯಲು ಸಾಧ್ಯವಾ? ನಾನು ತರಕಾರಿ ಕೊಳ್ಳಲು ಹೋಗುವ ರಿಲಯ®Õ… ಫ್ರೆಶ್‌ ಮುಂದೆ ಹೂ ಮಾರುವ ಹುಡುಗನೊಬ್ಬನಿ¨ªಾನೆ. ನಾನಲ್ಲಿ ಹೋದಾಗಲೆಲ್ಲ ಅವನು ನನಗೊಂದು ಗುಲಾಬಿ, ಒಂದು ಮೊಳ ಮಲ್ಲಿಗೆ ಕೊಡುವುದನ್ನು ರೂಢಿಸಿಕೊಂಡು ಬಿಟ್ಟಿ¨ªಾನೆ. ನಂಗ್ಯಾಕೆ ಕೊಡ್ತೀರಿ?

        ವ್ಯಾಪಾರ ಮಾಡಿ ಎಂದರೆ, ""ನನ್ನನ್ನ ನಿಮ… ತಮ್ಮಾ ಅಂತ ತಿಳ್ಕೊಳ್ಳಕ್ಕಾ... ಸೀರಿಯÇÉಾಗೆ ಯಾವಾಗ್ಲೂ ಅಳ್ತಾ ಇರ್ತೀರಿ, ಹೂವ ಮುಡ್ಕೊಂಡು ಖುಷಿಯಾಗಿರೋದ್ಯಾವಾಗ?...' ಅಂತಾನೆ.  ಇನ್ನೂ ಹೇಳುವುದಾದರೆ, ಇತ್ತೀಚೆಗಷ್ಟೇ ಅದ್ಯಾರೋ ಮಹಿಳೆಯೊಬ್ಬರು ಪಾಪ, ನನಗೆ ಒಳ್ಳೆಯದಾಗಲಿ ಎಂದು ದೇವಸ್ಥಾನದಲ್ಲಿ ಅರ್ಚನೆ ಮಾಡಿಸ್ತಾರೆ ಎಂದು ತಿಳಿದು ಬಹಳ ವಿಸ್ಮಯವಾಯಿತು!! ಮನುಷ್ಯರು ಹೇಗೆÇÉಾ, ಯಾವ ಮೂಲಕವೆಲ್ಲ ಭಾವಾನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾರೆಂದು ಆಶ್ಚರ್ಯವೂ ಆಯಿತು.

        ನಾವು ಕೆಲಸ ಎಂದಷ್ಟೇ ಮಾಡಿದರೂ ಅದರ ಪರಿಣಾಮ ಮಾತ್ರ ಅಪಾರ. ಜನಗಳ ಪ್ರೀತಿ, ಅಭಿಪ್ರಾಯಗಳು ನಿಜಕ್ಕೂ ಬೆಲೆ ಕಟ್ಟಲಾಗದ್ದು. ಇದರ ಜೊತೆಗೇ ನಾವು ಮುಂದೆ ಎಂಥಾ ಪಾತ್ರಗಳನ್ನು ಮಾಡಿದರೆ ಚೆನ್ನಾಗಿದ್ದೀತು, ಯಾವುದು ಗೆಲ್ಲಬಹುದು ಯಾವುದು ವ್ಯರ್ಥವಾಗಬಹುದು ಎಂಬ ಕಲ್ಪನೆ ನಮಗೆ ಅಲ್ಲÇÉೇ ಗೊತ್ತಾಗುತ್ತಿರುತ್ತದೆ. ಯಾವುದೇ ಉದ್ಯೋಗದÇÉಾದರೂ ತಾನು ಮಾಡುವ ಕೆಲಸವನ್ನು ಹೇಗೆ ಮುಂದುವರಿಸಬೇಕೆಂಬ ಕಲ್ಪನೆ ಇದ್ದರೆ ಆ ಉದ್ಯೋಗದಲ್ಲಿ ಯಶಸ್ಸು ಕಾಣಲು ಸುಲಭ.

        ಇಲ್ಲಿ ಕೇವಲ ನಟನೆಯಲ್ಲ, ನಟನೆಯ ಜೊತೆಗೇ ಇಡೀ ಚಿತ್ರೀಕರಣದ ಬೇರೆ ಬೇರೆ ವಿಭಾಗಗಳ ಮೇಲೆ ಕೊಂಚ ಗಮನವಿದ್ದರೆ ಆಸಕ್ತರು ಅದನ್ನೂ ನೋಡ ನೋಡುತ್ತಲೇ ಕಲಿಯಬಹುದು.

        ಇಂದು ಉದ್ಯೋಗ ಎಂದರೆ ಹೀಗೇ ಎಂಬ ಚೌಕಟ್ಟು ಕಳಚಿ ಹೋಗಿದೆ. ಫ್ರೀ ಲಾನ್ಸಿಂಗ್‌ ಸಾಮಾನ್ಯವಾಗಿದೆ. ಒಬ್ಬೊಬ್ಬರೊಳಗಿರುವ ಕೌಶಲ್ಯವೇ ಉದ್ಯೋಗವಾಗಬಹುದು. ಸ್ವತಂತ್ರವಾಗಿ ಯೋಚಿಸಬಹುದು, ಸ್ವಂತವಾಗಿ ಹೊಸ ಹೊಸತನ್ನು ಹುಟ್ಟು ಹಾಕಬಹುದು. ಮಾಡುತ್ತಿರುವುದನ್ನು ಬಿಡದೆ ಮುನ್ನುಗ್ಗುವ ಛಾತಿ ಈ ಉದ್ಯೋಗದ  ಸವಾಲು. ಅದನ್ನು ಎದುರಿಸುತ್ತ ಹೋದರೆ ನಮ್ಮ ಸುಂದರ ಬದುಕನ್ನು ಇಂಚಿಂಚಾಗಿ ನಾವೇ ಕಟ್ಟಬಹುದು. ಉದ್ಯೋಗಕ್ಕೂ ಹವ್ಯಾಸಕ್ಕೂ ಇರುವ ಅಂತರವನ್ನು ಮರೆಸಿ ಹೊಸ ಜೀವನ ಕ್ರಮವನ್ನು ಅಳವಡಿಸಬಹುದು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus