ಕೆ. ವಿ. ತಿರುಮಲೇಶ್ | Feb 17, 2013
ನನ್ನ ಕನಸಿನ ಕಾಲೇಜು ಲೈಬ್ರರಿ ಗಾಳಿ ಬೆಳಕಿರುವ ವಿಶಾಲವಾದ ಒಂದು ಹಾಲು. ಜಾnನಾರ್ಥಿಯಾಗಿ ಅಲ್ಲಿಗೆ ಯಾರು ಬಂದರೂ ಸ್ವಾಗತಾರ್ಹ ಎನಿಸುವ ವಾತಾವರಣ ಅಲ್ಲಿ ಇರುತ್ತದೆ. ಪುಸ್ತಕಗಳನ್ನು ಓರಣವಾಗಿ ಇರಿಸಿದ ತೆರೆದ ಶೆಲು#ಗಳ ಮುಕ್ತ ಪ್ರವೇಶದ ಲೈಬ್ರರಿ ಅದು.
ನನ್ನ ಕನಸಿನ ಕಾಲೇಜು ಲೈಬ್ರರಿಯೊಂದಿದೆ. ಅದು ಗಾಳಿ ಬೆಳಕಿರುವ ವಿಶಾಲವಾದ ಒಂದು ಹಾಲು. ಜಾnನಾರ್ಥಿಯಾಗಿ ಅಲ್ಲಿಗೆ ಯಾರು ಬಂದರೂ ಸ್ವಾಗತಾರ್ಹ ಎನಿಸುವ ವಾತಾವರಣ ಅಲ್ಲಿ ಇರುತ್ತದೆ. ಪುಸ್ತಕಗಳನ್ನು ಓರಣವಾಗಿ ಇರಿಸಿದ ತೆರೆದ ಶೆಲು#ಗಳ ಮುಕ್ತ ಪ್ರವೇಶದ ಲೈಬ್ರರಿ ಅದು. ಓರಣವಾಗಿ ಎಂದರೆ ಲೈಬ್ರರಿ ಸೈನ್ಸ್‌ಗೆ ಅನುಸಾರವಾಗಿ ಪುಸ್ತಕಗಳನ್ನು ವಿಂಗಡಿಸಿ, ಒಂದೊಂದಕ್ಕೂ ಕಾಲ್ ನಂಬರನ್ನೂ ಏಕ್ಸೆಶನ್ ನಂಬರನ್ನೂ ಕೊಟ್ಟು ಕ್ರಮಬದ್ಧವಾಗಿ ಇರಿಸಿದ ಪುಸ್ತಕಗಳು. ಉದಾಹರಣೆಗೆ, ಈ ವ್ಯವಸ್ಥೆ ಡ್ನೂವಿ ದಶಾಂಶ ಪದ್ಧತಿಯ ಪ್ರಕಾರ ಇರಬಹುದು ಅಥವಾ ಅಮೇರಿಕನ್ ಲೈಬ್ರರಿ ಆಫ್ ಕಾಂಗ್ರೆಸ್ ಪದ್ಧತಿಯ ಪ್ರಕಾರ ಇರಬಹುದು. ಪುಸ್ತಕಗಳ ಬೆನ್ನ ಹುರಿಯನ್ನು ನೋಡಿದಾಗ ಗೊತ್ತಾಗುತ್ತದೆ : ಅದರ ಕೆಳ ಭಾಗದಲ್ಲಿ ಅಕ್ಷರ ಮತ್ತು ಅಂಕೆಗಳಲ್ಲಿ ಕಾಲ್ ನಂಬರ್ ಬರೆದ ಚೀಟಿ ಅಂಟಿಸಿರುತ್ತದೆ. ಏಕ್ಸೆಶನ್ ನಂಬರು ಒಳಗೆ ಕೊಟ್ಟಿರುತ್ತದೆ. ಪುಸ್ತಕದ ಪ್ರತ್ಯೇಕತೆಯನ್ನು ಗುರುತಿಸಲು ಈ ಎರಡೂ ನಂಬರುಗಳು ಅಗತ್ಯ.
ವಿದ್ಯಾರ್ಥಿಯೊಬ್ಬನಿಗೆ (ಅಥವಾ ಒಬ್ಬಳಿಗೆ) ಫಿಲಾಸಫಿಗೆ ಸಂಬಂಧಿಸಿದ ಪುಸ್ತಕವೊಂದು ಬೇಕೆಂದು ಇಟ್ಟುಕೊಳ್ಳೋಣ. ಯಾವುದೋ ಒಂದು ಪುಸ್ತಕವಲ್ಲ : ಬಟ್ರೆìಂಡ್ ರಸೆಲನ ಹಿಸ್ಟರಿ ಆಫ್ ವೆಸ್ಟರ್ನ್ ಫಿಲಾಸಫಿ. ಮುಕ್ತ ಪ್ರವೇಶದ ಲೈಬ್ರರಿಯಾದುದರಿಂದ ಆತ ಲೈಬ್ರರಿ ಸಹಾಯಕರ ಮರ್ಜಿ ಕಾಯುವ ಅಗತ್ಯವಿಲ್ಲ. ಆದರೆಪುಸ್ತಕ ಎಲ್ಲಿದೆ ಎನ್ನುವುದು ಅತನಿಗೆ ಗೊತ್ತಿರಬೇಕು. ಅದು ಹೇಗೆ? ಪುಸ್ತಕದ ಕಾಲ್ ನಂಬರ್ ಗೊತ್ತಿದ್ದರೇನೇ ಇದು ಸಾಧ್ಯ. ಲೈಬ್ರರಿಯಲ್ಲಿರುವ ಎಲ್ಲಾ ಪುಸ್ತಕಗಳದೊಂದು ಪಟ್ಟಿ ಅರ್ಥಾತ್ ಕ್ಯಾಟಲಾಗ್ ಇರುತ್ತದೆ. ಹಿಂದೆ ಇದು ಚಿಕ್ಕ ಚಿಕ್ಕ ಕಾರ್ಡುಗಳಲ್ಲಿ ಅಕಾರಾದಿಯಾಗಿ ಡ್ರಾವರುಗಳಲ್ಲಿ ಇಸ್ಪೀಟೆಲೆಗಳಂತೆ ಪೋಣಿಸಿ ಸಿಗುತ್ತಿತ್ತು. ಈಗ ಅದು ಕಂಪ್ಯೂಟರಿನಲ್ಲಿ ಲಭ್ಯ.
ನಮ್ಮ ವಿದ್ಯಾರ್ಥಿಗೆ ಲೇಖಕನ ಹೆಸರು ಮರೆತಿದೆ ಅಂದುಕೊಳ್ಳೋಣ, ಆದರೆ, ಪುಸ್ತಕದ ಶೀರ್ಷಿಕೆನೆನಪಿದೆ. ಸರಿ, ಆತ ಹಿಸ್ಟರಿ ಆಫ್ ವೆಸ್ಟರ್ನ್ ಫಿಲಾಸಫಿ ಎಂಬ ಕಾರ್ಡಿಗೆ ಹುಡುಕಬಹುದು; ಅಥವಾ ಶೀರ್ಷಿಕೆ ಮರೆತಿದೆ, ಆದರೆ ಲೇಖಕನ ಹೆಸರು ನೆನಪಿದೆ ಎಂದಾದರೆ ರಸೆಲ್ ಎಂಬಲ್ಲಿ ಹುಡುಕ ಬಹುದು. ರಸೆಲ್ ಬರೆದ ಒಂದಕ್ಕಿಂತ ಹೆಚ್ಚು ಪುಸ್ತಕದ ದಾಖಲೆ ಅಲ್ಲಿ ಅವನಿಗೆ ದೊರಕಲೂ ಬಹುದು. ಇಲ್ಲಿ ಒಂದು ವಿಷಯ, ತಿಳಿದವರಿಗೆ ಸಾಮಾನ್ಯ, ಆದರೆ ಹೊಸಬರಿಗೆ ತೊಂದರೆ ಕೊಡುವಂಥದು: ಪುಸ್ತಕ ಪಟ್ಟಿಯಲ್ಲಿ ಬಟ್ರೆìಂಡ್ ಎಂಬ ಮೊದಲ ಹೆಸರನ್ನು ಹುಡುಕದೆ, ಕೊನೆಯ ಹೆಸರಾದ (ಸರ್ನೇಮ್) ರಸೆಲ್ ಎಂಬುದನ್ನು ಹುಡುಕಬೇಕು. ಹೆಚ್ಚಾಗಿ ಲೇಖಕರ ಉಪನಾಮವೇ ಕಾರ್ಡಿನಲ್ಲಿ ಮೊದಲು ನಮೂದಾಗಿರುವುದು: ರಸೆಲ್, ಬಟ್ರೆìಂಡ್ ಎಂಬುದಾಗಿ. ಅದೇ ರೀತಿ, ಶೀರ್ಷಿಕೆ ದಿ, ಎ ಮುಂತಾದ ವ್ಯಾಕರಣ ಶಬ್ದಗಳಿಂದ ಸುರುವಾಗುವುದಾದರೆ, ಅವುಗಳನ್ನು ಬಿಟ್ಟು ನಿಜಕ್ಕೂ ಅರ್ಥವತ್ತಾದ ಮುಂದಣ ಪದದ ಆದ್ಯಕ್ಷರಕ್ಕೆ ಹೋಗಬೇಕು.
ಈಗಲಾದರೆ, ಹೆಚ್ಚಿನ ಲೈಬ್ರರಿಗಳಲ್ಲೂ ಈ ಪಟ್ಟಿಯನ್ನು ಕಂಪ್ಯೂಟರಿಗೆ ಅಳವಡಿಸಲಾಗಿರುತ್ತದೆ. ಕಂಪ್ಯೂಟರಿನಲ್ಲಿ ಹುಡುಕುವುದಕ್ಕೆ ವಿದ್ಯಾರ್ಥಿ ಕಲಿಯಬೇಕಾಗುತ್ತದೆ. ಇದು ಸುಲಭ, ಆದರೆ ಆರಂಭದಲ್ಲಿ ಸ್ವಲ್ಪ$ ಮಾರ್ಗದರ್ಶನ ಬೇಕಾಗುತ್ತದೆ. ಹೀಗೆ ಹುಡುಕಿ ಪುಸ್ತಕದ ಕಾಲ್ ನಂಬರನ್ನು ಮತ್ತು ಏಕ್ಸೆಶನ್ ನಂ¸ರನ್ನು ಒಂದು ಚಿಕ್ಕ ಚೀಟಿಯಲ್ಲಿ ಗುರುತಿಸಿಕೊಂಡು ಪುಸ್ತಕದ ರ್ಯಾಕಿಗೆ ಬಂದು ನಿಜವಾದ ಪುಸ್ತಕವನ್ನು ಹುಡುಕಬೇಕು. ಈಗ ಕೈಯಲ್ಲಿರುವ ಚೀಟಿಯಲ್ಲಿ Rಖೀಖ ಎಂಬ ಮೂರು ಅಕ್ಷರಗಳೂ (ಮೂರರ ನಂತರ ಬಿಂದು ಹಾಕಿ ಇನ್ನೂ ಒಂದೋ ಎರಡೋ ಅಕ್ಷರಗಳು ಇರುವುದು ಸಾಧ್ಯ), ಮತ್ತು 100ರಿಂದ 199ರ ವರೆಗಿನ ಯಾವುದಾದರೊಂದು ಅಂಕೆಯೂ ಇರುತ್ತದೆ; ಇದು ಪುಸ್ತಕದ ಕಾಲ್ ನಂಬರ್. ಶೆಲ್ಫಿನಲ್ಲಿನ ಪುಸ್ತಕಗಳ ಬೆನ್ನ ಹುರಿಯನ್ನು ನೋಡುತ್ತ ಪುಸ್ತಕವನ್ನು ಗುರುತಿಸುವುದಕ್ಕೆ ಇಷ್ಟು ಸಾಕು.
ಲೈಬ್ರರಿ ಸೈನ್ಸ್ ಪ್ರಕಾರ ಜಾnನಶಾಖೆಯನ್ನು ಮೇಲಿಂದ ಕೆಳಕ್ಕೆ ಹತ್ತು ಹತ್ತಾಗಿ ಶಾಖೋಪಶಾಖೆಗಳಲ್ಲಿ ವಿಂಗಡಿಸಿರುತ್ತಾರೆ. 100ರಿಂದ 199ರ ತನಕದ್ದು ಫಿಲಾಸಫಿ ಮತ್ತು ಸೈಕಾಲಜಿ. ಇದರೊಳಗೆ ಹತ್ತು ಹತ್ತಾಗಿ ಉಪಶಾಖೆಗಳು, ಆ ಉಪಶಾಖೆಗಳಿಗೂ ಉಪಶಾಖೆಗಳು ಇರುತ್ತವೆ. ಪುಸ್ತಕ ಹುಡುಕುವ ನಮ್ಮ ವಿದ್ಯಾರ್ಥಿ ಅಷ್ಟೊಂದು ಉಪವಿಭಾಗಗಳನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವ ಅಗತ್ಯವಿಲ್ಲ. ಅದರೆ, ವಿದ್ಯಾರ್ಥಿಗಳು ತಂತಮ್ಮ ಜಾnನಶಾಖೆಗಳ ಈ ಮುಖ್ಯ ನಂಬರುಗಳನ್ನು ನೆನಪಿಟ್ಟುಕೊಂಡರೆ ಒಳ್ಳೆಯದು. ಮುಂದೆ ಅವರು ಯಾವುದೇ ಹೊಸ ಲೈಬ್ರರಿಗೆ ಹೋದರೂ ತಮ್ಮ ಜಾnನಶಾಖೆಯ ಪುಸ್ತಕಗಳಿರುವ ಕಡೆ ಹೋಗುವುದಕ್ಕೆ ಅನುಕೂಲವಾಗುತ್ತದೆ. ಉದಾಹರಣೆಗೆ, ನೀವು ಸಾಹಿತ್ಯದ ವಿದ್ಯಾರ್ಥಿಯಾಗಿದ್ದರೆ, 800-899 ನಿಮ್ಮ ಸಂಖ್ಯೆಯಾಗಿರುತ್ತದೆ. ಒಮ್ಮೆ ಅಭ್ಯಾಸಕ್ಕೆ ಬಂದರೆ ಹೀಗೆ ಪುಸ್ತಕ ಹುಡುಕುವುದು ಕಷ್ಟವಾಗುವುದಿಲ್ಲ. ಸಾಮಾನ್ಯವಾಗಿ ಒಳ್ಳೆಯ ಲೈಬ್ರರಿಗಳಲ್ಲಿ ಈ ಮುಖ್ಯಶಾಖೆಗಳ ನಂಬರುಗಳ ಪಟ್ಟಿಯನ್ನು ತೋರಿಸುವ ಒಂದು ಫಲಕ ಹಾಕಿರುತ್ತದೆ. ನನ್ನ ಕನಸಿನ ಕಾಲೇಜು ಲೈಬ್ರರಿಯಲ್ಲಂತೂ ಇದು ಇದ್ದೇ ಇದೆ. ಅಲ್ಲದೆ, ನಿಘಂಟುಗಳು, ಆಕರಗ್ರಂಥಗಳು, ಭೂಪಟಗಳು ಮುಂತಾದ ರೆಫರೆನ್ಸ್ ಕೃತಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿರುತ್ತದೆ, ಕೆಳಗಿನ ರ್ಯಾಕುಗಳಲ್ಲಿ, ಸುಲಭವಾಗಿ ಕೈಗೆ ಸಿಗುವ ಹಾಗೆ.
ಒಂದು ವೇಳೆ, ವಿದ್ಯಾರ್ಥಿ ಹುಡುಕುವ ಪುಸ್ತಕ ಅದು ಇರಬೇಕಾದಲ್ಲಿ ಇಲ್ಲ ಅಂದುಕೊಳ್ಳೋಣ. ಹಾಗಿದ್ದಲ್ಲಿ ಮೂರು ಸಾಧ್ಯತೆಗಳಿವೆ:
1. ಯಾರೋ ಅದನ್ನು ಕಣ್ಣುತಪ್ಪಿ$ಇನ್ನೊಂದು ಕಡೆ ಇರಿಸಿದ್ದಾರೆ.
2. ಅದನ್ನೀಗ ಲೈಬ್ರರಿಯೊಳಗೇ ಇನ್ನೊಬ್ಬರು ಉಪಯೋಗಿಸುತ್ತಿದ್ದಾರೆ. 3. ಮನೆಯಲ್ಲಿ ಓದಲೆಂದು ಯಾರೋ ಲೈಬ್ರರಿಯಿಂದ ಹೊರಗೆ ಒಯ್ದಿದ್ದಾರೆ. ಈಗ ವಿದ್ಯಾರ್ಥಿಗೆ ಲೈಬ್ರರಿ ಸಹಾಯಕರ ಸಹಾಯ ಬೇಕಾಗುತ್ತದೆ. ಅವರು ತಮ್ಮಲ್ಲಿರುವ ದಾಖಲೆ ನೋಡಿ ಪುಸ್ತಕಕ್ಕೆ ಏನಾಗಿದೆ ಎಂದು ಕಂಡುಹಿಡಿದು ತಿಳಿಸುತ್ತಾರೆ. ಪುಸ್ತಕವನ್ನು ಹೊರೆಗೆ ಯಾರಾದರೂ ಒಯ್ದಿದ್ದರೆ ಅದು ವಾಪಸು ಬರುವ ದಿನದ ತನಕ ಕಾಯಬೇಕಾಗುತ್ತದೆ. ಲೈಬ್ರರಿ ಹಾಲಿನಲ್ಲೇ ಬಳಕೆಯಾಗುತ್ತಿದ್ದರೆ ಆ ಬಳಕೆ ಮುಗಿಯುವ ವರೆಗೆ ಕಾಯಬೇಕಾಗುತ್ತದೆ. (ಅಥವಾ ಪುಸ್ತಕವನ್ನು ಯಾರಾದರೂ ಮೇಜಿನಲ್ಲಿರಿಸಿ ಹೋಗಿರಲೂ ಬಹುದು!) ಆದರೆ ಶೆಲ್ಫಿನ ತಪ್ಪು$ಜಾಗದಲ್ಲಿ ಇರಿಸಿದ್ದರೆ ಅದನ್ನು ಹುಡುಕುವುದು ಸುಲಭವಲ್ಲ. ಆದರೂ ಲೈಬ್ರರಿ ಚಿಕ್ಕದಾಗಿದ್ದರೆ ಲೈಬ್ರರಿ ಸಹಾಯಕರು ಇದನ್ನು ಮಾಡಬಹುದು.
ಹೀಗೆ ಪುಸ್ತಕ ಹುಡುಕುತ್ತ ತಪ್ಪು$ ಜಾಗದಲ್ಲಿ ಇರಿಸುವುದು ಮುಕ್ತ ಪ್ರವೇಶದ ಲೈಬ್ರರಿಗಳಲ್ಲಿನ ಒಂದು ಸಮಸ್ಯೆ. ಯಾಕೆಂದರೆ ತಪ್ಪು$ ಜಾಗದಲ್ಲಿರಿಸಿದ ಪುಸ್ತಕ ಒಂದರ್ಥದಲ್ಲಿ ಕಳೆದುಹೋದಂತೆಯೇ! ಇದನ್ನು ತಪ್ಪಿ$ಸುವುದಕ್ಕಾಗಿಯೇ ಹೆಚ್ಚಿನ ಕಾಲೇಜು ಲೈಬ್ರರಿಗಳಲ್ಲೂ ಲೈಬ್ರರಿ ಸಹಾಯಕರು ವಿದ್ಯಾರ್ಥಿಗಳನ್ನು ಶೆಲು#ಗಳ ಕಡೆ ಹೋಗಲು ಬಿಡುವುದಿಲ್ಲ. ಯಾವ ಪುಸ್ತಕ ಬೇಕು? ಎಂದು ಕೇಳುತ್ತಾರೆ. ವಿದ್ಯಾರ್ಥಿಗಳು ಉತ್ತರಿಸುತ್ತಾರೆೆ. ಸರಿ, ಪುಸ್ತಕ ಶೆಲ್ಫಿನಲ್ಲಿದ್ದರೆ ಲೈಬ್ರರಿ ಸಹಾಯಕರೇ ಹೋಗಿ ಅದನ್ನು ತಂದು ಕೊಡುತ್ತಾರೆ. ಇದೇ ಸುಲಭವಲ್ಲವೇ ಎಂದು ಕೇಳಬಹುದು. ಅಲ್ಲ. ಯಾಕೆಂದರೆ, ಪುಸ್ತಕ ಮತ್ತು ವಿದ್ಯಾರ್ಥಿಯ ನಡುವೆ ಮಧ್ಯವರ್ತಿಯೊಬ್ಬ ಇದ್ದಷ್ಟೂ ಅದೊಂದು ತಡಯೇ ಸರಿ, ವಾಸ್ತವದ ತಡೆ ಮತ್ತು ಅದಕ್ಕೂ ಹೆಚ್ಚಾಗಿ ಸೈಕಲಾಜಿಕಲ್ ತಡೆ. ಅಲ್ಲದೆ, ಪುಸ್ತಕವನ್ನು ತಾನೇ ಹುಡುಕುತ್ತ ವಿದ್ಯಾರ್ಥಿ ಇತರ ಪುಸ್ತಕಗಳ ಪರಿಚಯ ಮಾಡಿಕೊಳ್ಳುವುದು ಸಾಧ್ಯ. ಯಾರಿಗೆ ಗೊತ್ತು, ವಿದ್ಯಾರ್ಥಿಗೆ ಬೇಕೆಂದಿರುವ ಪುಸ್ತಕಕ್ಕಿಂತ ಒಳ್ಳೆಯ ಪುಸ್ತಕವೊಂದು ಅಕಸ್ಮಿಕವಾಗಿ ಸಿಗಲೂ ಬಹುದು! ಅಲ್ಲದೆ, ನನ್ನ ಕನಸಿನ ಕಾಲೇಜಿನ ವಿದ್ಯಾರ್ಥಿಗಳು ಯಾವಾಗಲೂ ಪುಸ್ತಕವನ್ನು ತಟ್ಟಿಯಿಂದ ತಟ್ಟಿಯ ತನಕ ಓದದೆ ಇರಬಹುದು; ಒಂದು ವಿಷಯದ ಮೇಲೆ ಹಲವು ಲೇಖಕರು ಏನು ಹೇಳಿದ್ದಾರೆ ಎನ್ನುವುದನ್ನು ನೋಡುವುದು ಅವರ ಆಸಕ್ತಿಯಿರಬಹುದು. ಆಗ ಅವರು ಶೆಲ್ಫಿಗೆ ಹೋಗಿ ತೋಳು ತುಂಬ ಪುಸ್ತಕಗಳನ್ನು ಎತ್ತಿಕೊಂಡು ಬಂದು ಮೇಜಿನ ಮೇಲಿರಿಸಿ ಅಲ್ಲಿ ತಮಗೆ ಬೇಕಾದ ಪುಟಗಳನ್ನು ಓದಲು ಇಷ್ಟಪಡುತ್ತಾರೆ. ಇದಕ್ಕೆ ಮುಕ್ತಪ್ರವೇಶ ಅಗತ್ಯವಾಗುತ್ತದೆ.
ನಿರ್ಬಂಧಿತ ಪ್ರವೇಶದಲ್ಲಿ ಇಂಥ ಅವಕಾಶಗಳಿಲ್ಲ.
ಮುಕ್ತ ಪ್ರವೇಶವನ್ನು ಲೈಬ್ರರಿ ಅಧಿಕಾರಿಗಳು ಇಷ್ಟಪಡದೆ ಇರುವುದಕ್ಕೆ ಇನ್ನೊಂದು ಕಾರಣವೂ ಇದೆ: ಪ್ರತಿ ದಿನವೂ ಲೈಬ್ರರಿ ಮುಚ್ಚಿದ ನಂತರ ಇಲ್ಲವೇ ತೆರೆಯುವುದಕ್ಕೆ ಮುನ್ನ, ಈ ಮೊದಲು ವಿದ್ಯಾರ್ಥಿಗಳು ಮೇಜಿನ ಮೇಲೆ ಓದಿ ಬಿಟ್ಟು ಹೋದ ಪುಸ್ತಕಗಳನ್ನು ಒಂದೊಂದಾಗಿ ಯಥಾಸ್ಥಾನ ಸೇರಿಸುವ ಕೆಲಸವನ್ನು ಲೈಬ್ರರಿ ಸಹಾಯಕರು ಮಾಡಬೇಕಾಗುತ್ತದೆ. ಅದಲ್ಲದಿದ್ದರೆ ಮರುದಿನ ಲೈಬ್ರರಿ ಬಳಸಲು ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಪುಸ್ತಕಗಳನ್ನು ಮರಳಿ ಶೆಲ್ಫಿಗೆ ಸೇರಿಸುವ ಕೆಲಸವನ್ನು ಲೈಬ್ರರಿ ಸಹಾಯಕರು ಒಂದು ರಗಳೆ ಎಂದು ತಿಳಿದುಕೊಳ್ಳಬಾರದು; ಅದು ಅವರ ಉದ್ಯೋಗದ ಒಂದು ಭಾಗವಾಗಿರುತ್ತದೆ. ರಗಳೆಯೆಂದುಕೊಂಡು ಮುಕ್ತ ಪ್ರವೇಶವನ್ನು ನಿರ್ಬಂಧಿಸಿದ ಕಾಲೇಜು ಲೈಬ್ರರಿಗಳ ಶೆಲು#ಗಳಲ್ಲಿ ಪುಸ್ತಕಗಳು ಧೂಳು ತುಂಬಿ ಕೂತಿರುತ್ತವೆ. ಮುಕ್ತ ಪ್ರವೇಶದಲ್ಲಿ ಹೀಗಾಗುವುದಿಲ್ಲ. ವಾಸ್ತವದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಲೈಬ್ರರಿ ಪುಸ್ತಕಗಳನ್ನು ಹೆಚ್ಚೆಚ್ಚು ಉಪಯೋಗಿಸಿದಷ್ಟು ಗ್ರಂಥಪಾಲಕರು ಖುಷಿಪಡಬೇಕು; ಹಾಗೂ ಪುಸ್ತಕಗಳು ಉಪಯೋಗವಾಗದೆ ಕುಳಿತಿವೆ ಎಂದಾದರೆ ಅದು ಆ ಕಾಲೇಜಿಗೆ ಮಾತ್ರವೇ ಅಲ್ಲ, ಗ್ರಂಥಪಾಲಕರಿಗೆ ಕೂಡ ಒಂದು ಕಳಂಕ. ಅಷ್ಟು ಮಾತ್ರವೂ ಅಲ್ಲ, ಅದು ದೇಶಕ್ಕೆ ಮಾಡಿದ ಅನ್ಯಾಯವಾಗುತ್ತದೆ. ಲೈಬ್ರರಿಗಳಿಗೆ ಪುಸ್ತಕ ಕೊಳ್ಳುವುದಕ್ಕೆಂದು ಪ್ರತಿ ವರ್ಷವೂ ದೇಶ ಅದೆಷ್ಟೋ ಕೋಟಿ ಹಣ ಖರ್ಚುಮಾಡುತ್ತದೆ. ನಮ್ಮ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಓದಿಕೊಳ್ಳಲಿ ಎಂದು. ಇದನ್ನು ಸುಗಮಗೊಳಿಸಲು ಗ್ರಂಥಪಾಲಕರನ್ನು ಮತ್ತು ಗ್ರಂಥಾಲಯ ಸಿಬ್ಬಂದಿಯನ್ನು ಸಂಬಳ ಕೊಟ್ಟು ನೇಮಿಸಲಾಗುತ್ತದೆ. ಪುಸ್ತಕಗಳನ್ನೇನೋ ಕೊಂಡದ್ದಾಯಿತು, ಅವುಗಳನ್ನು ಶೆಲ್ಫಿನಲ್ಲಿ ಇರಿಸಿದ್ದೂ ಆಯಿತು. ಅದರೆ ಅವುಗಳು ಓದಲ್ಪ$ಡದೆ ಕತ್ತಲಲ್ಲಿ ಕೂತಿವೆ ಎಂದಾದರೆ ಅದು ಅನ್ಯಾಯವಲ್ಲದೆ ಇನ್ನೇನು?
ನನ್ನ ಕನಸಿನ ಕಾಲೇಜು ಲೈಬ್ರರಿ ಮುಕ್ತ ಪ್ರವೇಶದ್ದಾಗಿರುತ್ತದೆ.
ಲೈಬ್ರರಿಯು ತರಗತಿಯ ಮುಂದರಿದ ಒಂದು ಭಾಗವಾಗಿ ಪರಿಗಣಿಸಲ್ಪಡಬೇಕು. ತರಗತಿಯಲ್ಲಿ ಕಲತದ್ದನ್ನೇ ಇನ್ನಷ್ಟು ವಿಸ್ತರಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳಿಗೆ ಲೈಬ್ರರಿ ಅಗತ್ಯವಾಗುತ್ತದೆ. ಅದೇ ರೀತಿ, ಅಧ್ಯಾಪಕರೂ ತಮ್ಮ ಜಾnನವನ್ನು ನಿರಂತರವಾಗಿ ವರ್ಧಿಸಿಕೊಳ್ಳುವ ಅಗತ್ಯವಿರುತ್ತದೆ. ಅದಕ್ಕಾಗಿ ಅವರೂ ಲೈಬ್ರರಿಯ ಸ್ಥಿರ ಸದಸ್ಯರಾಗಿರುತ್ತಾರೆ.
ಏನು ಮಾಡಬೇಕು? ಪ್ರತಿ ವರ್ಷವೂ ಹೊಸ ವಿದ್ಯಾರ್ಥಿಗಳು ಕಾಲೇಜಿಗೆ ಸೇರಿದಾಗ, ಅವರಿಗೆ ಗುಂಪು ಗುಂಪುಗಳಾಗಿ ಲೈಬ್ರರಿ ಸಂಪನ್ಮೂಲ ಮತ್ತು ಸದ್ಬಳಕೆಯ ಕುರಿತಾಗಿ ಒಂದು ಓರಿಯೆಂಟೇಶನ್ ಕೋರ್ಸು ನೀಡುವುದು ಅಗತ್ಯ. ಇದನ್ನು ಗ್ರಂಥಪಾಲಕರು ಮಾಡಬೇಕು. ಈ ಕೋರ್ಸಿನಲ್ಲಿ ಪುಸ್ತಕಗಳ ವರ್ಗೀಕರಣ ಹೇಗೆ ಮಾಡಲ್ಪಟ್ಟಿದೆ, ಕಾಲ್ ನಂಬರ್, ಏಕ್ಸೆಶನ್ ನಂಬರ್ ಎಂದರೆ ಏನು, ಕ್ಯಾಟಲಾಗಿನ ಸಹಾಯದಿಂದ ಕಾಲ್ ನಂಬರನ್ನು ಹುಡುಕುವುದು ಹೇಗೆ, ನಂತರ ಶೆಲ್ಫಿನಲ್ಲಿ ಪುಸ್ತಕಗಳನ್ನು ಹೇಗೆ ಸಮೀಪಿಸಬೇಕು, ಮುಕ್ತ ಪ್ರವೇಶದ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಆಗುವ ಲಾಭವೇನು, ಅವರು ಯಾಕೆ ತಮಗೆ ಬೇಕಾದಂತೆ ಪುಸ್ತಕಗಳನ್ನು ವಾಪಸು ಶೆಲ್ಫಿಗೆ ಮರಳಿಸಬಾರದು, ಯಾಕೆ ಪುಸ್ತಕಗಳ ಪುಟವನ್ನು ಮಡಚುವ ಅಥವಾ ಅಡಿಗೆರೆ ಹಾಕುವ ಚಟಗಳನ್ನು ಬೆಳೆಸಿಕೊಳ್ಳಬಾರದು, ಲೈಬ್ರರಿ ಶಿಸ್ತು ಎಂದರೆ ಏನು ಎಂಬಿತ್ಯಾದಿ ಸಂಗತಿಗಳು ಅಳವಟ್ಟಿರಬೇಕು. ಹೊಸ ವಿದ್ಯಾರ್ಥಿಗಳಿಗೆ ಈ ಕೋರ್ಸಿನ ಅಂಗವಾಗಿ ಒಂದು ಲೈಬ್ರರಿ ಟೂರ್ ಅಗತ್ಯ.
ಯಾವುದೇ ವಿದ್ಯಾ ಸಂಸ್ಥೆಯಲ್ಲೂ ಗ್ರಂಥಪಾಲಕರು ಮತ್ತು ಅಧ್ಯಾಪಕರು ಸಹಕಾರದೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಯಾವ ಪುಸ್ತಕಗಳನ್ನು ಖರೀದಿಸಬೇಕು ಎನ್ನುವುದಕ್ಕೆ ಅಧ್ಯಾಪಕರದೊಂದು ಕಮಿಟಿಯಿರುತ್ತದೆ. ಇದಕ್ಕೆ ಒಬ್ಬ ವಿದ್ಯಾರ್ಥಿ ಪ್ರತಿನಿಧಿಯನ್ನೂ ತೆಗೆದುಕೊಳ್ಳಬಹುದು.
ವಿದ್ಯಾರ್ಥಿಗಳು ಲೈಬ್ರರಿಯ ಪೂರ್ಣ ಉಪಯೋಗ ಪಡೆದುಕೊಳ್ಳಬೇಕಾದರೆ, ಅವರಿಗೆ ಪುಸ್ತಕ ಮತ್ತು ಪತ್ರಿಕೆಗಳಿಂದ ಟಿಪ್ಪಣಿ ತೆಗೆದುಕೊಳ್ಳುವುದು ಹೇಗೆ, ತಮ್ಮ ಪ್ರಬಂಧಗಳಲ್ಲಿ ಗ್ರಂಥ ಋಣ ಉಲ್ಲೇಖೀಸುವುದು ಹೇಗೆ, ಎಲ್ಲಿ ಉದ್ಧರಣ ಚಿಹ್ನೆಗಳನ್ನು ಹಾಕಬೇಕು, ಎಲ್ಲಿ ಸಾರಾಂಶ ಕೊಟ್ಟರೆ ಸಾಕು ಎಂಬಿತ್ಯಾದಿ ಸಂಗತಿಗಳು ಗೊತ್ತಿರಬೇಕಾಗುತ್ತದೆ. ಮೂಲ ಲೇಖಕರ ಹೆಸರನ್ನು ಸೂಚಿಸದೆ, ಅವರ ವಿಚಾರಗಳನ್ನು ತಮ್ಮವೇ ಎನ್ನವಂತೆ ತೋರಿಸುವುದು ಕೃತಿಚೌರ್ಯವಾಗುತ್ತದೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳುವ ಅಗತ್ಯವಿದೆ. ಕೆಲವು ವಿದ್ಯಾರ್ಥಿಗಳಿಗೆ ಆವೃತ್ತಿ ಮತ್ತು ಮರುಮುದ್ರಣದ ನಡುವಣ ವ್ಯತ್ಯಾಸ ಗೊತ್ತಿರುವುದಿಲ್ಲ. ಪದಸೂಚಿಯ (ಇಂಡೆಕ್ಸ್) ಉಪಯೋಗ ಗೊತ್ತಿರುವುದಿಲ್ಲ. ಡಿಕ್ಷನರಿ ನೋಡುವುದಕ್ಕೆ ಕೂಡಾ ಬರುವುದಿಲ್ಲ. ಇಂಥ ಕಡೆ ಆರಂಭದಲ್ಲಿ ಅಧ್ಯಾಪಕರ ನೆರವಿನ ಅಗತ್ಯವಿದೆ.
ವಿದ್ಯಾರ್ಥಿಗಳನ್ನು ದಿನವಿಡೀ ತರಗತಿಯಲ್ಲಿ ಕೂಡಿಸಿ ಪಾಠ ಹೇಳುವುದು ಸರಿಯಲ್ಲ; ಅವರಿಗೆ ಸ್ವಂತ ಯೋಚಿಸಲು, ಗುಂಪಿನಲ್ಲಿ ಚರ್ಚಿಸಲು ಸಮಯ ಅಗತ್ಯ. ಲೈಬ್ರರಿ ಕಾರ್ಯಕ್ಕೂ ಅವರಿಗೆ ವೇಳೆ ಸಿಗಬೇಕು. ಆದ್ದರಿಂದ ಆಯಾ ಕ್ಲಾಸಿನ ವೇಳಾಪಟ್ಟಿ ತಯಾರಿಸುವಾಗ ಲೈಬ್ರರಿಗೂ ಅನುವು ನೀಡಬೇಕು. ನನ್ನ ಕನಸಿನ ಕಾಲೇಜ್ ಲೈಬ್ರರಿಯಲ್ಲಿ ವಿದ್ಯಾರ್ಥಿಗಳಿಗೆ ಕೂತು ಓದಲು, ಬರೆಯಲು ಮೇಜು ಮತ್ತು ಕುರ್ಚಿಗಳಿಗೆ ಕೊರತೆಯಿರುವುದಿಲ್ಲ.
ಸದ್ಯದ ಕಾಲದ ಲೈಬ್ರರಿಗಳ ಭಾಗವಾಗಿ ಇನ್ನೂ ಒಂದು ಅನುಕೂಲತೆ ಬೇಕಾಗುತ್ತದೆ: ಅದೆಂದರೆ ಇಂಟರ್‌ನೆಟ್ ಸಂಪರ್ಕ. ಸಾಕಷ್ಟು ಟರ್ಮಿನಲುಗಳಿರುವ ಈ ವ್ಯವಸ್ಥೆ ಅತ್ಯಗತ್ಯ. ಹಾಗೂ ಇದನ್ನು ಸರಿಯಾಗಿ ಬಳಸುವ ಬಗ್ಗೆ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಬೇಕಾಗಬಹುದು. ನನ್ನ ಕನಸಿನ ಕಾಲೇಜ್ ಲೈಬ್ರರಿಯಲ್ಲಿ ಒಂದು ಕ್ಸೆರಾಕ್ಸ್ ಮೆಶೀನ್ ಕೂಡಾ ಇರುತ್ತದೆ. ಅಲ್ಲಿ ವಿದ್ಯಾರ್ಥಿಗಳು ಹಣ ಪಾವತಿಸಿ ತಮಗೆ ಬೇಕಾದ ಪುಟಗಳ ಪ್ರತಿ ತೆಗೆದುಕೊಳ್ಳಬಹುದು.
ಈಚೆಗೆ ಕರ್ನಾಟಕದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳ ಜತೆ ಟೆಲಿಫೋನಿನಲ್ಲಿ ಮಾತಾಡುವ ಅವಕಾಶ ನನಗೆ ದೊರಕಿತು. ಅವಳು ಕನ್ನಡ ಎಂ.ಎ. ವಿದ್ಯಾರ್ಥಿನಿಯಾಗಿದ್ದಳು. ನಿನ್ನ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸಂಪರ್ಕ ವ್ಯವಸ್ಥೆ ಇದೆಯೇ ಎಂದು ಕೇಳಿದೆ. ಇಲ್ಲ ಎಂದಳು. ನಿನಗೆ ಕಂಪ್ಯೂಟರಿನಲ್ಲಿ ಕನ್ನಡ ಟೈಪ್ ಮಾಡಲು ಬರುತ್ತದೆಯೇ ಎಂದು ಕೇಳಿದೆ. ಇಲ್ಲ ಎಂದಳು. ನಿನಗೆ ಕಂಪ್ಯೂಟರ್ ಬರುತ್ತದೆಯೇ ಎಂದು ನಾನು ಕೇಳಲಿಲ್ಲ. ಬಹುಶಃ ಅದಕ್ಕೂ ಅವಳು ಇಲ್ಲ ಎನ್ನುತ್ತಿದ್ದಳು.
ಆದರೆ ಮಾತು ಕೇಳಿದರೆ ಅವಳೇನೂ ಪೆದ್ದು ಹುಡುಗಿಯಂತೆ ತೋರಲಿಲ್ಲ; ಚೆನ್ನಾಗಿಯೇ ಮಾತಾಡುತ್ತಿದ್ದಳು. ಆದರೆ ಯಾಕೆ ಅವಳು ಓದುತ್ತಿರುವ ವಿಶ್ವವಿದ್ಯಾಲಯದಲ್ಲಿ ಇಂಥ ಅವಕಾಶಗಳು ಅವಳಿಗೆ ಸಿಕ್ಕಿಲ್ಲ? ನನಗಿದು ಬಹಳ ಬೇಸರದ ಸಂಗತಿ. ಇಂಟರ್‌ನೆಟ್ ಬಗ್ಗೆ ಹೇಳುವುದಾದರೆ, ನನಗೆ ಗೊತ್ತಿರುವಂತೆ, ಪ್ರತಿ ವಿಶ್ವವಿದ್ಯಾಲಯಕ್ಕೂ ಈ ಅನುಕೂಲತೆ ಒದಗಿಸುವುದಕ್ಕೆ ಧನಸಹಾಯ ಬರುತ್ತದೆ.
ಇನ್ನು ಕಂಪ್ಯೂಟರ್ ಮತ್ತು ಕನ್ನಡ ಟೈಪಿಂಗ್ ಕಲಿಯುವ ಅನುಕೂಲವಿಶ್ವವಿದ್ಯಾಲಯದ ಅಧಿಕಾರಿಗಳು ಮನಸ್ಸು ಮಾಡಿದರೆ ತಮ್ಮ ವಿದ್ಯಾರ್ಥಿಗಳಿಗೆ ಇದನ್ನು ಕಲಿಸುವ ತರಬೇತಿಯನ್ನು ಏರ್ಪಡಿಸಬಹುದು.
ಕುಲಪತಿಗಳಲ್ಲಿ, ಪ್ರೊಫೆಸರುಗಳಲ್ಲಿ, ಪ್ರಾಧ್ಯಾಪಕರಲ್ಲಿ, ಗ್ರಂಥಪಾಲಕರಲ್ಲಿ ನನ್ನ ವಿನಂತಿ: ನಿಮ್ಮ ಬಿಗುಮಾನಗಳಿಂದ ಸ್ವಲ್ಪ$ ಹೊರಬನ್ನಿ; ವಿದ್ಯಾರ್ಥಿಗಳ ಅಗತ್ಯಗಳನ್ನು ಗಮನಿಸಿ.ವಿಶ್ವವಿದ್ಯಾಲಯಗಳಿಂದ ಸ್ನಾತಕರಾಗಿ ಅವರು ಹೊರ ಹೋಗುವಾಗ ಸರ್ವ ವಿಧದಲ್ಲೂ ಯೋಗ್ಯರಾಗಿ ಇರುವಂತೆ ನೋಡಿಕೊಳ್ಳಿ. ಅವರು ನಮ್ಮನ್ನು ನಂಬಿದ್ದಾರೆ.