Thursday, May 23, 2013
Last Updated: 4:52:43 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬ್ರಹ್ಮಕಲಶೋತ್ಸವಕ್ಕೆ ಕಲಶಪ್ರಾಯವೆನಿಸಿದ
    • ಸಾಂಸ್ಕೃತಿಕ ಕಾರ್ಯಕ್ರಮಗಳು
    • ಸಾತ್ವಿಕ ತೋಟ ಕಲಾ ಸಂಘದ ವತಿಯಿಂದ ಶಿವಭಕ್ತ ವೀರಮಣಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

      • ಉದಯಕುಮಾರ್‌ ನಿರ್ಪಾಜೆ | Feb 16, 2013

        ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದಲ್ಲಿ ನಡೆದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಸೊಗಸಾಗಿ ಮೂಡಿಬಂದಿವೆ. ಅತಿರಥ- ಮಹಾರಥ ಕಲಾವಿದರು ಈ ವಿಟ್ಲದಂಥ ಹಳ್ಳಿ ಪ್ರದೇಶಕ್ಕೂ ಆಗಮಿಸಿ, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

        ಜ.9ರಿಂದ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮ ಗಳು ಜ.21ರ ವರೆಗೂ ಮುಂದುವರಿದವು. ಕರ್ನಾಟಕ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ದೇವರ ನಾಮ, ಭರತ ನಾಟ್ಯ, ಸುಗಮ ಸಂಗೀತ, ಸಂಗೀತ ರಸಮಂಜರಿ, ಸಿತಾರ್‌-ಕೊಳಲು-ಸ್ಯಾಕೊಫೋನ್‌ ವಾದನ, ನಾಟಕ, ಹರಿಕಥೆ, ಯಕ್ಷಗಾನ ಮೊದಲಾದ ಎಲ್ಲ ರಂಗದ ಕಲಾವಿದರಿಗೂ ಮನ್ನಣೆ ದೊರಕಿತ್ತು. ಸ್ಥಳೀಯ ಕಲಾವಿದರನ್ನೂ ಮರೆಯ ಲಿಲ್ಲ. ಅತಿಥಿ ಹಾಗೂ ಗಣ್ಯ ಕಲಾವಿದರನ್ನೂ ಸೇರಿಸಿಕೊಂಡು ಪ್ರಸ್ತುತಗೊಂಡ ಉತ್ತಮವಾದ ಸಾಂಸ್ಕೃತಿಕ ಉತ್ಸವವು ಚಿರಕಾಲ ನೆನಪಿನಲ್ಲಿ ಉಳಿಯುವಂತಾಗಿದೆ.

        ಜ.9ರಂದು ವಿಟ್ಲ ಲಲಿತಾ ಕಲಾ ಸದನದ ನೃತ್ಯ ನಿರ್ದೇಶಕಿ ವಿ| ನಯನ ಸತ್ಯನಾರಾಯಣ ಅವರ ಶಿಷ್ಯೆ ಯರಿಂದ ಗಣೇಶ ವೈಭವ ಮತ್ತು ಭಕ್ತ ಮಾರ್ಕಂಡೇಯ ನೃತ್ಯರೂಪಕ ಮನಮೋಹಕವಾಗಿತ್ತು. ವಿಟ್ಲ ಅರಮನೆ ಕಲಾವಿದರಿಂದ ಸಂಗೀತ ಸಂಜೆ, ಶೇಖರ ಶೆಟ್ಟಿ ಬಾಯಾರು ಅವರ ನಿರ್ದೇಶನದಲ್ಲಿ ಕನ್ಯಾನ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಕಲಾವಿದೆಯರು ಸುದರ್ಶನ ವಿಜಯ ಎಂಬ ಯಕ್ಷಗಾನ ಪ್ರದರ್ಶನವನ್ನು ನೀಡಿದರು. ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಕಲಾಸೇವೆಗೈಯ್ಯುತ್ತಿರುವ ಮಹಿಳಾಮಣಿಯರ ಸಂಖ್ಯೆ ಹೆಚ್ಚಿಲ್ಲ. ಈ ಸಂಘವು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಂದ ತೊಡಗಿ ಯುವತಿಯರನ್ನೂ ಹೊಂದಿರುವುದು ವಿಶೇಷ!

        ಜ.10ರಂದು ವಿ| ಶ್ಯಾಮಸುಂದರಿ ಜಿ.ಭಟ್‌ ಮಡಿಯಾಲ ಮತ್ತು ಕು| ಅರ್ಚನಾ ಉಪಾಧ್ಯಾಯ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ, ವಿಟ್ಲದ ನಾಟ್ಯಾಲಯ ತಂಡದ ಮುಖ್ಯಸ್ಥ ದೇವಸ್ಯ ಎನ್‌. ಎನ್‌. ಶಿವರಾಮ ಭಟ್‌ ಅವರ ನಿರ್ದೇಶನದಲ್ಲಿ ಭರತನಾಟ್ಯ ಚೆನ್ನಾಗಿ ಪ್ರಕಟವಾದವು. ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನಾಟಕ, ಯಕ್ಷಗಾನ ಕಾರ್ಯಕ್ರಮ ವೈವಿಧ್ಯ ಆಕರ್ಷಕವಾಗಿತ್ತು.

        ಜ.11ರಂದು ಮೂಡಂಬೈಲು ಮುರಲೀಧರ ಶಾಸ್ತ್ರಿ, ಗೀತಾ ಸಾರಡ್ಕ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ, ಬಾಬು ಕಾಟುಕುಕ್ಕೆ ಬಳಗದ ಭಾವ ಲಹರಿ ಕಾರ್ಯಕ್ರಮ ಗಳು ಗಮನ ಸೆಳೆದವು. ಚಾಪರR ಕಲಾವಿದರ ಬದುಕುನ ಸಾದಿ ಎಂಬ ತುಳು ನಾಟಕ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನದಲ್ಲಿ ಯಶಸ್ವಿಯಾಯಿತು.

        ಜ.12ರಂದು ಮುಡಿಪು ಯಕ್ಷಭಾರತಿ ಕಲಾ ಮಂಡಳಿ ವತಿಯಿಂದ ಯಕ್ಷಗಾನ ತಾಳಮದ್ದಳೆ, ವಿ| ಪಾರ್ವತಿ ಪದ್ಯಾಣ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆ ಯಿತು. ಚಲನಚಿತ್ರ ನಿರ್ದೇಶಕ, ನಟ, ಸಂಗೀತ ನಿರ್ದೇಶಕ, ವಿಟ್ಲ ಮೂಲದ ವಿ.ಮನೋಹರ್‌ ಅವರು ತನ್ನ ಊರಿನ ಅಭಿಮಾನದೊಂದಿಗೆ ಕಾರ್ಯಕ್ರಮವನ್ನು ಸಂಯೋಜಿಸಿ ದ್ದರು. ಸಂಗೀತ ವೈಭವವನ್ನು ನಡೆಸಿಕೊಟ್ಟು ಬಳಿಕ ಬೆಂಗಳೂರು ಸಮಿತಿ ವತಿಯಿಂದ ಪ್ರದರ್ಶಿಸಲ್ಪಟ್ಟ ಭಸ್ಮಾಸುರ ಮೋಹಿನಿ -ದಕ್ಷಾಧ್ವರದಲ್ಲಿ ಪಾತ್ರವಹಿಸಿ ಜನ ಮೆಚ್ಚುಗೆ ಗಳಿಸಿದರು. ತಶ್ಮಿ ರೈ ಅವರ ಶಾಸ್ತ್ರೀಯ ನೃತ್ಯವೂ ಪ್ರದರ್ಶನಗೊಂಡಿತು.

        ಜ.13ರಂದು ಒಡಿಯೂರು ಸಾತ್ವಿಕ ತೋಟ ಕಲಾ ಸಂಘದ ವತಿಯಿಂದ ಶಿವಭಕ್ತ ವೀರಮಣಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ವಸುಂಧರಾ ಕುಕ್ಕಿಲ ಮತ್ತು ವಿ| ಅರುಣಾ ಕೆ. ಎಸ್‌. ಭಟ್‌ ಅಮೈ ಅವರ ಕರ್ನಾಟಕ ಶಾಸ್ತ್ರೀಯ ಗಾಯನ, ವೈಷ್ಣವಿ ಅಡಿಗ ಅವರ ಭಾವಗೀತೆ, ಪ್ರಖ್ಯಾತ ಗಾಯಕ ಶಂಕರ ಶಾನುಭೋಗ್‌ ಅವರ ಸಂಗೀತ ಸಂಜೆ ಅದ್ಭುತವಾಗಿತ್ತು. ಅವರು ಪ್ರಸ್ತುತಪಡಿಸಿದ ಹಾಡು ಗಳೆಲ್ಲವೂ ಆಹ್ಲಾದಕರವಾಗಿದ್ದವು. ಪ್ರೇಕ್ಷಕರೂ ತುಂಬಿ ತುಳುಕಿ ದ್ದರು. ಬಳಿಕ ವಿಟ್ಲದ ಆರ್‌.ಕೆ. ಆರ್ಟ್ಸ್ ಚಿಣ್ಣರ ಮನೆ ತಂಡದ ವತಿಯಿಂದ ಸುಮಾರು 175ಕ್ಕೂ ಅಧಿಕ ಸಂಖ್ಯೆಯ ಪಾತ್ರಧಾರಿಗಳನ್ನೊಳಗೊಂಡ ದಶಾವತಾರ, ಶಿವಪಂಚಾಕ್ಷರಿ ಮೊದಲಾದ ನೃತ್ಯರೂಪಕಗಳು ಅಭೂತಪೂರ್ವವಾಗಿದ್ದವು. ರಾಜೇಶ್‌ ವಿಟ್ಲ ಅವರ ನಿರ್ದೇಶನ, ಕೃಷ್ಣಯ್ಯ ಕೆ. ವಿಟ್ಲ ಅವರ ಸಂಯೋಜನೆಯಲ್ಲಿ ಪುಟಾಣಿ ಮಕ್ಕಳಿಂದ ತೊಡಗಿ ಹಿರಿಯರ ತನಕವೂ ಭಾಗವಹಿಸಿದ ಈ ತಂಡ ಅದ್ಭುತವಾದ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ಪ್ರಸ್ತುತಪಡಿಸಿತು. ವಿಟ್ಲದ ಯುವಪ್ರತಿಭೆಗಳನ್ನು ಅನಾವರಣಗೊಳಿಸಿತು.

        ಜ.14ರಂದು ವಿಶ್ವನಾಥ ಟೈಲರ್‌ ಅವರ ಭಕ್ತಿ ರಸ ಮಂಜರಿ, ಮಂಗಳೂರು ದೇವದಾಸ ಪೈ ಅವರ ಸಿತಾರ್‌ ವಾದನಗಳ ಜೊತೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದೆ ಕಸ್ತೂರಿ ಕಾಮತ್‌ ಅವರ ಸುಗಮಸಂಗೀತವೂ ಇತ್ತು. ಬಳಿಕ ಮೂಡಬಿದ್ರೆ ಆಳ್ವಾಸ್‌ ಕಲಾತಂಡದ ವತಿಯಿಂದ ಭಾರತದ ನಾನಾ ಪ್ರಕಾರಗಳ ಬಹುರೂಪಿ ನೃತ್ಯ ವೈವಿಧ್ಯ ಸಮಗ್ರವಾಗಿ ಪ್ರದರ್ಶಿಸಲ್ಪಟ್ಟಿತು. ಮಣಿಪುರ ನೃತ್ಯ, ಕೇವಲ ಎರಡು ಸ್ಟಿಕ್‌ಗಳಲ್ಲಿ ಆಡುವ ಆಟದ ಜತೆಗೆ ನೃತ್ಯ, ರೂಪಕ, ಮಿಮಿಕ್ರಿ, ಮಹಾರಾಷ್ಟ್ರ-ಗುಜರಾತಿ-ಬೆಸ್ತರ ನೃತ್ಯಗಳೆಲ್ಲವೂ ಪ್ರೇಕ್ಷಕರ ಮನಸೂರೆಗೊಂಡವು. ಯಕ್ಷಗಾನದ ಹನುಮಂತನ ಒಡ್ಡೋಲಗವೂ ಚೆನ್ನಾಗಿ ಮೂಡಿಬಂದಿತ್ತು. ಜೀವನ್‌ರಾಮ್‌ ಸುಳ್ಯ ಅವರ ಪ್ರಕಾರ ಮೋಹನ ಆಳ್ವ ಅವರ ಕಲಾಭಿಮಾನವೇ ಈ ಯಶಸ್ಸಿಗೆ ಪ್ರೇರಣೆ.

        ಜ.15ರಂದು ವಿಟ್ಲ ಯಕ್ಷಸಿಂಧೂರ ಪ್ರತಿಷ್ಠಾನದ ವತಿಯಿಂದ ವೀರ ವೈಷ್ಣವ ಎಂಬ ಯಕ್ಷಗಾನ ಬಯಲಾಟ ವಿತ್ತು. ಸಂಜೆ ಹುಬ್ಬಳ್ಳಿಯ ಪಂ| ಜಯತೀರ್ಥ ಮೇವುಂಡಿ ಅವರ ಭಕ್ತಿ ಸಂಧ್ಯಾ ಕಾರ್ಯಕ್ರಮವು ಪಂ| ಭೀಮ್‌ಸೇನ್‌ ಜೋಷಿ ಅವರನ್ನು ಸ್ಮರಿಸುವಂತೆ ಮಾಡಿತು. ಬಳಿಕ ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ಕಲಾವಿದರು ಜಟಾಯು ಮೋಕ್ಷ ಯಕ್ಷರೂಪಕವನ್ನು  ಮನೋಹರವಾಗಿ ಪ್ರದರ್ಶಿಸಿದರು.

        ಜ.16ರಂದು ಮುಖವಾಡ ಮಾಂತ್ರಿಕ ಅಶೋಕ್‌ ಪೊಳಲಿ ಅವರ ಕೋಳಿ ನೃತ್ಯ ಆಕರ್ಷಕವಾಗಿತ್ತು. ಈ ಭಾಗ ದಲ್ಲಿ ಈ ರೀತಿಯ ನೃತ್ಯ ಹೊಸತು. ಅನಂತರದ್ದು ಫ್ಯೂಶನ್‌ ಸಂಗೀತ. ದೇಶ ವಿದೇಶಗಳಲ್ಲಿ ರೋಮಾಂಚನ ಉಂಟುಮಾಡಿದ ಶ್ರೇಷ್ಠ ಕಲಾವಿದ ಪಂ| ಪ್ರವೀಣ್‌ ಗೋಡಿVಂಡಿ ಅವರ ಕೊಳಲು ವಾದನವು ಪ್ರೇಕ್ಷಕರನ್ನು ಮೈಮರೆಯುವಂತೆ ಮಾಡಿತು. ಅಸಂಖ್ಯ ಭಕ್ತರು ತುಂಬಿ ತುಳುಕುತ್ತಿದ್ದರೂ ಕೂಡ ಗೋಡಿVಂಡಿಯವರ ಕೊಳಲಿನ ನಾದ ಬಿಟ್ಟರೆ ಬೇರೆ ಯಾವ ಸದ್ದೂ ಕೇಳಿಸಲಿಲ್ಲ.

        ಕೃಷ್ಣ ಫೂಶನ್‌ ಬ್ಯಾಂಡ್‌ ತಂಡದಿಂದ ನಡೆದ ಫೂÂಶನ್‌ ಸಂಗೀತ ಸುಮಾರು 2.30 ಗಂಟೆಗಳ ಕಾಲ ಮುಂದುವರಿ ದಿತ್ತು. ವಿ| ಕದ್ರಿ ಗೋಪಾಲ್‌ನಾಥ್‌ ಅವರ ಜೊತೆ ಜುಗಲ್‌ಬಂದಿಯಲ್ಲಿ ರಾಗ್‌ರಂಗ್‌ ನುಡಿಸುತ್ತಿದ್ದಂತೆ ಪುಟ್ಟ ಮಕ್ಕಳು ಕುಳಿತಲ್ಲೇ ಎದ್ದು ನಿಂತು ಹೆಜ್ಜೆ ಹಾಕುತ್ತಿದ್ದರು. ಪಹಾಡಿ ರಾಗದಲ್ಲಿ ವಿವಿಧ ಜನಪದ ಹಾಡುಗಳನ್ನು ನುಡಿಸುತ್ತಾ ವೇದಿಕೆಯಿಂದ ಸಭಿಕರ ಬಳಿಗೆ ನಡೆದು ಎಲ್ಲರೂ ಹರ್ಷ ಗೊಳ್ಳುವಂತೆ ಮಾಡಿದರು. ಪ್ರತೀ ಹಾಡು ಮುಗಿದ ತತ್‌ಕ್ಷಣ ಜನಸ್ತೋಮ ಎದ್ದು ನಿಂತು ಗೌರವ ಸೂಚಿಸಿತು. ಇವರ ಜೊತೆಗೆ ತಬಲಾ ವಾದಕರಾಗಿ ಕಿರಣ್‌ ಗೋಡಿಂಡಿ, ಕೀ ಬೋರ್ಡ್‌ ವಾದಕರಾಗಿ ಉಮೇಶ್‌ ಬೆಂಗಳೂರು ಮತ್ತು ಪದ್ಮನಾಭ ಕಾಮತ್‌ ಸಹಕಾರ ನೀಡಿದರು.

        ಇದಾದ ಬಳಿಕ ಕೊಂಡದಕುಳಿ ಶ್ರೀ ಪೂರ್ಣಚಂದ್ರ ಯಕ್ಷಗಾನ ಮಂಡಳಿ ವತಿಯಿಂದ ಕೃಷ್ಣಾರ್ಜುನ ಕಾಳಗ ಎಂಬ ಯಕ್ಷಗಾನ ಬಯಲಾಟ ಅದ್ಭುತವಾಗಿ ಪ್ರದರ್ಶನ ಗೊಂಡಿತು. ವಿಟ್ಲದ ಹಿರಿಯ ಮತ್ತು ಕಿರಿಯ ಯಕ್ಷಗಾನ ಅಭಿಮಾನಿಗಳು ಈ ತಂಡದ ಪ್ರದರ್ಶನ ಆಗಲೇ ಬೇಕೆಂಬ ಮಹದಾಸೆಯನ್ನಿರಿಸಿದ್ದರು. ಅವರ ನಿರೀಕ್ಷೆಯನ್ನು ಪೂರೈಸಲು ಕಲಾವಿದರು ಶಕ್ತಿ ಮೀರಿ ಪ್ರಯತ್ನಿಸಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus