Saturday, May 25, 2013
Last Updated: 1:24:17 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಮ್ಮ ಪರಿಚಿತರಲ್ಲಿ ಯಾರಿಗಾದರೂ ಕ್ಯಾನ್ಸರ್‌ ಇದೆಯೇ?
    • ಇಂದು ಅನೇಕರಿಗೆ ಕ್ಯಾನ್ಸರ್‌ ಇರುವ ಸಾಧ್ಯತೆಗಳು ಹೆಚ್ಚಾಗಿವೆ.

      • ಡಾ| ಕೃಷ್ಣಪ್ರಸಾದ್‌, ಮೆಡಿಕಲ್‌ ಆಂಕಾಲಜಿ ವಿಭಾಗ, ಕೆಎಂಸಿ, ಅತ್ತಾವರ, ಮಂಗಳೂರು | Feb 17, 2013

        ಇಂದು ಅನೇಕರಿಗೆ ಕ್ಯಾನ್ಸರ್‌ ಇರುವ ಸಾಧ್ಯತೆಗಳು ಹೆಚ್ಚಾಗಿವೆ. ಡಿಸೀಸ್‌ ಕಂಟ್ರೋಲ್‌ ಮತ್ತು ಪ್ರಿವೆನ್‌ಶನ್‌ ಸೆಂಟರಿನ ಅಂಕಿ ಅಂಶಗಳ ಪ್ರಕಾರ, ಜಗತ್ತಿನಾದ್ಯಂತ ಪ್ರತಿ ವರ್ಷ 12.7 ಮಿಲಿಯನ್‌ ಜನರು ಕ್ಯಾನ್ಸರ್‌ ಬಾಧಿತರಾಗುತ್ತಿರುವುದು ಹಾಗೂ 7.6 ಮಿಲಿಯ ಜನರು ಕ್ಯಾನ್ಸರ್‌ ಕಾರಣದಿಂದ ಮರಣ ಹೊಂದುತ್ತಿರುವುದು ತಿಳಿದು ಬಂದಿದೆ.

        ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕ್ಯಾನ್ಸರ್‌ ವ್ಯಾಧಿಯನ್ನು ತಡೆಗಟ್ಟಲು, ವಿಶ್ವ ಕ್ಯಾನ್ಸರ್‌ ದಿನದ ನೆಲೆಯಲ್ಲಿ, ಇಡೀ ಜಗತ್ತು ಒಂದಾಗಿ ಕ್ಯಾನ್ಸರ್‌ ವಿರುದ್ಧ ಸಮರ ಸಾರಿರುವುದು ಹೋರಾಟದ ಮೊದಲ ಹೆಜ್ಜೆ.  ಪ್ರತಿ ವರ್ಷ ಫೆೆಬ್ರವರಿ 4ನ್ನು ವಿಶ್ವ ಕ್ಯಾನ್ಸರ್‌ ದಿನವಾಗಿ ಪರಿಗಣಿಸಲಾಗುತ್ತಿದೆ. ಕ್ಯಾನ್ಸರಿನ ಬಗೆಗಿನ ಜಾಗೃತಿ ಮತ್ತು ಅರಿವನ್ನು ಬೆಳೆಸಿಕೊಂಡು, ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು  ಸಾವಿನಿಂದ ದೂರ ಸರಿಸುವುದು ಹಾಗೂ ಸರಕಾರಗಳು ಮತ್ತು ವಿಶ್ವದೆಲ್ಲೆಡೆ ಇರುವ ವ್ಯಕ್ತಿಗಳನ್ನು ಕ್ಯಾನ್ಸರ್‌ ವಿರುದ್ಧ ಕಾಯೊìàನ್ಮುಖರಾಗಲು ಪ್ರೇರೇಪಿಸುವುದು ವಿಶ್ವ ಕ್ಯಾನ್ಸರ್‌ ದಿನದ ಪ್ರಮುಖ ಉದ್ದೇಶ.

        ಕ್ಯಾನ್ಸರ್‌ ಬೆಳೆಯಲು ಕಾರಣವೇನು?

        ಕ್ಯಾನ್ಸರ್‌ ಎಂಬುದು ಮನುಷ್ಯನ ಜಿನೋಮ್‌ ಅಥವಾ ಜೀನ್‌ಗಳು ಅಥವಾ ಆನುವಂಶಿಕತೆಗೆ ಸಂಬಂಧಿಸಿದ ಒಂದು ಕಾಯಿಲೆ. ಕ್ಯಾನ್ಸರ್‌ ಉಂಟು ಮಾಡುವ ಅನೇಕ ಕ್ಯಾನ್ಸರ್‌ ಕಾರಕ ಅಂಶಗಳು ನಿಮ್ಮ ಜೀನ್‌ಗಳಲ್ಲಿ ಶಾಶ್ವತ ವ್ಯತ್ಯಾಸಗಳನ್ನು ಉಂಟು ಮಾಡಬಹುದು. ಈ ಶಾಶ್ವತ ವ್ಯತ್ಯಾಸಗಳಿಗೆ ಮ್ಯುಟೇಶನ್ಸ್‌ ಎಂದು ಹೆಸರು. ಮ್ಯುಟೇಶನ್‌ ಸಂಗ್ರಹಣೆಯ ಕಾರಣದಿಂದಾಗಿ, ಕ್ರಮೇಣ ಕ್ಯಾನ್ಸರ್‌ ಉಂಟಾಗುತ್ತದೆ. ವ್ಯತ್ಯಾಸಗೊಂಡ ಜೀನ್‌ ಉತ್ಪಾದಿಸುವ ದೋಷಯುಕ್ತ ಪ್ರೊಟೀನ್‌ಗಳ ಕಾರಣದಿಂದಾಗಿ, ಅಸಹಜ ಕೋಶಗಳ ಅಭಿವೃದ್ಧಿಯಾಗಿ, ಅದು ಗಡ್ಡೆಯಾಗಿ ಬೆಳೆಯಬಹುದು. ಅಸಹಜ ಕೋಶಗಳ ಬೆಳವಣಿಗೆ ಮತ್ತು ಗಡ್ಡೆಯ ಕೋಶಗಳು ದೇಹದಾದ್ಯಂತ ಪಸರಿಸುವುದು ಕ್ಯಾನ್ಸರಿನ ಪ್ರಮುಖ ಲಕ್ಷಣವಾಗಿದೆ.
        ಕ್ಯಾನ್ಸರಿನ 30 ಪ್ರತಿಶತ ಪ್ರಕರಣಗಳಲ್ಲಿ, ತಡೆಯಬಹುದಾದ ಅಂಶಗಳ ಹಿನ್ನೆಲೆ ಇರುತ್ತದೆ. ಅವುಗಳೆಂದರೆ - ತಂಬಾಕು, ಮದ್ಯಪಾನ, ಬೊಜ್ಜು, ಅನಾರೋಗ್ಯಕರ ಆಹಾರ ಹಾಗೂ ಜಡ ಜೀವನಶೈಲಿಯ ಹಿನ್ನೆಲೆಗಳು. ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸುವ ಕ್ಯಾನ್ಸರ್‌ ತಡೆಕಾರಕ ಸೂತ್ರಗಳು ಹೀಗಿವೆ.

        1. ನಿಮ್ಮ ದೇಹದ ತೂಕವನ್ನು ನಿರ್ವಹಿಸಿ; ದೇಹದ ತೂಕವು ಹೆಚ್ಚುವುದನ್ನು ತಡೆಯಿರಿ (5 ಕೆ.ಜಿ.) ವಯಸ್ಕರಿಗೆ.

        2. ಪ್ರತಿ ದಿನವೂ ನಿಯಮಿತ ದೈಹಿಕ ಚಟುವಟಿಕೆಗಳಲ್ಲಿ ತೊಡಗಿ.

        ವಾರದಲ್ಲಿ ಹೆಚ್ಚು ದಿನ ದೈಹಿಕ ಚಟುವಟಿಕೆಯಲ್ಲಿ ತೊಡಗಿ.

        ದಿನದಲ್ಲಿ 60 ನಿಮಿಷಗಳ ಕಾಲ ಸಾಧಾರಣದಿಂದ ತೀವ್ರ ರೂಪದ ಚಟುವಟಿಕೆಗಳಾದ ನಡಿಗೆ ಇತ್ಯಾದಿ ವ್ಯಾಯಾಮಗಳಲ್ಲಿ ತೊಡಗಿ; ಅಂದರೆ ಜಡ ಜೀವನ ಶೈಲಿಯನ್ನು ರೂಢಿಸಿಕೊಂಡಿರುವ ಜನರಿಗೆ ಆರೋಗ್ಯಕರ ದೇಹ ತೂಕವನ್ನು ನಿರ್ವಹಿಸಲು ಇದು ಆವಶ್ಯಕ.

        3. ಆಲ್ಕೋಹಾಲ್‌ನಂತಹ ಪಾನೀಯಗಳ ಸೇವನೆಯನ್ನು ತ್ಯಜಿಸುವುದು.

        4. ಉಪ್ಪಿನಿಂದ ಸಂರಕ್ಷಿತ ಆಹಾರಗಳಿಂದ ದೂರವಿರುವುದು ಮತ್ತು ಉಪ್ಪನ್ನು ಮಿತವಾಗಿ ಬಳಸುವುದು.

        5. ನಿತ್ಯದ ಪೂರ್ಣ ಆಹಾರದಲ್ಲಿ ಸುಮಾರು 400 ಗ್ರಾಂಗಳಷ್ಟಾದರೂ ಹಣ್ಣು-ತರಕಾರಿಗಳನ್ನು ಸೇವಿಸುವುದು.

        6. ಸಂಸ್ಕರಿಸಿದ ಮಾಂಸಗಳ ಸೇವನೆಯನ್ನು ಕಡಿಮೆಗೊಳಿಸುವುದು. (ಉದಾ: ಸಾಸೇಜಸ್‌, ಸಾಲಾಮಿ, ಬೇಕೂನ್‌, ಹ್ಯಾಮ್‌)

        7. ಬಹಳ ಬಿಸಿ ಇರುವ ಆಹಾರವನ್ನು ಸೇವಿಸದಿರುವುದು (ಕುದಿಯುತ್ತಿರುವ).

        ಕ್ಯಾನ್ಸರ್‌ ಪ್ರಕರಣಗಳು ಆರಂಭದಲ್ಲೇ ಪತ್ತೆಯಾಗಿ ಚಿಕಿತ್ಸೆ ಸಾಧ್ಯವಾದರೆ, ಕ್ಯಾನ್ಸರಿನಿಂದಾಗುವ ಮರಣಗಳ ಪ್ರಮಾಣವನ್ನು ತಗ್ಗಿಸಬಹುದು. ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ಮತ್ತು ತಕ್ಕ ಚಿಕಿತ್ಸೆ ಪಡೆಯಲು, ಈ ಕಾಯಿಲೆಯ ಚಿಹ್ನೆಗಳು ಮತ್ತು ಲಕ್ಷಣಗಳ ಬಗೆಗಿನ ಅರಿವು ಅತ್ಯಗತ್ಯ.

        ಕ್ಯಾನ್ಸರಿನ 10 ಎಚ್ಚರಿಕೆಯ
        ಲಕ್ಷಣಗಳು

        ಮನುಷ್ಯರಿಗೆ ಅನೇಕ ವಿಧದ ಕ್ಯಾನ್ಸರ್‌ಗಳು ಬಾಧಿಸಬಹುದು. ವಿವಿಧ ಜನರು ಹಾಗೂ ಅವರ ಸ್ಥಿತಿಗಳಿಗೆ ಸಂಬಂಧಿಸಿದಂತೆ, ಕ್ಯಾನ್ಸರಿನ ಲಕ್ಷಣಗಳು ಮತ್ತು ಚಿಹ್ನೆಗಳಲ್ಲಿ ಭಿನ್ನತೆಯೂ ಇರಬಹುದು. ಯಾವ ಸೂಚನೆ ಅಥವಾ ಲಕ್ಷಣಗಳನ್ನು ತೋರಿಸದೆಯೂ, ಕೊನೆಯ ಹಂತದಲ್ಲಿ ಪತ್ತೆಯಾಗುವ ಕ್ಯಾನ್ಸರ್‌ ಪ್ರಕರಣಗಳೂ ಸಹ ಇವೆ. ಹಾಗಿದ್ದರೂ ಸಹ, ಕ್ಯಾನ್ಸರಿನ ಬಗ್ಗೆ ಅಪಾಯದ ಸೂಚನೆಯನ್ನು ನೀಡಿ, ವೈದ್ಯಕೀಯ ಸಲಹೆಯನ್ನು ಪಡೆಯುವಂತೆ ನಮ್ಮನ್ನು ಎಚ್ಚರಿಸುವ 10 ಮುನ್ನೆಚ್ಚರಿಕೆ ಲಕ್ಷಣಗಳನ್ನು ನಾವು ಗುರುತಿಸಬಹುದು.

        1. ಅಕಾರಣವಾಗಿ ದೇಹದ ತೂಕ ಕಡಿಮೆಯಾಗುವುದು.

        ದೇಹದ ತೂಕವು ಇದ್ದಕ್ಕಿದ್ದಂತೆಯೇ ಕಡಿಮೆಯಾಗುವುದು. ಒಮ್ಮಿಂದೊಮ್ಮೆಯೇ ಅಥವಾ ಒಂದು ತಿಂಗಳಲ್ಲಿಯೇ 4 ಕೆ.ಜಿ. ಅಥವಾ 5 ಕೆ.ಜಿ.ಯಷ್ಟು ತೂಕವು ಕಡಿಮೆಯಾಗುವುದು ಕ್ಯಾನ್ಸರಿನ ಸೂಚನೆಯಾಗಿರಬಹುದು. ದೊಡ್ಡ ಕರುಳು ಅಥವಾ ಜೀರ್ಣಾಂಗವ್ಯೂಹದ  ಮತ್ತಿತರ ಅಂಗಗಳ ಕ್ಯಾನ್ಸರ್‌ ಪ್ರಕರಣಗಳಲ್ಲಿ ಈ ಲಕ್ಷಣವು ವಿಶೇಷವಾಗಿ ಕಂಡು ಬರುತ್ತದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕೆಲವು ಔಷಧಿಗಳು, ಕೆಲವು ಕಾಯಿಲೆಗಳು, ಅಧಿಕ ಮದ್ಯಪಾನ ಸೇವನೆ, ಮತ್ತು ಬ್ಯಾಕ್ಟೀರಿಯಾ ಹಾಗೂ ವೈರಸ್‌ ಸೋಂಕುಗಳ ಕಾರಣದಿಂದ ಹೆಪಾಟೈಟಿಸ್‌ ಬರಬಹುದು...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus