Wednesday, May 22, 2013
Last Updated: 1:59:53 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹೃದಯ, ಚರ್ಮ, ಮೆದುಳು, ಮೂಳೆಗಳ ಆರೋಗ್ಯ
    • ತೂಕ ಇಳಿಸಲು ಆರೋಗ್ಯಕರ ಸಲಹೆಗಳು
    • ತೂಕ ಇಳಿಸಲು ಆರೋಗ್ಯಕರ ಸಲಹೆಗಳು.

      • ಶ್ರೀಮತಿ ಅರುಣಾಮಲ್ಯ,ಡಯಟೀಷಿಯನ್‌,ಕೆ.ಎಂ.ಸಿ. ಆಸ್ಪತ್ರೆ, ಅಂಬೇಡ್ಕರ್‌ ವೃತ್ತ, ಮಂಗಳೂರು. | Feb 17, 2013

        ಅಡುಗೆಯಲ್ಲಿ ಕಡಿಮೆ ಎಣ್ಣೆಯನ್ನು ಬಳಸಿ.

        ಆಹಾರದಲ್ಲಿ  ತರಕಾರಿಗಳು, ಇಡಿಯ ಧಾನ್ಯಗಳು, ಹಸಿರು ಸೊಪ್ಪು  ತರಕಾರಿಗಳನ್ನು ಹೆಚ್ಚು
        ಉಪಯೋಗಿಸಿ.

        ರೆಡ್‌ ವೈನ್‌ನ್ನು  ಆರಿಸಿಕೊಳ್ಳಿ.

        ಸಲಾಡ್‌ ಹಾಗೂ ಬೀಜಗಳನ್ನು  ಹೆಚ್ಚು ಸೇವಿಸಿ.

        ಆರೋಗ್ಯಕರ ಚರ್ಮಕ್ಕಾಗಿ :

        ಹೆಚ್ಚು ನೀರು ಕುಡಿಯಿರಿ.

        ಕಾಫಿ, ಟೀ ಸೇವನೆಯನ್ನು ಕಡಿಮೆಗೊಳಿಸಿ.

        ಹಸಿರು ಚಹಾವನ್ನು ಸೇವಿಸಿ.

         ಉತ್ತಮ ಗುಣಮಟ್ಟದ ಪ್ರೊಟೀನ್‌  ಉಳ್ಳ ಆಹಾರವನ್ನು ಹೆಚ್ಚು ಸೇವಿಸಿ.

        ನಿಯಮಿತವಾಗಿ ಹಣ್ಣು - ತರಕಾರಿಗಳು ಹಾಗೂ ಸೊಪ್ಪುಗಳನ್ನು ಸೇವಿಸಿ.

        ಆರೋಗ್ಯಕರ ಮೂಳೆಗಳಿಗಾಗಿ :

        ಪೂರ್ಣ ಹಾಲಿಗೆ ಬದಲಾಗಿ ಸ್ಕಿಮ್ಡ್ ಹಾಲನ್ನು ಕುಡಿಯಿರಿ.

        ಆರೋಗ್ಯಕರ ದೇಹತೂಕವನ್ನು  ಕಾಪಾಡಿಕೊಳ್ಳಿ.

        ಕ್ಯಾಲ್ಸಿಯಂ ಸಾರಯುಕ್ತ ಸೋಯಾ ಹಾಲನ್ನು  ಉಪಯೋಗಿಸಿ.

        ತೂಕ ಇಳಿಸಲು :

        ಅಗಾಗ ಸ್ವಲ್ಪ ಸ್ವಲ್ಪವೇ ಊಟ ಸೇವಿಸಿ.

        ಹೆಚ್ಚು ನಾರಿನಂಶವಿರುವ ಆಹಾರ ಸೇವಿಸಿ.

        ನಿಯಮಿತವಾಗಿ ವ್ಯಾಯಾಮ ಮಾಡಿ.

        ರಾತ್ರಿಯ ಹೊತ್ತು ಅನ್ನ ಸೇವನೆ  ಬೇಡ.

        ಆಹಾರದಲ್ಲಿ ಸಿಹಿ ತಿನಿಸುಗಳು ಹಾಗೂ ಸಕ್ಕರೆಯನ್ನು  ಕಡಿಮೆ ಸೇವಿಸಿ.

        ಅಡುಗೆಗೆ ಕಡಿಮೆ ಎಣ್ಣೆಯನ್ನು ಉಪಯೋಗಿಸಿ.

        ಆರೋಗ್ಯಕರ  ಮೆದುಳಿಗಾಗಿ :

        ಪ್ರತಿ ದಿನ ಸೇಬು ಹಣ್ಣನ್ನು ಸೇವಿಸಿ.

        ನಿಯಮಿತ ಪ್ರಮಾಣದ ಒಮೇಗಾ -3 ಯನ್ನು ಸೇವಿಸಿ.

        ಅಗಸೆ ಬೀಜ ಹಾಗೂ ವಾಲ್‌ನಟ್‌ನ್ನು  ಸೇವಿಸಿ.

         ಬೆಳಗ್ಗಿನ  ಉಪಾಹಾರವನ್ನು  ತಪ್ಪಿಸಬೇಡಿ.

         

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಮೆದುಳಿನ ರಕ್ತನಾಳವು ಒಡೆಯುವುದು ಮತ್ತು ಸುತ್ತಮುತ್ತಲಿನ ಅಂಗಾಂಶಗಳಿಗೆ ರಕ್ತಸ್ರಾವವಾಗುವುದರಿಂದ ಇದು ಸಂಭವಿಸುತ್ತದೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus