Saturday, May 25, 2013
Last Updated: 11:53:09 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹೆಲಿಕಾಪ್ಟರ್‌ ಹಗರಣ: ಭಾರತಕ್ಕೆ ಬ್ರಿಟಿಷ್‌ ಪ್ರಧಾನಿ
    • ವಿವಿಐಪಿ ಹೆಲಿಕಾಪ್ಟರ್‌ ಹಗರಣದ ಹಿನ್ನೆಲೆಯಲ್ಲಿ ಬ್ರಿಟಿಷ್‌ ಪ್ರಧಾನಿ ಕ್ಯಾಮೆರಾನ್‌ ಕೈಗೊಂಡಿರುವ ಭಾರತ ಪ್ರವಾಸ ಮಹತ್ವ

      • Udayavani | Feb 18, 2013

        ಮುಂಬಯಿ: ಬ್ರಿಟಿಷ್‌ ಪ್ರಧಾನಿ ಡೇವಿಡ್‌ ಕ್ಯಾಮೆರಾನ್‌ ಅವರು ಸೋಮವಾರ ಬೆಳಿಗ್ಗೆ 3 ದಿನಗಳ ಭಾರತ ಪ್ರವಾಸಾರ್ಥ ಮುಂಬಯಿಗೆ ಆಗಮಿಸಿದರು.

        ಈ ಸಂರ್ದಭದಲ್ಲಿ ಕ್ಯಾಮೆರಾನ್‌ ಅವರು ಆಂಗ್ಲೋ ಇಟಾಲಿಯನ್‌ ಕಂಪೆನಿಯನ್ನು ಒಳಗೊಂಡ ವಿವಿಐಪಿ ಹೆಲಿಕಾಪ್ಟರ್‌ ಲಂಚ ಹಗರಣ ಸಂಬಂಧವಾಗಿ ಭಾರತದ ಉನ್ನತ ನಾಯಕರೊಂದಿಗೆ ವಿವಿಐಪಿ ಹೆಲಿಕಾಪ್ಟರ್‌ ಲಂಚ ಹಗರಣ ಸಂಬಂಧವಾಗಿ ಮಾತುಕತೆ ನಡೆಸುವರು.

        ಭಾರತೀಯ ಉನ್ನತ ನಾಯಕರೊಂದಿಗೆ ಕ್ಯಾಮೆರಾನ್‌ ಅವರ ಮಾತುಕತೆ ಮಂಗಳವಾರ ಬೆಳಗ್ಗೆ ನಡೆಯಲಿದ್ದು ಆ ಸಂದರ್ಭದಲ್ಲಿ ಅವರು 3,600 ಕೋಟಿ ರೂ. ವಿವಿಐಪಿ ಹೆಲಿಕಾಪ್ಟರ್‌ ಲಂಚ ಹಗರಣದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಅಗ್ರಹಿಸಲಿದ್ದಾರೆ. ನೈಋತ್ಯ ಇಂಗ್ಲಂಡ್‌ನ‌ಲ್ಲಿ ಉತ್ಪಾದಿತವಾಗುತ್ತಿರುವ ವಿವಿಐಪಿ ಹೆಲಿಕಾಪ್ಟರ್‌ಗಳ ಕಂಪೆನಿ ಆಗಸ್ತಾ ವೆಸ್ಟ್‌ಲ್ಯಾಂಡ್‌, ಈ ತನಕ 3 ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಪೂರೈಸಿದೆ.

        ಭಾರತವುಇಟಲಿ ಕಂಪೆನಿಯೊಂದಿಗಿನ ಹೆಲಿಕಾಪ್ಟರ್‌ ಪೂರೈಕೆ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಬ್ರಿಟಿಷ್‌ ಪ್ರಧಾನಿ ಕ್ಯಾಮೆರಾನ್‌ ಅವರ ಭಾರತ ಪ್ರವಾಸ ಏರ್ಪಟ್ಟಿರುವುದು ಗಮನಾರ್ಹವಾಗಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus