ಮಾಸ್ಕೋ: ಭೂಮಿಯ ವಾತಾವರಣವನ್ನು ಪ್ರವೇಶಿಸಿ ಉರಾಲ್ ಪರ್ವತ ವಲಯದ ಮೇಲೆ ಆಗಸದಲ್ಲಿ ಸ್ಫೋಟಗೊಂಡಿದ್ದ ಉಲ್ಕೆ 3 ಕೋಟಿ ಡಾಲರ್‌ಗೂ ಅಧಿಕ ಮೊತ್ತದ ಹಾನಿಯುಂಟು ಮಾಡಿರುವುದಾಗಿ ರಶ್ಯದ ಅಧಿಕಾರಿಗಳು ಅಂದಾಜಿಸಿದ್ದಾರೆ.'ಶುಕ್ರವಾರದ ಘಟನೆಯಿಂದ ಸುಮಾರು 1 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಹಾನಿಯ ಮೊತ್ತ 100 ಕೋಟಿ ರೂಬಲ್(ಸುಮಾರು 3 ಕೋಟಿ ಡಾಲರ್)ಗೂ ಹೆಚ್ಚೆಂದು ಅಂದಾಜಿಸಲಾಗಿದೆ' ಎಂದು ಮಧ್ಯ ರಶ್ಯ ವಲಯದ ರಾಜ್ಯಪಾಲ ಮಿಖಾಯಿಲ್ ಯುರೇವಿಕ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸ್ಫೋಟದ ಆಘಾತಕ್ಕೆ ಮುರಿದಿರುವ ಶೇ. 30 ಕಿಟಕಿ ಬಾಗಿಲುಗಳನ್ನು ಈಗಾಗಲೇ ದುರಸ್ತಿಗೊಳಿಸಲಾಗಿದೆ. ಇನ್ನುಳಿದ ಕಿಟಕಿ ಬಾಗಿಲುಗಳ ದುರಸ್ತಿ ಕಾರ್ಯವನ್ನು ಮುಂದಿನ ತಿಂಗಳು ನಡೆಸಲಾಗುವುದು. ವಲಯದಲ್ಲಿ ತಾಪಮಾನ ಮೈನಸ್ 20 ಡಿಗ್ರಿ ಸೆಲಿÏಯಸ್‌ಗಿಂತಲೂ ಕಡಿಮೆಯಿದೆ ಎಂದವರು ಹೇಳಿದರು.ಉಲ್ಕಾಪಾತ ಘಟನೆಯಿಂದ ಸುಮಾರು 1,000 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹೆಚ್ಚಿನವರಿಗೆ ಸಿಡಿದ ಕಿಟಕಿ ಗಾಜುಗಳಿಂದ ಗಾಯಗಳಾಗಿವೆ ಎಂದವರು ತಿಳಿಸಿದರು.