ಹೀಗೊಂದು ನೀವು ಓದಲೇಬೇಕಾದ ಪ್ರತಿಕ್ರಿಯೆ ಕಳೆದೆರಡು ವಾರದ ಹಿಂದೆ ಮಿಡ್‌ನೈಟ್ ಸೀರೀಸ್ ಅಂಕಣದಲ್ಲಿ ಕೊಪ್ಪಳದ ಚನ್ನಬಸಯ್ಯ ಬರೆದ ಗೊಂಬೆ ಮಾತಾಡೋ ಬರಹ ಕುತೂಹಲವನ್ನೂ ಅಚ್ಚರಿಯನ್ನೂ ಅಪನಂಬಿಕೆಯನ್ನೂ ಉಂಟುಮಾಡಿತ್ತು. ಆ ಊರಿನಲ್ಲಿ ಈ ಊರಿನಲ್ಲಿ ಆಗಾಗ ಕೇಳಿಬರುವ ಯಾವುದೋ ಒಬ್ಬ ವಿಚಿತ್ರ ಮಾನವ ಕಂಡನೆಂಬ ಸುದ್ದಿಯಂತೆಯೇ ಇರುವ ಈ ಕತೆ ನಿಜವಾಗಿರಬಹುದಾ ಅಥವಾ ಸುಳ್ಳಾ ಅನ್ನೋ ಪ್ರಶ್ನೆಯನ್ನು ಹಿರಿಯ ಕೌನ್ಸಿಲರ್ ಜೊತೆ ಕೇಳಲಾಯಿತು. ಇಲ್ಲಿ ಕತೆಗೆ ಟ್ವಿಸ್ಟ್. ಆ ಕತೆಯನ್ನು ಮೊದಲೇ ಓದಿರಬಹುದಾದ ನೀವು ಈ ಅನಿಸಿಕೆಯನ್ನು ಓದಿ ನಿಮಗೇನನ್ನಿಸುತ್ತದೋ ಹೇಳಿ. ಚರ್ಚೆಯಾಗಲಿ. ಮನಸ್ಸು ತಿಳಿಯಾಗಲಿ. ಕತೆ ಚೆನ್ನಾಗಿದೆ. ನಿಜವೆಂದು ನಂಬುವವನು ಬೆರಗಾಗುತ್ತಾನೆ, ಅಲ್ಲವೆಂದವನು ಸುಮ್ಮನೆ ನಗುತ್ತಾನೆ. ಈ 'ನಿಜ' ಎಂದು ನಂಬುವುದು ಅಥವಾ 'ಅಲ್ಲ'ವೆನ್ನುವುದು ಅವನವನ ಮಾನಸಿಕ ಸಾಮರ್ಥ್ಯಕ್ಕೆ ಬಿಟ್ಟದ್ದು. ಹಿಪ್ನಾಟಿಸಂ ಬಗ್ಗೆ ನೀವು ಕೇಳಿರುತ್ತೀರಿ. ದುರ್ಬಲ ಮಾನಸಿಕತೆಯ ವ್ಯಕ್ತಿಯನ್ನಷ್ಟೇ ಹಿಪ್ನೊಟೈಸ್ ಮಾಡಬಹುದು ವಿನಃ ಸುದೃಢ ಮಾನಸಿಕತೆಯವನನ್ನು ಹಿಪ್ನೊಟೈಸ್ ಮಾಡಲು ಸಾಧ್ಯವಿಲ್ಲವೆಂಬುದು ನಿಮಗೂ ಗೊತ್ತಿದೆ. ಅದೇಕೆ ಹಾಗೆಂದು ಕೊಂಚ ಯೋಚಿಸಿ... ನಿಮಗೇ ಅರ್ಥವಾಗುತ್ತದೆ. 'ಅದು ಹೇಗೆ ನನ್ನನ್ನು ಮರುಳುಮಾಡುತ್ತಿಯೋ ನೋಡೋಣ, ಇದೆಲ್ಲ ನನ್ನತ್ರ ನಡೆಯಲ್ಲ' ಎಂಬ ಸುದೃಢವಾದ ಮಾನಸಿಕ ಶಕ್ತಿ (ವಿಲ್ ಪವರ್) ಹೊಂದಿದವನು ಏನೂ ಆಗಿಲ್ಲದಂತೆ ಸುಮ್ಮನಿರುವ ಹೊತ್ತಿಗೆ ದುರ್ಬಲ ಮಾನಸಿಕತೆಯವನು ಹಿಪ್ನೊಟೈಸರ್ ಹೇಳಿದಂತೆ ವರ್ತಿಸತೊಡಗುತ್ತಾನೆ. ಅವನಿಗದು ವಿಚಿತ್ರವೆನಿಸುತ್ತದೆ. ಇನ್ನೊಂದು ಪದ ನೀವು ಕೇಳಿರಬಹುದು- ಹಿಸ್ಟೀರಿಯಾ. ಒಂದು ವಿಷಯವನ್ನು ಪ್ರಬಲವಾಗಿ ನಂಬಿದವನು ಇದೇ ಸತ್ಯವೆಂದು ಇನ್ನೊಬ್ಬನಿಗೆ ವಿವರಿಸುತ್ತಾನೆ. ಮತ್ತು ಹಾಗೆ ನಂಬಿಕೊಂಡ ಇತರರು ತಮ್ಮಂತೆ ನಂಬಿದ ಇತರರಿಗೆ ಈ ವಾರ್ತೆಯನ್ನು ಹಂಚುತ್ತಾರೆ. ಗಣಪತಿ ಹಾಲು ಕುಡಿದನೆಂದು ನಂಬಿದವರು ಮೊದಲಿಗೆ ಗಣಪತಿಯನ್ನು ನಂಬಿರಲೇ ಬೇಕಲ್ಲವೆ?! ಈ ಮನಸ್ಥಿತಿಗೆ ದೇವರ ಅಪ್ರತಿಮ ಪವಾಡಗಳು ಇಷ್ಟವೆನಿಸುವುದು ತಪ್ಪಲ್ಲ. ಸಮುದ್ರದೊಳಗೆ ಸಿಹಿನೀರು ಬಂತು ಎಂದು ಪ್ರಚಾರವಾದ ಪವಾಡವು ತೀರ್ಥ ಸದೃಷವಾಗಿ ಕಂಡ ಅದೆಷ್ಟೋ ಮಂದಿ ಇರಲಿಲ್ಲವೇ? ಇಂತಹ ಸಂದರ್ಭಗಳಲ್ಲಿ ವ್ಯಕ್ತಿಯೊಳಗಿನ ಭದ್ರ ನಂಬಿಕೆಯು ಇನ್ನಷ್ಟು ದೃಢಗೊಳ್ಳುತ್ತದೆಯೇ ವಿನಃ ವಾಸ್ತವದ ವೈಜ್ಞಾನಿಕ ಪರಿಕಲ್ಪನೆಯು ಆ ಕ್ಷಣದಲ್ಲಿ ಹಿತವಾಗುವುದಿಲ್ಲ. ಇಂತಹ ಹಲವು ಘಟನೆಗಳು ಕೆಲದಿನಗಳÇÉೇ ಹೇಳ ಹೆಸರಿಲ್ಲದಂತೆ ಮಾಯವಾಗುವುದು ಯಾಕೆಂದೂ ಅರ್ಥವಾಗಬೇಕಿಲ್ಲ. ಸಂಗ್ರಹಿತ ಮಾಹಿತಿ + ನಿರೀಕ್ಷೆ + ಆಂತರಿಕ ನಂಬಿಕೆ= ಪರಿಕಲ್ಪನೆ. ತನ್ನ ಪರಿಕಲ್ಪನೆಗಳನ್ನು ಪ್ರತ್ಯಕ್ಷ ಪ್ರಮಾಣದಲ್ಲಿ ವಿವೇಚಿಸದಿ¨ªಾಗಿನ ದುರ್ಬಲ ಮನಸ್ಥಿತಿಯು ತನ್ನ ಮಾಹಿತಿ- ನಿರೀಕ್ಷೆ ಹಾಗೂ ನಂಬಿಕೆಗಳ ಪ್ರಭಾವಕ್ಕೆ ಪಕ್ಕಾಗುತ್ತದೆ. ಈಗ ಬಸ್ ಬರುತ್ತದೆಂಬ ಮಾಹಿತಿಯು ನಿರೀಕ್ಷೆಯನ್ನು ಉಂಟುಮಾಡುತ್ತದೆ. ಆ ನಿರೀಕ್ಷೆಯಲ್ಲಿಯೇ ಇರುವ ವ್ಯಕ್ತಿಗೆ ಪ್ರತಿ ಶಬ್ದವೂ ಕೂಡ ಬಸ್ಸಿನ ಶಬ್ದದಂತೆಯೇ ಭಾಸವಾಗುತ್ತದೆ. ಮರುಭೂಮಿಯ ಓಯಸಿಸ್‌ಗೆ ವೈಜ್ಞಾನಿಕ ಕಾರಣಗಳಿರುತ್ತವೆಂಬುದಕ್ಕಿಂತಲೂ ಹೆಚ್ಚಾಗಿ ಅದು ನೀರೇ ನಿಜವೆಂಬ ಭಾವ ಉಂಟಾಗುತ್ತದೆ. ತರ್ಕಸಮ್ಮತವಾದ ವಿಚಾರಬುದ್ಧಿಯು ಭದ್ರ ಒಳನಂಬಿಕೆಗಳ ಪ್ರಭಾವಕ್ಕೆ ತುತ್ತಾದಾಗ ಕೆಲವು ಸಂಗತಿಗಳನ್ನು ಹೊರಗಿಡುತ್ತದೆ. ತನ್ನೊಳಗಿನ ನಂಬಿಕೆಯ ಮನೋಚಿತ್ರವನ್ನು ಕಾಣುವವನು, ಆಲಿಸುವವನು ಅದನ್ನು ನಿಜವೆಂಬಂತೆ ವರ್ಣಿಸುವುದು ಆಶ್ಚರ್ಯವೇನೂ ಅಲ್ಲ. ಇದನ್ನು ವಿಶುವಲ್ ಹೆಲ್ಯೂಸಿನೇಷನ್ ಎಂದು ಮನೋಜ್ಞಾನದ ಪರಿಭಾಷೆಯಲ್ಲಿ ಕರೆಯುತ್ತಾರೆ. ತೆಂಗಿನ ಮರವೊಂದು ನೋಡುಗರೆಲ್ಲರಿಗೆ ಅದೇ ಆಗಿ ಕಾಣುವುದು ವಾಸ್ತವವಾದರೆ, ಇನ್ನೇನೋ ಬೇರೆ ಒಂದು ರೂಪವಾಗಿ ಕಾಣುವುದು ಭ್ರಮೆ ಎನಿಸುತ್ತದೆ. ಕೆಲವರಿಗೆ ಮಾತ್ರ ಈ ರೀತಿ ಆಗುವುದು ಏಕೆಂಬ ಪ್ರಶ್ರೆಯನ್ನು ಪರಿಗಣಿಸಬೇಕಾದ ಅಗತ್ಯ ತಲೆದೋರುವುದು ಇಲ್ಲಿಯೇ. ಬ್ಲಾÂಕ್‌ಮ್ಯಾನ್ ಕಂಡನೆಂದು ಹಪಹಪಿಸುವ ಜನರ ನಡುವೆಯೇ, ಇದೆಲ್ಲ ಬರಿಯ ಭಾÅಂತಿಯೆಂದು ಹೇಳುವವರೂ ಇರುವುದಿಲ್ಲವೆ?! ನಾವು ಎಚ್ಚರ ತಪ್ಪಿದರೆ ಒಂದು ಇನ್ನೊಂದಾಗಿ ಕಾಣುವ ಸುಳ್ಳಿನ ನಿಜ(ಇಲ್ಯೂಷನ್) ನಮ್ಮನ್ನೇ ಕಂಗೆಡಿಸೀತು. ಅಧ್ಯಾತ್ಮ ಜ್ಞಾನಗಳ ಸಂಗಮವಾಗಬೇಕೆಂದು ವೇಕಾನಂದರು ಹೇಳಿದ್ದು ಇದಕ್ಕೇ ಇರಬಹುದು. ಗಂಗಾಧರ ಬೆಳ್ಳಾರೆ, ಸ್ಕೋಪ್ ಕೌನ್ಸೆಲಿಂಗ್ ಸೆಂಟರ್, ಪುತ್ತೂರು- 574203.