Thursday, June 20, 2013
Last Updated: 12:15:14 PM IST
  • ನಾನೆಲ್ಲಿರುವೆ:
  • ಮುಖಪುಟ ಹೊರನಾಡು ಕನ್ನಡಿಗ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪುಣೆ ಕನ್ನಡ ಸಂಘ: ಜನ್ಮೋತ್ಸವದ ಸಂಭ್ರಮ
    • ಪುರಂದರದಾಸರ ಹಾಡುಗಳ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳು.

      • ಚಿತ್ರ-ವರದಿ: ಕಿರಣ್‌ ಬಿ. ರೈ, ಕರ್ನೂರು | Feb 18, 2013

        ಪುಣೆ: ಪುಣೆ ಕನ್ನಡ ಸಂಘದ ಆಶ್ರಯದಲ್ಲಿ ಸಂತ ಪುರಂದರ ದಾಸರ 449ನೇ ಜನ್ಮೋತ್ಸವವನ್ನು ಫೆ. 10 ರಂದು ವೈವಿಧ್ಯಮಯವಾಗಿ ಆಚರಿಸಲಾಯಿತು.

        ಈ ಸಂದರ್ಭದಲ್ಲಿ ಪುರಂದರದಾಸರ ಹಾಡುಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 18 ವರ್ಷದವರೆಗಿನವರಲ್ಲಿ ರುಚಿತಾ ರಾವ್‌ ಪ್ರಥಮ, ಸುಶ್ಮಾ ಭಟ್‌ ದ್ವಿತೀಯ, ಶುೃತಿ ಭಟ್‌ ತೃತೀಯ ಹಾಗೂ ಲಕ್ಷ್ಮೀ ಸಿ., ಸಚಿನ್‌ ವಿ. ಶೆಟ್ಟಿ, ನಿಶಾ ಎನ್‌. ಪೂಜಾರಿ ಸಮಾಧಾನಕರ ಬಹುಮಾನ ಪಡೆದರು. 18ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸಹನಾ ಸಂತೋಷ್‌ ಪ್ರಥಮ, ಎ. ಜಿ. ಕುಲಕರ್ಣಿ ದ್ವಿತೀಯ, ಶಂಕರ ಪೂಜಾರಿ ತೃತೀಯ, ರೂಪಲೇಖಾ ಹೆಗ್ಡೆ, ಜಗನ್ನಾಥ ಕುಂಬ್ಳೆ, ಅಜಿತ್‌ ಕುಲಕರ್ಣಿ ಸಮಾಧಾನಕರ ಬಹುಮಾನ ಪಡೆದರು.

        ಕರ್ನಾಟಕ ಸಂಗೀತಜ್ಞೆ ನಂದಿನಿ ರಾವ್‌ ಅವರು ಪುರಂದರ ದಾಸರ ಕೀರ್ತನೆಗಳನ್ನು ಹಾಡಿದರು. ಈ ಕಾರ್ಯಕ್ರಮದಲ್ಲಿ ಕನ್ನಡೇತರರೂ ಕನ್ನಡ ಕಲಿತು, ಹಾಡಿನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ ಹೆಗ್ಡೆ, ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌, ಕೋಶಾಧಿಕಾರಿ ಬಾಬುರಾವ್‌, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ವಿಶ್ವಸ್ತರುಗಳಾದ ಮೀರಾ ಕಲ್ಮಾಡಿ, ರಾಧಿಕಾ ಶರ್ಮಾ ಉಪಸ್ಥಿತರಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image image
      • Copyright @ 2009 Udayavani.All rights reserved.
      • Designed & Hosted By 4cplus