Udayavani | Feb 18, 2013
ಮುಂಬಯಿ: ಬಾಂಬೇ ಫೋರ್ಟ್ ರಾತ್ರಿ ಶಾಲೆಯ 98 ನೇ ವಾರ್ಷಿಕೋತ್ಸವ ಮತ್ತು ಬಹುಮಾನ ವಿತರಣಾ ಸಮಾರಂಭವು ಫೆ. 24 ರಂದು ಸಂಜೆ 4.30ಕ್ಕೆ ಬೊರಿವಲಿ ಪಶ್ಚಿಮದ ಚಾಮುಂಡ ವೃತ್ತದ ಸಮೀಪದ ಪ್ರಭೋಧನ್ ಠಾಕ್ರೆ ಸಭಾಗೃಹದಲ್ಲಿ ನಿರ್ಮಿಸಲಾಗುವ ಮೂಡಬಿದ್ರೆ ಚಂದ್ರಾವತಿ ಎಸ್. ಸುವರ್ಣ ವೇದಿಕೆಯಲ್ಲಿ ವಿರಾರ್ ಶಂಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಈ ಸಮಾರಂಭಕ್ಕೆ ನಿಟ್ಟೆ ಎಂ. ಜಿ. ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಗೌರವ ಅತಿಥಿಗಳಾಗಿ ದಾಮೋದರ ಕುಂದರ್, ಡಾ| ಹರೀಶ ಬಿ. ಶೆಟ್ಟಿ, ರಾಜೇಶ್ ಭಟ್, ಡಾ| ಸತೀಶ ಶೆಟ್ಟಿ, ಶ್ರೀನಿವಾಸ್ ಪಿ. ಎಸ್. , ಅಶೋಕ ಮೂಡುಬಿದ್ರೆಯವರು ಅವರು ಉಪಸ್ಥಿತರಿರಲಿದ್ದಾರೆ.
ಸಾತಿಂಜ ಜನಾರ್ಧನ ಭಟ್ ಅವರು ಆಶೀರ್ವಚನಗೈಯಲಿದ್ದು, ಮನರಂಜನಾ ಕಾರ್ಯಕ್ರಮದಂಗವಾಗಿ ಯಕ್ಷ ಕಲಾ ತರಂಗ ಇದರ ಕಲಾವಿದರಿಂದ ಪಂಚಾಕ್ಷರಿ ಮಹಿಮೆ ಎಂಬ ಯಕ್ಷಗಾನ ಬಯಲಾಟವನ್ನು ಶ್ರೀ ಕುಕ್ಕೆಹಳ್ಳಿ ವಿಠಲ ಪ್ರಭು ಅವರ ನಿರ್ದೇಶನದಲ್ಲಿ ಆಡಿತೋರಿಸಲಿರುವರು ಎಂದು ಸಂಸ್ಥೆಯ ಅಧ್ಯಕ್ಷ ಆರ್. ಕೆ. ಮುಲ್ಕಿ, ಗೌರವ ಕಾರ್ಯದರ್ಶಿ ಐ. ಕೆ. ಕೋಟ್ಯಾನ್ ಹಾಗೂ ಉಪಾಧ್ಯಕ್ಷ ಪ್ರಕಾಶ್ ಮೂಡುಬಿದ್ರೆಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.