Udayavani | Feb 18, 2013
ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್ಸ್ ಅಸೋಸಿಯೇಶನ್‌ನ ಆಶ್ರಯದಲ್ಲಿ ಚರ್ಚ್‌ಗೇಟ್‌ನ ಮೈದಾನದಲ್ಲಿ ಆಯೋಜಿತ 17 ನೇ ರಮಾನಾಥ ಪಯ್ಯಡೆ ಸ್ಮಾರಕ ಪುಟ್ಬಾಲ್ ಪಂದ್ಯಾಟದಲ್ಲಿ ಸತತವಾಗಿ 5 ನೇ ಬಾರಿ ಮೊಗವೀರ ತಂಡ ಫೈನಲ್ ಹಂತಕ್ಕೆ ಪ್ರವೇಶಿಸಿದೆ.
ಮೊಗವೀರ ತಂಡ ಹಾಗೂ ಕರ್ನಾಟಕ ಅಮೇಚೂರ್ ತಂಡದ ನಡುವೆ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಎರಡು ತಂಡಗಳು ತಲಾ 1-1 ಗೋಲುಗಳು ಬಾರಿಸುವುದರಿಂದ ಪಂದ್ಯವು ಡ್ರಾದೊಂದಿಗೆ ಸಮಾಪ್ತಿಯಾಗಿದ್ದು, ಟೈಬ್ರೇಕರ್‌ನಲ್ಲಿ ಮೊಗವೀರ ತಂಡ 3-2 ಗೋಲುಗಳ ಅಂತರದಿಂದ ಕರ್ನಾಟಕ ಅಮೇಚೂರ್ ತಂಡವನ್ನು ಸೋಲಿಸಿತು. ವಿಜಯಿ ತಂಡದ ಪರವಾಗಿ ರೋನಕ್ ಕಿಲಂಜರ್, ಕ್ಲೇಡನ ರೋನ್ಹಾ, ಅಕ್ಷಯ ಬಾಂದೇಕರ, ಪರಾಜಿತ ತಂಡದ ಪರವಾಗಿ ನಿಶಾಂತ್ ಶೆಟ್ಟಿ, ರೋಶನ್ ಪಿಂಟೋ ತಲಾ ಒಂದೊಂದು ಗೋಲು ಬಾರಿಸಿದರು.
ಎರಡನೇ ಪಂದ್ಯದಲ್ಲಿ ಸ್ಟಾರ್ ಆಫ್ ಕೆನರಾ ತಂಡ ರುಸ್‌ವೆಲ್ಟ್ ಮಥಾಯಿಸ್ ಅವರ ಏಕೈಕ ಗೋಲಿನ ನೆರವಿನಿಂದ ಉಚ್ಚಿಲ್ ಯುನೈಟೆಡ್ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿತು.
ಈ ಪಂದ್ಯಾಟದ ಫೈನಲ್ ಪಂದ್ಯ ಫೆ. 23 ರಂದು 4 ಗಂಟೆಗೆ ನಡೆಯಲಿದ್ದು, ಇದಕ್ಕೂ ಮುನ್ನ 3 ನೇ ಕ್ರಮಾಂಕಕ್ಕಾಗಿ ಕರ್ನಾಟಕ ಅಮೇಚೂÂರ್ ಮತ್ತು ಉಚ್ಚಿಲ್ ತಂಡಗಳು ಸೆಣಸಾಡಲಿವೆ. ಅಂದು ಸಂಜೆ ಈ ಪಂದ್ಯಾಟದ ಪ್ರಾಯೋಜಕ ಡಾ| ಪದ್ಮನಾಭ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.