Friday, May 24, 2013
Last Updated: 1:47:42 PM IST
  • ನಾನೆಲ್ಲಿರುವೆ:
  • ಮುಖಪುಟ Cinema ಸ್ಯಾಂಡಲ್‌ವುಡ್‌ ವಾರ್ತೆಗಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಚೀ... ಚುಲ್‌ಬುಲೀಸ್‌
    • ಸಿನಿಮಾ ಅಂದಮ್ಯಾಲೆ ಅಲ್ಲೊಂದಿಷ್ಟು ಹಾಸ್ಯ ಇರದಿದ್ದರೆ ಹೇಗೆ? ಮನರಂಜನೆಯೇ ಇಲ್ಲವೆಂದರೆ ಅದು ಸಿನಿಮಾ ಅನ್ನಿಸಿಕೊಳ್ಳುತ್

      • Udayavani | Feb 18, 2013

        ಸಿನಿಮಾ ಅಂದಮ್ಯಾಲೆ ಅಲ್ಲೊಂದಿಷ್ಟು ಹಾಸ್ಯ ಇರದಿದ್ದರೆ ಹೇಗೆ? ಮನರಂಜನೆಯೇ ಇಲ್ಲವೆಂದರೆ ಅದು ಸಿನಿಮಾ ಅನ್ನಿಸಿಕೊಳ್ಳುತ್ತಾ? ಮನರಂಜನೆ ಇಲ್ಲದೆಯೂ ಒಂದು ನೀಟ್‌ ಸಿನಿಮಾ ಮಾಡಲು ಸಾಧ್ಯವಿದೆ. ಈಗಾಗಲೇ ಗಾಂಧಿನಗರದಲ್ಲಿ ಒಂದಷ್ಟು ಹೊಸ ಹುಡುಗರು ಅದನ್ನು ಸಾಬೀತು ಮಾಡಿದ್ದಾರೆ. ಇದೆಲ್ಲವೂ ನಿಜ. ಆದರೆ, ಸಿನಿಮಾ ನೋಡೋರಿಗೆ ತಕ್ಕಮಟ್ಟಿಗಾದರೂ ಮನರಂಜನೆಯೇ ಇಲ್ಲ ಅನಿಸಿದರೆ ಮಜಾ ಇರುತ್ತಾ? ಅಂಥದ್ದೊಂದು ಮಜಾ ಕೊಡಬೇಕು ಅಂತಾನೇ ಹೀಗೊಂದು ತಂಡ, ಪಕ್ಕಾ ಮನರಂಜನೆಯ ಸಿನಿಮಾ ಮಾಡಲು ಅತೀವ ಉತ್ಸಾಹದೊಂದಿಗೆ ಗಾಂಧಿನಗರದ ಮೈದಾನಕ್ಕಿಳಿಯಲು ಸಜ್ಜಾಗಿದೆ. ಅವರ ಈ ಹೊಸ ಪ್ರಯತ್ನ ಒಂದು ರೀತಿಯ ಹೊಸ ಪ್ರಯೋಗವೂ ಹೌದು! ಇಲ್ಲಿ ಪ್ರಯೋಗ ಅಂದರೆ, ಇಡೀ ಚಿತ್ರ ಮೂವರು ನಾಯಕಿಯರಿಂದಲೇ ಸಾಗುತ್ತೆ!! ಎಲ್ಲಾ ಚಿತ್ರಗಳಲ್ಲೂ ಹೀರೋಗಳಿರುತ್ತಾರೆ. ಅವರೊಂದಿಗೆ ನಾಯಕಿಯರು ಮರ ಸುತ್ತುತ್ತಾರೆ. ವಿಲನ್‌ಗಳಿರುತ್ತಾರೆ. ಆದರೆ, ಇಲ್ಲಿ ಅಂಥದ್ದೇನೂ ಇಲ್ಲ. ಇದು ನಾಯಕಿಯರ ಪ್ರಧಾನ ಚಿತ್ರ!?
        ಇಷ್ಟಕ್ಕೂ ಇಂಥದ್ದೊಂದು ಹೊಸ ಪ್ರಯೋಗಕ್ಕೆ ಇಳಿದಿರುವ ನಿರ್ದೇಶಕ ನೂತನ್‌ ಉಮೇಶ್‌. 'ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ' ಬಳಿಕ ಮಾಡುತ್ತಿರುವ ಅಪ್ಪಟ ಮನರಂಜನೆಯ ಚಿತ್ರವಿದು ಎಂಬುದು ಅವರ ಹೇಳಿಕೆ. ಇದೊಂದು ಪಕ್ಕಾ ಮನರಂಜನೆ ಚಿತ್ರ ಆಗುತ್ತೆ ಎನ್ನುವುದಕ್ಕೆ ಚಿತ್ರದ ಶೀರ್ಷಿಕೆಯೇ ಉದಾಹರಣೆ ಅಂತ ಸೆ¾„ಲ್‌ ಕೊಡುತ್ತಾರೆ ಉಮೇಶ್‌. ಚಿತ್ರದ ಹೆಸರು 'ಚೀ.. ಚುಲ್‌ಬುಲೀಸ್‌'. ಹೀಗೆಂದರೆ? ಇಂಗ್ಲೀಷ್‌ನಲ್ಲಿ ಹೇಳ್ಳೋದಾದ್ರೆ 'ನಾಟಿ ಗರ್ಲ್ಸ್‌' ಇನ್ನು ಕನ್ನಡದಲ್ಲಿ ಹೇಳ್ಳೋದಾದ್ರೆ 'ತುಂಟಿ ಹುಡುಗೀರು'. ಈ ಶೀರ್ಷಿಕೆಗೊಂದು ಅಡಿಬರಹವಿದೆ. 'ವೈ ಶುಡ್‌ ಬಾಯ್ಸ ಹ್ಯಾವ್‌ ಆಲ್‌ ದ ಫ‌ನ್‌...' ಈ ಟ್ಯಾಗ್‌ಲೈನ್‌ ಓದಿಕೊಂಡರೆ ಚಿತ್ರದೊಳಗಿನ ಸಾರಾಂಶ ಗೊತ್ತಾಗಿಬಿಡುತ್ತೆ.
        ಆಕ್ಷನ್‌, ಸೆಂಟಿಮೆಂಟ್‌ ಮತ್ತು ಲವ್ವು ಕುರಿತ ಚಿತ್ರಗಳೇ ಸಾಲುಗಟ್ಟಿ ಬರುತ್ತಿರುವ ದಿನದಲ್ಲಿ ಹೊಸ ರೀತಿಯ ಚಿತ್ರವನ್ನೇಕೆ ಕೊಡಬಾರದು ಅಂತ ಯೋಚಿಸಿದ ನೂತನ್‌ ಉಮೇಶ್‌, ಮೂವರು ಹುಡುಗಿಯರನ್ನಿಟ್ಟುಕೊಂಡೇ ಚಿತ್ರವನ್ನೇಕೆ ಮಾಡಬಾರದು ಅಂದುಕೊಂಡು 'ಚೀ ಚುಲ್‌ಬುಲೀಸ್‌' ಶುರುಮಾಡಲು ಹೊರಟಿದ್ದಾರಂತೆ. ಲೈಫ್ನಲ್ಲಿ ಹುಡುಗರಷ್ಟೇ ಎಂಜಾಯ್‌ ಮಾಡ್ತಾರೆ. ನಾವೇಕೆ ಮಾಡಬಾರ್ಧು. ನಾವೂ ಜಾಲಿಯಾಗಿ ಲೈಫ್ ಎಂಜಾಯ್‌ ಮಾಡಬಹುದಲ್ವಾ. ಯಾವ್ಯಾವ ವಯಸ್ಸಲ್ಲಿ ಹ್ಯಾಗೆ ಇರಬೇಕು. ಹೇಗೆಲ್ಲಾ ಎಂಜಾಯ್‌ ಮಾಡಬೇಕು ಅನ್ನೋ ಸಣ್ಣ ಎಳೆ ಇಟ್ಟುಕೊಂಡು ಅದಕ್ಕೊಂದಿಷ್ಟು ಹಾಸ್ಯ ಬೆರೆಸಿ ಕಥೆ ಹೆಣೆದಿದ್ದಾರಂತೆ. ಇಡೀ ಚಿತ್ರಕ್ಕೆ ಮೂವರು ಹುಡುಗಿಯರೇ ಜೀವಾಳ. ಇಲ್ಲಿ ಯಾವುದೇ ಲವ್ವು-ಗಿವ್ವು, ಸೆಂಟಿಮೆಂಟ್‌, ಫೈಟು ಇರೋದಿಲ್ಲ. ಪಕ್ಕಾ ಎಂಟರ್‌ಟೈನರ್‌ ಮೂವಿ ಎನ್ನುತ್ತಾರೆ ನಿರ್ದೇಶಕರು.
        ನೂತನ್‌ ಆರ್ಟ್ಸ್ ಮೂಲಕ ಒಂದಷ್ಟು ಸಮಾನ ಮನಸ್ಸಿನ ಗೆಳೆಯರ ಜತೆ ಸೇರಿ ನಿರ್ಮಾಣಕ್ಕೂ ಇಳಿದಿದ್ದಾರಂತೆ ಉಮೇಶ್‌. ಅವರಿಗೆ ಗೆಳೆಯರು ನಿರ್ಮಾಣದಲ್ಲಿ ಸಾಥ್‌ ಕೊಡುತ್ತಿದ್ದಾರೆ. ಇನ್ನು, ಚಿತ್ರದ ಮೂವರು ನಾಯಕಿಯರಿಗಾಗಿ ಹುಡುಕಾಟ ನಡೆಯುತ್ತಿದೆ. ಆ ಮೂವರು ಹುಡುಗಿಯರು ಹೊಸ ಮುಖಗಳು ಎನ್ನುವುದನ್ನು ಮರೆಯೋದಿಲ್ಲ ಉಮೇಶ್‌. ಚಿತ್ರದ ಇನ್ನೊಂದು ಸ್ಪೆಷಲ್‌ ಅಂದರೆ, ಸಂಗೀತ ನಿರ್ದೇಶಕರೂ ಸಹ ಹುಡುಗಿಯೇ ಇರುತ್ತಾರಂತೆ. ಸದ್ಯಕ್ಕೆ ಒಂದಿಬ್ಬರ ಜತೆ ಮಾತುಕತೆಯೂ ನಡೆಯುತ್ತಿದ್ದು, ಶೀಘ್ರವೇ ಅಂತಿಮವಾಗಲಿದೆ. ಉಳಿದಂತೆ, ಶೇಖರ್‌ಚಂದ್ರ ಕ್ಯಾಮೆರಾ ಹಿಡಿದರೆ, ಶ್ರೀ ಕತ್ತರಿ ಹಾಕಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್‌ನಲ್ಲಿ 'ಚೀ.. ಚುಲ್‌ಬುಲೀಸ್‌'ಗೆ ಮುಹೂರ್ತ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus