Thursday, May 23, 2013
Last Updated: 1:03:06 AM IST
  • ನಾನೆಲ್ಲಿರುವೆ:
  • ಮುಖಪುಟ Cinema ಸ್ಯಾಂಡಲ್‌ವುಡ್‌ ವಾರ್ತೆಗಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಾದಲ್‌ ಪಿಶಾಚಿಯ ಹೆಸರು ಕಾಜಲ್‌
    • ವ್ಯಾಲೆಂಟೈನ್ಸ್‌ ಡೇಗೆ ದೆವ್ವದ ಚಿತ್ರದ ಮುಹೂರ್ತ!

      • Udayavani | Feb 18, 2013

        ವ್ಯಾಲೆಂಟೈನ್ಸ್‌ ಡೇಗೆ ದೆವ್ವದ ಚಿತ್ರದ ಮುಹೂರ್ತ!
        ಅದೇನು ಪ್ರೇಮಿಗಳ ಚಿತ್ರವೋ ಅಥವಾ ದೆವ್ವಗಳ ಚಿತ್ರವೋ ಎಂದು ನೀವು ಕೇಳಬಹುದು. ಇದು ಪ್ರೇಮಿಯೊಬ್ಬಳು ದೆವ್ವವಾಗುವ ಕಥೆಯಂತೆ. ಹಾಗಾಗಿ 'ಕಾಜಲ್‌.5' ಚಿತ್ರವಕ್ಕೆ ಮೊನ್ನೆ ಫೆಬ್ರವರಿ 14ರ ಶುಕ್ರವಾರದಂದು ಮುಹೂರ್ತ ಕೂಡಿ ಬಂದಿತ್ತು. ಮೊನ್ನೆ ಮುಹೂರ್ತವಾಗಿದ್ದರೂ, ಚಿತ್ರ ಪ್ರಾರಂಭವಾಗುವುದೇನಿದ್ದರೂ ಮಾರ್ಚ್‌ ಮೊದಲ ವಾರದಲ್ಲೇ. ಆ ನಂತರ ಬೆಂಗಳೂರು, ಮೈಸೂರು, ಚಿಕ್ಕಮಗಳೂರುಗಳಲ್ಲಿ ಚಿತ್ರೀಕರಣ ನಡೆಯಲಿದೆ.
        ಇಷ್ಟಕ್ಕೂ 'ಕಾಜಲ್‌.5' ಚಿತ್ರದ ಕಥೆ ಏನೆಂದರೆ, ಐವರು ಒಬ್ಬ ಹುಡುಗಿಯನ್ನು ರೇಪ್‌ ಮಾಡಿ ಸಾಯಿಸುತ್ತಾರೆ. ಆಕೆ ದೆವ್ವವಾಗಿ ಬಂದು ಅವರೆಲ್ಲರನ್ನೂ ಕಾಡಿ ಕೊಲ್ಲುತ್ತಾಳೆ. ಚಿತ್ರದಲ್ಲಿ ನವ್ಯ, ಮೋಹನ್‌, ಶೋಭರಾಜ್‌, ಪದ್ಮಜಾ ರಾವ್‌, ಶಿವರಾಮಣ್ಣ, ಪದ್ಮವಾಸಂತಿ ಮುಂತಾದವರಿದ್ದಾರೆ. ಜೊತೆಗೆ ಐವರು ಹೊಸ ವಿಲನ್‌ಗಳೂ ಇದ್ದಾರೆ.
        ಈ ಚಿತ್ರವನ್ನು ನಿರ್ಮಿಸುತ್ತಿರುವವರ್ಯಾರು ಗೊತ್ತಾ? ಪ್ರೇಕ್ಷಕರು ಎಂದರೆ ಆಶ್ಚರ್ಯವಾಗಬಹುದು. ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದಂತೆ. ಚಿತ್ರದ ಆಡಿಯೋ ಸಿಡಿಗಳಲ್ಲಿ ಒಂದು ಕೂಪನ್‌ ಇಟ್ಟು ಮಾರಲಾಗುತ್ತದಂತೆ. ಸಿಡಿ ಕೊಂಡವರ ದುಡ್ಡಲ್ಲಿ ನಿರ್ಮಾಣಕ್ಕೆ ಒಂದಿಷ್ಟು ಅಂಶ ಹೋದರೆ, ಇನ್ನೊಂದಿಷ್ಟು ಹಣ ಅನಾಥಾಶ್ರಮಕ್ಕೆ ಹೋಗುತ್ತದಂತೆ. ಆ ನಿಟ್ಟಿನಲ್ಲಿ ಯಾರು ಬೇಕಾದರೂ ಕೈ ಜೋಡಿಸಬಹುದಂತೆ.
        ದೆವ್ವದ ಚಿತ್ರಕ್ಕೆ ನಿರ್ಮಾಪಕರಾಗೋ ಐಡಿಯಾ ಇದೆಯೋ ಹೆಂಗೆ?

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • picಮೆಂಟ್ಲು ಸಾಂಗ್‌
        ಅದ್ಯಾಕೋ ನಿರ್ದೇಶಕ ಪ್ರೇಮ್‌ ಈಗ ನಿರ್ದೇಶನಕ್ಕಿಂತ ಇತರ ಕಡೆ ಸ್ವಲ್ಪ ಹೆಚ್ಚು ಗಮನಕೊಡುತ್ತಿರುವಂತಿದೆ. ''ಪ್ರೇಮ್‌ ಅಡ್ಡ' ನಂತರ ಅವರಿಗೆ ನಾಯಕರಾಗಿಯೂ ಒಂದಷ್ಟು ಬೇಡಿಕೆ ಬಂದಿದೆ. ಅದಕ್ಕೆ ಸಾಕ್ಷಿ ನಾಯಕರಾಗಿ ನಟಿಸುವುದಾಗಿ ಒಂದಷ್ಟು ಸಿನಿಮಾಗಳನ್ನು ಪ್ರೇಮ್‌ ಒಪ್ಪಿಕೊಂಡಿರುವುದು.
      image
      • Copyright @ 2009 Udayavani.All rights reserved.
      • Designed & Hosted By 4cplus