ಶಿರ್ಡಿ: ಇಲ್ಲಿಗೆ ಸಮೀಪದ ನಂದುರ್ಖಿ ಹಳ್ಳಿಯಲ್ಲಿ ಜೋಪಡಿ ಬೆಂಕಿಗಾಹುತಿಯಾಗಿ ಮೂವರು ಒಡಹುಟ್ಟಿಗರು ಸಜೀವ ದಹನಗೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.ಭಾನುವಾರ ರಾತ್ರಿ 1.30 ಗಂಟೆ ಸುಮಾರಿಗೆ ನಂದುರ್ಖಿ ಹಳ್ಳಿಯ ದಾದಾಸಾಹೇಬ್ ತುಕಾರಾಮ್ ವಿಧಾತೆ ಎಂಬವರ ಪರಿವಾರ ವಾಸ್ತವ್ಯವಿದ್ದ ಜೋಪಡಿಗೆ ಬೆಂಕಿ ಹತ್ತಿದ ದುರಂತದಲ್ಲಿ ಮೂವರು ಮಕ್ಕಳ ಜೀವಂತ ದಹನಗೊಂಡರು ಎಂದು ಶಿರ್ಡಿ ಪೊಲೀಸ್ ಇನ್ಸ್‌ಪೆಕ್ಟರ್ ದತ್ತಾ ಪವಾರ್ ತಿಳಿಸಿದ್ದಾರೆ.ಮೃತಪಟ್ಟವರನ್ನು ಆಕಾಶ್ (14), ಮಾನಿಷಾ (12) ಮತ್ತು ವಿಕಾಸ್ (10) ಎಂದು ಗುರುತಿಸಲಾಗಿದೆ.ಬೆಂಕಿ ನಂದಿಸಲು ಯತ್ನಿಸಿದ ದಾದಾ ಸಾಹೇಬ್ ಅವರಿಗೂ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ರಾತ್ರಿ ಜೋಪಡಿಯಲ್ಲಿ ಉರಿಯುತ್ತಿದ್ದ ಲಾಟೀನ್ ಮೂಲಕ ಬೆಂಕಿ ಹತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.