ಚಿತ್ರ-ವರದಿ : ರೋನ್ಸ್ ಬಂಟ್ವಾಳ್ | Feb 18, 2013
ಮುಂಬಯಿ: ವಿಚಾರ ಭಾರತಿ ಸಮ್ಮೇಳನದ ಮೂಲಕರ್ತ ರವಿ ರಾ. ಅಂಚನ್ ಅವರ ಸಾಮಾಜಿಕ ಕಳಕಳಿ ಮತ್ತು ಸಾಹಿತ್ಯಾಸಕ್ತ ಚಿಂತನಾಶೀಲ ದೂರದೃಷ್ಠಿ ಅಭಿನಂದನೀಯ. ಇಂತಹ ಕಲ್ಪನೆ ಕಾರ್ಯಗತವಾಗಿರಿಸಿ ಕಳೆದ ಒಂದುವರೆ ದಶಕದಿಂದ ಮುನ್ನಡೆಸಿಕೊಂಡು ಬಂದ ಸಂಘದ ಪರಂಪರೆ ಪ್ರಶಂಸನೀಯ. ಜಾಗತೀಕರಣದ ಕಾಲಘಟ್ಟದಲ್ಲಿ ಇಂತಹ ಸಮ್ಮೇಳನಗಳು ಸಮಾಜ ರಕ್ಷಣೆಗೆ ಆರೋಗ್ಯದಾಯಕವಾಗಿವೆ. ವೈಶಿಷ್ಟ್ಯಪೂರ್ಣವಾಗಿರುವ ಈ ಸಮ್ಮೇಳನವು ಸಾಹಿತ್ಯಾಭಿಮಾನಿಗಳಿಗೆ ಕುತೂಹಲಕಾರಿಯೂ ಆಗಿದೆ ಎಂದು ಆರ್ಕೆàಡಿಯಾ ಶಿಪ್ಪಿಂಗ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಎಂ. ಜಿ. ಕರ್ಕೆàರ ಅವರು ಅಭಿಪ್ರಾಯಿಸಿದರು.

ಗೋರೆಗಾಂವ್ ಕರ್ನಾಟಕ ಫೆ. 17 ರಂದು ಪೂರ್ವಾಹ್ನ ಮಲಾಡ್ ಪಶ್ಚಿಮದ ಬಜಾಜ್ ಸಭಾಗƒಹದ ದಿ| ಲಕ್ಷ್ಮೀ ಜಿ. ಸಾಲ್ಯಾನ್ ಮತ್ತು ದಿ| ಗೋಪಾಲ ಎ. ಸಾಲ್ಯಾನ್ ಮುಂಡ್ಕೂರು ವೇದಿಕೆಯಲ್ಲಿ ಆಯೋಜಿಸಿದ್ದ 15 ನೇ 'ಗೋರೆಗಾಂವ್ ವಿಚಾರಭಾರತಿ ಸಮ್ಮೇಳನ'ವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ನಶಿಸಿ ಹೋಗುತ್ತಿರುವ ಮಾತƒಭಾಷೆ, ಸಂಸ್ಕೃತಿಯ ಉಳಿವು ಮಹಿಳೆಯರ ಜವಾಬ್ದಾರಿಯಾಗಿದ್ದು, ಇದನ್ನು ಪರಿಪಕ್ವವಾಗಿ ಬೆಳೆಸುವಲ್ಲಿ ಮಕ್ಕಳಲ್ಲಿ ಹುರುಪು ಹುಟ್ಟಿಸುವಲ್ಲಿ ಮಹಿಳೆಯರು ಸಕ್ರೀಯರಾಗಬೇಕು. ಯುವ ಜನಾಂಗದಲ್ಲಿ ಮಾತƒಭಾಷೆ, ಸಂಸ್ಕೃತಿಯ ಬಗ್ಗೆ ಆಸಕ್ತಿ ತುಂಬಿಸಿ ಭಾಷಾಭಿಮಾನವನ್ನು ಬೆಳೆಸಬೇಕು. ಈ ಮೂಲಕ ಸಾಹಿತ್ಯಾಭಿಮಾನಿಗಳ ಉತ್ಸಾಹ ಪುಷ್ಠಿಗೊಂಡು ನಮ್ಮಲ್ಲಿನ ರುಚಿ-ಅಭಿರುಚಿ ವೃದ್ಧಿಯಾಗಲು ಸಾಧ್ಯ ಎಂದು ಅವರು ನುಡಿದರು.
ಆರ್ಕೆàಡಿಯಾ ಶಿಪ್ಪಿಂಗ್ ಲಿಮಿಟೆಡ್ ಎಂಡ್ ಗ್ರೂಪ್ ಆಫ್ ಕಂಪೇನಿಸ್ ಪ್ರಾಯೋಜಕತ್ವದಲ್ಲಿ ಕನ್ನಡ ರಾಮಾಯಣ ಪರಂಪರೆ ವಿಷಯದಲ್ಲಿ ಆಯೋಜಿಸಲಾಗಿದ್ದ ಸಮ್ಮೇಳದ ಅಧ್ಯಕ್ಷತೆಯನ್ನು ಹೆಸರಾಂತ ಸಾಹಿತಿ, ವಿಮರ್ಶಕ ಡಾ| ಬಂಜಗೆರೆ ಜಯಪ್ರಕಾಶ್ ವಹಿಸಿದ್ದರು.
ಡಾ| ಬಂಜಗೆರೆ ಆಶಯ ಭಾಷಣಗೆ„ದು, ರಾಮ ಕತೆಯ ಮೂಲದಿಂದ ಬೆಳೆದು ಪುರಾಣವಾಗಿ ನಿಂತಿದಕ್ಕೆ ನಮ್ಮ ಸಾಂಸ್ಕೃತಿಕ ಸ್ಥಿತ್ಯಾಂತರದಲ್ಲಿ ಕಾರಣಗಳಿವೆ. ಮಹಾ ಕಾವ್ಯದ ಯಾವುದೇ ಕೃತಿಯು ಒಂದು ಯುಗ ಮನೋಧರ್ಮದ ಸಾಂಸ್ಕೃತಿಕ ಅನುಭವಗಳನ್ನು ತನ್ನ ಕಾಲಮಾನದ ಪ್ರಸಿದ್ಧ ವ್ಯಕ್ತಿ ಪಾತ್ರಗಳ ಮುಖಾಂತರ ವ್ಯಕ್ತ ಪಡಿಸುತ್ತದೆ. ರಾಮಾಯಾಣ ಕಾವ್ಯದಲ್ಲಿ ಮುಖ್ಯವಾಗಿ ರಾಜವಂಶ ಹಾಗೂ ಬುಡಕಟ್ಟು ಗಣವಂಶಗಳ ನಡುವಿನ ಸಂಘರ್ಷ ನಾಗ, ರಾಕ್ಷಸ ಮುಂತಾದ ಸ್ಥಳಿಯ ಆದಿವಾಸಿ ಬುಡಕಟ್ಟುಗಳ ಸಂಸ್ಕೃತಿಯನ್ನು, ವರ್ಣಶ್ರಮ ಧರ್ಮದ ಸಂಸ್ಕೃತಿಗೆ ಅಧೀನವಾಗಿರುವುದನ್ನು ಕಾಣಬಹುದು. ಗ್ರಾಮೀಣ ದೇವ, ಹನುಮನನನ್ನು ರಾಮ ಸೇವಕನ್ನಾಗಿಸಿ ಒಡೆಯ ಸೇವಕ ಸಂಬಂಧಗಳನ್ನು ರೂಪಿಸಲಾಗಿದೆ. ಈ ಬಗೆಯ ಸಾಂಸ್ಕೃತಿಕ ಸ್ಥಿತ್ಯಾಂತರ ಸೂಚನೆ ಸಮೇತ ರಾಮಾಯಣ ಭಾರತದ ಹಲವು ಭಾಷೆಗಳಲ್ಲಿ ಪ್ರಸ್ತುತಗೊಂಡಿವೆ ಎಂದರು.
ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ನಾರು ಸ್ವಾಗತಿಸಿ ಸಂಘದ 'ಮುಂಬೆಳಕು' ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಮಹಿಳಾ ವಿಭಾಗದ ವಸಂತಿ ಕೋಟೆಕಾರ್, ಪದ್ಮಾವತಿ ಶೆಟ್ಟಿ, ಸೀಮಾ ಕುಲಕರ್ಣಿ ಪ್ರಾರ್ಥನೆಗೆ„ದರು. ನಿರ್ಮಲಾ ಶಿವತ್ತಾಯ, ಸುಮಿತ್ರಾ ಕುಂದರ್ ತಂಡವು ಜ್ಯೋತಿ ಗೀತೆಯನ್ನು ಹಾಡಿದರು. ವಿದ್ಯಾ ದೇಶಪಾಂಡೆ, ವೇದಾ ಎಂ. ಸುವರ್ಣ ಬಳಗವು ಸ್ವಾಗತ ಗೀತೆಯನ್ನು ಹಾಡಿದರು. ಸಂಘದ ಮಾಜಿ ಅಧ್ಯಕ್ಷ ಜಿ. ಟಿ. ಆಚಾರ್ಯ, ಗಣೇಶ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಸುಜಾತಾ ವಿ. ಕೋಟ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದ್ಯಾ ಡಿ. ದೇಶಪಾಂಡೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸಭಾ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವೇದಾ ಎಂ. ಸುವರ್ಣ ವಂದಿಸಿದರು.
ಸಂಘದ ಮಾಜಿ ಅಧ್ಯಕ್ಷರುಗಳಾದ ಎಸ್. ಎಂ. ಶೆಟ್ಟಿ, ಸುರೇಂದ್ರ ಸಾಲ್ಯಾನ್ ಮುಂಡ್ಕೂರು, ಪ್ರಸಕ್ತ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ನಾರು ಹಾಗೂ ಮುಖ್ಯ ಅತಿಥಿ ಎಂ. ಜಿ. ಕರ್ಕೇರ ಅವರು ಅವರು ಹದಿನೈದು ಗುಲಾಬಿ ಹೂವನ್ನಿತ್ತು ಈ ಬಾರಿಯ ಸಮ್ಮೇಳನಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತರು.
ಸಮ್ಮೇಳನದ ನಿಮಿತ್ತ ನಡೆಸಲಾದ ಹೊಟೇಲ್ ಲಿಂಕ್‌ವೀವ್Ø ಬೊರಿವಿಲಿ ಪ್ರಾಯೋಜಕತ್ವದ ಒಂದನೇ ವಿಚಾರ ಗೋಷ್ಠಿಯನ್ನು ಮುಖ್ಯ ಅತಿಥಿಯಾಗಿ ಡಾ| ಶಿಲ್ಪಾ ಡಿ. ಶೆಟ್ಟಿ ಅವರು ಉದ್ಘಾಟಿಸಿದರು. 'ನಾಗಚಂದ್ರನ ರಾಮಚಂದ್ರ ಚರಿತ ಪುರಾಣ' ವಿಷಯದಲ್ಲಿ ಪ್ರಸಿದ್ಧ ಲೇಖಕ, ಅಂಕಣಕಾರ ರವಿ ರಾ. ಅಂಚನ್ ಮತ್ತು 'ನರಹರಿಯ ತೊರವೆ ರಾಮಾಯಣ' ವಿಷಯದಲ್ಲಿ ಪ್ರೊ| ಶಿವರಾಮಯ್ಯ ಅವರು ಉಪನ್ಯಾಸ ನೀಡಿದರು. ಲಕ್ಷ್ಮೀ ಆರ್.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಪರ್ಣಾ ರಾವ್ ಗೋಷ್ಠಿ ನಿರ್ವಹಣೆಗೆ„ದರು.
ವಿಲೇಪಾರ್ಲೆ ಪೂರ್ವದ ಹೊಟೇಲ್ ದಯಾನಂದ್ ಪ್ರಾಯೋಜಕತ್ವದ ದ್ವಿತೀಯ ವಿಚಾರ ಗೋಷ್ಠಿಯಲ್ಲಿ ಶುಭಾ ದಯಾನಂದ್ ಗುಜರನ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, 'ಕುವೆಂಪು ಅವರ ರಾಮಾಯಣ ದರ್ಶನಂ' ವಿಷಯದಲ್ಲಿ ಡಾ| ಕುಂಶಿ ಉಮೇಶ್ ಮತ್ತು 'ಡಾ| ಎಂ.ವೀರಪ್ಪ ಮೊ„ಲಿ ಅವರ ರಾಮಾಯನ ಮಹಾನ್ವೇಷಣಂ' ವಿಷಯದಲ್ಲಿ ಡಾ| ಶುಭ ಮರವಂತೆ ಉಪನ್ಯಾಸ ನೀಡಿದರು. ವಾರಿಜಾ ಸದಾನಂದ್ ಪ್ರಾಸ್ತಾವಿಕ ನುಡಿಗಳನ್ನಾಡಿದ್ದು, ಸುಮಿತ್ರಾ ಗುಜರನ್ ಗೋಷ್ಠಿ ನಿರ್ವಹಿಸಿದರು.
ಶ್ರೀ ಗುರು ಕೇಟರರ್ ಪ್ರಾಯೋಜಿತ ತƒತೀಯ ಗೋಷ್ಠಿಲ್ಲಿ ಮುಖ್ಯ ಅತಿಥಿಯಾಗಿ ವಿಶ್ವನಾಥ ಶೆಟ್ಟಿ ಪೇತ್ರಿ ಉಪಸ್ಥಿತರಿದ್ದು, 'ಮುದ್ದಣನ ರಾಮಾಶ್ವಮೇಧ' ವಿಷಯದಲ್ಲಿ ಡಾ| ಮೇಟಿ ಮಲ್ಲಿಕಾರ್ಜುನ ಹಾಗೂ 'ಮಾಸ್ತಿ ಅವರ ಶ್ರೀರಾಮ ಪಟ್ಟಾಭಿಷೇಕ' ವಿಷಯದಲ್ಲಿ ಡಾ| ಗೀತಾ ಡಿ. ಸಿ. ಉಪನ್ಯಾಸವಿತ್ತರು. ಸತ್ಯಭಾಮಾ ನಿಡ್ವಣ್ಣಾಯ ಪ್ರಾಸ್ತವಿಕ ಭಾಷಣಗೆ„ದರು. ವಸಂತಿ ಕೋಟೆಕಾರ್ ಗೋಷ್ಠಿಯನ್ನು ನಿರೂಪಿಸಿದರು. ಜಗದೀಶ್ ಎಲ್. ಶೆಟ್ಟಿ ಪ್ರಾಯೋಜಕತ್ವದಲ್ಲಿ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು. ಮಮತಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.