ಹೊಸದಿಲ್ಲಿ: ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ನಾಗಾಲ್ಯಾಂಡ್‌ನ ಗೃಹ ಸಚಿವ ಇಮೊಂಗ್ ಎಲ್. ಇಮೆನ್ ಅವರನ್ನು ಭದ್ರತಾ ಪಡೆಯವರು ಸೋಮವಾರ ನಸುಕಿನ ಹೊತ್ತು ರೈಫಲ್, ಮದ್ದುಗುಂಡುಗಳು ಮತ್ತು ಅಪಾರ ಪ್ರಮಾಣದ ನಗದು ಹಣದೊಂದಿಗೆ ವಶಕ್ಕೆ ತೆಗೆದುಕೊಂಡಿದ್ದಾರೆ.ನಾಗಾಲ್ಯಾಂಡ್‌ನ ವೋಖಾ ಜಿಲ್ಲೆಯಲ್ಲಿ 1.10 ಕೋ. ರೂ. ನಗದು, ರೈಫಲ್‌ಗಳ ಸಹಿತ ಹಲವು ಬಂದೂಕುಗಳು ಮತ್ತು ಮದ್ದುಗುಂಡಿನ ಜತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಮೆನ್ ನಸುಕಿನ 5.30ರ ಹೊತ್ತಿಗೆ ಅಸ್ಸಾಂ ರೈಫಲ್ಸ್ ಸಿಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ.ಇಮೆನ್ ಕಾರಿನಲ್ಲಿ 1.10 ಕೋ. ರೂ. ನಗದು, 5 ಪಿಸ್ತೂಲುಗಳು, 2 ರೈಫಲ್‌ಗಳು, 140 ಗುಂಡುಗಳಿದ್ದವು. ಕೊಹಿಮಾದಿಂದ ತನ್ನ ಕ್ಷೇತ್ರವಾದ ಮೊಕೋಕ್‌ಚಾಂಗ್ ಜಿಲ್ಲೆಯ ಕೊರಿಡಂಗಕ್ಕೆ ಅವರು ಇವುಗಳನ್ನು ಸಾಗಿಸುತ್ತಿದ್ದರು. ನಾಗಾಲ್ಯಾಂಡ್-ಅಸ್ಸಾಂ ಗಡಿಯಲ್ಲಿ ಭದ್ರತಾ ಪಡೆಯವರು ಕಾರನ್ನು ಅಡ್ಡಗಟ್ಟಿ ಇವುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಇಮೆcàನ್ ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್‌ನ ಟಿಕೆಟಿನಲ್ಲಿ ಕೊರಿಡಂಗದಿಂದ ಸ್ಪರ್ಧಿಸುತ್ತಿದ್ದಾರೆ ಹಾಗೂ ಪಕ್ಷದ ಪ್ರಚಾರದ ಉಸ್ತುವಾರಿಯ ಹೊಣೆಯನ್ನೂ ಹೊಂದಿದ್ದಾರೆ.